ಒಟ್ಟು 3 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿದಾಸನಾದರೆ ಹ್ಯಾಂಗಿರಲಿ ಬೇಕು ನರಲೋಕದ ಚಿಂತೆ ಬಿಟ್ಟುಕೊಡಬೇಕು ಪ ಇಂದ್ರಿಯಗಳನ್ನೆಲ್ಲ ಗ್ರಹಿಸಬೇಕು ಬಂದದೆಲ್ಲ ಬರಲಿ ಈಗಲೇ ಎನಬೇಕು ಅಂದವರು ಎನಗೆ ಬಂಧುಗಳು ಎನಬೇಕು 1 ಸ್ನಾನವನು ಬಿಟ್ಟು ಹರಿಕಥೆಯ ಕೇಳಲಿ ಬೇಕು ಮಾನಾಭಿಮಾನಕ್ಕೆ ಹರಿತಾನೆ ಎನಬೇಕು ಏನಾದರಾಗಲಿ ಸುಖಬಡಲಿಬೇಕು 2 ಇರಳು ಹಗಲು ಹರಿಸ್ಮರಣೆ ಮಾಡಲಿ ಬೇಕು ಪರಲೋಕದ ಗತಿ ಬಯಸಬೇಕು ಗುರುಹಿರಿಯರಿಗೆ ವಂದನೆಯ ಮಾಡಲಿ ಬೇಕು ದುರುಳರನ ಕಂಡರೆ ದೂರಾಗಬೇಕು 3 ತಾವರೆಮಣಿ ತುಲಸಿಸರವ ಧರಿಸಲಿಬೇಕು ಭಾವಶುದ್ಧನಾಗಿ ತಿರುಗಬೇಕು ಕೋವಿದರೆ ಸಂಗಡ ಕೂಡ್ಯಾಡುತಿರಬೇಕು ಪಾವಕನಂತೆ ಇಂಪವ ಕಾಣಬೇಕು 4 ಅನ್ನಪಾನಾದಿಗಳಿಗವಸರ ಬೀಳದಿರಬೇಕು ಕಣ್ಣಿದ್ದು ಕುರುಡನೆಂದೆನಿಸಬೇಕು ಚೆನ್ನಾಗಿ ವಾಯುಮತದಲ್ಲಿ ನಿಂದಿರಬೇಕು ತನ್ನೊಳಗೆ ತಾ ತಿಳಿದು ನಗುತಲಿರಬೇಕು 5 ಬಿಂಬ ಮೂರುತಿಯ ಹೃದಯದಲಿ ನಿಲಿಸಲಿ ಬೇಕು ಡಂಭಕ ಭಕುತಿಯ ಜರಿಯ ಬೇಕು ಡಿಂಬುವನು ದಂಡಿಸಿ ವ್ರತವ ಚರಿಸಲಿ ಬೇಕು ನಂಬಿ ನರಹರಿಪಾದವೆನುತ ಸಾರಲಿ ಬೇಕು6 ಹರಿಯಿಲ್ಲದನ್ಯತ್ರ ದೈವವಿಲ್ಲೆನ ಬೇಕು ಮರುತನೆ ಜಗಕೆ ಗುರುವೆನಲಿ ಬೇಕು ಪುರಂದರದಾಸರೇ ದಾಸರೆಂದನ ಬೇಕು ಸಿರಿ ವಿಜಯವಿಠ್ಠಲನ ಸ್ಮರಣೆ ಮಾಡಲಿ ಬೇಕು 7
--------------
ವಿಜಯದಾಸ
ಸಮಾಧಿಸಾಧಕಗೆಸಮಾಧಿಸಾಧಕಗೆಇವು ಎಲ್ಲಿ ಇರಬೇಕುಪಮಾತುಗಳು ಕಿವಿಯಲ್ಲಿ ಬೀಳದಿರಬೇಕುಮಹಾ ಕಠೋರ ರವಗಳು ಬೀಳದಿರಬೇಕುವಾತವೆಂಬುದು ಸುತ್ತ ಸುಳಿದಾಡದಿರಬೇಕುದುರ್ಜನರು ದೂರದಲಿರೆ ನೋಡದಲಿರಬೇಕು1ಆಕಳಿಕೆ ಆಲಸ್ಯಗಳಿಲ್ಲದಿರಬೇಕುತೇಗು ಬಿಕ್ಕಳಿಕೆ ಕಡಿಕಿಲ್ಲದಿರಬೇಕುಉಗುಳುವುದು ತೂಕಡಿಕೆ ಇವು ಇಲ್ಲದಿರಬೇಕುತಾಗುವ ಮದನಿದ್ರೆಗೆ ತವಕಿಸದಿರಬೇಕು2ಕನಸು ಸೀನು ಕಳವಳಿಕೆಗಳಿಲ್ಲದಿರಬೇಕುಜಿನುಗು ಸಂಶಯಗಳು ಜಾರುತಲಿರಬೇಕುಘನಚಿದಾನಂದನ ಘನಸುಖ ಕಾಣಬೇಕುಮನವೀ ಪರಿನಿಂದು ಮೈಮರೆತು ಇರಬೇಕು3
--------------
ಚಿದಾನಂದ ಅವಧೂತರು