ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಾ ತಿಳಿದು | ಧನ್ಯನಾಗೊ ಬಗೆ ಇದು | ಖಿನ್ನವಳಿದು ಪೂರ್ಣ ಬ್ರಹ್ಮವನ್ನು ಕಾಂಬುದು ಪ ತತ್ತ್ವ ಶಾಸ್ತ್ರವನ್ನು ಓದಿ | ಭಕ್ತಿಯಿಂದ ಮನನ ಮಾಡಿ | ಯುಕ್ತಿ ಭಾವವೆಲ್ಲ ಕಳೆದು ಮುಕ್ತನಾಗುತಾ || ನಿತ್ಯವಾದ ವಸ್ತು ತಾನೆ | ಮತ್ತೆ ಬೇರೆ ಇಲ್ಲವೆಂದು | ಸತ್ಯ ಶರಣರಡಿಯ ಪಿಡಿದು ಚಿತ್ತದಲ್ಲಿ ನಲಿವುದು 1 ಆಶೆ ಮೂರರಲ್ಲಿ ಇನ್ನು | ಬೇಸರಾಗಿ ವಿಷಯದ | ವಾಸನೆಗಳ ಜರಿದು ಪಾಶ ಕ್ಲೇಶವಳಿಯುತ || ನಾಸಿಕಾಗ್ರದಲ್ಲಿ ಮನವ | ಸೂಸದಂತೆ ನಿಲಿಸಿ ಜಗ- | ದೀಶನಾಟವನ್ನು ನೋಡಿ ನಾದ ಘೋಷ ಕೇಳ್ವುದು 2 ಹಿಂದೆ ಒಂದು ನೆನೆಸದಿನ್ನು | ಮುಂದೆ ಉಳಿದ ಕರ್ಮವನ್ನು | ಬಂದುದೆಲ್ಲ ಉಂಡು ಗೆದ್ದು ಹರುಷದಿಂದಲಿ || ತಂದೆ ಭವತಾರಕನ | ಹೊಂದಿ ಸದಾನಂದದಿಂದ | ಮುಂದೆ ಭವಕೆ ಬೀಳದಂತೆ ಛಂದದಿಂದ ನಲಿವುದು 3
--------------
ಭಾವತರಕರು
ಬಿನ್ನಪವ ಕೇಳು ಜೀಯಾ ಬನ್ನಬಡಿಸುವ ಮಾಯಾ ಬೆನ್ನು ಬೀಳದಂತೆ ಮಾಡು ಎನ್ನ ಕೂಡಾಡು ಪ ಹತ್ತದ ಜನಕೆ ನೀನು ಹತ್ತಿಲಿ ಇದ್ದರೆ ಏನು ಉತ್ತರ ಲಾಲಿಸದಿಪ್ಪ ಉತ್ತಮ ಶ್ಲೋಕಾ ತತ್ವ ಬಲ್ಲವಂಗೆ ದೂರತ್ತಲಿದ್ದರೇನು ಅವನ ಪತ್ತಿಗೆ ಬಂದೊದಗುವ ಚಿತ್ತಜನಯ್ಯಾ 1 ಇಂದೆ ಕೈವಲ್ಯವ ಕೊಡುವೆ ಒಂದು ಕ್ಷಣ ಮಾಯಿಗಳ ಮಂದಿರದಲ್ಲಿ ಜನಿಸಿ ಎಂದು ನುಡಿದಡೆ ಮಂದರಧರನೆ ಕೇಳು ಎಂದೆಂದಿಗೆ ಎನ್ನ ನರಕ ಬಂಧನದಲ್ಲಿಡು ಅಲ್ಲಿ ಪೊಂದುವರಾರೊ 2 ಸೂಕರ ಗಾರ್ಧಭ ನಾನಾ ಕೆಟ್ಟ ಜಾತಿಯವರ ಯೋನಿಯೊಳು ಕಟ್ಟಿಹಾಕಿ ಹೀನಾಯ ಉಣಸೀ ಅನಂತ ಕಲ್ಪಕ್ಕೆ ಪವಮಾನ ಮತ ಪೊಂದಿಸಿ ನಿರ್ವಾಣವೀವೆನೆಂದರಾಗೆ ನಾನಾದಿ ಬಯಿಪೆ 3 ಗುರುಪ್ರಸಾದದಿಂದಲಿ ಪರಮ ಸದ್ಗತಿ ಎನ ಗರಿದಲ್ಲ್ಯಾವಾಗಾದರು ಸ್ಥಿರವೆ ಸಿದ್ಧ ನಿರಯ ದುರಾತ್ಮಗಿಲ್ಲ ಕರವ ಮುಗಿದು ಒಂದು ವರ ಬೇಡುವೆ 4 ಭಾಗವತರ ಸಹವಾಸ ಭಾಗವತರ ಕಥಾಗುಣ ಭಾಗ ಗುಣಿಸುವ ಮತಿ ಭಾಗೀರಥಿ ಯಾತ್ರೆ ಭಾಗ್ಯವೆ ಪಾಲಿಸು ದುಷ್ಟ ಭಾಗಾದಿಯರೋಡಿಸಿ ಕಡೆ ಭಾಗಕ್ಕೆ ಎನ್ನೆಡಬಲ ಭಾಗದಲಿ ಸುಳಿಯೊ 5 ಕಾಣಿಕಾಣೆ ಙÁ್ಞನವಿಲ್ಲ ತುತಿಪುದಕ್ಕೆ ಧ್ಯಾನವÀರಿಯೆ ನಿನ್ನನೆ ನಿದಾನಿಸಲಿಕ್ಕೆ ನಾನಾಪರಾಧವ ಮಾಡಿದ ಮಾನವನೋ ದೀನಬಂಧೊ ನೀನೊಲಿದು ಎನ್ನ ಮನಕೆ ಆನಂದ ತೋರೋ 6 ರಜತಪೀಠ ಪುರನಿವಾಸಾ ರಜನಿಪತಿ ಸಂಕಾಶಾ ರಜನಿಚರ ವಿನಾಶಾ ಸುಜನಮಾನಸಹಂಸ ರಜದೂರ ಮಂದಹಾಸಾ ವಿಜಯವಿಠ್ಠಲ ಶ್ರೀಶಾ ಭಜಿಪೆ ಲೇಶಾ 7
--------------
ವಿಜಯದಾಸ
ರಘುರಾಯ ಯನ್ನಮನವ ನಿಲಿಸಲಾಗದೇ ನಿನ್ನ ಚರಣ ಕಮಲಲಿದ್ದು ತನ್ನ ಹರಿ ಬೀಳದಂತೆ ಪ ಹನುಮನೊಡನೇ ಕಾಂತ ಮಾತ ಅನುವರದಲಿ ಆಡುತಿರಲು ವನಧಿ ಘೋಷವನ್ನೆ ಕಂಡು ವನಜ ಕರವನೆತ್ತಿಕೊಂಡು ನಿಲ್ಲಲು ಎನಲು ತ್ಯಜಿಸಿ ತನ್ನದರ್ಪನು ಆಸ್ಥಳದಿ ಧರೆಯದೋರಿ ಸುಮ್ಮನಿಪ್ಪನು ಆಂದಿಗಿಂದಿಗಿನಿತು ವಾಕ್ಯ ಮೆರೆದಪ್ಪನು 1 ಶರಧಿ ಮಥನದಲ್ಲಿ ಮುಣುಗು ತಿರಲು ಗಿಲಿಯನೆತ್ತಿ ನಿಳಹಿ | ಹೊರೆದೆ ಸುರರ ಬಳಿಕಧರಣಿ ಹಿರಣ್ಯಾಕ್ಷ ವಯ್ಯಲಾಗ ವರಹರೂಪದಿಂದ ಮೂಡಿದೇ ಈ ಜಗವ ಕೊರೆದಾಡಿ ಲೆತ್ತಿ ಆಡಿದ ಅಧೃವನ ತಿರಗದಂತೆ ಅಢಳ ನೀಡಿದೆ 2 ನಿನ್ನ ಕಥೆಯ ಶ್ರವಣಮಾಡಿ ನಿನ್ನ ನೋಡಿ ಕೂಡಿ ಪಾಡಿ ನಿನ್ನ ನಿರ್ಮಾಲ್ಯ ಘ್ರಾಣಿಸುತಲಿ ನಿನ್ನದಾಸ ನೆನಿಸಿ ಧನ್ಯಗತಿಯ ಪಡೆವ ತೆರದಲಿ ನಿಲಿಸಬೇಕು ಎನ್ನ ಮನವ ಕರುಣದಿಂದಲಿ ಮಹಿಪತಿಸುತನ್ನ ಸ್ವಾಮಿ ಸಲಹು ಜಗದಲಿ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ವಿಸ್ತರಿಸಿ ಬರುವನೊ ರುಕ್ಮಿಣಿಗೆ ಹಸ್ತಕಳ ಕಳಹುವನೊಮಿತ್ರೆ ದ್ರೌಪತಿ ಸುಭದ್ರೆ ಮುಯ್ಯಾಒಯ್ಯೋ ವರ್ತಮಾನವೆಲ್ಲ ಅರುಹೋನು ವಿಸ್ತರಿಸಿ 1 ಹೇಳದೆ ಹೋಗುವನೊ ಅಥವಾ ಸುದ್ದಿತಿಳಿಯದೆ ಕಳುಹುವನೊಭಾಳ ಚರ್ಚೆಯ ಮಾತು ಭಾಮೆಯಕಿವಿಗೆ ಬೀಳದಂತೆ ಕಾಳಿ ಹಿಡಿಸುವನೊ2 ಮೊದಲಿಗೆ ಅರುಹುವನೊ ಅಥವಾಬೆದರದೆ ನಗುವನೊಮದಗಜಗಮನೆಯರ ಎದೆ ಧಿಗಿಲೆಂಬಂತೆಚದುರ ಚರ್ಚೆಯ ಡಂಕಿ ಹೊಯ್ಸುವನೊ 3 ಎಚ್ಚರ ಕಳಹುವನೊ ಅಥವಾನಿದ್ರೆ ಬೆಚ್ಚಲಿ ಹೋಗುವನೊಮತ್ತÀನೇತ್ರಿಯರ ಮನಕೆ ನಡುವಂತೆಚರ್ಚೆಮಾತಿನ ಭೇರಿ ಹೊಯ್ಸುವನೊ4 ದಾಸಿಯ ಕಳಹುವನೊ ಅಥವಾಕಂಡು ಹಾಸ್ಯವ ಮಾಡುವನೊಮೋಸಗೊಳಿಸಿ ಆಭಾಸ ಉಕ್ತಿಗಳಿಂದ ಆಕಾಶವಾಣಿಯಿಂದ ನುಡಿಸುವನೊ5 ಅರಿಯದೆ ಹೋಗುವನೊ ಅಥವಾಮೈಮರೆಯದೆ ನಗುವನೊಶ್ರೀಶರಾಮೇಶನರಸನ ಸತಿಯರ ಚರ್ಚಿಸಿ ಹರುಷಮಾಡಿ ಹರಿಯು ಬರುವನೊ 6
--------------
ಗಲಗಲಿಅವ್ವನವರು
ಹರಿ ನಿನ್ನ ದಾಸರ ಸೇವೆಯ ಕರುಣಿಸೆನಗೆ ಸುರಪತಿಯ ನಾನೊಲ್ಲೆನೈ ಪ ಸ್ಮರನ ಹಾವಳಿ ಬಿಡಿಸಿ ಗುರುಭಕ್ತಿಯನು ಕೊಟ್ಟು ನಿರುತವು ನಿನ್ನ ನಾ ಸ್ಮರಿಸುವಂದದಿ ಮಾಡು ಅ.ಪ ಎಷ್ಟು ಸ್ಥಿರ ಮಾಡಿದಾಗ್ಯು ಎನ್ನ ಮನ ಬಟ್ಟ ಕುಚೆಯರ ಬಲೆಗೆ ಸಿಲುಕುತಲಿ ಬಿಟ್ಟು ನಿನ್ನಯ ಧ್ಯಾನ ಕೆಟ್ಟುಪೋಗುತಲಿದೆ ದಿಟ್ಟ ನಿನ್ನ ಮಗನ ಬಲುಹಿನ್ನೆಷ್ಟೆಂದು ಪೇಳಲೊ 1 ಕುಸುಮಗಂಧಿಯರ ಓರೆನೋಟವೆಂಬ ಮಸೆದ ಕಣೆಯ ತಾನು ಪೂಡುತಲಿ ಎಸೆ ಮೋಹತಿಗೆ ನಾ ಸೈರಿಸಲಾರೆನೋ ಬಿಸಜನಾಭನೆ ನಿನ್ನ ಸುತಗೆ ಪೇಳೋ ಬುದ್ಧಿ 2 ಅಂಗನೆಯರ ಸವಿ ನುಡಿಗಳಿಗೆ ನಾ ಮರುಗಿ ಭೃಂಗದಂತವರ ಬಲೆಗೆ ಬೀಳದಂತೆ ಸಂಗ ಸುಜನರಲ್ಲಿ ಇತ್ತು ಕಾಯೊ ದೇವ ಅಂಗಜಪಿತ ಶ್ರೀ ರಂಗೇಶವಿಠಲನೇ 3
--------------
ರಂಗೇಶವಿಠಲದಾಸರು