ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತುಳಸಿಯ ಸೇವಿಸಿ ಪ ಶ್ರೀ ತುಳಸಿಯಳ ಸೇವೆ ಪ್ರೀತಿಯಿಂದಲಿ ಮಾಡೆ ಗಾತರದ ಮಲವಳಿದು ಮಾತೆ ಯೆಂಬನಿತರೊಳು ಮಾಡುವಳು ಯಾತಕನುಮಾನವಯ್ಯ ಅ.ಪ. ಸುಧೆಗಡಲ ಮಥಿಸುವ ಸಮಯದಲಿ ವೈದ್ಯನಾಗಿ | ಪದುವನಾಭನು ತಾನು ಉದುಭವಿಸಿ ಬರಲಂದು | ಉದಕವುತ್ಸಹದಿಂದಲದೆ ತುಳಸಿ ನಾಮನಾಗೆ || ತ್ರಿದಶರೊಂದಿಸುತ ಮೋದದಿಂ ಕೊಂಡಾಡಿದರು | ಒದಗಿ ಸುಜನರು ತಮ್ಮ ಸದನದಲಿ ನಿತ್ಯ ತಿಳಿದು ವೃಂದಾವನ ರಚಿಸಿದರೈಯ1 ಮೂಲದಲಿ ಸರ್ವ ತೀರ್ಥಗಳುಂಟು ತನ್ಮದ್ಯೆ | ಕಾಲ ಮೀರದೆ ಸರ್ವ ನದನದಿಗಳಮರಗಣ | ಮೂರತಿಯು ವಾಲಯವಾಗಿಪ್ಪುದು || ಮೂರ್ಲೋಕಗಳ ಧರ್ಮ ವ್ರತಕೆ ಮಿಗಿಲೆನಿಸುವುದು | ನೀಲಮೇಘಶ್ಯಾಮಗರ್ಪಿಸಿದ ತುಳಸಿ ನಿ | ಧರಿಸಿದ ಮನುಜ ಕಾಲನಾಳಿಗೆ ಶೂಲನೊ2 ಉದಯದೊಳಗೆದ್ದು ನೀರೆರೆದು ಮಜ್ಜನಗೈದು | ತುದಿ ಬೆರಳಿನಿಂದ ಮೃತ್ತಿಕೆಯ ಫಣಿಯೊಳಗಿಟ್ಟು | ತದನಂತರದಲಿ ಭಜನೆ || ವದನದೊಳು ಗೈಯೆ ಧರೆಯೊಳಗಿದ್ದ ಸರ್ವವದ | ನದಿಗಳಿಗೆ ನೂರ್ಮಡಿ ಯಾತ್ರೆ ಮಾಡಿದ ಫಲ | ಜನ್ಮಗಳಘವ ತುದಿ ಮೊದಲು ದಹಿಪುದಯ್ಯ3 ಆವವನ ಮನೆಯಲ್ಲಿ ತುಳಸಿ ಸಾಲಿಗ್ರಾಮ | ಆವವನ ಮನೆಯಲ್ಲಿ ಹರಿದಾಸರಾ ಕೂಟ | ಪಾವಮಾನಿಯ ಮತದೊಳು || ಆವವನು ಕಾಂತ್ರಯವ ಕಳೆವ ನಾವಲ್ಲಿ | ವಾಸುದೇವ ಮುನಿ ದೇವಾದಿಗಣ ಸಹಿತ | ಭಾವಿಸಿರಿ ಭಾವಙ್ಞರು 4 ಕಂಡರೆ ದುರಿತಕ್ಕೆ ಕೆಂಡವನು ಬೀರುವುದು | ಕೊಂಡಾಡಿದರೆ ಪುಣ್ಯವ ಪರಿಮಿತವುಂಟು ಮೈ-| ಜನನವಿಲ್ಲ ಸಲೆ ದಂಡ ವಿಟ್ಟವ ಮುಕ್ತನೊ || ಚಂಡಾಲ ಕೇರಿಯೊಳು ಇರಲು ಹೀನಯವಲ್ಲ | ಪಾಂಡುರಂಗ ಕ್ಷೇತ್ರ ಸರಿಮಿಗಿಲು ಎನಿಸುವುದು | ಯೋಗ್ಯ ಫಲ ಕಂಡವರಿಗುಂಟೆ ಅಯ್ಯ5 ಚಿತ್ತ ಶುದ್ದನು ಆಗಿ ಮುಂಝಾನೆಯೊಳು ತುಳಸಿ | ಸ್ತೋತ್ರವನೆ ಮಾಡುತ್ತ ದಿವ್ಯಾವಾಗಿಹ ತ್ರಿದೊಳ | ತುಂಬಿ ವಿತ್ತಾದಿಯಲಿ ತಾರದೆ || ಮತ್ತೆ ವಸ್ತ್ರದಿ ಹಸ್ತ ಶಿಲೆಯರ್ಕ ಏರಂಡ | ಪತ್ರದಲಿ ತಾರದಲೆ ಭೂಮಿಯೊಳಗಿಡದೆ ಪೂ - | ತರಬೇಕು ಹೊತ್ತು ಮೀರಿಸಲಾಗದೊ6 ಕವಿ ಮಂಗಳವಾರ ವೈಥೃತಿ ವ್ಯತೀಪಾತ ರವಿ ಶಶಿಯ ಸಂಗಮ ಪರ್ವಣಿ ಪುಣ್ಯಕಾಲ ಇವುಗಳಲಿ ತೆಗೆಯಾದಿರಿ ನವವಸನ ಪೊದ್ದು ಊಟವ ಮಾಡಿ ತಾಂಬೂಲ- ಸವಿಯುತ್ತ ಮುಟ್ಟದಿರಿ ಯುವತಿ ಶೂದ್ರರಿಂ ತರಿ ಕೊಂಡಾಡುತಿರಿ ದಿವಸಗಳೊಳಯ್ಯ 7 ದಳವಿದ್ದರೇ ವಳಿತು ಇಲ್ಲದಿದ್ದರೆ ಕಾಷ್ಟ ಎಲೆ ಮೃತ್ತಿಕೆಗಳಿಂದ ಪೂಜೆ ಮಾಡಲಿಬಹುದು ತೊಳೆ ತೊಳೆದು ಏರಿಸಲಿಬಹುದು ತುಳಸಿ ಒಣಗಿದ್ದರೂ ಲೇಶದೋಷಗಳಲ್ಲಿ ತುಳಸಿ ವಿರಹಿತವಾದ ಪೂಜೆಯದು ಸಲ್ಲದು ಮಾಡಿ ಜಲಜಾಕ್ಷನರ್ಚಿಸಿರೈಯ್ಯ 8 ಸದನ ಹೊಲೆಮಾದಿಗರ ಸದನ ತುಳಸಿ ಇಲ್ಲದ ಬೀದಿ ನರಕಕೆಳಸುವ ಹಾದಿ ವ್ಯರ್ಥ ತುಳಸಿ ಬಲು ಪ್ರಾಧಾನ್ಯವೊ ತುಳಸಿ ಮಿಶ್ರಿತವಾದ ನೈವೇದ್ಯ ಗತಿಸಾದ್ಯ ತುಳಸಿ ಧರಿಸಿದ ದೇಹ ಪರಮ ಸಾರ್ಥಕವಯ್ಯ ನೆಲೆಯ ನಾ ಕಾಣೆನಯ್ಯ9 ಸತಿ ಪ್ರಹ್ಲಾದ ನಾರದ ವಿಭೀಷಣನು ಧ್ರುವ ಅಂಬರೀಷ ಶಶಿಬಿಂದು ರುಕ್ಮಾಂಗದನು ವಿವರವನು ತಿಳಿದರ್ಚಿಸಿ ತವಕದಿಂ ತಂತಮ್ಮ ಘನ ಪದವನೈದಿದರು ಭುವನದೊಳಗುಳ್ಳ ನಿರ್ಮಲ ಜನರು ಭಜಿಸಿದರು ನೀಗಿ ಭವದೊರರಾದರೈಯ 10 ಉದಯಕಾಲದೊಳೆದ್ದು ಆವನಾದರು ತನ್ನ ಹೃದಯ ನಿರ್ಮಲನಾಗಿ ಭಕುತಿಪೂರ್ವಕದಿಂದ ಸ್ತೋತ್ರಮಾಡಿದ ಕ್ಷಣಕೆ ಮದ ಗರ್ವ ಪರಿಹಾರವೊ ಇದೆ ತುಳಸಿ ಸೇವಿಸಲು ಪೂರ್ವದ ಕಾವೇರಿ ನದಿಯ ತೀರದಲೊಬ್ಬ ಭೂಸುರ ಪದಕೆÉ ವ್ಯೋವ ಸಿರಿ ಪ್ರಿಯಳಾದ ಮದನತೇಜಳ ಭಜಿಸಿರೈದು 11
--------------
ವಿಜಯದಾಸ
ಮುದವ ಬೀರುವುದೊ | ಬದರಿಯ ನಿಲಯನೇ ಪ ಮುದವ ಬೀರುವುದು | ಬದರಿಯ ನಿಲಯ ಶ್ರೀವಿಧಿ ವಿಬುಧಾದ್ಯರ | ಮುದಕೆ ಕಾರಣನೇ ಅ.ಪ. ಪಾದ ಉರ | ಮಂದೀರದಲಿ ಧರಸುಂದರಾಂಗನೆ | ಗೋವಿಂದ 1 ಇಂದ್ರ ನಿನ್ನಯ ತಪ | ಕುಂದೀಸೆ ಅಪ್ಸರವೃಂದಾ ಕಳುಹೆ | ಗೋವಿಂದ ||ಚೆಂದಾದುಡಿಗೆ ಉಟ್ಟ | ಅಂದಾಭರಣ ತೊಟ್ಟಮಂದಾಗಮನೆರೆಲ್ಲ | ಗೋವಿಂದ || ಅಂದಿಗೆ ಕಾಲ್ಗೆಜ್ಜೆ ದಂಧಣಿರೆನ್ನ ಕುಣಿದುನೊಂದು ಶ್ರಮಗಳಿಂದ | ಗೋವಿಂದ ||ಕಂದರ್ಪ ಪಿತ ತನ್ನ | ಸುಂದರೂರುವಿನಿಂದಸುಂದರಿಯನ್ನೆ ಕೊಟ್ಟ | ಗೋವಿಂದ 2 ಮಂದಗಮನೆರೆಲ್ಲ | ಸುಂದರಿಯನ್ನೆ ಕೊಂಡುಇಂದ್ರಂಗೆ ಇತ್ತರು | ಗೋವಿಂದ ||ಎಂದೆಂದು ಕಾಣದ | ಸುಂದರಾಕೃತಿ ಕಂಡು ಕಂದೀತು ಇಂದ್ರ ಮುಖ | ಗೋವಿಂದ ||ವೃಂದಾರಕೇಂದ್ರನು | ಅಂದು ಪರಾಶರಜಗೊಂದಿಸಿ ಕ್ಷಮೆಯನು | ಬೇಡಿದ ||ಇಂದ್ರಾವರಜ ಗುರು | ಗೋವಿಂದ ವಿಠಲನದ್ವಂದ್ವ ಪಾದಂಗಳ್ಗೆ | ಶರಣೆಂದ 3
--------------
ಗುರುಗೋವಿಂದವಿಠಲರು
ಲಕ್ಷ್ಮೀಶ ನರಹರಿ ವಿಠ್ಠಲನೆ ಸಲಹೊ ಪ ಪಕ್ಷೀಂದ್ರ ವಾಹನನೆ ಈಕ್ಷಿಸುತ ಕರುಣದಿಂರಕ್ಷಿಸಲಿ ಬೇಕಿವಳ ಲಕ್ಷ್ಮಣಾಗ್ರಜನೇ ಅ.ಪ. ದೀನಜನ ಮಂದಾರ ಜ್ಞಾನದಾಯಕನೆ ಸುರ-ಧೇನು ಭಕ್ತರಿಗೆ ಕಾಮಿತವ ಕೊಡುವಲ್ಲಿ |ನೀನಿವಳಿಗೇ ಮೋಕ್ಷಜ್ಞಾನವನೇ ಪಾಲಿಸುತಸಾನುರಾಗದಿ ಸಲಹೊ ಪ್ರಾಣಾಂತರಾತ್ಮ 1 ಸೃಷ್ಟಿ ಸ್ಥಿತಿ ಸಂಹಾರ ಕರ್ತನೀನೆಂದೆನಿಪೆವೃಷ್ಟಿಕುಲ ಸಂಪನ್ನ ಜಿಷ್ಣು ಸಖ ಹರಿಯೇ |ಕಷ್ಟನಿಷ್ಠೂರಗಳ ಸಹಿಸುವಡೆ ಧೈರ್ಯವನುಕೊಟ್ಟು ಕೈ ಪಿಡಿಯುವುದು ಕೃಷ್ಣ ಮೂರುತಿಯೇ2 ಪತಿಯೆ ಪರದೈವ ವೆಂಬುನ್ನತದ ಮತಿಯಿತ್ತುಹಿತದಿಂದ ಹರಿಗುರು ಸೇವೆಯಲಿ ರತಿಯಸತತ ನಿನ್ನಯ ನಾಮ ಸ್ಮøತಿಯನ್ನೇ ವದಗಿಸುತಕೃತಿಪತಿಯೆ ನೀನಿವಳ ಉದ್ಧರಿಸು ಹರಿಯೇ 3 ತಾರತಮ್ಯ ಜ್ಞಾನ ವೈರಾಗ್ಯ ಭಕುತಿ ಕೊಡುಮೂರೆರಡು ಭೇಧಗಳ ಅರಿವಿತ್ತು ಹರಿಯೇಮಾರಪಿತ ಇವಳ ಹೃದ್ವಾರಿಜದಿ ತವ ರೂಪತೋರುತಲಿ ಸನ್ಮುದವ ಬೀರುವುದು ಹರಿಯೇ 4 ಸರ್ವಾಂತರಾತ್ಮನೆ ಗುರುಡವಾಹನ ದೇವಸರ್ವಜ್ಞ ಸರ್ವೇಶ ಮಮ ಕುಲ ಸ್ವಾಮೀ |ನಿರ್ವಿಘ್ನದಿಂದೆನ್ನ ಪ್ರಾರ್ಥನೆಯ ಪೂರೈಸೊಸರ್ವಸುಂದರ ಗುರು ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು