ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುರಾಜರ ನಂಬಿರೋ ಸಾರುವೆ ನಾ ಸಾರುವೆ ನಾ ಸಾರುವೆ ನಾ ಪ ಗುರು ವಾದಿರಾಜರ ಚರಣ ಸ್ಮರಣೆಯಿಂದ ದುರಿತ ರಾಶಿಗಳೆಲ್ಲ ಪರಿಹಾರವಾಗುವುದು ಅ.ಪ ಕರುಣಾಸಾಗರರಿವರು ಸ್ಮರಿಪರಘ ಸ್ಮರಿಸದೆ ಪರತತ್ವವರಿದು ಬಾರಿ ಬಾರಿಗೊದಗಿದಪಾರ ಸಂಶಯ ದೂರಗೈಸಿ ಮುರಾರಿ ಚರಣವ ತೋರ್ಪ ಸುರರಿಗೆ ಮರುತರೆನಿಪರು ಬರುÀವ ಕಲ್ಪಕೆ 1 ಗುರು ವಾದಿರಾಜರೆಂಬ ಸುರತರು ಇರುವುದು ಸೋದಾಪುರದಿ ಅರಿತು ನಿರುತದಿ ಪರಮ ಭಕುತಿಯಲಿ ಸೇರಿ ಸೇವೆಯ ಮಾಳ್ವ ಸುಜನಕೆ ಬೀರುವರು ಪುರುಷಾರ್ಥಗಳನು ಸುರರು ಮಹಿಮೆಯ 2 ಉಪಚಾರವಲ್ಲವಿದು ಶ್ರೀಪತಿಯಾಣೆ ಗುಪಿತದಿಂದಿವರ ಮಂತ್ರ ಜಪಿಸಿ ಭೂತರಾಜರೆಂಬೊರು ತಾಪಹಾರಕರಾಗಿ ಸುಜನಕೆ ತಪವ ಮಾಳ್ವರು ರುದ್ರ ಪದವಿಗೆ ಪಾದ ಇವರಲಿ 3
--------------
ಪ್ರದ್ಯುಮ್ನತೀರ್ಥರು
ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು