ಒಟ್ಟು 3 ಕಡೆಗಳಲ್ಲಿ , 1 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂದೆಂದು ಎನಗೆ ನೀನೆ ಅಖಿಳದೊಳು ಎಂದೆಂದು ಎನಗೆ ನೀನೆ ಅಂದಿಗಿಂದಿಗೆ ಎನ್ನ ತಂದೆ ತಾಯಿಯು ನೀನೆ ಬಂಧು ಬಳಗವು ನೀಯೆನಗೆ ಹರಿಯೆ ಧ್ರುವ ಸುಖಸೌಖ್ಯದಲಿ ಸದಾನಂದ ಘನ ಬೀರುತಿಹ್ಯ ಭಗುತ ಜನರಿಗಹುದು ನೀ ಪ್ರೀಯ ಸಕಲದೇವಾದಿಗಳ ಕೈಯಲೊಂದಿಸಿಕೊಂಬ ಮಕುಟ ಮಣಿಯಹುದೊ ನೀ ಎನ್ನಯ್ಯ ಲೋಕಾಧಿಲೋಕಪಾಲನೆಂದು ಶ್ರುತಿಸ್ಮøತಿ ಅಖಿಳ ಭುವನದಲೆನ್ನ ಸಾಕಿ ಸಲಹುವ ಸ್ವಾಮಿ 1 ಏಕೋದೇವನೆ ನೀನದ್ವಿತೀಯ ಶ್ರೇಯಧೇನುವಾಗಿ ಸಾರಸಗರವುತಿಹ್ಯ ಸುಖ ದಾಯಕಹುದಯ್ಯ ನೀ ಸಾಕ್ಷಾತ ದಯಕರುಣದಿಂದಭಯಕರ ನಿತ್ಯಸಂಗಪೂರ್ಣ ತೋಯಜಾಕ್ಷ ನೀ ಪೂರ್ಣಪರಮ ಭಕ್ತರ ಪ್ರಾಣ ನಾಯಕನೆ ನೀನೆ ಪ್ರಖ್ಯಾತ ಕ್ಷಯರಹಿತನೆಂದು ಜಯವೆನಿಸಿಕೊಳುತಿಹ್ಯ ದಯಭರಿತನಹುದುಯ್ಯ ಸದೋದಿತ 2 ನೀನೆ ಗತಿಯೆಂದು ಧರೆಯೊಳು ಕೊಂಡಾಡುವ ನೆನಹುತಿಹ್ಯ ನÀಹುದುಯ್ಯ ಬಾಲಕನು ನಾ ನಿನ್ನ ಫನದೊಲವಿನಿಂದ ಪಾವನಗೈಸುತಲಿಹ್ಯ ದೀನ ದಯಾಳು ನೀನೆ ಎನ್ನ ಅನುದಿನದಲಾಧಾರಿ ಮುನಿಜನರ ಸಹಕಾರಿ ನೀನಹುದಯ್ಯ ಜಗಜ್ಜೀವನ ಮನೋಹರನ ಮಾಡುತಿಹ್ಯ ದಾಸ ಮಹಿಪತಿಸ್ವಾಮಿಭಾನುಕೋಟಿಯು ನೀನು ಪ್ರಸನ್ನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬಾರೋ ನನ್ಮ ಸ್ವಾಮಿ ಗುರು ಅಂತರ್ಯಾಮಿ ಕರುಣಸಾರ ಬೀರುತಿಹ್ಯ ಶರಣಜನಪ್ರೇಮಿ 1 ಬೇಡಿ ನಿನ್ನ ಕೊಂಬೆ ನಿನ್ನ ನೋಡಿ ಬಲಗೊಂಬೆ ಕಡಿಯುಗಾಣಿಸುವ ನೀನೆ ಒಡಿಯ ನನಗೆಂಬೆ 2 ಪಾದಪೂಜೆ ಮಾಡೆ ಸಾಧಿಸಿನ್ನು ನೋಡೆ ಭೆದಿಸನುದಿನ ನಿಜಬೋಧ ಬೆರದಾಡೆ 3 ಕಾಣಲಿಕ್ಕೆ ಉಬ್ಬೆ ನೆನದು ನಿಮ್ಮ ಕೊಬ್ಬ್ಯ ನಾನು ನೀನೆಂಬಹಂಭಾವ ಇದೆ ಧಬೆ 4 ನಿತ್ಯ ಪ್ರತಿಗೆ ದೀನ ಮಹಿಪತಿಗೆ ಭಾನುಕೋಟಿತೇಜ ನೀನೆ ಬೇಕು ಸುಭಗುತಿಗೆ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸ್ವಾಮಿ ನಮ್ಮ ದೇವದತ್ತ ಬ್ರಹ್ಮಾನಂದ ಅವಧೂತ ಸಮಸ್ತಜನದಾತ ಬ್ರಹ್ಮಾದಿಗಳೊಂದಿತ ಧ್ರುವ ಕುಡಲಿಕ್ಕೆ ತಾ ಉದಾರಿ ಬಲು ದೊಡ್ಡ ಉಪಕಾರಿ ಕಡೆಗಾಣಿಸುವ ಧೊರಿ ನಿಜ ನೀಡುತಿಹ್ಯ ಸಾರಿ ಬಡವರಿಗೆ ಆಧಾರಿ ಭಕ್ತಜನ ಸಹಕಾರಿ ಪರಿ ಮಾಡುತಿಹ್ಯ ಮನೋಹರಿ 1 ಬೀರುತಿಹ್ಯ ನಿಜನೋಡಿ ಕರದಲ್ಲಭಯ ನೀಡಿ ಗುರುತಿಟ್ಟಿದೆ ಸೂರ್ಯಾಡಿ ಶರಣರು ನಿಜಗೂಡಿ ಅರುವ್ಹೆ ಅಂಜನ ಮಾಡಿ ಕುರುವ್ಹೆದೋರುದಿದರಡಿ ಧರೆಯೊಳಿದೆ ಕೊಂಡಾಡಿ ಗುರುನಾಥನೆಂದು ಪಾಡಿ 2 ಅನಾಥ ಬಂಧುನೀತ ದೀನದಯಾಳು ಸಾಕ್ಷಾತ ಅನುದಿನದೆ ಪ್ರಖ್ಯಾತ ಘನಗುರು ಶ್ರೀನಾಥ ಮನೋಭಾವ ಪೂರಿತ ಎನಗುಳ್ಳ ದೇವದತ್ತ ದಾತ ಭಾನುಕೋಟಿ ಉದಿತ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು