ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕರುಣಿಸೊ ಗುರು ಎನಗೆ ಸ್ಮರಿಸು ಹಾಂಗೆ ದೋರು ನಿಮ್ಮರುಹ ಬ್ಯಾಗೆ ಗುರುತಲೀಗೆ 1 ನಿನ್ನವನೆ ಎಂದೆನಿಸೊ ಭಿನ್ನ ಹರಿಸೊ ಎನ್ನ ದಯದಿ ಪಾಲೆಸೋ ಧನ್ಯಗೈಸೊ 2 ಅನುದಿನದಿ ಕಾಯೊ ನೀ ಬಂದು ಅನಾಥ ಬಂಧು ದೀನಾನಾಥ ನೀ ಎಂದೆಂದು ಘನ ಕೃಪಾಸಿಂಧು 3 ಭಕ್ತ ಜನರನುಕೂಲ ಭೋಕ್ತಸಕಲ ಶಕ್ತ ನೀನಹದೊ ಕೃಪಾಲ ಬಕ್ತ ವತ್ಸಲ 4 ಅನುಭವಸುಖ ಬೀರಿಸೊ ಖೂನದೋರಿಸೊ ದೀನ ಮಹಿಪತಿ ತಾರಿಸೊ ಘನಸುರಿಸೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಯೊ ಕಾಯೊ ಕರುಣಕಾರ ಗೋವಿಂದ ಕಾಯೊ ನಮ್ಮ ಕೃಪಾಸಿಂಧು ಹರಿ ಮುಕುಂದ ಧ್ರುವ ಬೊಮ್ಮನಾ ಪಡೆದ ಪರಾವರ ದೊರಿಯೆ ಸಮ್ಯಜ್ಞಾನವಿತ್ತು ಕಾಯೊ ಮುರಾರಿಯೆ ನಿಮ್ಮ ವಿನಾ ಅನ್ಯಪಥವ ನಾನರಿಯೆ ನಮ್ಮ ದೈವ ನೀನಹುದೊ ನರಹರಿಯೆ 1 ದುರಿತ ಪರಿಹರಿಸೊ ಭಾವ ಭಕ್ತಿಯೊಳೂ ಮನಪೂರ್ಣವಿರಿಸೊ ಕಾವಕರುಣನೆ ನಿಮ್ಮ ದಯ ಬೀರಿಸೊ ದಿವಾರಾತ್ರೆಯಲಿ ನಿಮ್ಮ ಸ್ಮರಣಿಲಿರಿಸೊ 2 ಕಾಯೊ ಕಾಯೊ ಕೊಟ್ಟು ನಿಮ್ಮ ನಿಜಧ್ಯಾನವ ಕಾಯೊ ಕರುಣಿಸಿ ಎನ್ನ ಜೀವನದ ಕಾಯೊ ದಯದಿಂದ ಎನ್ನ ಅಭಿಮಾನ ಕಾಯೊ ನಿಜ ದಾಸ ಮಹಿಪತಿ ಪ್ರಾಣವ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು