ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಂಗಳಾರತಿಯ ಬೆಳಗೆ ಮಧುಸೂದನಗೆ ದಿವ್ಯ ಮಂಗಳಾರತಿಯ ಬೆಳಗೆ |ಪ|| ಮಂದರ ಕೃಷ್ಣ ಮಚ್ಛನಾಗಿ ವೇದವ ತಂದಿಟ್ಟು ಅಮೃತ ಬೀರಿದಂಥ ಹರಿಗೆ1 ಎತ್ತಿ ತಂದು ಹರವಿ ಕೃಷ್ಣ ಸುತ್ತಿ ಒಯ್ದ ಸುರುಳಿಭೂಮಿ ಸುತ್ತಿ ಒಯ್ದ ಸುರುಳಿ ಭೂಮಿ ಹೊಟ್ಟೆ ಬಗೆದು ಕರುಳ ತನ್ನ ಕುತ್ತಿಗ್ಯಲ್ಲಿ ಧರಿಸಿದಾತಗೆ 2 ಕೂಸಿನಂತೆ ಬಂದು ಬೆಳೆದಾಕಾಶವ್ಹಿಡಿಯದೆ ಕೃಷ್ಣ ಕೂಸಿನಂತೆ ಬಂದು ಬೆಳೆದ ನಾಶಮಾಡಿ ಕ್ಷತ್ರಿಯರ ಪರಶುರಾಮನೆನಿಸಿದಾತಗೆ 3 ಕುಂಭಕರ್ಣನಣ್ಣ(ನ) ಹತ್ತು ರುಂಡ ಹಾರಿಸಿ ಕೃಷ್ಣ ಕುಂಭಕರ್ಣನಣ್ಣ(ನ) ಚೆಂಡನಾಡುತಲಿ ಕಾಳಿಂಗನ್ಹೆಡೆಯ ತುಳಿದ ಹರಿಗೆ4 ಬಟ್ಟೆ ತೊರೆದು ಬೌದ್ಧನಾಗಿ ಹತ್ತಿ ಹಯವನೇರಿ ಕೃಷ್ಣ ಬಟ್ಟೆ ತೊರೆದು ಬೌದ್ಧನಾಗಿ ದುಷ್ಟಕಲಿಯ (ಕೊಂದ) ಭೀಮೇಶಕೃಷ್ಣನಂಗ ಪೂಜಿಸುತಲಿ5
--------------
ಹರಪನಹಳ್ಳಿಭೀಮವ್ವ
ಮಾನವ ಗುರುಚರಣ ಸರೋಜವ ಪ ಶೇರಿದ ಶರಣರ ಘೋರ ಪಾತಕವೆಂಬೊ ವಾರಿದ ಗಣಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನುಅ.ಪ ತಾರತಮ್ಯವ ತಿಳಿಯದೀ ಕಲಿಯುಗದಿ ಮುಕ್ತಿ ದಾರಿಗಾಣದೆ ಭವದಿ ಬಿದ್ದ ಸಜ್ಜನೋ- ದ್ದಾರ ಮಾಡಲು ದಯದಿ ಬ್ಯಾಗವಾಟದಿ ನಾರ ಸಿಂಹಾಖ್ಯ ವಿಪ್ರಾಗಾರದೊಳುದ್ಭವಿಸಿ ಚಾರು ಸಾರವಧರೆಯೊಳು ಬೀರಿದಂಥವರ 1 ಮೇದಿನಿಯೊಳು ಚರಿಸಿ ವ್ಯಾಕ್ಯಾರ್ಥದಿ ಬಹುದು- ರ್ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಭೋಧ ಮತಾಬ್ಧಿಗೆ ಶಶಿ ನೃಪಮಾನ್ಯರೆನಿಸಿ ಶ್ರೀದ ಪ್ರಹ್ಲಾದಾನುಜ ಸಲ್ಹಾದರೆ ಇವರೆಂದು ಪಾದ ಪಂಕಜಾ ರಾಧಕರಿಗೆಸುರ ಪಾದಪರೆನಿಪರ 2 ಕ್ಷೋಣಿ ವಿಬುಧ ಗಣದಿ ಸೇವೆಯಕೊಳುತ ಮಾನವಿಯೆಂಬೊ ಕ್ಷೇತ್ರದಿ ಮಂದಿರ ಮಧ್ಯ ಸ್ಥಾಣುವಿನೊಳು ಮುದದಿ ಕಾರ್ಪರವೆಂಬೊ ಕಾನನದಲಿ ಕೃಷ್ಣಾವೇಣಿ ಕೂಲದಿ ಮೆರೆವ ಶ್ರೀನಿಧಿ ನರ ಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 3
--------------
ಕಾರ್ಪರ ನರಹರಿದಾಸರು
ಸೇರಿ ಸುಖಿಸು ಮಾನವ ಗುರು ಚರಣ ಸರೋಜವ ಪ ಸೇರಿದ ಶರಣರ ಘೋರ ಪಾತಕವೆಂಬ ವಾರಿಧಿ ಭವಕೆ ಸಮೀರ ಜಗನ್ನಾಥ ಸೂರಿವರ್ಯ ದಾಸಾರ್ಯರಂಘ್ರಿಯನು 1 ತಾರತಮ್ಯವ ತಿಳಿಯದೆ ಕಲಿಯುಗದಿ ಮುಕ್ತಿ- ದಾರಿಕಾಣದೆ ಭವದಿ ಬಿದ್ದ ಜ- ನರುದ್ಧಾರ ಮಾಡಲು ದಯದಿ ಬ್ಯಾಗವಾಟದಿ ನರಸಿಂಗಾಖ್ಯ ವಿಪ್ರಗಾರ ದೋಳುದ್ಭವಿಸಿ ಚಾರು ಕಥಾಮೃತ ಸಾರವ ಧರೆಯೋಳು ಬೀರಿದಂಥವರ 2 ಮೇದಿನಿಯೊಳು ಚರಿಸಿ ವಾಕ್ಯಾರ್ಥದಿ ಬಹು ವಾದಿಗಳನೆ ಜಯಿಸಿ ಎನಿಸಿದರು ಪೂರ್ಣ ಬೋಧ ಮತಾಬ್ಧಿಗೆ ಶಶಿನೃಪ ಮಾನ್ಯರೆನಿಸಿ ಶ್ರೀದ ಪ್ರಹ್ಲಾದನನುಜ ಸಹ್ಲಾದರೆ ಇವರೆಂದು ಸಾದರ ಬಿಡದ ಪಾದಪಂಕಜಾರಾಧಕರಿಗೆ ಸುರಪಾದರೆನಿಪರ 3 ಕ್ಷೋಣಿ ವಿಬಂಧ ಗಣದಿ ಸೇವೆಯಗೊಂಡು ಮಾನವಿ ಎಂಬ ಕ್ಷೇತ್ರದಿ ಮಂದಿರ ಮಧ್ವ ಸ್ಥಾಣುವಿನೊಳು ಮುದದಿ ಕಾರ್ಪರವೆಂಬ ಕಾನನದಲ್ಲಿ ಕೃಷ್ಣವೇಣಿ ಕುಲದಿ ಮೆರೆವ ಶ್ರೀನಿಧಿ ನರಪಂಚಾನನಂಘ್ರಿಯುಗ ಧ್ಯಾನದಿ ಕುಳಿತ ಮಹಾನುಭಾವರನು 4
--------------
ಶ್ರೀನಿಧಿವಿಠಲರು