ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಎನ್ನ ಜನುಮ ಸಾಫಲ್ಯವಾಯಿತು | ಬಂದು ಎನ್ನ ಮೊದಲೆ ಪುಣ್ಯ ಕೈಗೂಡಿತು ಧ್ರುವ ಭಾನುಕೋಟಿ ತೇಜವಾಗಿ ರೂಪದೋರಿತು ತಾನೆ ತನ್ನಿಂದೊಲಿದು ದಯವು ಬೀರಿತು ಜ್ಞಾನ ಭಕುತಿ ವೈರಾಗ್ಯವನ್ನು ಅರುಹಿತು ನಾನು ನೀನು ಎಂಬ ಅಹಂಭಾವ ಹರಿಯಿತು 1 ಎಂದು ಇಂದಿರೇಶನ ಕಾಣದ ಕಣ್ಣದೆರೆಯಿತು ಬಂದು ಬೀಳುವ ಭವಪಾಶದ ಬಲಿಯು ಹರಿಯಿತು ಚಂದವಾಗಿ ಸದ್ಗುರು ಕರುಣ ಮಳೆಯು ಗರೆಯಿತು ಹೊಂದಿ ಹರುಷ ಪಡುವಾನಂದ ಪಥವು ದೋರಿತು 2 ಕಣ್ಣು ಕಂಡು ಪಾವನವಾಯಿತು ವಾಸುದೇವನ ಎನ್ನ ಮನಸಿನಂತಾಯಿತು ಪುಣ್ಯಸಾಧನೆ ಧನ್ಯಗೈಸಿತು ಮಹಿಪತಿ ಪ್ರಾಣಜೀವನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೇವ ಗುರುಸ್ತುತಿ ಅಂಗವೇ ಶ್ರೀ ಮಹಾಂಗಿರೀಶ ಲಿಂಗವಾದುದು ಸಂಗ ಸುಖದ ದುರಿತವೆಲ್ಲ ಹಿಂಗಿ ಪೋದುದು ಪ ನಿರ್ಮಲಾತ್ಮ ಗುರುಕಟಾಕ್ಷ ಮರ್ಮಸಿಕ್ಕಿತು ಕರ್ಮ ಹರಿದು ಜ್ಞಾನಜ್ಯೋತಿ ಬೆಳಕು ಮಿಕ್ಕಿತು ಧರ್ಮ ತತ್ವದಮೃತವೆಂಬ ಶರಧಿಯುಕ್ಕಿತು ಪ್ರೇಮದಿಂದ ಪ್ರಕಟವಾದ ಬ್ರಹ್ಮ ದಕ್ಕಿತು 1 ಮಾಯೆಯಿಂದ ಮಮತೆಯೆಲ್ಲ ಸತ್ಯವಾದುದು ನ್ಯಾಯಪಥವ ತಿಳಿಯೆ ಸರ್ವ ಮಿಥ್ಯವಾದುದು ಸಾಯುತೊಡನೆ ಹುಟ್ಟುವುದರ ಭೀತಿಪೋಪುದು ಕಾಯದೊಳಗೆ ದಿವ್ಯಜ್ಯೋತಿ ಪಥ್ಯವಾದುದು 2 ಪರಶಿವಾತ್ಮಲಿಂಗವೆನ್ನ ಮನಕೆ ಸಾರಿತು ತುಂಬಿ ತುಳುಕಿ ಬೀರಿತು ಪರಮಾನಂದರಸದ ಲಹರಿ ಉಕ್ಕಿ ಹರಿಯಿತು 3
--------------
ಭಟಕಳ ಅಪ್ಪಯ್ಯ
ಸೋಜಿಗವಾಯಿತು ಸದ್ಗುರುವಿನ ಕೃಪೆ ಹೇಳಲೇನು ನಿಜಗುಹ್ಯದ ಮಾತು ಗುರುತವಾಗಿ ಹ್ಯ ಸಾಧು ಬಲ್ಲ ಖೂನ ಧ್ರುವ ನೀಗದ ನೀಗಿತು ಹೋಗದ ಹೋಯಿತು ತ್ಯಾಗಲ್ಯೊಂದು ಬಾಗದ ಬಾಗಿತು ಸಾಗದ ಸಾಗಿತು ಯೋಗಲ್ಯೊಂದು ಆಗದ ಆಯಿತು ಕೂಗದ ಕೂಗಿತು ಈಗಲ್ಯೊಂದು ತೂಗದ ತೂಗಿತು ಸುಗಮ ತಾ ತೋರಿತು ಜಗದೊಳೊಂದು 1 ಹುರಿಯಲೊಂದು ಅರಿಯಿತು ಅರಿವಿಲೊಂದು ಸುರಿಯದ ಸುರಿಯಿತು ಗರೆಯದ ಗರಿಯಿತು ತ್ಯರಿಯಲೊಂದು ಜರಿಯದ ಜರಿಯಿತು ಬೆರಿಯದೆ ಬೆರಿಯಿತು ಕುರಿವಿಲೊಂದು 2 ಜಾರದ ಜಾರಿತು ಮೀರದ ಮೀರಿತು ಹಾರಲೊಂದು ತೋರದ ತೋರಿತು ಸೇರದ ಸೇರಿತು ಸಾರಲೊಂದು ಬೀರದ ಬೀರಿತು ಸಾರಸದೋರಿತು ಕರದಲೊಂದು ತರಳ ಮಹಿಪತಿಗ್ಹರುಷವಾಯಿತು ಗುರುಕರುಣಲಿಂದು 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು