ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣರಾಯನೆ ನಿನ್ನ ಕೃತ್ಯಗಳೆಲ್ಲ ಸೃಷ್ಟಿಯೊಳಗೆ ನಾ ಬೀರಲ್ಯಾ ಪ ಕಷ್ಟ ಬಿಡಿಸದೆ ಸುಮ್ಮನಿದ್ದೆಯಾ ಸ್ವಾಮಿ ಅ.ಪ. ಜನನ ಮರಣ ಶೂನ್ಯನೆನಿಸಿಕೊಂಡು ಗೋಪಿ ತನಯನಗಿದ್ದುದ ಹೇಳಲ್ಯಾ ಸನಕಾದಿಸೇವ್ಯ ಪೂಜ್ಯನೆ ತುರುಗಳ ಹಿಂಡು ವನದಲ್ಲಿ ಕಾಯ್ದದ್ದು ಹೇಳಲ್ಯಾ ನಾನು 1 ದನುಜ ಭಂಜನನಾದ ‌ಘನ ಮಹಿಮನೆ ಮಾಗ ಧನಿಗಂಜಿ ಓಡಿದ್ದು ಹೇಳಲ್ಯಾ ಎಣೆಯಿಲ್ಲದಾ ಶೂರ ರಣದೊಳು ಪಾರ್ಥಗೆ ಅನುಗನಾಗಿದ್ದದ್ದು ಹೇಳಲ್ಯಾ ನಾನು 2 ಸತತ ತೃಪ್ತನಾಗಿ ಕ್ಷಿತಿಯೊಳು ಬೆಣ್ಣೆಯ ಮಿತವಾಗಿ ಕದ್ದದ್ದು ಹೇಳಲ್ಯಾ ಕೃತಿದೇವಿರಮಣನೆ ಅತಿ ಪ್ರೀತಿಯಲಿ ಗೋಪ ಸತಿಯರ ಕೂಡಿದ್ದು ಹೇಳಲ್ಯಾ ನಾನು 3 ಶ್ರುತಿತತಿಗಳಿಗಭೇದ್ಯ ಪ್ರತಿಯಿಲ್ಲದೆ ದೇವ ಸತಿಗೊಶನಾದದ್ದು ಹೇಳಲ್ಯಾ ಶತಕೃತು ವಿಧಿವಂದ್ಯ ಸುತರಾಪೇಕ್ಷಿಸಿ ಭೂತ ಪತಿಯನ್ನು ಬೇಡಿದ್ದು ಹೇಳಲ್ಯಾ ನಾನು 4 ಭೂತಳದೊಳು ದೇವತೆಗಳೊಡÀನೆ ಇಂಥ ರೀತಿಲಿ ಚರಿಸಿದ್ದು ಹೇಳಲ್ಯಾ ಭೀತಿರಹಿತ ಜಗನ್ನಾಥವಿಠ್ಠಲನೆ ಅ ದ್ಭುತ ಮಹಿಮನೆಂದು ಹೇಳಲ್ಯಾ ನಾನು 5
--------------
ಜಗನ್ನಾಥದಾಸರು
ಗೋಪಿ ಇವನು ನಿನ್ನಾ ಪ ಜಗವ ನಿರ್ಮಿಸಿ ಪಾಲಿಸಿ ಅಳಿಸುವ ಅಗಣಿತ ಸುಗುಣಾ ಭರಣನೆ ಇವನು ಅ.ಪ ಬೆಣ್ಣೆಯ ಕದ್ದನು ಸಣ್ಣವನಿಹ ಬಹು ಚಿಣ್ಣರ ಕೂಡುತ ಗೋಗಣ ಕಾಯುವ ಮನ್ಮನ ಪುಥ್ಥಳಿ ಕಳಿಸುವದಾಗದು ಎನ್ನುವ ನುಡಿಗಳ ಬದಿಗಿಡು ತಾಯಿ ಉಣ್ಣುತ ಉಣ್ಣುತ ಮೊಲೆಯನು ಕೊಂದಿಹ ಉನ್ನತ ರಕ್ಕಸಿ ಪೂತಣಿಯನ್ನಿವ ಮಣ್ಣನು ಕಂಡರು ಕಂಸನದೂತರು ಪೂರ್ಣಾನಂದನು ಸರಿ ಇವನಮ್ಮ 1 ಜಾರ ಚೋರ ಸುಕುಮಾರನು ಸುಂದರ ನಾರೇರ ವಲಿಸಿ ಸೇರಿದ ನಿಶಿಯಲಿ ಪೋರನೆಂಬ ಮನ ದೂರವಗೈದುಗ ಭೀರ ಮಹಿಮ ಜಗ ಸಾರನೆಂದರಿಯೆ ಭಾರಿಗಿರಿಯನೆತ್ತಿ ಊರಿಗೆ ಊರನು ಸೇರಿಸಿ ಪೊರೆದಿಹಪಾರಮಹಿಮ ಜಂ ಭಾರಿದರ್ಪಹರ ಪೋರನೆ ಬಿಡುಬಿಡು ನಿಗಮ ಸಂಚಾರನೆ ಖರೆಯೆ 2 ಕಾಲ್ಗಳು ಸೋಕಲು ಶಕಟನು ಬಿದ್ದನು ಶೀಳುತ ಕೊಕ್ಕನು ಬಕನಂ ಕೊಂದನು ಕಾಳಿಯ ತುಳಿಯುತ ಗರ್ವವ ನಿಳಿಸಿದ ಲೀಲಾಜಾಲದಿ ಜ್ವಾಲೆಯ ನುಂಗಿದ ಬಾಲರು ಕೇಳಲು ಆಲಯತೋರಿದ ಪಾಲಿಸಿ ವರುಣನ ತಂದೆಯ ಕಂದನ ಲೋಲನೆ ಸರಿ ಜಗಮೂಲನು ಕೇಳೆ 3 ನೀರಜ ನಾಭಗೆ ಗೊಲ್ಲತಿಯ ಗಣ ಬೀರಲ್ ಸಾಧ್ಯವೆ ಮೋಹವ ನೆಂದಿಗು ಶ್ರೀರತಿದಾಯಕ ಕೊಳ್ಳುವನೇ ರತಿ ಭವ ತಾರಕ ಶುಭ ಶೃಂಗಾರ ಪೂರ್ಣ ಪರಿವಾರದಭೀಷ್ಠವ ಖರೆ ಭೂರಿದಯಾಮಯ ನಾರಾಯಣನಿವ ದೋಷ ವಿದೂರ 4 ಮೆಲ್ಲಗೆ ಬಾಯೊಳು ಎಲ್ಲವ ತೋರಿದ ಮಲ್ಲನು ಸರ್ವರ ವಲ್ಲಭ ಸಿದ್ಧವು ಗೊಲ್ಲನ ವೇಷದಿ ಇಲ್ಲಿಹನಮ್ಮ ಇಲ್ಲವೆ ಸಮರಿವಗೆಲ್ಲಿಯ ಸತ್ಯ ಮಲ್ಲರ ಮರ್ದಿಸಿ ಕೊಲ್ಲುತ ಕಂಸನ ನಿಲ್ಲಿಸಿ ಧರ್ಮವ ಕಾಯುವ ನಮ್ಮ ಬಲ್ಲಿದ “ಶ್ರೀಕೃಷ್ಣವಿಠಲ” ಬೇಗನೆ ನಿಲ್ಲಿಸಿ ಕೊಳ್ಳದೆ ಕಳುಹೇ ತಾಯಿ 5
--------------
ಕೃಷ್ಣವಿಠಲದಾಸರು
ಶ್ರೀ ಗ್ರಂಥಮಾಲಿಕ ಮಧ್ವಸ್ತೋತ್ರ ಜಯ ಮಧ್ವ ಮುನಿರಾಯ ನಿನ್ನ ಚಾರು ತೋಯಜಾಂಘ್ರಿಯಲಿ ನಾ ಶರಣು ಅಹ ಮಾಯೇಶನಿಗೆ ಪ್ರಿಯ ಮುಖ್ಯಪ್ರಾಣನೇ ಎನ್ನ ಕರ್ಮ ದೋಷ ಮನ್ನಿಸಿ ಕಾಯೋ ಪ ಭಾವಿ ವಿರಂಚಿ ಮಹೋಜ ಜಯಾ - ದೇವಿ ಸಂಕರ್ಷಣ ತನೂಜ ಸೂತ್ರ ಸಂವಿದ್ ಬಲಾದಿ ಸುಭ್ರಾಜ ಶ್ರಧ್ಧಾ - ದೇವಿ ಹೃದಬ್ಜವಿರಾಜ ಅಹ ಇನಶಶಿ ಋಷಿಕುಲ ತಿಲಕ ಶ್ರೀವರನಂಘ್ರಿ ವನರುಹ ನಿಷ್ಠ ಹನುಮಭೀಮ ಮಧ್ವ 1 ಜಯತು ಶ್ರೀಹರಿ ರಾಮಚಂದ್ರ ಭಕ್ತ ಜಯದ ಮೋದದ ಅರ್ತಿಹಂತ ಕೃಷ್ಣ ಜಯತು ಕಾರುಣ್ಯ ಸಮುದ್ರ ಭಕ್ತ ಜಯದ ಕ್ಷೇಮದ ಜ್ಞಾನ ಸುಖದ ಅಹ ರಾಮವಚನ ಕಾರ್ಯರತ ಹನುಮಗೆ ನಮೋ ನಮೋ ಕುರುಕುಲ ಹರ ಭೀಮ ಕೃಷ್ಣೇಷ್ಟಗೆ 2 ಜಯತು ಶ್ರೀಹರಿ ವೇದವ್ಯಾಸ ಭಕ್ತ ಜಯದ ಹೃತ್ತಿಮಿರ ನಿರಾಸ ಮಾಳ್ಪ ಸೂರ್ಯ ಸ್ವಕಾಂತಿ ಪ್ರಕಾಶ ಮಧ್ವ - ರಾಯಗೆ ನಿಜಗುರು ಶ್ರೀಶ ಅಹ ವೈದಿಕಶಾಸ್ತ್ರದಿಂದಲೇ ವೇದ್ಯ ಶ್ರೀಶನ ಹಿತದಿ ನಮಗೆ ತೋರ್ಪಾನಂದ ಮುನಿಗೆ ನಮೋ 3 ಅಸುರರು ಪುಟ್ಟಿ ಭೂಮಿಯಲಿ ಸಾಧು ಭೂಸುರರೆಂದು ತೋರುತಲಿ ವೇದ ಶಾಸ್ತ್ರಕ್ಕೆ ಅಪಾರ್ಥ ಪೇಳಿ ಮೋಹ ವಶವಾಗೆ ಸುಜನರಲ್ಲಿ ಅಹ ಶ್ರೀಶನಾಜೆÉ್ಞ ಯತಾಳಿ ಮಧ್ವಾಭಿದಾನದಿ ಮೋಸ ದುರ್ಮತ ಧ್ವಾಂತ ಭಾಸ್ಕರನುದಿಸಿದಿ 4 ಮಧ್ಯಗೇಹರ ಮನೆಯಲ್ಲಿ ಮುಖ್ಯ ವಾಯುವೇ ಶಿಶುರೂಪ ತಾಳಿ ಬಲ ಸಂನ್ಯಾಸ ಸುಪ್ರಮೋದದಲಿ ಅಹ ಮಧ್ಯಗೇಹರ ಪುರುಷೋತ್ತಮತೀರ್ಥರ ಭಾಗ್ಯಕ್ಕೆ ಎಣೆವುಂಟೇ ಮೂರ್ಲೋಕದೊಳಗೆ 5 ಪುರುಷೋತ್ತಮಾಚ್ಚ್ಯುತಪ್ರೇಕ್ಷ ತೀರ್ಥ ಗುರುಗಳ ಸೇವಿಸಿ ಮೋಕ್ಷ ಮೋದ ಉರುಗುಣಸಿಂಧು ನಿರ್ದೋಷನಾದ ಶಿರಿವರನು ಕಮಲಾಕ್ಷ ಅಹ ಭಾರಿ ಪ್ರಸಾದವ ದಯದಿ ಬೀರಲ್ಲೇವೆ ದೊರೆಯುವದೆಂದು ಬೋಧಿಸಿದೆಯೋ ಮಧ್ವ 6 ಶ್ರೀಶ ವೇದವ್ಯಾಸನಲ್ಲಿ ಗೀತಾ ಭಾಷ್ಯ ಸಮರ್ಪಿಸಿ ಅಲ್ಯಿಲ್ಲಿ ಉಪ - ದೇಶಕೊಂಡು ಮತ್ತಿಲ್ಲಿ ಬಂದು ವ್ಯಾಸನಭಿಪ್ರಾಯದಲ್ಲಿ ಅಹ ಸರಿಯಾದ ತತ್ವಬೋಧಕ ಗ್ರಂಥಗಳ ಮಾಡಿ ಬೀರಿದ ಅಧಿಕಾರಿಗಳಿಗೆ ನೀ ದಯದಿ ಮೂಲಗ್ರಂಥಗಳು ಮೂವತ್ತು ಏಳು 7 ಳಾಳುಕ ಪ್ರಿಯತಮವಾದ್ದು ಭಕ್ತಿ ಪರ - ಕೈವಲ್ಯ ತೋರುವುದು ಅಹ ಪುನರಪಿ ಬದರಿಗೆ ಪೋಗಿ ಶ್ರೀಶನ ಕಂಡು ಧನ್ಯ ಮನದಿ ಬಂದು ಶಾಸ್ತ್ರ ಬೋಧಿಸಿದಿ 8 ಸೂತ್ರ ಭಾಷ್ಯಗೀತಾ ತಾತ್ಪರ್ಯ ಸೂತ್ರಾಣುಭಾಷ್ಯ ವಿಷ್ಣು ತತ್ವನಿರ್ಣಯಾ ಋಗ್ಭಾಷ್ಯ ತತ್ವೋ - ಭಾಗವತ ತಾತ್ಪರ್ಯ ಅಹ ನಿರ್ಣಯ ಶ್ರೀಮಹಾಭಾರತ ತಾತ್ಪರ್ಯ ಕರ್ಮ ನಿರ್ಣಯ 9 ಸನ್ನ್ಯಾಯ ವಿವರಣ ತಂತ್ರಸಾರ ಅನುವ್ಯಾಖ್ಯಾನವು ಸದಾಚಾರ ಸ್ಮøತಿ ಅನುತ್ತಮ ದ್ವಾದಶಸ್ತೋತ್ರ ಯತಿ ಪ್ರಣವ ಕಲ್ಪದಿ ಪ್ರಣವಸಾರ ಅಹ ಉಪನಿಷದ್ಭ್ಬಾಷ್ಯವು ಹತ್ತು ಉತ್ಕøಷ್ಟವು ಷಟ್ಟ್ರಶ್ನಕಾಠಕ ಬೃºದಾರಣ್ಯಾಖ್ಯ 10 ಮನನ ಮಾಡಲು ಐತರೇಯ ಪುನಃ ಶ್ರವಣ ಮಾಡಲು ತೈತಿರೀಯ ಸಂ - ಚಿಂತಿಸಲು ಈಶಾವಾಸ್ಯ ಬಹು ಘನವಿದ್ಯಾಯುತವು ಛಾಂದೋಗ್ಯ ಅಹ ಅರ್ಥವಣಮಾಂಡೂಕ್ಯ ತಲವ ಕಾರೋಕ್ತವು ಸತತ ಸಂಸ್ಮರಣೀಯ ಜ್ಞಾನದಾಯಕವು11 ಕೃಷ್ಣಾಮೃತ ಮಹಾರ್ಣದಿ ಬಾಲ ಕೃಷ್ಣ ಜಯಂತಿ ನಿರ್ಣಯದಿ ಭಕ್ತಿ ಜ್ಞಾನ ಸಾಧನವ ಬೋಧಿಸಿ ನರ - ಸಿಂಹನ ನಖಸ್ತುತಿ ಮುದದಿ ಅಹ ಪಠಿಸೆ ಭದ್ರದ ಕಥಾಲಕ್ಷಣದಲಿ ವಾದ ಮಾಡುವ ಬಗೆ ತೋರ್ದಿಯೈನೃಹರಿಯ ನಮಿಸಿ 12 ಅವಿದ್ಯಾ ಆವೃತವು ಬ್ರಹ್ಮ ಅದ್ಯಸ್ಥ ಜಗತೆಂಬ ಮತವ ತರಿದು ಮಾಯಾವಾದ ಖಂಡನವ ಮಾಡಿ ನ್ಯಾಯ ಪ್ರಮಾಣ ಲಕ್ಷಣವ ಅಹ ನುಡಿದು ಪ್ರಪಂಚ ಮಿಥ್ಯಾತ್ವಾನುಮಾನ ಖಂ - ಡನವ ಉಪಾಧಿಖಂಡನ ಸಹಗೈದಿ 13 ಪಂಚಭೇದ ಸತ್ಯ ಹರಿಯೇ ಸರ್ವೋತ್ತಮ ಸುಹೃದ ಶಿರಿ ವರನೇ ಸ್ವತಂತ್ರ ಪ್ರಮೋದ ಸ್ವಾಮಿ ಸೃಷ್ಟಾ ಪಾತಾ ಅತ್ತಾತ್ರಾಹ ಅಹ ತತ್ವ ವಿವೇಕವು ತತ್ವ ಸಂಖ್ಯಾನವು ನಿತ್ಯ ಸುಪಠನೀಯ ಹರಿ ಸರ್ವೋತ್ಕøಷ್ಟ 14 ನೀನಿಂತು ನುಡಿಸಿದೀ ನುಡಿಯು ನಿನ್ನ ಸನ್ನಿಧಾನದಿ ಸಮರ್ಪಣೆಯು ನಾನು ಏನೂ ಓದದ ಮಂದಮತಿಯು ನೀನು ಪೂರ್ಣಪ್ರಜ್ಞನು ಜೀವೋತ್ತಮನು ಅಹ ಎನ್ನ ಕೊರತೆಗಳ ನೀಗಿಸಿ ಹೃಸ್ಥಶ್ರೀ 'ಪ್ರಸನ್ನ ಶ್ರೀನಿವಾಸ' ನ್ನೊ ಲಿಸೋ ಎನಗೆ ಜೀಯ 15
--------------
ಪ್ರಸನ್ನ ಶ್ರೀನಿವಾಸದಾಸರು