ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾರಾಯಣ ಕೃಷ್ಣ ಬೆಳಗಾಯಿತೇಳಯ್ಯ ಮೂರು ಲೋಕಂಗಳಿಗೆ ಮಂಗಳವ ಬೀರಯ್ಯ ಪ ಹರಿಹರಿ ಶ್ರೀನಿಲಯ ಪರವಾಸುದೇವ ಅ.ಪ ಬಂದಿರುವರೈ ಬ್ರಹ್ಮ ರುದ್ರೇಂದ್ರರು ತಂದೆ ತಂದಿರುವರೈ ಮಹನಿಧಿ ಕನಡಿ ಧೇನುಗಳ ನಿಂದು ಗಾನವಮಾಡುತಿರುವರಾನಂದದಿ ಗಂಧರ್ವರಪ್ಸರೆಯರಿಂದು ಕುಣಿದಾಡಿ ಕೂಡಿ 1 ದಾಸರೊಡೆ ತುಂಬುರರು ನಾರದರು ಜಯಜಯ ಶ್ರೀಶನೇ ಕೇಶವ ಗಜವರದ ಎಂದು ಆಶ್ರಯಿಸಿ ಚರಣಕ್ಕೆ ಶರಣೆಂದು ಮಣಿಯವರು ದೋಷನಾಶನ ಲೋಕಕಲ್ಯಾಣ ತ್ರಾಣ 2 ಪತಿವ್ರತಾ ಸ್ತ್ರೀಯರುಗಳತಿಶಯ ಮಡಿಯುಟ್ಟು ಹಿತವಾದ ಹುಗ್ಗಿ ಸಜ್ಜಿಗೆಯ ಗೈದು ಪತಿತಪಾವನ ನಿನಗೆ ದಧ್ಯನ್ನ ನೀಡುವರೊ ಕ್ಷಿತಿನಾಥ ನೀನವನು ತೋಷದಿಂ ಭುಜಿಸೊ 3 ರೋಗರುಜಿನಗಳಳಿದು ಆಯುವೃದ್ಧಿಯದಾಗಿ ಭಾಗವತ ಸಕುಟುಂಬ ಸಂತೋಷಗೂಡಿ ಭಾಗವತ ಭಾರತ ರಾಮಾಯಣಗಳ ಹಾಡಿ ಆಗಲೈ ಆಗಮಾರ್ಚನೆ ಆಲಯಗಳೊಳಗೆ 4 ಕಮಲಲೋಚನ ಕೆಟ್ಟ ಸ್ವಪ್ನ ಫಲವಳಿಸಿ ಯಮಕಂಟವಂ ಕಳೆದು ಭ್ರಮೆಗಳನು ನೀಗಿ ಸುಮನಸರ ಕೂಡಿ ಶ್ರೀಹರಿಯ ಗುಣಗಾನ ಮಾಡಿ ಅಮಿತ ಅಮೃತವುಣಿಸೈ 5 ಕ್ಷುಧ್ರಪಾಕೀ-ಚೀನ ಕೊಬ್ಬಿ ಛದ್ರಿಸುತು ಭದ್ರತೆಯನಾಡೊಳಗಸ್ಥಿರತೆಗೈಯುತ್ತ ಆದ್ರಿಅಂಬುಧಿ ಮಧ್ಯೆ ಭಾರತಿಯ ನಲಿಸುತ್ತ ಮುದ್ರೆಯುಂ ಧ್ವಜವನುಂ ನಿನ್ನವಾಗಿರಿಸೈ 6 ಕಾಲಕಾಲಗಳಲ್ಲಿ ಮಳೆಬಿಡದೆ ಸುರಿದು ಶಾಲಿಸಂತರ ಧಾನ್ಯ ಎಲ್ಲೆಲ್ಲು ಬೆಳೆದು ಮಹಿಷಿ ಶ್ರೀಲೋಲ ಕರುಣಿಸೈ ಕನಕವೃಷ್ಟಿಯನು 7 ಎದುರು ನೋಡುತ ನದಿಯು ಹರಿವುದು ಸಾಗರಕೆ ಮುದದಿಂದ ತಾವರೆಯು ಸೂರ್ಯನನ್ನು ವಿಧಿವಶದಿ ಪಾಪಿಗಳು ಯಮಲೋಕವನ್ನು ಸುಧೆಸವಿಯೆ ಭಕ್ತರು ಪರಮಪದವನ್ನು 8 ಮಕ್ಕಳಿಲ್ಲದ ಜನರು ಮಕ್ಕಳನು ಹಡೆದು ಲಕ್ಷ್ಮಿಯೊಲವನು ಹಾಡಿ ಜನರೆಲ್ಲ ದುಡಿದು ಭಕ್ತರಾಗುತ ಸರ್ವ ವಣಿಗೆಗಳು ನಡೆದು ಮುಕ್ತರಪ್ಪಂತೆಲ್ಲರ ಮಾಡು ಜಾಜೀಶ 9
--------------
ಶಾಮಶರ್ಮರು
ನಾವು ಕುರುಬರು, ನಮ್ಮ ದೇವರು ಬೀರಯ್ಯಕಾವ ನಮ್ಮಜ್ಜ ನರಕುರಿಯ ಹಿಂಡುಗಳ ಪ ಅಷ್ಟಮದ ಮತ್ಸರಗಳೆಂತೆಂಬ ಟಗರುಗಳುದೃಷ್ಟಿ ಜೀವಾತ್ಮನೆಂತೆಂಬ ಆಡುಸೃಷ್ಟಿ ಸಿದ್ಧ ಪ್ರಸಿದ್ಧವೆಂತೆಂಬ ಹೋತಗಳುಕಟ್ಟಿ ಕೋಲಿನಲಿ ಇರಿಯುತಿಹ ನಮ್ಮಜ್ಜ 1 ವೇದಶಾಸ್ತ್ರ ಪುರಾಣವೆಂತೆಂಬ ಶ್ವಾನಗಳುಕಾದಿದ್ದು ನಮ್ಮಜ್ಜನ ಹಿಂಡೊಳಗೆಹಾದಿಗಾಣದೆ ಕೂಗಿ ಬಾಯಾರಿ ಕಾಲ್ಗೆಡಲುಆದರಿಸಿ ಅಂಬಲಿಯನೆರೆವ ನಮ್ಮಜ್ಜ 2 ಅರಿವೆಂಬ ಮರಿಗಳು ಹಿಂಡಿನೊಳಗಡೆ ಬರಲುಮರೆವೆಂಬ ವ್ಯಾಘ್ರ ಕಿರುಬ ತೋಳಗಳು ಹೊಕ್ಕುತರುಬಿ ಹಿಂಜಾವದಲಿ ಕುರಿಯ ಮುರಿವುದ ಕಂಡು ಅರಿತು ಅರಿಯದ ಹಾಗೆ ಇರುವ ನಮ್ಮಜ್ಜ 3 ಹುಟ್ಟುದಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ 4 ಕಲಿಯುಗಕೆ ಗೌಡನಿವ ಸಂಗಾತಿ ಮಂತ್ರಿಸುತಕಲಿಯುಗಂಗಳನೆಲ್ಲ ಪೊರೆವಾತನೀತಜಲಜಾಕ್ಷ ಕಾಗಿನೆಲೆಯಾದಿಕೇಶವನ ಮನವೊಲಿಸಿ ಭಜಿಸದ ಮನುಜ ಹುಚ್ಚು ಕುರುಬ 5
--------------
ಕನಕದಾಸ
ಬಾರಯ್ಯ ತಿಮ್ಮಯ್ಯಾ ತೋರಯ್ಯಾ ಮುಖವನು | ತಾರಯ್ಯಾ ಒಂದು ಚುಂಬನ ಕರುಣ | ಬೀರಯ್ಯಾ ನಮ್ಮ ವಶಕೆ ಪ ಶೋಭಾನೆ || ನಿಲ್ಲು ನಿಲ್ಲೆಲೊ ದೇವಾ | ಎಲ್ಲಿ ಪೋಗುವಾ ನೀನು ಸಲ್ಲದು ನಿನ್ನ ಚೋರಂಗ ಲೀಲಿಗೆ ಪಳ್ಳಿಸೋಕುದೆ ಇಲ್ಲ ಇಲ್ಲದೆ 2 ಹಾರಿಸಿ ವೈದು ಮರನೇರಿ | ಹಾರಿಸಿ ಮರನೇರಿದ ಸಣ್ಣ | ಪೋರ ಬುಧ್ಧಿಗಳ ಬಿಡವಲ್ಲಿ 3 ತುರುಕರಗಳ ಕಾಯ್ದು | ಚರಿಸಿದೆ ಅಡವಿಯ | ಪರಸತಿಯರ ವ್ರತಗಳ | ಪರಸತಿಯರ ವ್ರತಗಳ ಕೆಡಿಸಿದ | ಪರಮಾತ್ಮನಿಗೆ ಎಣೆಯುಂಟೆ 4 ಕೇಸಕ್ಕಿ ತಿರುಮಲ ಲೇಸಯ್ಯಾ ನಿನ್ನ ಗುಣ | ಕಾಸುಕಾಸಿಗೆ ಬಿಡದಲೆ | ಕಾಸುಕಾಸಿಗೆ ಬಿಡದೆ | ಬಡ್ಡಿಕೊಂಬ ಆಶೆಗಾರನು ಬಹು ಸೂರಾಳೊ 5 ಅಣಕವಾಡಲಿ ಬೇಡ ಕೆಣಕಿದರೆ ನಿನ್ನ | ಹೊಣಿಕೆಹಾಕುವೆ ಹಿಡತಂದು ಎನ್ನಯ | ಮನವೆ ನಿನ್ನಯ ಚರಣಕ್ಕೆ ಶೋಭಾನೆ 6 ಬೆಟ್ಟದ ಕೊನೆ ಏರಿ ಎಷ್ಟು ದೂರ ಓಡೀ | ಗಟ್ಯಾಗಿ ನಿನ್ನ ಚರಣದ | ಗಟ್ಯಾಗಿ ನಿನ್ನ ಚರಣದ ಕೊನಿಯ ಉಂ ಗುಷ್ಟ ಕಚ್ಚದಲೆ ಬಿಡೆ ನಾನು 7 ಹಿಂದೆ ಯಾರು ಏನು ತಂದು ಕೊಟ್ಟರೋ ನಿನಗೆ | ಇಂದು ನಾನೇನು ಕೊಡಲಿಲ್ಲವೆಲೋ ತಂದೆ | ಕಣ್ಣಿರದು ನೋಡೊ ಕಮಲಾಕ್ಷ | ಶೋಭಾನೆ 8 ಭಕ್ತನ ನುಡಿಕೇಳಿ ಚಕ್ಕನೆ ಬಿಗಿದಪ್ಪಿ | ತೆಕ್ಕಿಸಿದಾ ವಿಜಯವಿಠ್ಠಲ ಎನ್ನ ಅಕ್ಕರವೆಲ್ಲ ತೀರಿಸಿದಾ | ಶೋಭಾನೆ 9
--------------
ವಿಜಯದಾಸ