ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿತ್ಯ ಸಲಹೆ ಜನರನು ಅನ್ನಪೂರ್ಣೆ ಪ ಉಲ್ಲಾಸದಿಂದಲಿ ಪಲ್ಲಕ್ಕಿಯ ಮೇಲೆ ನೀ ಕುಳ್ಳಿರ್ದು ಛತ್ರ ಚಾಮರ ವ್ಯಜನಗಳಿಂದ ಅಲ್ಲಿ ಗಲ್ಲಿಗೆ ನೃತ್ಯಗೀತ ವಾದ್ಯುಪಚಾರ ದಲ್ಲಿ ಉತ್ಸವದಿ ಬರುವ ಸಂಭ್ರಮವಕಂಡೆ 1 ಹಾಡಿ ಪಾಡಿಸಿ ಕೊಳುತ ಚತುರ್ವಿಧ ಗೂಡಿದ ಮಂತ್ರ ಸ್ತುತಿಗಳಿಂದಲಿ ಕೂಡಿದ ಜನರ ಸಂದಣಿಯಲ್ಲಿ ಮನೆಯಲ್ಲಿ ಬೇಡಿದ ಜನರಿಂಗಿಷ್ಟಾರ್ಥವ ನೀವುದ ಕಂಡೆ 2 ಮೂರು ಮೂರುತಿ ನೀನೆ ನಿರ್ಮಿಸಿ ಮತ್ತೆ ಮೂರು ಗುಣಂಗಳ ಧರಿಸಿ ತಾರಣ ರೂಪೆ ಸೃಷ್ಟಿಸ್ಥಿತಿಗಳನು ಸಂಹಾರವ ಮಾಳ್ಪ ಚೈತನ್ಯ ರೂಪೆಯಕಂಡೆ 3 ಬಿಂಕವ ಮುರಿದೆ ಜನರ ಸಾಕಿನ್ನು ಭಯಂಕರವನು ಬೀರದಿರು ತಾಯೆ ಎನ್ನ ಮಾಡಲ ಮನೆಯೊಳು ನೆಲಸಿ ಭಕುತರನು ಶಂಕರಿ ಸಲಹೆ ದಯದೊಳನ್ನಪೂರ್ಣೆ 4 ಎಲ್ಲ ಜೀವರಿಗು ಜೀವಳು ನೀನು ಇಲ್ಲಿನ್ನು ನಿನಗಿಂತ ಬಲ್ಲಿದರು ಇಲ್ಲಮ್ಮ ವಿಜಯದಶಮಿಯೊಳು ನೀ ಬಂದು ಕೊಲ್ಲೂರ ಮೂಕಾಂಬೆಯೊಳಿರ್ದುದ ಕಂಡೆ 5
--------------
ಕವಿ ಪರಮದೇವದಾಸರು
ಬಿಡೊ ಬಿಡೊ ಬಡಿವಾರಾ ಬೀರದಿರು ನಡಿ ನಡಿ ಹೋಗೈ ಸಾಕು ಪ ಗಂಡನುಳ್ಳವಳೆಂದರಿಯದೆ ನೀನೆಂಥಾ ಪುಂಡಾಟಿಕೆ ಯಾರಿಗೆ ಬೇಕೊ 1 ತಕ್ಕ ಬುದ್ಧಿ ಹೇಳುವರಿಲ್ಲದೆ ನಿ - ನ್ನಕ್ಕ ತಂಗಿಯರನೆ ಸೋಕೊ 2 ಶ್ರೀದವಿಠಲ ಸುಮ್ಮನೆ ಹೋಗದೆ ನಡು ಬೀದಿಯೊಳಗೆ ಮಾಡೊರೆ ಹೋಕು 3
--------------
ಶ್ರೀದವಿಠಲರು