ಒಟ್ಟು 4 ಕಡೆಗಳಲ್ಲಿ , 3 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಸುರ ಪ್ರಕೃತಿಯ ದೈವ ಪ್ರಕೃತಿಯನೆರಡನು ನೀನೀಗ ಕೇಳುಅಸುರ ಪ್ರಕೃತಿಯಲಿ ಜನ್ಮವು ದೈವ ಪ್ರಕೃತಿಯಲಿ ಮುಕ್ತಿಯೆ ಎಂಬೆನು ಪ ಕೃತ್ರಿಮ ಕಾಮವು ಮದಮತ್ಸರವು ತಾನಿವು ಅಸುರ ಪ್ರಕೃತಿಸತ್ಯವು ಶಾಂತವು ಶಮದಮವೆಂಬಿವು ತಾನಿವು ದೈವ ಪ್ರಕೃತಿ 1 ಬದ್ಧ ಅವಿದ್ಯೆಯು ಭ್ರಾಂತಿಯು ನಾಶವು ತಾನಿವು ಅಸುರ ಪ್ರಕೃತಿಶ್ರದ್ಧೆಯು ಸೌಮ್ಯವು ಸಂತಸ ಸಾಕ್ಷಿಯು ತಾನಿವು ದೈವ ಪ್ರಕೃತಿ 2 ಕಪಟವು ಕಲ್ಮಷ ಕೃತ್ರಿಮ ಸಂಶಯ ತಾನಿವು ಅಸುರ ಪ್ರಕೃತಿಅಪರೋಕ್ಷಾನುಭವ ಆತ್ಮ ವಿಚಾರವು ತಾನಿವು ದೈವ ಪ್ರಕೃತಿ 3 ದುಃಖ ದುರ್ಬೀಜವು ಕ್ರೂರ ದೃಷ್ಟಿಯು ತಾನಿವು ಅಸುರ ಪ್ರಕೃತಿಸುಖ ಆನಂದವು ಅಂತರ ದೃಷ್ಟಿಯು ತಾನಿವು ದೈವ ಪ್ರಕೃತಿ 4 ಮರಣ ಜನನಕೆ ಅಜ್ಞಾನ ಕಾರಣ ತಾನಿದು ಅಸುರ ಪ್ರಕೃತಿಅರಿತು ತನ್ನನು ಚಿದಾನಂದನಾಗುವುದು ತಾನಿದು ದೈವ ಪ್ರಕೃತಿ 5
--------------
ಚಿದಾನಂದ ಅವಧೂತರು
ಜ್ಞಾನದ ಬೆಳೆಯನು ಬೆಳೆಯೊ ಶ್ರೀಗುರುಬಲವನು ನೀ ಪಡೆಯೋ ಪ ನಾದಗಳೆತ್ತನು ಹೂಡು ಅದಕೆ ತ್ರಿಗುಣದ ಕೂರಿಗೆ ಜೋಡುಬೋಧದ ಬೀಜವು ನೋಡು ಮನಸಿನ ಹೊಲದಲಿ ಬಿತ್ತಿಬಿಡು 1 ಕರ್ಮ ಕಸವ ಕಳೆದುನಿರ್ಮಳ ಬೆಳೆಗೊಂಡು ಗುರು ತಾ ಸ್ವರ್ಮಣಿ ಬಲಗೊಂಡು 2 ತೇಜರಾಶಿಗಳನೆಳೆದು ರಾಜಿಪ ರಾಜ ಕೊಳಗದಲಿ ಅಳೆದುಭೋಜನಕೆ ಎಡೆಮಾಡಿ ಚಿದಾನಂದ ಸಹಜ ಮೂರುತಿಗೂಡಿ3
--------------
ಚಿದಾನಂದ ಅವಧೂತರು
ಬಿತ್ತಿರೋ ಬೀಜವ ಗಜನಿಗೆ ಮತ್ತೆ ಬೆಟ್ಟಿಗೆ ಬಿತ್ತ ಬಿತ್ತಿದ ಬೀಜ ಬಾರದು ಪ ಒಳ್ಳೆ ಪಾತ್ರನ ನೋಡಿ ವೇದಾಂತ ವೇದ್ಯಗೆ ಬೆಳ್ಳಿ ಸುವರ್ಣ ಗೋದಾನಂಗಳ ಉಲ್ಲಾಸ ದೊಳ ಗೊಂದು ಬುದ್ದಿಯೊಳಿತ್ತರೆ ಎಳ್ಳಷ್ಟು ಮಹಮೇರು ಪರ್ವತವಹುದು 1 ದುಡ್ಡು ದುಗ್ಗಾಣಿಯಾದರು ತನಗುಳ್ಳದು ದೊಡ್ಡ ಕುಟುಂಬ ಶ್ರೋತ್ರಿಯನ ನೋಡಿ ಅಡ್ಡ ಮನಸಿಲ್ಲದಂದದಲಿ ಕೊಟ್ಟೊಡೆ ದೊಡ್ಡ ಪರ್ವತವಾಗಿ ಬೆಳೆವುದು ಕಂಡ್ಯಾ 2 ಬೆಟ್ಟ ಭೂಮಿಗೆ ಬೀಜ ಬಿತ್ತಲು ಬೀಜವು ಕಷ್ಟದಿಂದಲಿ ಬೆಳೆದು ಬರಬೇಕು ಶಿಷ್ಯರಾಗಿರ್ದ ವಿಪ್ರೋತ್ತಮರಿಗೆ ಒಂದು ಕೊಟ್ಟೊಡೆ ಒಂದು ಲಕ್ಷವಾಗುವುದು 3 ಶ್ರದ್ಧೆಯಿಂದಲಿ ನಾರಿ ಮಕ್ಕಳು ಸಹಿತ ಸದ್ಭುದ್ಧಿಯಿಂದಲಿ ದಾನ ಕೊಡಬೇಕು ಶುದ್ಧ ಪಾತ್ರನ ನೋಡಿ ಕೊಟ್ಟೊಡೆ ಅದು ಒಂದು ಉದ್ದಿನ ಕಾಳಷ್ಟು ಪರ್ವತವಹುದು 4 ಯಾರಿಗಾದರೂ ವಿಪ್ರರಿಗೆ ಕೊಡಬಹುದು ವಿ ಚಾರಿಸೆ ಬೆಟ್ಟುಗಜನಿಯಂತರ ಮಾರುತಾತ್ಮಜನ ಕೋಣೆಯ ಲಕ್ಷ್ಮೀರಮಣನ ಚಾರು ದಾಸರಿಗೆ ಇತ್ತರದು ಕೋಟಿ ಫಲವದು 5
--------------
ಕವಿ ಪರಮದೇವದಾಸರು
ವಿಭೂತಿ ಮುಂದೊ ಪ ಭೂಮಿ ಆಕಾಶ ಪೊತ್ತೊ ಆಕಾಶ ಭೂಮಿಯ ಪೊತ್ತೊಭೂಮಿಯು ಮುಂದೊ ಆಕಾಶ ಮುಂದೊ ಸ್ವಾಮಿ 1 ತತ್ತಿ ಹಕ್ಕಿಯ ಪೊತ್ತೊ ಹಕ್ಕಿ ತತ್ತಿಯ ಪೊತ್ತೊತತ್ತಿಯು ಮುಂದೊ ಹಕ್ಕಿಯು ಮುಂದೊ ಸ್ವಾಮಿ 2 ಬೀಜ ವೃಕ್ಷವ ಪೊತ್ತೊ ವೃಕ್ಷ ಬೀಜವ ಪೊತ್ತೊಬೀಜವು ಮುಂದೊ ವೃಕ್ಷವು ಮುಂದೊ ಸ್ವಾಮಿ 3 ಗಂಡ ಹೆಂಡಿರ ಪೊತ್ತೊ ಹೆಂಡಿರು ಗಂಡನ ಪೊತ್ತೊಗಂಡನು ಮುಂದೊ ಹೆಂಡಿರು ಮುಂದೊ ಸ್ವಾಮಿ4 ನವನೀತ ಕಾಣಿರಿ 5
--------------
ಕನಕದಾಸ