ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಈ) ತಾತ್ವಿಕ ಕೃತಿಗಳು ಓಂ ನಮೋ ನಾರಾಯಣ ಓಂ ನಮೋ ನಾರಾಯಣ ಪ ರಾಮಾನುಜ ಬೆಳೆದ ಧರೆಯೊಳಗೆ ಅ.ಪ ನಾರದ ಬಿತ್ತಿದ ನಾರಾಯಣ ಬೀಜಕೆ ಧೀರಾಂಬರೀಷನು ಗೊಬ್ಬರವಾದ ಕು- ಮಾರ ಪ್ರಹ್ಲಾದನು ನೀರಾಗೆರೆದ ಆ ರುಕುಮಾಂಗದ ಗಾಳಿಯಾದ1 ನಾರಾಯಣನೆಂಬ ಬೀಜಮಂತ್ರವು ಕು- ವರ ಧ್ರುವನ ಕಾವಲಿನಲ್ಲಿ ಸರಸರ ಬೆಳೆಯಿತು ಆಳುವಾರರು ಭೂ ಸುರ ಭಾಗವತರುಗಳಲಿ 2 ರಮಾನುಜನಿದರ ಒಕ್ಕಣೆಮಾಡಿ ಸಮಾನತೆಯಿಂದ ಹಂಚಿದನು ಶ್ರಿಮಣಿಯಲ್ಲಿ ತುಂಬಿದನು ಸಮಾನ ವೇದವೆನಿಸಿದನು 3 ಹಬ್ಬಿತು ಹರಡಿತು ಧರೆಯೆಲ್ಲ ಉಬ್ಬಿತು ಉಲಿಯಿತು ಗಿರಿಯೆಲ್ಲ ಅಬ್ಬಬ್ಬ ಜಾಜಿಪುರೀಶ ಕೇಶವನಾಮವು ಹಬ್ಬವಾಯಿತು ನಮಗೆಲ್ಲ 4
--------------
ನಾರಾಯಣಶರ್ಮರು
ಒಂದೇ ಬ್ರಹ್ಮವು ಮತ್ತೊಂದಿಲ್ಲವುಇದ್ದುದು ಬ್ರಹ್ಮವು ಒಂದೇಒಂದನು ಎರಡಾಗಿ ಮಾಡುವುದೆಂತೈಮಾಡಲು ಕೆಡುವನು ಮುಂದೆ 1 ಕನಕದಿಂದ ಒಡವೆ ಬಹಳಾಗಲು ಒಡವೆಗೆಲ್ಲಕನಕವೊಂದೇ ಘನ ಬ್ರಹ್ಮದಿಂದ ನಾನಾ ಜೀವವಾಗೆನಾನಾ ಜೀವಕೆ ಬ್ರಹ್ಮವೊಂದೇ2 ಲೋಹಗಳಿಂದಲಿ ಅನೇಕ ವಿಧವಿರೆಅನೇಕ ವಿಧಕೆ ಲೋಹವೊಂದೇಮಹಾಬ್ರಹ್ಮಾದಿ ಮಹತ್ತು ಅಣುವಿರೆಮಹತ್ತು ಅಣುವಿಗೆ ಬ್ರಹ್ಮವೊಂದೇ 3 ಬೀಜದಿಂದ ಬೀಜವನೇಕವಾಗಲುಅನೇಕ ಬೀಜಕೆ ಬೀಜವೊಂದೇತೇಜ ಚಿದಾನಂದ ಬ್ರಹ್ಮವು ಸರ್ವವುಆ ಸರ್ವಕೆ ಬ್ರಹ್ಮವು ತಾನೊಂದೆ 4
--------------
ಚಿದಾನಂದ ಅವಧೂತರು
ಪಾಪ ಹತ್ತಿದೆ ಜಗಕೆ ಪಾಪ ಹತ್ತಿದೆಪಾಪದೊಳಗೆ ಮಹಾಪಾಪ ಪುರುಷ ಬೀಜಕೆ ಬಂದಿದೆ ಮೃತ್ಯು ಪ ಅಂದು ಕೃತಯುಗದಿ ಪಾರ್ವತಿಯಾಯಿತು ಭಸ್ಮಾಸುರಗೆಮುಂದೆ ತ್ರೇತಾಯುಗದಿ ಸೀತೆಯಾಗಿ ಹಿಡಿಯಿತು ರಾವಣಂಗೆ ಮೃತ್ಯು1 ಹಿಂದೆ ದ್ವಾಪರಯುಗದಿ ದ್ರೌಪದಿಯಾಗಿ ದುರ್ಯೋಧನನ ಮುರಿಯಿತು ಮೃತ್ಯುಇಂದು ಕಲಿಯುಗದಿ ನೋಡಲು ಇದಕೋ ಮನೆಮನೆಗೆ ಮೃತ್ಯು 2 ಹೆಡಕತ್ತಲಿ ಕೂತು ಹಗಲು ಇರುಳು ಕಾಯಿತಿದೆ ಮೃತ್ಯುಬಿಡಿಸಿಕೊಂಡು ಸ್ವರ್ಗಕೆ ಹೋದರೆ ಬೆನ್ನ ಬಿಡದು ಅಲ್ಲಿ ಮೃತ್ಯುಅಡ ಶಿರೋಶಿ ಇಲ್ಲಿಗೆ ಬಂದರೆ ಅಡರಿ ಕೊಂಬುದು ಮೃತ್ಯು3 ಮೃತ್ಯುಭಯವ ಬಿಡಿಸಿ ಮುಂದೆ ಕಾವರಿಲ್ಲವೋಮೃತ್ಯುಂಜಯರು ಚಿದಾನಂದ ಭಕ್ತರುಂಟುನಂಬಿದರೆ ಮೃತ್ಯು ಮಗ್ಗುಲಲಿದ್ದರೇನು ಮೋಹವಿಲ್ಲದಂತೆ ಮಾಡುವುದು4
--------------
ಚಿದಾನಂದ ಅವಧೂತರು