ಒಟ್ಟು 7 ಕಡೆಗಳಲ್ಲಿ , 5 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ ಕ್ಷೀರಾನ್ನ ದಧ್ಯೋದನ್ನ ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು ಉಪ್ಪಿನಕಾಯಿಗಳ ಪಚ್ಚಡಿ ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ 1 ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನÉೀ? 2 ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ ಸಿಟ್ಟುಮಾಡದೆ ಗುರುರಾಮವಿಠಲನ್ನಾ ಸ್ಮರಿಸಿಕೊಂಡು ದಿಟ್ಟೆ ಬೀಗಿತ್ತಿ 3
--------------
ಗುರುರಾಮವಿಠಲ
ಅಬ್ಬಬ್ಬ ಈ ವರನ ಅದ್ಭುತಾಕೃತಿ ನೋಡಿ ಉಬ್ಬುಸವು ಮಿಗಿಲಾಯ್ತು ಸಹಿಪೆನೆಂತು ಕೆಮ್ಮೀಸೆ ಕೆಂಗಣ್ಣು ಕೆಂಪಾದ ರೋಮಗಳು ಹೆಮ್ಮಾರಿಯಂದದೊಳು ಮೊರೆವಮಿಗಿಲು ಕೆನ್ನೀರು ಪಾನದಿಂದುನ್ಮತ್ತನಂದದಿಂ ಘನ್ನಘಾತಕನಾಗಿ ಮೆರೆವ ಬೀಗಿ ಕರುಳ ಮಾಲೆಯ ಧರಿಸಿ ಮೆರೆಯುತಿಹನೀ ಸಹಸಿ ತರತರದಿ ಸುರನರರು ನಡುಗುತಿಹರು ಸ್ತಂಭವಿದೆ ಜನ್ಮಸ್ಥಲವಾಯಿತಿವಗೆ ಕುಂಭಿಣೀಯಂಬರಕೆ ಮಧ್ಯದೊಳಗೆ ಸಂಭ್ರಮದಿ ನೆಲಸಿಹನೆ ಪಡಿಯಮೇಲೆ ನಂಬಿದೆನು ಶೇಷಗಿರಿವರನ ಲೀಲೆ
--------------
ನಂಜನಗೂಡು ತಿರುಮಲಾಂಬಾ
ಪರಿಣಯ ಮಹೋತ್ಸವವು ಪ ಮಂಗಳ ಮಂಟಪವು ಚಪ್ಪರದಲ್ಲಿ .ಶೃಂಗಾರ ವರ ಪೀಠವು ಕಂಗೊಳಿಪ ರುಚಿರಾಂಬರಾಳಿಯು ಮಂಗಳ ಸುವಾದ್ಯಂಗಳಿಂದಲಿ 1 ಸುತ್ತ ದೀಪಾವಳಿಯು ಸುವರ್ಣದ ಮುತ್ತಿನ ತೋರಣವು ವಜ್ರ ಪದ್ಮವು ಸುತ್ತು ವೀಳೆಯ ಪುಷ್ಪ ನಿಚಯವು ಸುತ್ತೆ ಜವ್ವಾಜಿಗಳ ಪರಿಮಳ ಸುತ್ತಿ ಸುಳಿವ ಸುಗಂಧ ಲಹರಿಯು 2 ಬೀಗರು ಹಸೆಯೊಳಿರೆ ಆ ಮಧ್ಯದಿ ಬೀಗಿತ್ತಿಯರು ಕುಳ್ಳಿರೆ ಆಗ ನಿಶ್ಚಿತ ಲಗ್ನದಲ್ಲಿ ವಧೂವರರ ಪೂಜಿಯನು ಗೈಯಲು ತುಂಬಿರಲು ಸಭೆಯೊಳು 3 ದಾರಾ ಮಹೊತ್ಸವವು ಅಕ್ಷತೆಗಳ ಸೇರೆಯೊಳೆರೆಯುವುದು ನಾರಿಯರ ವರದೇವತಾಸ್ತುತಿ ಸಾರೆ ಭೂಸುರರಾಶಿಷಂಗಳು ಸೇರೆ ಸಂಗೀತಗಳ ವೈಖರಿ ಸಾರಿ ಸುರಗಣ ಜಯಜಯನ್ನಲು 4 ಮಾಡೆ ದಾನದಕ್ಷಿಣೆಯಾಗಲು ಬಾನುರಾಗದೆ ಸರ್ವರನ್ನು ವಿನೋದದಿಂದುಪಚರಿಸುತಿರಲು ಹರಸೆ ಸಂತೋಷದಿ 5
--------------
ಬೇಟೆರಾಯ ದೀಕ್ಷಿತರು
ವಂದಿಸುವೆವಿಂದು ಮುದದೆ ಶಾರದೆ ಪ. ವಂದಾರುಮಂದಾರೆ ಎಂದೆಂದಿಗೆಮ್ಮೊಳಿರೆ ಸಂದೇಹವಿಲ್ಲದಂತೇ ಸುಸ್ವಾಂತೀ 1 ಮತ್ತೇರಿ ತಲೆಕೆಟ್ಟು ಕತ್ತಲೆಯೊಳು ಬಿದ್ದು ತತ್ತರಗೊಳ್ವೆವಲ್ಲೇ ಕೋಮಲೆ 2 ಹಾಲಹಲದಂಥ ಆಲಸ್ಯದಿಂದ ಬೀಗಿ ಕಾಲೆತ್ತದಂತೊರಗಿರ್ಪೆನೇ ನೊಂದೆನೇ 3 ಕಂದನ ನುಡಿ ಕೇಳು ಒಂದಿಷ್ಟು ದಯೆ ತಾಳು ಕುಂದುಗಳೆನಿಸದೇ ಪೊರೆ ಶ್ರೀಕರೇ 4 ವರಶೇಷಗಿರೀಶನ ಚರಿತಂಗಳನುದಿನ ಸ್ಮರಿಸಿಕೊಂಡಾಡುವಂತೆ ಮಾಡೆನುತೇ ವಂದಿಸುವೆ5
--------------
ನಂಜನಗೂಡು ತಿರುಮಲಾಂಬಾ
ವನಜನೇತ್ರೆ ಕನಕಗಾತ್ರೆ ಅನುವಿನಿಂ ಬಾ ಮಿತ್ರೆ ಪ. ವಿನಯದಿಂದ ಜನಕ ಸಾರುವ ಕೋಲನಾಡುವ ಅ.ಪ. ಆರ್ಯಮಾತೆಯ ಆರ್ಯಧರ್ಮದ ಸಾರವರಿಯುವ ವೀರಮಾತೆಯ ಭೂರಿಕೀರ್ತಿಯ ಪಾಡಿಸುಖಿಸುವ 1 ಬೇಗನೇಳಿರೆ ಭಾಗ್ಯೋದಯಮದೀಗ ನೋಡಿರೇ ಬೀಗಿಮಲಗುವ ರೋಗವುಳಿದು ಸರಾಗದೆ ಪಾಡಿರೇ 2 ಅವನೀಮಾತೆಯ ಭವಿತವ್ಯತೆಗೆ ತವಕಗೊಳ್ಳುತ 3 ಶುದ್ಧರಾಗಿ ತಿಲಕತಿದ್ದಿ ವೃದ್ಧರಂ ನಮಿಸಿರಿ4 ಶ್ರದ್ಧೆಯಿಂ ಕಾರ್ಯಸಿದ್ಧಿಗೊಯ್ಯಿರಿ ಸಿದ್ಧಾರ್ಥರೆನಿಸಿರಿ ಸದ್ಧರ್ಮ ದೀಕ್ಷಾಬದ್ಧರಾಗಿ ಸುಭದ್ರವಿಳೆಗೊದವಿರಿ5 ಅರಸರನ್ನು ಸರಸದಿಂದ ಹುರುಡಿಸಿರಿನ್ನು ಪುರುಷರೆನ್ನಿಸಿ ಕಾರ್ಯಮೆಸಗುವ ತೆರನ ತೋರಿಸಿ 6 ದೇಶದೇಳ್ಗೆಯೊಳಾಸೆಯಿರಿಸಿ ಲೇಸನೆಸಗಿರಿ ದೋಷಹರಣ ಶೇಷಗಿರೀಶಗೆ ಮೀಸಲಿರಿಸಿರಿ7
--------------
ನಂಜನಗೂಡು ತಿರುಮಲಾಂಬಾ
ವ್ಯರ್ಥವಾಯಿತಲ್ಲ ಜನ್ಮವು ಸಾರ್ಥಕಾಗಲಿಲ್ಲ ಪ ಅರ್ಥದಾಸೆಯಲಿ ಪೃಥ್ವಿಯೊಳಗೆ ಸುತ್ತಿಮತ್ತನಾಗಿ ಬಲು ಕೃತ್ಯಗಳನು ಮಾಡಿಅ ಹರಿಯ ನೆನಯಲಿಲ್ಲ ಹರುಷದಿ ಗರುವ ಪುಟ್ಟಿತಲ್ಲಪರಮ ಮೂಢರಲಿ ನಿರುತ ಸಂಗವ ಮಾಡಿಗುರು ಹಿರಿಯರ ದಯ ದೊರೆಯದೆ ಸುಮ್ಮನೆ1 ಏನು ಪೇಳಲೇನು ಎನಗೆ ಹೀನ ಬಿಡದು ಮುನ್ನಶ್ವಾನಗಿಂತಲು ಬಲು ಮಾನಗೆಟ್ಟು ನಾದೀನನಾಗಿ ಮನೆಮನೆಗಳ ತಿರುಗಿ 2 ಭಾಗವತರ ಪಾದಕ್ಕೊಂದಿನ ಬಾಗಿ ನಡೆಯಲಿಲ್ಲರಾಗುರಂಗು ಭಕ್ತಿ ಭಾವದೊಳುಬೀಗಿ ಚೆನ್ನಕೇಶವನನು ನೆನೆಯದೆ 3
--------------
ಕನಕದಾಸ
ಹಿರಿಯ ಅತ್ತಿಗೆಯರ ಗರವು ಕಂಡೆವೆಮೇರುಗಿರಿಗಿಂತ ಕೋಟಿ ಅಧಿಕವೆ ಸಖಿಯೆನಾ ಹ್ಯಾಂಗೆಸುಮ್ಮನಿರಲಿ ಪ. ಓಡಿ ಬಂದವಳು ಒಳಗೆ ಸೇರಿಮಾತಾಡಳು ನೋಡಳು ನಮ್ಮ ಅಣ್ಣನ ಮಡದಿಯುನೋಡಳು ನಮ್ಮ ಅಣ್ಣನು ಮಡದಿಗೆಮಾಡಿದ ಮೋಹ ತಲೆಗೇರಿ1 ಹೆಣ್ಣು ರುಕ್ಮಿಣಿ ತಮ್ಮ ಅಣ್ಣನವಂಚಿಸಿಓಡಿ ಬಂದು ಕಣ್ಣಿಲೆನೋಡಿ ಕರೆಯಳುಕಣ್ಣಿಲೆ ನೋಡಿ ಕರೆಯಳು ಇವಳು ನಮ್ಮಅಣ್ಣನ ಬಲವ ಹಿಡಕೊಂಡು2 ಇಂದು ರುಕ್ಮಿಣಿ ತಿಳಿದು ಬಂದಳು ಭಾಳೆ ವಿನಯದಿಬಂದಳು ಭಾಳೆ ವಿನಯದಿ ದ್ರೌಪತಿಯಆಲಿಂಗನವÀ ಮಾಡಿ ಕರೆದಳು 3 ಬಾರವ್ವ ಸುಭದ್ರೆ ಏರವ್ವ ಸೋಪಾನ ತೋರವ್ವ ನಿನ್ನ ವಚನವತೋರವ್ವ ನಿನ್ನ ವಚನವ ಎನುತಲಿ ದ್ವಾರದಿ ಕೈಯ್ಯ ಹಿಡಕೊಂಡು4 ಬಂದ ಬೀಗಿತ್ತಿಯರು ಚಂದದಿಂದ ಇದುರುಗೊಂಡು ಮಂದಹಾಸದಲೆ ನುಡಿಸುತಮಂದ ಹಾಸದಲೆ ನುಡಿಸುತ ರುಕ್ಮಿಣಿ ಬಂದವರು ಯಾರು ಮನೆಯೊಳು 5 ಸೊಂಡಿಲನಗರದ ಪಾಂಡು ಭೂಪನ ಸೊಸೆಗಂಡುಗಲಿ ಪಾರ್ಥನ ಆರ್ಧಾಂಗಿಗಂಡುಗಲಿ ಪಾರ್ಥನ ಆರ್ಧಾಂಗಿ ಸುಭದ್ರಾಮುಯ್ಯವ ಕೈಕೊಂಡು ಬ್ಯಾಗ ತಿರುಗಿಸು 6 ಹರದಿ ರುಕ್ಮಿಣಿ ದೇವಿ ಸೆರಗ ಹಿಡಿದು ದ್ರೌಪದಿಯದೊರೆಗಳ ಹೆಸರು ನಮಗ್ಹೇಳೆ ದೊರೆಗಳ ಹೆಸರು ನಮಗ್ಹೇಳೆ ರಾಮೇಶನ ಪರಮಭಕ್ತರಿಗೆ ನುಡಿದಳು 7
--------------
ಗಲಗಲಿಅವ್ವನವರು