ಒಟ್ಟು 4 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಲ್ಲಮ್ಮಾದೇವಿ ನಮ್ಮ ದೇವರು ಬಂದರು ಕಾಣ ಪ. ಸೋಮಾಸುರನೆಂಬ ದೈತ್ಯನು ಸಾಮಕ ವೇದವನೊಯ್ಯಲು ಮಾ ಸೋಮಾಸುರನೆಂಬವನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮದೇವ ಗುಡ್ಡವ ಬೆನ್ನಲ್ಲಿಟ್ಟನು ಮಾ ಗುಡ್ಡದಂಥÀ ದೈತ್ಯರನೆಲ್ಲ ಅಡ್ಡÀಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಪೆಣ್ಣನೊಯ್ಯಲು ಮಾ ವರ್ಣರೂಪವ ತಾಳಿ ಅವನ ಭಿನ್ನ ಭಿನ್ನವ ಮಾಡಿದನು ಮಾ 3 ಕಂಭದಿಂದಲೆ ಉದಿಸಿ ನಮ್ಮ ದೇವ ಜಂಭದಸುರನ ಬಡಿದನು ಮಾ ನಂಬಿದ ಪ್ರಹ್ಲಾದನ್ನ ಕಾಯಿದ ಅಂಬುಜನಾಭ ನರಸಿಂಗನು ಮಾ 4 ಬಲು ಮುರುಡನಾಗಿ ಭೂಮಿಯ ಬಲಿಯ ದಾನವ ಬೇಡಿದ ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕೊತ್ತಿದ ಮಾ 5 ಕೊಡಲಿಯನ್ನು ಪಿಡಿದು ನಮ್ಮದೇವ ಕಡಿದ ಕ್ಷತ್ರಿಯ ರಾಯರ ಮಾ ಹಡೆದ ತಾಯ ಶಿರವ ತರಿದು ಪಡೆದನಾಕೆÉಯ ಪ್ರಾಣವ ಮಾ 6 ಎಂಟೆರಡು ತಲೆಯ ಅಸುರನ ಕಂಠವ ಛೇದಿಸಿ ಬಿಟ್ಟನು ಮಾ ಒಂಟಿರೂಪವ ತಾಳಿ ಲಂಕೆಯ ಬಂಟ ವಿಭೀಷಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳೀಮೇಳದಲಿಪ್ಪನು ಮಾ ಬಾಲಕನಾಗಿ ಪೆಣ್ಣರೂಪದಲಿ ಶ್ರೀ- ಲೋಲ ಲಕ್ಷ್ಮಿಯ ಅರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪೆವನದೊಳಗಿಪ್ಪನು ಮಾ ಸರ್ಪಶರನಾಗಿ ಪೋಗಿ ತ್ರಿಪುರಸಂಹರ ಮಾಡಿದ ಮಾ 9 ಎಲ್ಲಮ್ಮಾ ಎಲ್ಲಮ್ಮಾ ನಮ್ಮದೇವ ಬಲ್ಲಿದ ಕಲ್ಕ್ಯವತಾರನು ಮಾ ಇಳೆಯ ಸ್ವರ್ಗ ಪಾತಾಳಕೊಡೆಯ ಚೆಲುವ ಹಯವದನನು ಮಾ 10
--------------
ವಾದಿರಾಜ
ಪುಟ್ಟಿದನು ಜಗದೀಶ | ಜಗಭಾರ ನೀಗಲುವೃಷ್ಣಿಕುಲದಲಿ ಈಶ | ದೇವಕಿಯ ಜಠರದಿಕೊಟ್ಟು ಅವಳಿಗೆ ಹರ್ಷ | ಕರುಣಾಬ್ದಿ ಭೇಶ ಪ ಅಟ್ಟಹಾಸದಿ ದೇವದುಂದುಭಿ | ಶ್ರೇಷ್ಠವಾದ್ಯಗಳೆಲ್ಲ ಮೊಳಗಲುಅಷ್ಟಮಿಯ ದಿನದಲ್ಲಿ ಬಲು ಉ | ತ್ಕøಷ್ಟದಲ್ಲಿರೆ ಗ್ರಹಗಳೆಲ್ಲವು ಅ.ಪ. ಪರಿ ದೇ-ವಕ್ಕಿಯಲಿ ಉದ್ಭವಿಸೀ | ಸಜ್ಜನರ ಹರ್ಷೀಸಿ ||ವಕ್ರಮನದವನಾದ ಕಂಸನು | ಕಕ್ಕಸವ ಬಡಿಸುವನು ಎನುತಲಿನಕ್ರಹರ ಪ್ರಾರ್ಥಿತನು ದೇ | ವಕ್ಕಿ ವಸುದೇವರಿಂದಲಿ 1 ದೇವ ಶಿಶುತನ ತಾಳೀ | ನಗುಮೊಗವ ತೋರಲುದೇವ ವಾಣಿಯ ಕೇಳೀ | ಅನುಸರಿಸಿ ಆದ ವಸುದೇವ ತನಯನ ಕೈಲೀ | ಕೊಂಡಾಗ ಬಂಧನಭಾವ ಕಳಚಿತು ಕೇಳೀ | ಶ್ರೀ ಹರಿಯ ಲೀಲೇ ||ಪ್ರಾವಹಿದ ಸರಿದ್ಯಮುನೆ ವೇಗದಿ | ಭಾವ ತಿಳಿಯುತ ಮಾರ್ಗವೀಯಲುಧೀವರನು ದಾಟುತಲಿ ಶಿಶು ಭಾವದವನನ ಗೋಪಿಗಿತ್ತನು 2 ವಿಭವ ||ತಂದು ಶಿಶು ಸ್ತ್ರೀಯಾಗಿ ಮಲಗಿರೆ | ಬಂದು ಕಂಸನು ಕೈಲಿ ಕೊಳ್ಳುತಕಂದನಸು ಹರಣಕ್ಕೆ ಯತ್ನಿಸೆ | ಬಾಂದಳಕ್ಕದು ಹಾರಿ ಪೇಳಿತು 3 ದುರುಳ ಭಯವನೆ ಪೊಂದಿ ತೆರಳುತತರಳರಸುಗಳ ನೀಗ ತನ್ನಯ | ಪರಿಜನಕೆ ಅಜ್ಞಾಪಿಸಿದ ಕಂಸ 4 ಆರೊಂದನೆಯ ದಿನದಿ | ಗೋಕುಲಕೆ ಬಂದಳುಕ್ರೂರಿ ಪೂಥಣಿ ವಿಷದಿ | ಪೂರಿತದ ಸ್ತನ ಕೊಡೆಹೀರಿ ಅವಳಸು ಭರದಿ | ಮೂರೊಂದು ಮಾಸಕೆಭಾರಿ ಶಕಟನ ಮುದದಿ | ಒದೆದಳಿದೆ ನಿಜಪದದಿ ||ಮಾರಿ ಪೂಥಣಿ ತನುವನಾಶ್ರಿತ | ಊರ್ವಶಿಯ ಶಾಪವನೆ ಕಳೆಯುತಪೋರ ಆಕಳಿಸುತ್ತ ಮಾತೆಗೆ | ತೋರಿದನು ತವ ವಿಶ್ವರೂಪ 5 ಭಂಜನ ||ಪಾನಗೈಯ್ಯುತ ದಾನ ವನ್ಹಿಯೆ | ಹನನ ವಿಷತರುರೂಪಿ ದೈತ್ಯನ ಧೇನುಕಾಸುರ ಮಥನ ಅಂತೆಯೆ | ಹನನ ಬಲದಿಂದಾ ಪ್ರಲಂಬನು6 ಪರಿ ಗೋವರ್ಧನ | ಶಂಖ ಚೂಡನ ಶಿರಮಣಿಯು ಬಲು ಅಪಹರಣ | ಅರಿಷ್ಟಾಸುರ ಹನನ ||ಹನನಗೈಯ್ಯಲು ಕೇಶಿ ಅಸುರನ | ಘನಸುವ್ಯೋಮಾಸುರನ ಅಂತೆಯೆ ಮನದಿ ಯೋಚಿಸಿ ಕಂಸ ಕಳುಹಿದ | ದಾನ ಪತಿಯನು ಹರಿಯ ಬಳಿಗೆ 7 ಬಲ್ಲ ಮಹಿಮೆಯ ಹರಿಯ | ಅಕ್ರೂರ ವಂದಿಸಿಬಿಲ್ಲಹಬ್ಬಕೆ ಕರೆಯ | ತಾನೀಯೆ ಕೃಷ್ಣನುಎಲ್ಲ ತಿಳಿಯುತ ನೆಲೆಯ | ಪರಿವಾರ ಸಹಿತದಿಚೆಲ್ವ ರಥದಲಿ ಗೆಳೆಯ | ಅಕ್ರೂರ ಬಳಿಯ ||ಕುಳ್ಳಿರುತ ಶಿರಿ ಕೃಷ್ಣ ತೆರಳುತ | ಅಲ್ಲಿ ಯಮುನೆಲಿ ಸ್ನಾನ ವ್ಯಾಜದಿ ಚೆಲ್ವತನ ರೂಪಗಳ ತೋರುತ | ಹಲ್ಲೆಗೈದನು ಗೆಳೆಯ ಮನವನು 8 ಬವರ | ಗೈವುದಕೆ ಬರ ಹರಿಹಲ್ಲು ಮುರಿಯುತ ಅದರ | ಸಂಹರಿಸಿ ಬಿಸುಡಲುಮಲ್ಲ ಬರೆ ಚಾಣೂರ | ಹೂಡಿದನು ಸಂಗರ ||ಚೆಲ್ವ ಕೃಷ್ಣನು ತೋರಿ ವಿಧ್ಯೆಯ | ಮಲ್ಲನನು ಸಂಹರಿಸುತಿರಲು ಬಲ್ಲಿದನು ಬಲರಾಮ ಮುಷ್ಟಿಕ | ಮಲ್ಲನನು ಹುಡಿಗೈದು ಬಿಸುಟನು 9 ಜಲಧಿ | ಆವರಿಸಿ ಬರುತಿರೆಹರಿಯ ಬಲ ಸಹ ಭರದಿ | ಸಂಹರಿಸಿ ಅವರನುಕರಿಯ ವೈರಿಯ ತೆರದಿ | ಹಾರುತಲಿ ಮಂಚಿಕೆಲಿರುವ ಕಂಸನ ಶಿರದಿ | ಪದಮೆಟ್ಟಿ ಶಿಖೆ ಪಿಡದಿ ||ಗರುಡನುರಗನ ಪಿಡಿದು ಕೊಲ್ಲುವ | ತೆರದಿ ಕೃಷ್ಣನು ಪಿಡಿದ ಕಂಸನ ಕರದಿ ಖಡ್ಗದಿ ಶಿರವ ನಿಳುಹಲು | ನೆರೆದ ಸುಜನರು ಮೋದಪಟ್ಟರು 10 ಮಂದ ಮೋದ ಪಡಿಸುವ 11
--------------
ಗುರುಗೋವಿಂದವಿಠಲರು
ಸೋಮಾಸುರನೆಂಬ ಅಸುರನು ಸಾಮಕವೇದವ ಒಯ್ಯಲು ಮಾ ಸೋಮಾಸುರದೈತ್ಯನ ಕೊಂದು ಸಾಮಕವೇದವ ತಂದನು ಮಾ 1 ಗುಡ್ಡವು ಮುಳುಗಿ ಪೋಗಲು ನಮ್ಮ ದೇವ ಗುಡ್ಡ ಬೆನ್ನೊಳಗಿತ್ತನು ಮಾ ಗುಡ್ಡದಂಥ ದೈತ್ಯರನೆಲ್ಲ ಅಡ್ಡ ಕೆಡಹಿ ಬಿಸುಟನು ಮಾ 2 ಚಿನ್ನಗಣ್ಣಿನವನು ಬಂದು ಕನ್ನೆ ಹೆಣ್ಣನೊಯ್ಯಲು ಮಾ ವರ್ಣರೂಪವ ತಾಳಿದಸುರನ ಛಿನ್ನಭಿನ್ನವ ಮಾಡಿದನು ಮಾ 3 ಕಂಬದಿಂದಲಿ ಬಂದು ನಮ್ಮ ದೇವ ಇಂಬಾದಸುರನ ಬಗಿದನು ಮಾ ನಂಬಿದ ಪ್ರಹ್ಲಾದನ ಕಾಯ್ದ ಅಂಬುಜನಾಭ ನೃಸಿಂಹನು ಮಾ 4 ಮುರುಡನಾಗಿ ಬಂದು ನಮ್ಮ ದೇವ ಬಲಿಯ ದಾನವ ಬೇಡಿದನು ಮಾ ಇಳೆಯ ಈರಡಿಯ ಮಾಡಿ ಬಲಿಯ ಪಾತಾಳಕ್ಕೊತ್ತಿದನು ಮಾ 5 ಕೊಡಲಿಯನು ಪಿಡಿದು ನಮ್ಮ ದೇವ ಕಡಿದ ಕ್ಷತಿಯರಾಯ (ಯರ?) ನು ಮಾ ಹಡೆದ ತಾಯಿಯ ಶಿರವ ತರಿದು ಪಡೆದನಾಕೆಯ ಪ್ರಾಣ(ಣವ?) ನು ಮಾ 6 ಎಂಟು ಎರಡು ತಲೆಯ ಅಸುರನ ಕಂಠವ ಛೇದಿಸಿ ಬಿಸುಟನು ಮಾ ಒಂಟೀ ರೂಪವ(?) ತಾಳಿದಸುರನ ಗಂಟ ವಿಭೀಷಭಣಗಿತ್ತನು ಮಾ 7 ಸೋಳಸಾಸಿರ ಗೋಪಿಯರೊಡನೆ ಕೇಳಿಮೇಳದೊಳಿದ್ದನು ಮಾ ಬಾಲಕನಾಗಿ ತನ್ನುದರದಲಿ ಲೋಲ ಲಕ್ಷ್ಮಿಗರಸನು ಮಾ 8 ಒಪ್ಪದಿಂದಲಿ ಬಂದು ನಮ್ಮ ದೇವ ಇಪ್ಪ್ಪೆವನದೊಳಗಿಪ್ಪನು ಮಾ ಸರ್ಪಶಯನನಾಗಿ ಪೋಗಿ ತ್ರಿಪುರಸಂಹಾರ ಮಾಡಿದನು ಮಾ 9 ಏನು ಮಾಯನು ಮಾಯನು ಮಾ ನಮ್ಮ ದೇವ ಬಲ್ಲಿದ ಕಲ್ಕ್ಯಾವತಾರನು ಮಾ ಇಳೆಯ ಸ್ವರ್ಗ ಪಾತಾಳಕ್ಕೊಡೆಯ ಚೆಲುವ ಶ್ರೀ ಹಯವದನನು ಮಾ 10
--------------
ವಾದಿರಾಜ