ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದರೇನೋ ಆ ನಾರಿಯರು ನಿನ್ನಂದರೇನೋ ಪ ಕಂದಯ್ಯ ನಿನ್ನಂದಾರೇನೋ ಅ.ಪ ಬಿಸಿಲೊಳು ಮನೆಕಟ್ಟಿ ಬಿಸಿಬಿಸಿಯಾಗಿ ಹಾಲೆರದೂ ಕೊಲ್ಲೀಸುವೆ ನೀನಳದಿರಣ್ಣಾ1 ನಿನ್ನಾಡಿಕೊಂಬೋರಚೆನ್ನಾಗಿ ಹಿಡಿದೆಳತಂದು ಬೆನ್ಹಾ ಹೊಯಿಸುವೆನೀನಳಬೇಡವೋ ಚಿನ್ನಾ 2 ಬಲುಭಂಗಾ ಪೋಗಾಬೇಡಾ 3 ಪಾಲು ಮೊಸರನ್ನವ ಕಲೆಸಿ ನಾ ಉಣಿಸುವೆ ಸದ್ದು ಮಾಡದೆ ಉಂಡು ನಿದ್ರೆ ಮಾಡೆನ್ನ ಕಂದಾ 4 ಮುದ್ದು ಕಂದಯ್ಯ ನೀನು ಮಡುವ ಧುಮಿಕಿದರೆ ಮನದಾ ಸಂತಾಪ ಸೈರಿಸಲಾರೆನೋ 5 ಶೇಷ ಗಿರೀಶನೆ ದಾಸರಧಿನನೇ ಶೇಷ ಶಯನನೇ ವೇಂಕಟ ವಿಠಲನೇ 6
--------------
ರಾಧಾಬಾಯಿ
ಏಕೆ ಕೆಡುವಿರಿ ಸಂಸಾರವು ಸ್ವಪ್ನವೆಂದು ತಿಳಿಯಬಾರದೇಏಕ ಬ್ರಹ್ಮಾಸ್ತ್ರ ದೇವತೆಯ ಹೊಂದಿ ಜನ್ಮ ಕಳೆಯಬಾರದೆ ಪ ಬಿಸಿಲೊಳು ಬಳಲುವರ ಕಂಡು ನೆರಳಿಗೆ ಕರೆಯಬಾರದೆತೃಷೆಯಿಂದ ನಾಲಗೆ ಒಣಗುತಲಿರೆ ನೀರನೆರೆಯಬಾರದೆಹಸಿದು ಬಂದವರಿಗೆ ಇದ್ದದ್ದರೊಳಗೆ ಅನ್ನವ ನೀಡಬಾರದೆಹುಸಿನುಡಿಯ ಬಿಟ್ಟು ಸತ್ಯವಾಕ್ಯವನೀಗ ಆಡಬಾರದೆ1 ಸತಿ ಸುತರು ಸ್ವಾರ್ಥ ಮರೆತು ಮುಕ್ತ ಮನದಿ ಧರ್ಮ ಮಾಡಬಾರದೆಹಿತದವರು ಒಬ್ಬರಾದರೂ ಹಿಂದೆ ಬರುವರೇ ನೀನೇ ನೋಡಬಾರದೆಮತ ಅಭಿಮಾನ ಮರೆತು ಆತ್ಮಾಭಿಮಾನವ ಮರೆಯಬಾರದೆ 2 ನಂಟರ ಮೇಲೆ ಚಿಂತೆಯಿದ್ದಂತೆ ಗುರುವಿನ ಮೇಲೆ ಇರಬಾರದೆಕುಂಠಿಣಿ ಮನೆಗೆ ಹೋಗುವಂತೆ ಮಠಕೆ ಹೋಗಬಾರದೆಒಂಟೆಯಂದದ ಮೋರೆಯನೀಗ ಹಿರಿಯರ ಕಂಡು ತಗ್ಗಿಸಬಾರದೆ 3 ಸಾಧುಗಳು ಕಾಣೆ ಭಕ್ತಿಯಲೆದ್ದು ಚರಣಕೆ ಎರಗಬಾರದೇವ್ಯರ್ಥವಾದದ ಮಾತನು ಬಿಟ್ಟು ಸುಮ್ಮನೆ ತಾನಿರಬಾರದೆಕ್ರೋಧದ ಬೇರನು ಮೊಳಕೆಯಸಹಿತ ಕೀಳಬಾರದೆಮಾರ್ಗದಿ ಕಲ್ಲುಮುಳ್ಳುಗಳಿರೆ ಕಡೆಗೆ ತೆಗೆದೆಸೆಯಬಾರದೆ4 ನಾನಾರು ಎಂದು ವೇದಾಂತ ವಾಕ್ಯದಲಿ ನಿನ್ನ ಅರಿಯಬಾರದೆವಾದವ ಬಿಟ್ಟು ಚಿದಾನಂದನ ಚರಣದಿ ಹೊರಳಬಾರದೆಮೇದಿನಿ ಪೂರ್ಣ ಸರ್ವಬ್ರಹ್ಮವೆಂದು ತಾನು ಅರಿಯಬಾರದೆಭೇದಾ ಭೇದಕೆ ಹೊರಗಾದ ಬಗಳೆಯ ಕೂಡಬಾರದೆ 5
--------------
ಚಿದಾನಂದ ಅವಧೂತರು
ನಾಚಿಸಿದೆಯ ದೇವಯನ್ನ ಎಲ್ಲಈ ಚರಾಚರ ತುಂಬಿಹ ವ್ಯುತ್ಪನ್ನ ಪ ಶ್ರೀಗಿರಿ ನೋಡುವೆನೆಂದು ನಾಸಾಗಿ ಪಯಣಗೊಂಡು ಬಂದುರಾಗವುದಿಸಿ ಮನಕಿಂದು ಮುಂದೆಭೋಗ ತರದ ಮನ ತೂರಿತು ನಿಂದು 1 ಮಧ್ಯಾಹ್ನ ಬಿಸಿಲೊಳು ನಡೆಯೆ ನಾನುಅದ್ವಯವಿಲ್ಲದೆ ಹಾದಿ ನೀರ್ಗುಡಿಯೆಇದ್ದ ಚೈತನ್ಯ ತಾ ನುಡಿಯೆ ಇಂತುಹೊದ್ದ ಶರೀರ ಬಳಲಿ ನೆಲಕೆಡೆಯೆ 2 ಧರಣಿಯ ಸುರರೂಪ ತಾಳಿ ನೋಡೆವರಣ ವರಣ ರುದ್ರಾಕ್ಷಿ ಚಾಳಿಚರಣ ಕಿರಣದಲ್ಲಿ ಹೂಳಿ ನಾನುಗುರುವೆ ಎಂದು ನುಡಿವುದ ಕೇಳಿ 3 ಎಲ್ಲಿ ಪೋಗುವೆ ಎಂದು ಕೇಳೆಮಲ್ಲಿಕಾರ್ಜುನನ ನೋಡಿಯೇ ಬಹೆನೆಂದುಸೊಲ್ಲುಡುಗಲು ನಾನಿತ್ತೆಂದು ಗುರುಸುಳ್ಳು ಆದನೆ ಸರ್ವ ಪೂರಿತನಿಂದು 4 ಸರ್ವರೂಪದು ಮೃಷೆಯಾಯ್ತು ಎಲ್ಲಸರ್ವಜನರಿಗೆ ಬೋಧಿಸುವಡೇನಾಯ್ತುಸರ್ವತಾನೆನಿಪುದೇನಾಯ್ತು ಎಲ್ಲಸರ್ವರನುಳಿದು ಬಂದಿಹುದೊಳಿತಾಯ್ತು 5 ಇಂತು ಬುದ್ಧಿಗಳಿಂದ ಝಡಿಯೆ ಎಲ್ಲಅಂತು ಕೇಳುತ ನೀವು ಆರೆಂದು ನುಡಿಯೆನಿಂತಲ್ಲಿ ದೃಶ್ಯವ ಪಡೆಯೆ ಕಂಡುಸಂತೋಷದಿಂ ನಾ ಸಾಷ್ಟಾಂಗವೆರಗೆ 6 ಆನಂದ ತೊರೆಯೊಳು ಮುಳುಗಿ ಚಿ-ದಾನಂದ ಗುರುವ ಕಾಣದೆ ಮನಮರುಗಿಧ್ಯಾನದಿ ಕಂಗಳು ತಿರುಗಿ ನೋಡಿತಾನೇ ತಾನಾದ ಘನದಿ ಮನ ಕರಗಿ7
--------------
ಚಿದಾನಂದ ಅವಧೂತರು
ಮನೋದಣಿಯಾ ಕುಲಮಣಿಯಾ ಪ ಎಳೆಬಿಸಿಲೊಳು ಥಳ ಥಳಿಸುವಾ ಬೆಳಗಿನಾ| ಬಳದ ಒಬ್ಬುಳಿಯಂತೆ ದಿನಮಣಿಯಾ| ಕಳೆಶತ ಮಡಿಯೊಳು ಹೊಳೆವ ರನ್ನಮುಕುಟಾ| ಝಳ ಝಳಿಸುವ ರಳ ಕಾವಳಿ ದೋರಣಿಯಾ 1 ಚಲಾಚಲ ಭೂತಾವಳಿಗಳ ಸಲಹುವ ಭ್ರೂಲಲಿತ ಮೃಗಮದಾಂಕಿತದ ಫಣಿಯಾ| ವಿಮಲತರ ಕಮಲದೆಸಳ ಸುಗಂಗಳ| ನಾಸಿಕ ಸಂಪಿಗಿ ನೆನಿಯಾ 2 ಎಳೆನಗೆ ಚುಬುಕಾಗ್ರ ಚೆಲುವಾ ಕುಂದರದನಾ| ಇಳೆಯೊಳು ಕಾಣೆ ಕುಂಡಲಕ ಎಣಿಯಾ| ಕದಪು ವದನ ಮೋಹನಾರಾಯ| ಒಲಿವ ಮಹಿಪತಿ ಜನ ಪ್ರಭು ಗುಣಖಣಿಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮಾಡಿದರಿಲ್ಲವೋ ಪ ಆಸೆ ಮಾಡಿದರಿಲ್ಲ ದೇಶ ತಿರುಗಿದರಿಲ್ಲ ಘಾಸಿ ಮಾಡಿದರಿಲ್ಲ 1 ಮೊಟ್ಟೆಯನು ಹೊತ್ತರಿಲ್ಲ ಕಷ್ಟ ಮಾಡಿದರಿಲ್ಲ ಘಟ್ಟ ಬೆಟ್ಟವ ಹತ್ತಿ ಕುಟ್ಟಿ ಕೊಂಡರು ಇಲ್ಲ 2 ಟೊಂಕ ಕಟ್ಟಿದರಿಲ್ಲ ಲಂಕೆಗೆ ಹೋದರೂ ಇಲ್ಲ ಬೆಂಕಿ ಬಿಸಿಲೊಳು ತಿರುಗಿ ಮಂಕು ಮರುಳಾದರಿಲ್ಲ 3 ಪರ ಊರಿಗೆ ಹೋದರಿಲ್ಲ ಆರಿಗ್ಹೇಳಿದರಿಲ್ಲವಾರಸೇರಿದರಿಲ್ಲ 4 ವಾತಸುತನ ಕೋಣೆ ಲಕ್ಷ್ಮೀಶನು ಆತ ಕೊಟ್ಟರೆ ಉಂಟು ಆತ ಕೊಡದರಿಲ್ಲ 5
--------------
ಕವಿ ಪರಮದೇವದಾಸರು
ಮಾನವ ಗುರುವಿಷ್ಣು ತೀರ್ಥರ ಪ ಕರುಣದಿ ಜನಿಸಿ ತರಿದ ಭೀಷ್ಠೆಯ ಗರಿವರಂಘ್ರಿಯ ಅ.ಪ ತರುಣಿ ಗರ್ಭದಿ ಜನಿಸಿ ವಟು ವ್ರತವ ಧರಿಸಿ ವೇದವೇದಾಂತ ಶಾಸ್ತ್ರವ ಹರಣ ಮಂತ್ರವ ಜಪಿಸಿದವರನು 1 ಗುರುತುರಗವನುಸರಿಸಿ ಬರುತಿರಲು ಬಿಸಿಲೊಳು ಗುರುಪ್ರೀತಿಯನು ಬಯಸಿ ಗುರುವಿತ್ತ ಪಾದುಕವೆರಡು ಶಿರದಲಿ ಧರಿಸಿ ಮಹಿಮೆಯನು ತಿಳಿಸಿ ಧರಿಸಿ ದ್ವಿತಿಯಾ ಶ್ರಮದಿ ನೋಡಲು ಪರಮ ಸತ್ಕುಲ ಜಾದಿ ಗುಣಯುತ ತನದೋಳ್ಮೆರೆವರಂಘ್ರಿಯ2 ತಿರೆ ಮೃಗಲಾಂಚನ ಮುಖಸಹಿತದಿ ಹರಿದಾಸ ಪಾಡಿದ ಮಾಡಿರಿ ಧರ್ಮವೆಂಬುವ ಸುಖವನು ತ್ಯಜಿಸಿಪೊರಟರ 3 ಚರಿಸುತ ಗಮನ ಸ್ವಪ್ನದಿ ಸೂಚಿತ ಪ್ರವಚನ ವಿಜಯ ಮುನಿ ಮುನಿಯವಲ್ಲಿ ಯೊಳಿರುವ ಗುರುಗಳ 4 ಕುಮಾರಕರೆಂದೆನಿಸಿ ಸುಕ್ಷೇತ್ರ ಧ್ಯಾನಿಸಿ ಸೇರಿದವರ ಘ ಚಾರು 'ಕಾರ್ಪರ ನಾರಶಿಂಹ' ವಲಿಮೆ ಪಡೆದ ಚಾರು ಚರಣವ5
--------------
ಕಾರ್ಪರ ನರಹರಿದಾಸರು
ಕೃಷ್ಣ ನಿನ್ನಂಥ ಕೂಸೆಲ್ಲಿ ಕಾಣೆ ಜಗದಿ ಹೊರಗೆದೃಷ್ಟಿ ತಾಕೀತು ಹೋಗಬೇಡೆಂದು ಎಷ್ಟು ಹೇಳಲಿ ಮಗನೆ ಪ.ಗೊಲ್ಲತೀರೆಳೆ ಮಕ್ಕಳ ಗುಣವ ನೋಡಬಾರದೊಹೊಲ್ಲತನ ಬೇಡ ಮನೆ ಹೊಂದಿರೊ ಅಯ್ಯಫುಲ್ಲಲೋಚನ ನೀಯೆನ್ನ ಪ್ರಾಣದ ಪದಕವಯ್ಯಪಳ್ಳಿಯ ಗೋಪರೈದಾರೆ ಪುಟ್ಟ ನಿನ್ನ್ಯೆತ್ತ ನೋಡಲೊ 1ತರಳರಂಗಿ ಕುಲಾಯವ ತೊಟ್ಟು ನಿಂತಿಹರು ಕಂಡ್ಯಹಿರಿಯ ಗುಮ್ಮಗಂಜುವೆ ಹೆದರಿ ಕಂಡ್ಯಬರಿಮೈಯಾ ಬಿಸಿಲೊಳು ಬಾಡಿತೊ ಮಂಗಳ ಮುಖಬರಿದೆ ಬೊವ್ವ ಕಚ್ಚದೇನೊ ಬೆಟ್ಟದ ಭಾಗ್ಯನಿಧಿಯ 2ಕಂದ ಬರಲೆಂದುಣದೆ ಕುಳಿತಿಹನೊ ನಿಮ್ಮಯ್ಯಹೊಂದಳಿಗೆ ಪಾಯಸ ಹಸನಾಗಿದೆಅಂದದಿ ಸಕ್ಕರೆ ತುಪ್ಪ ಅನುಗೂಡಿಸುಣಿಸುವೆತಂದೆ ಪ್ರಸನ್ನವೆಂಕಟ ನಿನಗೆ ಹಸಿವೆ ಮರೆದೆಯೊ 3
--------------
ಪ್ರಸನ್ನವೆಂಕಟದಾಸರು