ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಯದಿ ಎಮ್ಮನು ಸಲಹ ಬೇಕಯ್ಯ | ಮಳಖೇಡ ನಿಲಯ ದಯದಿ ಎಮ್ಮನು ಸಲಹ ಬೇಕಯ್ಯ ಪ ದಯದಿ ಎಮ್ಮನು ಸಲಹ ಬೇಕೈ | ವಿಯದಧಿಪ ಸದ್ದಂಶ ಸಂಭವ ಭಯ ವಿದೂರನ ತೋರು ಎನುತಲಿ | ಜಯ ಮುನೀಂದ್ರನೆ ಬೇಡ್ವೆ ನಿನ್ನನು ಅ.ಪ. `ಇಂದ್ರಸ್ಯನು ವೀರ್ಯಾಣ’ ಎಂದೆನುತ | ಇತ್ಯಾದಿಋಕ್ಕುಗಳಿಂದ ಬಹುತೆರೆ ನೀನು ಪ್ರತಿಪಾದ್ಯ ||ಅಂದು ಮೇಘದ ಜಲವು ಬೀಳದೆ | ಬಂಧಗೈದಹಿನಾಮ ದೈತ್ಯನಕೊಂದು ಉದ್ಧರಿಸಿರುವ ಪರಿಯಲಿ | ಮುಂದೆ ದುರ್ವಾದಿಗಳ ಖಂಡಿಪೆ 1 ವಾಲಿಯಂದದಿ ದೃಷ್ಟಿಮಾತ್ರದಲಿ | ಶತೃಗತಬಲಲೀಲೆಯಿಂದಪಹರಿಪೆ ನಿಮಿಷದಲಿ ||ಕಾಲ ತ್ರೇತೆಯಲಂದು ದುಷ್ಟರ | ವಾಲಿರೂಪದಿ ವಾರಿಸಿದ ಪರಿಕಾಲ ದ್ವಾಪರದಲ್ಲಿ ಪ್ರಾರ್ಥನೆ | ಲೀಲೆ ರೂಪಿಯು ಕೃಷ್ಣಸೇವಕ 2 ದೃಷ್ಟಿ ಮಾತ್ರದಿ ಕರ್ಣಗತ ಬಲವ | ಅಪಹರಿಸಿ ನೀನುಕ್ಲಿಷ್ಟ ಯುದ್ಧದಿ ಗಳಿಸಿ ನೀ ಜಯವ ||ಶ್ರೇಷ್ಠ ಕರ್ಣನ ಅಸುವ ಕೊಳ್ಳುತ | ಸುಷ್ಠು ಅರಿಬಲ ನಾಶಮಾಡುತಭ್ರಷ್ಟ ಕೌರವನೀಗೆ ದುಃಖದ | ಕೃಷ್ಣಗರ್ಪಿಸಿ ಕೈಯ್ಯ ಮುಗಿದೆಯೊ 3 ಕಾಲ ಕಲಿಯುಗದಲ್ಲಿ ಬಲ ಭೀಮ | ಮಧ್ವಾಭಿಧಾನದಿಮೂಲ ಮೂವತ್ತೇಳು ಸೂನಾಮ ||ಭಾಳ ಗ್ರಂಥಗಳನ್ನೆರಚಿಸೀ | ಕಾಲಟಿಜಕೃತಮಾಯಿ ಮತವನುಲೀಲೆಯಿಂದಲಿ ಖಂಡಿಸುತ್ತ | ಪಾಲಿಸುತ್ತಿರೆ ಸುಜನರನ್ನು 4 `ವೃಷಾಯ ಮಾಣೆಂಬ` ಋಕ್ಕಿನಲಿ ದೇವ ಇಂದ್ರಗೆವೃಷಭದಾಕೃತಿ ಪೇಳಿಹುದು ಅಲ್ಲಿ ||ವೃಷಭ ನೀನಾಗಂತೆ ಕಲಿಯಲಿ | ಎಸೆವ ಶ್ರೀ ಮನ್ಮಧ್ವ ಗ್ರಂಥದಹಸಿಬೆ ಚೀಲವ ಹೊತ್ತು ತಿರುಗುತ | ಅಸುಪತಿಯ ಸೇವಿಸಿದ ಮಹಿಮ5 ಅಗಸ್ತ್ಯ ಮುನಿ ಸಕಲ ತೀರ್ಥಗಳ | ಸಂಗ್ರಹಿಸಿ ಕರದಿಸಾಗಿ ಗಿರ್ಯಾನಂತ ಕಮಂಡೂಲ ||ವೇಗ ಕೆಳಗಿಟ್ಟಾಚಮನ ಅಲ್ಪ | ಕಾಗಿ ಸ್ವಲ್ಪವುದೂರ ಪೋಗಲುಕಾಗೆ ರೂಪದಿ ಬಂದು ಇಂದ್ರನು | ವೇಗ ಉರುಳಿಸೆ ಜಲವು ಹರಿಯಿತು 6 ದೆವರಾಜನು ಕಾಣಿಸಿ ಕೊಳಲು | ಮುನಿಯು ಆಕ್ಷಣದೇವ ಕಾರ್ಯದ ಭಾವ ತಿಳಿಯಲು ||ಓವಿ ತತ್ಕಾಗಿಣಿಯ ನಾಮದಿ | ಭೂವಲಯದೊಳ್ಬಾತಿಸಲಿ ಎನೆತೀವರಾಶೀರ್ವಾದ ದಿಂದಲಿ | ಪಾವನವು ತತ್ ಕ್ಷೇತ್ರ ವಾಯಿತು 7 ಪಾಂಡು ಮಧ್ಯಮನಾದ ಅರ್ಜುನನು | ಇಲ್ಯುದಿಸಿ ಪೊತ್ತಧೋಂಡು ರಘುನಾಥ ಪೆಸರನ್ನು || ಗೊಂಡು ನಾಯಕ ತನವ ಅಶ್ವಕೆ | ಅಂಡಲೆದು ಬರುತಿಲ್ಲಿ ಬಿಸಿಲಲಿ ಉಂಡು ಉಂಬುದ ಜಲವ ಪಶುಪರಿ | ಕಂಡು ಮುನಿ ಅಕ್ಷೋಭ್ಯ ಬೆಸಸಿದ 8 ಸ್ವಪ್ನ ಸೂಚಿಸಿದಂತೆ ಮುನಿಶ್ರೇಷ್ಠ | ನೀರ್ಗುಡಿದವ ನರೆ ಬಪ್ಪುವನು ತಮ ಪೀಠಕೆನ್ನುತ್ತ || ಸ್ವಲ್ಪ ಹಾಸ್ಯದಿ ಪಶುವು ಪೂರ್ವದಿ | ಒಪ್ಪುವೆಯಾ ನೀನೆನ್ನ ಸಾದಿಗೆ ನೆಪ್ಪು ಬಂದುದು ವೃಷಭ ಜನ್ಮದಿ | ಕೃಪ್ಪೆಗೈದಿಹ ಮಧ್ವರನುಗ್ರಹ 9 ಸಾದಿ ಭೂಪನು ಕಳುಹಿ ತನ್ನ ಸೈನ್ಯ | ಅಕ್ಷೋಭ್ಯ ಮುನಿಪರ ಪಾದಕೆರಗುತ ಆಶ್ರಮವು ತುರ್ಯ ||ಮೋದದಿಂದ್ಯಾಚಿಸಲು ಮುನಿವರ | ಆದಿಯಿಂದಲಿ ಬಂದ ಪೀಠಕೆಸಾದರದಿ ಪಟ್ಟಾಭಿಷಕ್ತನ ಗೈದು ಆಶೀರ್ವಾದ ಮಾಡಿದ 10 ಸುತನು ತುರ್ಯಾಶ್ರಮವ ಪೊತ್ತುದನ | ಕೇಳುತ್ತ ತಂದೆಅತುಳ ಕೋಪದಿ ನಿಂದಿಸಿದ ಮುನಿವರನ |ಸುತನ ಗೃಹ ಕೆಳತಂದು ಪತ್ನಿಯ | ಜೊತೆಯಲಿಡೆ ಏಕಾಂತ ಗೃಹದಲಿಅತುಳ ಸರ್ಪಾ ಕೃತಿಯ ಕಾಣುತ | ಭೀತಿಯಲಿ ಚೀರಿದಳು ಕನ್ಯೆಯು11 ಸೋಜಿಗದ ತನಯನ್ನ ಕೊಳ್ಳುತ್ತ | ಮುನಿವರರ ಬಳಿಗೆ ಯೋಜಿಸೀದನು ಕ್ಷಮೆಯ ಬೇಡುತ್ತ ||ಆರ್ಜವದ ಮುನಿ ಕ್ಷಮಿಸಿ ತಂದೆಯ | ಮಾಜದಲೆ ತಮ್ಮ ಶಿಷ್ಯಭೂಪಗೆಯೋಜಿಸಿದರನ್ವರ್ಥನಾಮವ | ಶ್ರೀ ಜಯಾಭಿಧ ತೀರ್ಥರೆನ್ನುತ 12 ಪರ ಕರಿ ಹರ್ಯಕ್ಷರಾದಿರಿ 13 ಮಧ್ವಭಾಷ್ಯಕೆ ಟೀಕೆ ರಚಿಸುತ್ತ | ಯರಗೋಳ ಗುಹೆಯಲಿಶುದ್ಧ ಭಾವದಿ ಇರಲು ಮದಮತ್ತ ||ವಿದ್ಯ ಅರಣ್ಯಭಿಧ ನೋಡೀ | ಮಧ್ವಕೃತ ಸನ್ಮಾನ ಲಕ್ಷಣಬುದ್ಧಿಗೇ ನಿಲುಕದಲೆ ಟೀಕೆಯ | ಪದ್ಧತಿಯ ಕಂಢರ್ಷಪಟ್ಟನು 14 ಮಾಧ್ವಭಾಷ್ಯವ ನೇರಿಸಿ ಗಜವ | ತಟ್ಟೀಕೆ ಅಂತೆಯೆಅದ್ಧುರೀಯಲಿ ಗೈದು ಉತ್ಸವವ ||ವಿದ್ಯವನ ಮುನಿಪೋತ್ತುಮನು ಬಹು | ಶುದ್ಧಭಾವದಿ ಗೈದು ಸಂತಸಬುದ್ಧಿಯಲಿ ಪರಿವಾರ ಸಹಿತದಿ | ಸದ್ದುಯಿಲ್ಲದೆ ಪೋದನಂದಿನ 15 ಹತ್ತೆರಡು ಮತ್ತೊಂದು ಕುಭಾಷ್ಯ | ವಿಸ್ತರದಿ ಖಂಡಿಸೆಕೃತ್ಯವೂ ಮಧ್ವಕೃತವನುವ್ಯಾಖ್ಯಾ ||ಮತ್ತಿದಕೆ ಸೂಧಾಖ್ಯ ಟೀಕವ | ವಿಸ್ತøತವು ನಿಮ್ಮಿಂದ ಜಯಮುನಿಮೊತ್ತದಿಂಧ್ಹತ್ತೆಂಟು ಗ್ರಂಥಕೆ | ಕೃತ್ಯವಾಯಿತು ನಿಮ್ಮ ಟೀಕೆಯು16 ಪಾದ ಪಾದ ತೋರ್ವುದು ||
--------------
ಗುರುಗೋವಿಂದವಿಠಲರು
ನಡತೆ ನನ್ನದು ಕೇಳಿರಯ್ಯ ಪ ಒಡೆಯ ವಲಿವ ಹ್ಯಾಗೆ ಪೇಳಿರಯ್ಯ ಅ.ಪ. ಒಡವೆ ತರದಿಹನೆಂದು ಕೋಪ ಮಡದಿನಟಿಸುತ ಹೆದರೀ ಒಡನೆ ಸ್ನಾನವ ಮಾಡಿತಂದು ಕೊಡುವ ಪ್ರಸನ್ನ ಗೈಯ್ಯಲವಳಾ ಆಹಾ ಒಡಿಯ ದೇವಗೆ ಹರಕೆ ನಡಿಸಬೇಕೆನ್ನಲು ಭೂರಿ ನೋಡುವೆನೆಂತೆಂಬೆ 1 ಒರಿಸೆ ಸಾಲಿಗ್ರಾಮ ಗೃಹದಿ ಅರಿವೆ ಹರಕು ಸಹ ಇಲ್ಲವೆನ್ನೇ ತರುವೆನೆನುತ ತಿಂಗಳಾರು ಕಾಲ ಬರಿದೇ ಆಹಾ ತರಲು ಸೂಳೆಗೆ ಸೀರೆ ಭರದಿ ಕೂಡಿಯೆ ಅವಳ ಪುರವ ಪೇಟೆಪೇಟೆಗಳೆಲ್ಲ ತಿರುಗಿ ತಿರುಗುವೆ ಮುದದೀ 2 ಹರಿಗೆ ದೀಪವ ಹಚ್ಚೆ ತೈಲ ಇರದು ತಾರೆನೆ ಹಡೆದ ತಾಯಿ ಬರಲಿ ಸಂಬಳ ತರುವೆ ಕೊಡುವಿ ಉರಿವ ಕಾಟವನೆಂದು ನುಡಿವೆ ಆಹಾ ಪರಮ ಸಂಭ್ರಮದಿಮದ ತಿಂಡಿ ಅಂಗಡಿಯಲಿ ಹರಕು ಜಿಹ್ವೆಂiÀi ಚಪಲ ಪೂರ್ಣಮಾಡುವೆ ನಿರುತ 3 ವೃತ್ತಪತ್ರಿಕೆಯಲ್ಲಿ ಹೆಸರು ಎತ್ತಿಹಾಕುವರೆನೆ ಒಡನೆ ವಿತ್ತದಾನವಗೈವೆ ಬರಿ ಉ- ನ್ಮತ್ತಕಾರ್ಯಕಾದರು ಸರಿಯೇ ಆಹಾ ಉತ್ತಮಭಕ್ತರು ಅರಸುತ್ತ ಬರ್ಪುದ ಕಂಡು ವತ್ತಿ ಬಾಗಿಲು ಕೊಂಡಿ ಸ್ವಸ್ಥವಿಲ್ಲೆಂಬೆ4 ಕಂಡು ಕರೆಯುತ ಭಾರಿ ಊಟ ತೊಂಡನಂದದಿ ನೀಡಿ ಮನದಿ ಉಂಡು ಹರುಷವ ನೆನೆವೆ ಧನ್ಯ\ ಆಹಾ ಕೆಂಡ ಬಿಸಿಲಲಿ ಬಡವ ಕಂಡು ಮಹಡಿಯ ಬರಲು ಪಿಂಡ ಪಿಡಿಯನು ಹಾಕೆ ತಂಡುಲವಿಲ್ಲೆಂಬೆ5 ದಾನಗೈದರು ಒಮ್ಮಿಂದೊಮ್ಮೆ ಮಾನಪಡೆಯಲು ಊರ ಒಳಗೆ ನಾನೆಂಬ ಹಂಕಾರ ಬಿಡದೆ ಶ್ರೀನಿಧಿ ಸ್ವಾಮಿತ್ವ ನೆನೆಯೆ ಆಹಾ ಸ್ವಾನುಭವ ಕಾಣದೆಲೆ ಜ್ಞಾನ ಭಾಸ್ಕರನಂತೆ ಪು- ರಾಣಪೇಳುತ ನನ್ನ ಸಮಾನ ವಿಲ್ಲಂತೆಂಬೆ6 ನೂರಿತ್ತು ಸಂಬಳ ಹಿಂದೆ ಮನದಿ ಊರಿತ್ತು ಹರಿಭಕ್ತಿ ಎಲ್ಲಿ ಈಗ ನೂರ್ಹತ್ತು ಕೊಟ್ಟರು ದೇವ ಬೆ- ನ್ಹತ್ತಿದೆ ತಾಪತ್ರಯ ಬಹಳ ಆಹಾ ಸಿರಿ ಕೃಷ್ಣವಿಠಲನೆ ದೃಷ್ಟಿ ವಾರುಗಾಣೆನು ಕಾಣೆನು ಸತ್ಯ ಪೊರೆಯೋ ಶರಣೆಂತೆಂಬೆ7
--------------
ಕೃಷ್ಣವಿಠಲದಾಸರು
ಜಾಲಿಯ ಮರದಂತೆ - ದುರ್ಜನರೆಲ್ಲಜಾಲಿಯ ಮರದಂತೆ ಪ.ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲಹಸಿದು ಬಂದವರಿಗೆ ಹಣ್ಣಿಲ್ಲವೊಕುಸುಮವಾಸನೆಯಿಲ್ಲ ಕುಳ್ಳಿರಲು ಸ್ಥಳವಿಲ್ಲವಿಷಮರ ದುಸ್ಸಂಗ ಪಡೆದರೇನುಂಟು 1ಊರ ಹಂದಿಗೆ ಅಲಂಕಾರವ ಮಾಡಲುನಾರುವ ದುರ್ಗಂಧ ಬಿಡಬಲ್ಲುದೆಸಾರ ತತ್ತ್ವಜಾÕನ ಪಾಪಿಗೆ ಹೇಳಲುಕ್ರೂರಬುದ್ಧಿಯ ಬಿಟ್ಟು ಸಜ್ಜನವಪ್ಪಗೆ ? 2ತನ್ನಿಂದ ಉಪಕಾರ ತೊಟಕಾದರೂ ಇಲ್ಲಬಿನ್ನಣ ಮಾತುಗಳು ಮೊದಲೆ ಇಲ್ಲಪನ್ನಗಶಯನ ಪುರಂದರವಿಠಲನಲ್ಲದೆಅನ್ಯದೈವಂಗಳ ಭಜಿಸದೆ ನರರು 3
--------------
ಪುರಂದರದಾಸರು