ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೋ ಬಂದಾನೇಳೇ ಭಾವೇ ನಿನ್ನರಸಾ| ಮುದದಿ ಪ್ರಾರ್ಥನೆಯ ಮಾಡಿ ಕರೆತಂದೆನೀಗ ಪ ನೊಸಲಲಿ ಇಟ್ಟ ಕಸ್ತೂರಿ ರತ್ನಮಯದಿಂದ| ಪೊಸಪರಿಯ ಕಿರೀಟವಧರಿಸಿ| ಎಸೆವ ಕುಂಡಲದಿಂದ ಪೊಳೆವಾಕದಪುಗಳು| ಬಿಸಿರು ಹದಳ ನೇತ್ರಲೊಪ್ಪುತ ನಮ್ಮ 1 ತುಂಬಿಯಂತೆ ವಳೆಕಾವಳಿ ಶೋಬಿ| ತುಂಬಜ ಮುಖ ಅತಿ ಸುಂದರ ರೂಪಾ| ಕಂಬುಕಂದರದಲಿ ಹಾರದಾ ಕೌಸ್ತಭ ಮಾಲೆ| ಅಂಬುಜಧರ ನೋಡು ಅರನಗೆ ನಗುತ್ತಾ 2 ಗರುಡನ ಮ್ಯಾಲೇರಿ ಕೊಂಡುತಾಹರುಷದಿ| ಪರಮ ಪಾವನೆ ಕೇಳು ಸದ್ಭಕುತಿಂದ| ಧರೆಯೊಳಾರಾರು ಕರೆದರೆ ಬಷ್ಟುವೆನೆಂಬ| ತೆರ ತೋರಿಸಲು ಮಹಿಪತಿ ನಂದ ನೊಡೆಯಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದುರುಳ ಬುದ್ಧಿಯನು ತೋರಿಸಬೇಡವೊ ಪ ನರವರರಿಗೆ ಇದು ಸರಿಯಲ್ಲವೋ ಕೇಳ್ ಅ.ಪ. ತುಡುಗ ಬುದ್ಧಿಯಿದ ಕಡೆಗಾಲಕೆ ಸರಿ ನುಡಿಗೆದುರಿಲ್ಲವೋ ನಿನಗಿಂದು ಕಡು ಪತಿವ್ರತೆಯರು ಬಿಡುವ ನಯನಜಲ ಉಡಿಯಲಿ ಕಟ್ಟಿದ ಉಜ್ವಲ ಶಿಖಿಯೊ 1 ಧರ್ಮಪಥದಿ ಸಂಚರಿಸುವ ಸುಜನರ ಮರ್ಮವ ಭೇಧಿಸೆ ಮಾತಿನಲಿ ಒಮ್ಮೆ ಅವರು ಬಿಸಿರುಸಿರನು ಚಿಮ್ಮಿಸೆ ಒಮ್ಮೆಗೆ ನಿನ್ನಯ ಕುಲಕ್ಷಯ ನಿಜವು 2 ಮತ್ತನಾದ ನಿನಗೆತ್ತಣದೊ ಇನ್ನು ಯುಕ್ತಾಯುಕ್ತ ವಿವೇಚನೆಯು ಭಕ್ತವತ್ಸಲ ಶ್ರೀ ಕರಿಗಿರೀಶನ ಚಿತ್ತ ಸತ್ಯವೆಂದು ತೊಳಿಯೊ ಮೂಢ 3
--------------
ವರಾವಾಣಿರಾಮರಾಯದಾಸರು
ಬಾರೋ ನೂತನ ಗೃಹಕೆ ಹರಿಯೆ ಸಿರಿ ಮಾರುತ ಮುಖಸುರರೊಡಗೂಡಿ ಧೊರಿಯೆ ಪ ಯಾರು ಕೇಳದಲಿಹ ಸ್ಥಳವ ನೀನೆ ಪ್ರೇರಿಸಿ ಗೃಹವ ನಿರ್ಮಿಸಿದೆಯೋ ದೇವ ನೂರಾರು ಪರಿರೂಪಾಂತರವ ಪೊಂದಿ ಈ ರೀತಿ ನವಸುಸಂಸ್ಕøತವಾದ ಗೃಹವ 1 ಈರಪ್ಪÀ ಬಡಿಗನೆಂಬುವನು ಮನಿಯ ಚಾರುತನದಲಿಂದ ನಿರ್ಮಿಸಿರುವನು ತೋರುವ ಸಿಂಹಾಸನವನು ಮಧ್ಯಾ ಗಾರದಿನಿನಗಾಗಿ ವಿರಿಚಿಸಿಹನು 2 ಸುತ್ತಲು ನಿರ್ಭಯವಿಹುದು ವಂ - ಭತ್ತು ದ್ವಾರಗಳಿಂದ ಶೋಭಿಸುತಿಹುದು ಹತ್ತಿರೆ ಗುರುಗೃಹ ವಿಹುದು ಮುಂದೆ ಚಿತ್ತಜನಯ್ಯನ ಮಂದಿರ ವಿಹುದು 3 ಉತ್ತಮ ಗೃಹವೆನಿಸುವದು ಇ - ಪ್ತತ್ತುನಾಲಕುವಸ್ತುಗಳಕೂಡಿಹುದು ಸುತ್ತೇಳು ಪ್ರಾಕಾರವಿಹುದು ಸುತ್ತು ಮುತ್ತಲು ದ್ವಿಜಜನಹೊಂದಿ ಕೊಂಡಿಹುದು 4 ಗೃಹವುನಾಲ್ಕು ವಿಧವಿಹುದು ಸೂಕ್ಷ್ಮ ಗೃಹ ನಿನಗಾಗಿಯೆ ನೇಮಿಸಿಯಿಹುದು ಬಹಿರದಿ ಪಾಕಗೃಹ ವಿಹುದು ಅಲ್ಲಿ ಗೃಹಿಣಿಯಿಂ ತ್ರಿವಿಧಾನ್ನ ಪಕ್ವಗೈತಿಹುದು5 ನಡುಮನೆ ದೊಡ್ಡದಾಗಿಹುದು ಅಲ್ಲಿ ಸಡಗರದಲಿ ಬ್ರಹ್ಮವೃಂದ ಕೂಡುವದು ಬಿಡದೆ ಸತ್ಕಥೆನಡೆಯುವದು ಮುಂದೆ ಪಡಸಾಲೆಯಲಿ ಸರ್ವಜನ ಸಭೆಯಹುದು 6 ಶ್ವಸನ ಮಾರ್ಗವಲಂಬಿಸಿರುವೆ ಮನಿಯ ಹಸನ ಮೆಹದೀನಾದಿಯಿಂ ಮಾಡಿಸಿರುವೆ ಹೊಸಸುಣ್ಣವನು ಹಚ್ಚಿಸಿರುವೆ ಏಕಾ ದಶ ಸೇವಕರ ನಿನ್ನ ವಶದೊಳಿರುಸುವೆ 7 ನಾನಾಧನ ನಿನಗರ್ಪಿಸುವೆನು ತನು ಮಾನಿನಿಸಹ ನಿನ್ನಾಧೀನ ಮಾಡುವೆನು ಜ್ಞಾನಭಕ್ತಿಯೆ ಇಚ್ಛಿಸುವೆನು ನಿನ್ನ ಧ್ಯಾನಾನಂದದಿ ಧನ್ಯನೆಂದಿನಿಸುವೆನು8 ಹರಿಯೆ ಲಾಲಿಸು ಎನ್ನ ಸೊಲ್ಲಾ ಮುಂದೀ - ಪರಿಗೃಹದೊರೆವುದು ಸುಲಭವೇನಲ್ಲಾ ¨ರೆ ನಿನ್ನ ಬಿಡೆನೊ ಶ್ರೀ ನಲ್ಲಾ ಎನ್ನ ಮೊರೆಯ ನಾಲಿಸಿ ನೋಡೋ ವರದೇಶವಿಠಲಾ9
--------------
ವರದೇಶವಿಠಲ