ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿದ್ರೆ ಬಾರದೆ ಕನಸು ಬಿದ್ದುದನು ಕೇಳಿ ಬದ್ಧದೊಳು ಇದರ ಫಲವಿದ್ದರೇನು ಪೇಳಿ ಪ ಊರ ಗೆಲುವೆನು ಎಂದು ದಾರಿಯನು ಸಂವರಿಸಿ ಈರೈದು ಸಾವಿರವ ಹೇರಿಕೊಂಡು ಚೋರತ್ವದೊಳು ಸೇರಿ ಭಾರಿಯಗಳನು ಹಾರಿ ಧೀರರೈವರು ವ್ಯರ್ಥ ಸೂರೆಗೊಟ್ಟುದನು 1 ಹಸಿದ ಮಾರಿಯ ಹೊಲನ ನುಸಿವ ಕುರಿಯಂದದಲಿ ಎಸೆವ ಮೋಹಕದಿಂದ ಭರವಸೆಯೊಳು ಬೆಸನವನು ಮಾಡಿ ನಿಪ್ಪಸರದೊಳು ಮೈಮರೆದು ಬಿಸಿಯಾದ ಮಂಚದೊಳು ಹಮ್ಮೈಸಿಕೊಂಡುದನು2 ಮತಿಯಿಲ್ಲದಾತನಿಗೆ ಜೊತೆಯಾದ ಸೇವಕರು ಹಿತವಾದ ದಾರಿಯನು ತೋರುತಿಹರು ಮಿತಿಗಾಣೆನಿದರೊಳಗೆ ರಥಕೆ ಸಾರಥಿಯಿಲ್ಲ ಅತಿಶಯದ ಚತುರ ಶಿತಿಲಕ್ಷ ಸುಳಿವುದನು 3 ತೋರದಿಹ ಸೂತ್ರದೊಳು ಮೂರು ಕರಗಳ ಬಿಗಿದು ಭಾರಿ ಶಿಲೆಯನು ಹೇರಿ ಚೋರನಂದದಲಿ ಊರೊಳಗೆ ಮೆರೆಸುವುದು ತೋರುತಿಹ ಸ್ವಪ್ನಗಳು ಚಾರ ಫಲವೇನಿದಕೆ ಹೇಳಿ ಬಲ್ಲವರು4 ಮಳೆಗಾಲ ತುದಿಯೊಳಗೆ ಇಳೆಯಾರಿ ಬೆಳೆ ಕೆಡಲು ಕೊಳಕಾಲ್ಪೆಸರ ಬತ್ತಿ ಬಳಲುತಿರಲು ಸ್ಥಳದ ತೆರಿಗೆಗೆ ದೂತರೆಳೆದು ಕೇಳುತ್ತಿರಲು ಹಳೆಯ ಸಂಬಳದವರು ಒಳಒಳಗೆ ಸೇರುವುದ 5 ಬುದ್ಧಿ ತಪ್ಪಿದ ತೆರಿಗೆ ತಿದ್ದಿಕೊಳಬೇಕೆನುತ ಎದ್ದು ಬಹುಕ್ಲೇಶದಲಿ ಒದ್ದು ಕೈ ಕಾಲುಗಳ ತಿದ್ದಿ ಹೋದನು ಪುರಕೆ ಸಿದ್ಧ ಮಾಡುವರೆ 6 ಅಚ್ಚರಿಯ ಸ್ವಪ್ನಗಳು ಎಚ್ಚರದಿ ತೋರುತಿದೆ ಹುಚ್ಚನೆಂದು ಜನರು ನಚ್ಚರಿದನು ಮುಚ್ಚುಮರೆಯಾಕೆ ವರಾಹತಿಮ್ಮಪ್ಪನನು ಬಚ್ಚಿಟ್ಟು ಮನದೊಳಗೆ ಸ್ವೇಚ್ಛನಾಗುವುದು 7
--------------
ವರಹತಿಮ್ಮಪ್ಪ
ಫಲಹಾರವ ಮಾಡೋ ಪದುಮಲೋಚನನೆ| ಒಲಿದು ಶ್ರೀ ಭೂದೇವಿ ಅರಸಿಯರೊಡನೆ ಪ ಕದಳೀ ಕಪಿಥ್ಥಶರ್ಕರ ಮೋದದಿಂದಲೀ| ಒದಗಿ ಬೆಂಡುಖರ್ಜೂರಿ ಘೃತಮೋಪ್ತದಿಂದಲಿ1 ಕಳೆದ ಸಿಗುರಿಯಾ ಕಬ್ಬಿನ ಪೇರು ಬದರಿಯಾ| ಬಲಿದ ಪರಿಮಳ ರುಚಿಗಳ ಒಪ್ಪನಿಂದಾ 2 ವಸುಧೆಯೊಳುಳ್ಳ ಸಕಲ ಫಲಸಾರವಾ| ಬಿಸಿಯಾದ ಪಲ್ಗೆನೆಯ ಮಧುಸಹಿತಾ 3 ಗುರುಮಹೀಪತಿಸ್ವಾಮಿ ಶರಣ ರಕ್ಷಕನೇಮಿ| ಸುರರಿಗಮೃತವೆರೆದಾನಂದ ಕರದಲಿ4
--------------
ಕಾಖಂಡಕಿ ಶ್ರೀ ಕೃಷ್ಣದಾಸರು