ಒಟ್ಟು 6 ಕಡೆಗಳಲ್ಲಿ , 6 ದಾಸರು , 6 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂದರೇನೋ ಆ ನಾರಿಯರು ನಿನ್ನಂದರೇನೋ ಪ ಕಂದಯ್ಯ ನಿನ್ನಂದಾರೇನೋ ಅ.ಪ ಬಿಸಿಲೊಳು ಮನೆಕಟ್ಟಿ ಬಿಸಿಬಿಸಿಯಾಗಿ ಹಾಲೆರದೂ ಕೊಲ್ಲೀಸುವೆ ನೀನಳದಿರಣ್ಣಾ1 ನಿನ್ನಾಡಿಕೊಂಬೋರಚೆನ್ನಾಗಿ ಹಿಡಿದೆಳತಂದು ಬೆನ್ಹಾ ಹೊಯಿಸುವೆನೀನಳಬೇಡವೋ ಚಿನ್ನಾ 2 ಬಲುಭಂಗಾ ಪೋಗಾಬೇಡಾ 3 ಪಾಲು ಮೊಸರನ್ನವ ಕಲೆಸಿ ನಾ ಉಣಿಸುವೆ ಸದ್ದು ಮಾಡದೆ ಉಂಡು ನಿದ್ರೆ ಮಾಡೆನ್ನ ಕಂದಾ 4 ಮುದ್ದು ಕಂದಯ್ಯ ನೀನು ಮಡುವ ಧುಮಿಕಿದರೆ ಮನದಾ ಸಂತಾಪ ಸೈರಿಸಲಾರೆನೋ 5 ಶೇಷ ಗಿರೀಶನೆ ದಾಸರಧಿನನೇ ಶೇಷ ಶಯನನೇ ವೇಂಕಟ ವಿಠಲನೇ 6
--------------
ರಾಧಾಬಾಯಿ
ಉಣಲೊಲ್ಲೆ ಯಾಕೋ ಅಣ್ಣಯ್ಯ ಉಣದೆ ಹೀಗೇಕೆ ಹಟ ಮಾಡುವಯ್ಯ ಪ ಉಣದಿರೆ ನನ್ನೆದೆ ತಳಮಳಗೊಳುವುದು ತಣಿಸೋ ಮನವನು ಉಂಡು ಕಂದಯ್ಯ ಅ.ಪ ನೀನನುದಿನವೂ ಉಣದಿದ್ದರೂ ಹೀಗೆ ಏನೂ ಹಸಿವಿಲ್ಲದೆ ಆಟವಾಡುವೆ ಹೇಗೆ ಏನಿದರ ಗುಟ್ಟು ಎಲ್ಲೂಟ ಮಾಡುವೆ ನಾನೇನ ಮಾಡಿಹೆನು ಉಣದಿರಲು ಹೀಗೆ 1 ಗೋಪಾಲಿಕೆಯರಲಿ ಆಕಳ ಹಾಲುಂಡು ಗೋಪಾಲಕರ ಕೂಡೆ ಬೆಣ್ಣೆಯ ಕದ್ದುಂಡು ಪಾಪಿಷ್ಠ ಬಲನೊಡನೆ ಮಣ್ಣನಾದರು ತಿಂದು ಅಪಾಟಿ ಹೊಟ್ಟೆಯ ತುಂಬಿಕೊಂಡಿಹೆಯೇನೊ 2 ಪೂತನಿಯ ಮೊಲೆಯುಂಡು ಜಡಗಟ್ಟಿತೊ ಪ್ರೀತಿಯಲಿ ಆ ಗೋಪಿಯರ ದಿಟ್ಟಿ ತಾಕಿತೊ ಆತುಕೊಂಡಾವ ಗೋಪಿಯು ಕೊಟ್ಟಳೆದೆಹಾಲ ಸೋತು ಹೋದೆನಯ್ಯ ನಿನಗುಣಿಸಲಾಗದೆ 3 ಅಣ್ಣಯ್ಯ ಕುಚೇಲ ನೀಡಿದ ಅವಲಕ್ಕಿಯುಂಡು ಕೃಷ್ಣೆ ಕೊಟ್ಟುಳಿದ ಅಗುಳನ್ನವುಂಡು ಚಿಣ್ಣ ಕಡುಭಕ್ತ ವಿದುರನ ಮನೆಯಲಿ ಹಾಲುಂಡು ಸಣ್ಣ ಹೊಟ್ಟೆ ತುಂಬಿತೆ ಕಂದ ಉಣಲೊಲ್ಲೆ ಯಾಕೊ4 ವಸುಧೆಯೊಳಗೆ ದಾಸರು ನಿನ್ನ ಪೂಜಿಸೆ ಏಸು ಪರಿಯಲಿ ನೈವೇದ್ಯ ನೀಡುವರೊ ಬಿಸಿಬಿಸಿ ಪರಮಾನ್ನ ಸಣ್ಣಕ್ಕಿಯೋಗರವು ಹಸಿದ ನಿನಗೆ ಬಲು ಇಷ್ಟವಾಯಿತೆ ಕೃಷ್ಣ 5 ವರಮಹಾಋಷಿಗಳ ವೇದ ಮಂತ್ರಗಳ ಪರಮ ಭಾಗವತರ ಪಲ್ಲಾಂಡುಗಳು ವರಜಾಜಿಪುರಿವಾಸ ನಿನ್ನ ಸೇವಿಸುತಿರಲು ನಿರುತ ಸಂತುಷ್ಟ ನೀ ಚೆನ್ನಕೇಶವನೆ 6
--------------
ನಾರಾಯಣಶರ್ಮರು
ಏಳು ಗೋಪಾಲ ಬಾಲ ಇನ್ನೂ ಭಾಳ ಹೊತ್ತಾಯಿತು ಭಕ್ತ ಪರಿಪಾಲ ಪ. ಮುನಿಜನರೆದ್ದು ಪೂಜಿಸೆ ನಿನ್ನ ನಿಂತಿರೆ ಮನುಜರೆಲ್ಲರೂ ಕಾದಿಹರು ದರುಶನಕೆ ಸನಕಾದಿ ವಂದಿತ ಸರ್ವೇಶನೆಂತೆಂದು ವಿನಯದಿಂದಲಿ ನುತಿಪರು ಭಾಗವತರು 1 ತಾರೆಗಳಡಗಿತು ಕಮಲಗಳರಳಿತು ಪೂರ್ವ ದಿಕ್ಕಿನಲಿ ತೋರುವ ರವಿ ಉದಯ ಭೇರಿ ತುತ್ತೂರಿ ನಗಾರಿ ಬಾರಿಸುತಿದೆ ಸಾರಿ ಕೂಗುತಲಿದೆ ಕೋಳಿ ವೃಂದಗಳು 2 ಬಾಲಲೀಲೆಗಳಿಂದ ಗೋವಳರೊಡನಾಡಿ ಭಾಳ ಆಯಾಸವಾಗಿಹುದೆ ಕಂದಯ್ಯ ಬಾಲೆ ಗೋಪ್ಯಮ್ಮ ನಿನ್ನ ಲಾಲಿಸಲಿಲ್ಲವೆ ಬಾಲಯತಿಗಳು ಪೂಜಿಸುವರೇಳಯ್ಯ 3 ಬಿಸಿಬಿಸಿ ನೀರು ಪಂಚಾಮೃತವೆರೆಯುತ ಹಸನಾದ ಪಾಲು ಸಕ್ಕರೆ ಉಂಡೆಗಳು ಹಸುಗೂಸು ನಿನಗೆ ಹುಗ್ಗಿಯು ದೋಸೆ ಪೊಂಗಲು ಬಿಸಜಾಕ್ಷ ಯತಿಗಳರ್ಪಿಸುವರೇಳಯ್ಯ 4 ನುತಿ ಕೇಳಲಿಲ್ಲ ಆ ದಣಿದೆಂದು ಮಲಗಿದ್ಯಾ ಶ್ರುತಿ ವೇದತತಿಗಿಂತ ಚತುರ ಮಾತಿನೊಳು ಹಿತದಿ ಯಶೋದೆ ಎಬ್ಬಿಸಲೆಂದು ಮಲಗಿದ್ಯಾ ಚ್ಯುತದೂರ ಗೋಪಾಲಕೃಷ್ಣವಿಠ್ಠಲಯ್ಯ 5
--------------
ಅಂಬಾಬಾಯಿ
ನೋಡಿದೆ ನಾ ನೋಡಿದೆ ಮಾಡಿದೆ ನಾ ಮಾಡಿದೆ ಪ ಬೆಟ್ಟವ ಕಂಡೆನು ಸೋಪಾನಂಗಳು ನಿಟ್ಟುಸುರಿಕ್ಕದೆ ಏರಿದೆ ಕಟ್ಟ ಕಡಿಯಣ ಗೋಪುರ ಶಿಖರ ದಿಟ್ಟಿಸಿ ಕಣ್ಣಿಲಿ ನೋಡಿದೆ 1 ಈ ಸಮಸ್ತರ ಗುರುವಾದ ಭಾರತಿ ಈಶನ ಪಾದಕ್ಕೆ ಎರಗಿದೆ ಕ್ಲೇಶನ ಕಳೆದು ಎದುರಾಗಿ ಪೊಳೆವ ಶ್ರೀಶನ ಮಹದ್ವಾರ ನೋಡಿದೆ 2 ಬಲವಾಗಿ ಬಂದು ಸ್ವಾಮಿ ಪುಷ್ಕರಣಿ ಒಳಗೆ ವರಹನ ನೋಡಿದೆ ಜಲದಲಿ ಮಿಂದು ವೇಗದಲಿ ತಿರುವೆಂ ಗಳ ದೇವನ ನೋಡ ಸಾಗಿದೆ 3 ಗುಡಿಯ ಪೊಕ್ಕೆನು ಗರುಡಗಂಬದ ಸಡಗರವನು ನಾ ನೋಡಿದೆ ಒಡನೆ ಪ್ರಾಣಾಚಾರದವರು ಪಡೆದ ವರಗಳ ಕೇಳಿದೆ 4 ಮುನ್ನ ಅವಸರ ಮನಿಯೊಳಗೆ ಅನ್ನಪೂರ್ಣಿಯ ನೋಡಿದೆ ಚನ್ನಾಗಿ ಮಂಟಪದೊಳು ಶ್ರೀನಿವಾ ಸನ್ನ ಮೂರುತಿಯ ನೋಡಿದೆ 5 ತೊಟ್ಟಲ ತೀರ್ಥವ ಕೊಂಡು ಪ್ರಸಾದ ಇಟ್ಟು ಮಾರುವದು ನೋಡಿದೆ ಇಷ್ಟ ಭಕ್ತರು ಸಮ್ಮುಖದಲಿ ಮುಟ್ಟಿ ಪಾಡುವದು ನೋಡಿದೆ6 ದ್ವಾರಪಾಲಕರಿಗೆ ಸಾಷ್ಟಾಂಗದಲಿ ನಮ ಸ್ಕಾರವನು ಮಾಡಿದೆ ಭೋರನೆ ಕಟಾಂಜನದ ಫಲ್ಗುಣಿ ಬಂ ಗಾರ ಬಾಗಿಲವ ನೋಡಿದೆ 7 ಇಂದು ರವಿ ಶತಕೋಟಿ ತೇಜದ ವಿಂದ ಯುಗ್ಮವ ಪುಳಕೋತ್ಸಹÀದಿಂದ ಸಂದರುಶನ ನಾ ಮಾಡಿದೆ 8 ಇಟ್ಟಿದ್ದ ಅಂದಿಗೆ ಉಟ್ಟ ಪೀತಾಂಬರ ಕಟ್ಟಿದ್ದ ಧಟ್ಟಿ ವಢ್ಯಾಣ ಝಟಿ ಕಂಕಣಾಕಾರದಾಲಾಯುಧ ಇಟ್ಟ ಕಸ್ತೂರಿಯ ನೋಡಿದೆ 9 ಮಾಸದಾ ಪೂವು ಪೂಸಿದ ಗಂಧ ಭೂಷಣಾ ನಾನಾ ಪರಿವಿಧ ಏಸು ಬಗೆಯಲ್ಲಿಟ್ಟು ಶ್ರೀನಿ ವಾಸನ ಶೃಂಗಾರ ನೋಡಿದೆ 10 ಜಯಜಯ ಜಗದೀಶ ಜಗನ್ನಿವಾಸ ಜಯ ಜಯ ಲಕುಮಿ ಪರಿತೋಷ ಜಯ ಜಯ ವಿನಾಶ ಜಯ ಜಯ ಸರ್ವೇಶ ಜಯವೆಂದು ಸ್ತೋತ್ರವ ಮಾಡಿದೆ11 ಕೇಸಕ್ಕಿ ದಧ್ಯೋದನ ಪರಮಾನ್ನ ದೋಶಿ ಬಿಸಿಬಿಸಿ ಮನೋಹರ ಲೇಸಾಗಿ ಚತುರ್ವಿಧ ಪ್ರಸಾದವನ್ನು ಈಸು ಅವಸರ ನೋಡಿದೆ 12 ಕರ್ಪೂರದಾರತಿ ವಪ್ಪಿನಿಂದಲಿ ತಂದು ತಪ್ಪದಲಿ ಬೆಳಗೋದು ನೋಡಿದೆ ರೆಪ್ಪೆಯವಿ ಹಾಕದೆ ಮನದಣಿಯ ತಿ ಮ್ಮಪ್ಪನ ವಿಗ್ರಹ ನೋಡಿದೆ 13 ಹಿಮಋತು ಪ್ರಥಮ ಮಾಸÀ ದಶಮಿ ಹಿಮಕರ ವಾರದದಿನದಲ್ಲಿ ಕ್ರಮದಿಂದಲಿ ಪೋಗಿ ಬಿಂಬ ಮೂರುತಿಯ ವಿಮಲ ಚಾರಿತ್ರವ ನೋಡಿದೆ 14 ಶತ ಅಪರಾಧವ ಮಾಡಲು ಕಳೆದು ಪತಿ ವಿಜಯವಿಠ್ಠಲ ಪುರಂದರನ ಸಂ ಗತಿಯಲ್ಲಿ ಸತತ ಸಾಕಿದಾ15
--------------
ವಿಜಯದಾಸ
ಮನೆಯೊಳಗಾಡೋ ನೆನೆವರ ನೋಡೋ ಪ ಮುನಿÀಸಬೇಡವೋ ಎನ್ನ ಮಾನಸವೆಂದೆಂಬ ಅ.ಪ ನಸುನಗೆಯನು ತೋರಿ ನುಸುಳಿ ಪೋಗುವೆಯೇಕೆ ಬಿಸಿಬಿಸಿ ಪಾಲನಿತ್ತು ಬೀಸಿ ಬೀಸಿ ತೂಗುವೆನು 1 ಬಡಮುನಿಗಳು ನಿನ್ನ ಪಿಡಿದೆಳೆಯೆ ಚಿಣ್ಣ ನುಡಿಯಿದು ಸಟೆಯೆನಬೇಡ ಕದ್ದೋಡಬೇಡ 2 ಎನ್ನದೆಂಬುದೆಲ್ಲ ನಿನ್ನದೋ ಮಾಂಗಿರೀಶ ನಿನ್ನ ನಾಮದ ನೆಲೆ ಎನ್ನದೆನ್ನಿಸೋ ರಂಗ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಈಗಲೆ ಭಜಿಸಲೆಜಿಹ್ವೆ - ನೀ - |<?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಜಾಗುಮಾಡದೆಶ್ರೀ ಹರಿಪಾದಾಂಬುಜವಪ.ದೇಹದೇಹ ಸಂಬಂಧಿಗಳು - ಅವರು |ಮೋಹಬದ್ಧರಾಗಿ ಕುಳಿತಿಹರು ||ಆಹಾರ ಗುಹ್ಯೇಂದ್ರಿಯವೆಂಬ ಎರಡರ |ಬೇಹಾರದಲಿ ನೀನು ಮುಳುಗಿಸದಲೆ ಮನ 1ಮರಣ ತೊಡಗಿ ನಾಲಗೆಯುಡುಗಿ - ನಿನ್ನ - |ತರುಣಿ ಪುತ್ರ ಮಿತ್ರರಳುತಿರಲು ||ಕೊರಳೊಳು ಗುರುಗುರು ಗುರುಗುಟ್ಟುವಾಗನರ - |ಹರಿಯ ನಾಮವೆನ್ನಗೊಡದೆಲೊ ಪ್ರಾಣಿ 2ಅಸಿಪತ್ರವನದೊಳು ಹೊಗಿಸಿ - ನಿನ್ನ - |ಬಸೆವಸೆಖಂಡ ಹೊರವೊಡಿಸಿ |ಬಿಸಿಬಿಸಿ ನೆತ್ತರು ಬಸಿದು ಹೋಗುವಾಗ |ಕುಸುಮನಾಭನ ನಾಮ ನೆನೆಯಗೊಡದು ಮನ 3ತಪ್ತಲೋಹದ ಮೋಲೊರಗಿಸಿ - ನಿನ್ನ - |ಕತ್ತರಿಸಿದ ಖಂಡ ಬೇಯಿಸುವರು ||ನೆತ್ತಿಯ ಕೊರೆದು ನಾಲಗೆ ಹಿರಿದೊಗೆವಾಗ |ಚಿತ್ತಜನಯ್ಯನ ನೆನೆಯಗೊಡದು ಮನ 4ಕುಂಭಿಪಾಕದೊಳಗೆ ಕುದಿಸಿ - ನಿನ್ನ |ಅಂಬುಮೊನೆಗಳಿಂದಿರಿಯಿಸಿ ||ಅಂಬರಕೊಗೆಯ ಕಾಗೆಯು ಕಚ್ಚಿ ಕಡ್ಞಿಗ |ಅಂಬುಜಾಕ್ಷನ ನಾಮ ನೆನೆಯಗೊಡದು ಮನ 5ದುರುಳ ಯವದೂತರಾರ್ಭಟಿಸಿ - ನಿನ್ನ - |ಎರಕದ ಕಾಯ್ದ ಕಂಬಕೆ ತಕ್ಕೆಗೆಯ್ಸಿ ||ಪರಿಪರಿ ಭವದೊಳು ಬಳಲಿಸುತಿರುವಾಗ |ಪುರುಷೋತ್ತಮನ ನಾಮ ನೆನೆಯಗೊಡದು ಮನ 6ದುರಿತಕೋಟಿಗಳ ಹರಿಸುವ - ನಿನ್ನ - |ನರಕಬಾಧೆಗಳ ತಪ್ಪಿಸುವ ||ಪರಮ ಪುರುಷ ನಮ್ಮ ಪುರಂದರವಿಠಲನ |ನಿರುತದಿ ನೆನೆದು ನೀ ಸುಖಿಯೊಗೋ ಮನವೆ 7
--------------
ಪುರಂದರದಾಸರು