ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಯಾಕೆನಗೆ ವೈರಾಗ್ಯ ಪುಟ್ಟಲಿಲ್ಲವೊ ದೇವ ಏನು ಪಾಪಿಯೊ ಜಗದಲಿ ಪ. ಸಾಕು ಸಾಕೀ ವಿಷಯ ಚಿಂತನೆಯ ಬಿಡಿಸಿನ್ನು ಲೋಕನಾಯಕನೆ ಸ್ವಾಮಿ ಅ.ಪ. ಅಸನವಸನಗಳಿಗೆ ಆಲ್ಪರಿದು ಅನ್ಯರಿಗೆ ಬಿಸಜನಯನನೆ ಕಾಲಹರಣೆಯನೆಗೈದೆ ವಸುದೇವಸುತ ನಿನ್ನ ಅರಘಳಿಗೆ ನೆನೆಯದಲೆ ಹಸಿವು ತೃಷೆಯಿಂ ಬಳಲಿ ಬೆಂಡಾದೆನಯ್ಯಾ 1 ಇಂದ್ರಿಯಗಳೆಲ್ಲವನು ಬಂಧನದೊಳಗೆ ಇರಿಸಿ ಇಂದಿರೇಶನೆ ನಿನ್ನ ಧ್ಯಾನಿಸದಲೆ ಮಂದಮತಿಯಿಂದ ನಾ ಮಮಕಾರದಲಿ ಬಿದ್ದು ಮಂದ ಜನರೊಡನಾಡಿ ಮಾಯಕೊಳಗಾದೆ 2 ಭಕ್ತಿಮಾರ್ಗವ ಕಾಣೆ ಜ್ಞಾನ ಮೊದಲೆ ಅರಿಯೆ ಮುಕ್ತಿಗೊಡೆಯನೆ ಎನ್ನ ಮುದದಿಂದ ಸಲಹೊ ಯುಕ್ತಯುಕ್ತಿಗಳರಿಯೆ ಸುತ್ತುತಿಪ್ಪೆನೊ ಭವದಿ ಶಕ್ತ ನೀ ಒಳಗಿದ್ದು ಎನ್ನ ಕಾಡುವರೆ 3 ಕರ್ಮಮಾರ್ಗವ ತೊರೆದು ನಿರ್ಮಲದಲಿ ನಿನ್ನ ಒಮ್ಮೆಗಾದರೂ ಮನದಿ ನೆನೆಯಲಿಲ್ಲ ರಮೆಯರಸನೆ ಶ್ರೀ ಗುರುಗಳಂತರ್ಯಾಮಿ ಕರ್ಮತ್ರಯಗಳ ಕಡಿದು ಕರುಣದಲಿ ಕಾಯೊ4 ಪಾಪರಹಿತನೆ ಎನ್ನ ಪಾಪ ಕರ್ಮಗಳೆಲ್ಲ ಪರಿ ನುಡಿದೆ ನೀ ಪರಿಹರಿಸಿ ಕಾಯೋ ಗೋಪಾಲಕೃಷ್ಣವಿಠ್ಠಲನೆ ನೀನಲ್ಲದಲೆ ಈ ಪಾಪಿಯನು ಕಾಯ್ವರಾರೊ ಶ್ರೀ ಹರಿಯೆ5
--------------
ಅಂಬಾಬಾಯಿ
ಶೂರತನವೇನೊ ಬಲು ನಾರಿ ಜನರು ನೀರೊಳಿರಲು ಪ ಸೀರೆಗಳ ಅಪಹರಿಸುತ ಬಲು ಶೌರಿ ಅ.ಪ ಸಾರಸವದನನೆ ಕಾರಣವಿಲ್ಲದೆ ನಾರಿಯರೆಮ್ಮನು ಸೇರಿ ಬಹಳ ಸರಸಗಳನ್ನು ತೋರಿ ಮಾನಸೂರೆಗೆಯ್ಯುವುದು ಭಾರಿ ನಡತೆ ಎಂದರಿತಿರುವಿಯೇನೊ 1 ಮುರಹರನೆ ಈ ಪರಿಯಲಿರುವ ಎಮ್ಮ ಕರಗಳ ಮುಗಿವುದು ತರವೇ ಬಹಳ ಮನ ಜರಿಯುವುದು ಸರಿಯೇ ಇಂತು ಕೋರುತಲಿರುವುದು ಮುರಳೀಧರನೆ ವಸನಗಳನು ಕೊಡೆಲೊ 2 ಬಿಸಜನಯನ ಇದು ಹೊಸ ಪರಿಯಲ್ಲವೆ ರಸಿಕ ಜನರು ಪರಿಹಾಸ ಮಾಡಿ ಮುಸಿ ಮುಸಿ ನಗುವರು ಶ್ರೀಶ ನಿನಗೆ ಪಸುಳೆ ಜನರ ಸಹ ವಾಸವೇ ಪ್ರಸನ್ನವದನ ಕೃಷ್ಣ 3
--------------
ವಿದ್ಯಾಪ್ರಸನ್ನತೀರ್ಥರು
ಪ್ರಸನ್ನ ಶ್ರೀ ಜಯರಾಮಚಂದ್ರ ಸ್ತೋತ್ರ143ಬಿಸಜನಯನನೆ ಇವಗೆ ಒಲಿಯೋ ದಯದಿಂದ ಪವೇದ ತತಿಗಳಿದಿರ್ಯ ಉರುಗುಣಾಂಬುಧಿ ಶ್ಶಾಮಸುಂದರನೆ ಸೀತಾಸಮೇತ ವಿಭು ನಿನ್ನಪಾದಪದುಮಗಳಲ್ಲಿ ಹನುಮದಾದಿಗಳೆಲ್ಲಆದರದಿ ಸರ್ವದಾ ಭಜಿಸುವರೋ ಸ್ವಾಮಿ 1ವರಅಭಯಕರಗಳಲ್ಲಿ ಶರಚಾಪ ಪಿಡಿದಿರುವಿಕಾರುಣ್ಯ ಬೀರುವ ನೋಟ ಮುಗಳ್‍ಹಾಸಶರಣಾದೆ ನಿನಗೆನಾ ಸುಕೃತ್ ವಿಭುವೇ ಸದಾವರಜ್ಞಾನ ಭಕ್ತ್ಯಾದಿ ಐಶ್ವರ್ಯ ಈಯೋ 2ಅನಂತಾರ್ಕ ಶಶಿಅಧಿಕ ಕಾಂತಿಯಿಂ ಜ್ವಲಿಸುತಿಅನಂತ ಪಾಪಗಳೆÀಲ್ಲ ಮನ್ನಿಸಿ ದಯದಿಎನ್ನ ಇವನ ಸರ್ವವೈಷ್ಣವರ ಕಾಯಯ್ಯವನರುಹಾಸನ ಪಿತ ಪ್ರಸನ್ನ ಶ್ರೀನಿವಾಸ 3
--------------
ಪ್ರಸನ್ನ ಶ್ರೀನಿವಾಸದಾಸರು