ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗೋವಿಂದ ಗೋವಿಂದ ಎನ್ನಲರಿಯದೆ - ವೃಥಾನೋವಿಂದ ಭಂಗವ ಪಡುವುದುಚಿತವೆ ? ಪ ಕ್ಷೀಣ ಶಾಸ್ತ್ರಾರ್ಥವನು ಪರಿಗ್ರಹಿಸಿ ನಿಖಿಲ ಕುರಿಕೋಣಗಳ ತಲೆಚೆಂಡ ಕುಟ್ಟಿಸುತಪ್ರಾಣ ಹತ್ಯವ ಮಾಳ್ಪುದಾವ ಸತ್ಕರ್ಮ - ನಾರಾ-ಯಣನ ನಾಮಸ್ಮರಣೆ ಮಾಡು ಮನವೆ 1 ಖಂಡವನು ಕೊಯ್ದು ಕೊಡಬೇಡ ದಳ್ಳುರಿಯಗ್ನಿಕುಂಡವನು ಹೊಕ್ಕು ಹೊರಡುವುದುಚಿತವೆಭಂಡರಂದದಿ ಬತ್ತಲೆಯೆ ಬರುವುದಾವಾಟಪುಂಡರೀಕಾಕ್ಷನ ನೆನೆ ಕಂಡ್ಯ ಮನವೆ 2 ಕುಟ್ಟಿಕೊಳ್ಳದಿರಿ ಜಟ್ಟಿ ಗುಂಡಿನಲಿ, ಶಸ್ತ್ರವನುಚಿಟ್ಟಿ ಕೊಳ್ಳದಿರಿ, ಬೆನ್ನಲಿ ಸಿಡಿಯನುಕಟ್ಟಿ ತೂಗಿಸಿಕೊಳ್ಳದಿರಿ ಕರಟಕದಂತೆಗುಟ್ಟಿನಲಿ ಗೋಪಾಲಕನ ಸ್ಮರಿಸು ಮರುಳೆ 3 ತೊಗಲ ಬಿಲ್ಲೆಗಳ ಕೊರಳಲ್ಲಿ ಕಟ್ಟಿಕೊಂಡುಹಗಲಿರುಳು ಅನ್ನಪಾನಕೆ ಹೋಗದೆಮೃಗವೈರಿಯಂತೇಕೆ ಕಿಸುಕೆಲೆವ ರಂಪಾಟಜಗದಾಧಿಪತಿಯ ನಾಮ ಸ್ಮರಿಸು ಮರುಳೆ 4 ಉತ್ತಮರು ಸುರೆಯನೀಂಟುವರೆ ತರಹರಿಸಿ ಮದೋ-ನ್ಮತ್ತರಾಗಿ ಅಸಭ್ಯ ಶಬ್ದವ ನುಡಿವರೆಸತ್ತ ಹೆಣದಂತೆ ಬಿದ್ದಿಹುದಾವ ನೀತಿ ಪುರು-ಷೋತ್ತಮನ ನಾಮ ಸ್ಮರಣೆಯ ಮಾಡು ಮನವೆ 5 ವೇದೋಕ್ತ ಪೂಜೆಯಲಿ ತೃಪ್ತಿಪಟ್ಟರೆ ನೀವುಅದರಿಂದ ಫಲವೇನು ಪೇಳಿರಯ್ಯನಾದವನು ಕೇಳ್ದ ಹರಿಣದಂದದಿ ಕೆಡದೆ ಮಧುಸೂದನನ ನಾಮ ಸ್ಮರಣೆಯ ಮಾಡು ಮರುಳೆ 6 ನಿಂದಾಪವಾದ ಘಟಿಸುವುದೈಸೆ ಇದರಿಂದಮುಂದೆ ಮುಕ್ತಿಯು ನಿಮಗೆ ಸಾಧ್ಯವಹುದೆತಂದೆ ಶ್ರೀ ಕಾಗಿನೆಲೆಯಾದಿಕೇಶವ ನಾಮಒಂದೇ ವೈಕುಂಠ ಪದವನೈದಿಪುದಯ್ಯ 7
--------------
ಕನಕದಾಸ
ಲಗ್ಗೆಯ ಚೆಂಡನಾಡಿರಿ ಲಕ್ಷಣವಂತರುಲಕ್ಷಿಸಿ ಬ್ರಹ್ಯವ ನೋಡುವರುಲಗ್ಗೆಯೊಡ್ಡಲು ಬಹುದುರ್ಗುಣರವರಲಾಗಗಳ ಹೊಯ್ಯಂದದಲಿಡಿರಿಪಸಪ್ತಾವರಣದ ಲಗ್ಗೆಯ ಬಿಲ್ಲೆಯುಒಂದರ ಮೇಲೊಂದಿರಲುದೀಪ್ತವೆನಿಸಿ ಸಚ್ಚಿತ್ತಿನ ಚೆಂಡೊಳುಬೀಳಿಸಿ ಬಿಲ್ಲೆಯನು1ಲಗ್ಗೆಯು ಬೀಳಲು ಓಡಿಯೆ ಹೋಗಿಬಗ್ಗಿ ಬಗ್ಗಿ ತಾ ಬರುತಿರಲುಬಗ್ಗುತ ಬಲು ಸನಿಹಕೆ ಬರಲುಹೊರಳಾಡುವ ತೆರದಲಿ ಹೊಡೆದೋಡಿಸಿರಿ2ನಿರ್ಮಲಾಕಾಶದ ಬಲುಬಯಲಿನೊಳುನಿಂತಿಹ ಬಿಲ್ಲೆಗಳನೇ ಕೆಡಿಸಿನಿರ್ಮಲ ಚಿದಾನಂದ ಆತ್ಮ ತಾನಾಗಿಆಡಿರಿ ನಿತ್ಯದಿ ಲಗ್ಗೆಯನು3
--------------
ಚಿದಾನಂದ ಅವಧೂತರು