ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂಥ ಆಟವಿದು ಕ್ಷಿತಿಜಪತಿದೆಂಥ ಆಟವಿದು ಪ ಎಂಥ ಆಟ ಶ್ರೀ ಕಂತುಜನಕ ಭ ಕ್ತಾಂತರಂಗ ಸುರಚಿಂತಾಮಣಿಯೇ ನಿನ್ನದೆಂಥ ಅ.ಪ ಮಡುವಿನೊಳಡಗಿರುವ ಉರಗನ ಹೆಡೆಮೆಟ್ಟಿ ನಾಟ್ಯಮಾಡುವ ಸಡಗರದಲಿ ಗೊಲ್ಲ ರ್ಹುಡುಗರ ಕೂಡಿಸಿ ಒಡನೆ ಬಿಲ್ಲಿನಾಟ ರಚಿಸಿ ಮಧುರಪುರ ಬಿಡದೆ ಸೇರಿ ಗಡಕಡಿದು ಮಾವನ ಶಿರ ತಡೆಯದೆಮನಪುರಪಥವ ಪಿಡಿಸಿದ್ದು 1 ಗೋವಳರೊಡಗೂಡಿ ಗೋವುಗಳ ಕಾಯಲ ಡವಿಸೇರಿ ಮಾಯವೃಷ್ಟಿ ಅತಿಭರದಿ ಗೈಯಲಾಗ ಗೋವರ್ಧನ ಗಿರಿಯೆತ್ತೆ ಏಳುದಿನ ಗೋವುಗಳನು ಮತ್ತು ಗೋವಳರೆಲ್ಲರ ಜೀವ ಸಮಾನಮಾಡಿ ಪ್ರೇಮದಿ ಸಲಹಿದ್ದು 2 ಎಷ್ಟು ಕ್ಷೀರ ನೀಡೆ ಜನನಿಗಿನ್ನಿಷ್ಟೆಂದ್ಹಟ ಮಾಡೆ ಸಿಟ್ಟಿನಿಂದ ತಾಯಿ ಕಟ್ಟಲು ಒರಳಿಗೆ ಅಟ್ಟಹಾಸದಿ ಡುರುಕಿಟ್ಟು ನಡೆದು ಶಾಪ ಪಟ್ಟು ಪಟ್ಟಣಮುಂದೆಷ್ಟೋಕಾಲದಿಂದ ಕಷ್ಟಪಡುವರ ದಯದೃಷ್ಟಿಯಿಂ ಸಲಹಿದ್ದು 3 ದುರುಳ ಭಸ್ಮನಂದು ಹರನಿಂ ಉರಿಹಸ್ತವನು ಪಡೆದು ಪರಮಪಾಪಿ ವರ ಕರುಣಿಸಿದವನಿಗೆ ಮರುಳಮಾಡವನ ಕರವೆ ಅವನ ಮೇ ಲ್ಹೊರೆಸಿ ಉರುವಿಸಿ ಹರನ ರಕ್ಷಿಸಿದ್ದು 4 ಬತ್ತಲೆ ಪುರಗಳನ್ನು ಪೊಕ್ಕು ನೀ ಸತಿಯರ ವ್ರತಗಳನು ಹತಗೈದು ತ್ರಿಪುರದ ಪಥಪಿಡಿಸೆಮಪುರ ಹಿತದಿಂ ಸುರಗಣಕತಿಸೌಖ್ಯವ ನಿತ್ತು ಜತನಗೈದಿ ಸಿರಿಪತಿಯ ಶ್ರೀರಾಮನೆ ಸತತದಿಂಥ ಮಹಪತಿತ ಮಹಿಮದಿಹ 5
--------------
ರಾಮದಾಸರು
ಮಾಧವ ನಮ್ಮ ಶ್ರೀಧವ ಬಾಧೆಪಡಿಸದೆ ತನ್ನ ಪಾದದಾಸರ ಕಾಯ್ವ ಪ ನಿರುತ ನೀರೊಳು ನಿಂದ ಈತ ಚಾರು ನಿಗಮಗಳ ತಂದ ಬಲು ಭಾರ ಪೊತ್ತನು ಬೆನ್ನಲಿಂದ ಆಹ ಕೋರೆದಾಡೆಯಲಿಂದ ಘೋರದೈತ್ಯನ ಸಂ ಹಾರವ ಮಾಡಿ ಭೂಭಾರವನಿಳುಹಿದ 1 ಅರಮನೆಕಂಬದಲಿಂದ ಕಡು ಘೋರ ರೂಪವ ತಾಳಿ ಬಂದ ಮಹ ದುರುಳನುದರ ಬಗಿದುಕೊಂದ ಆಹ ಧರೆಯನೀರಡಿ ಮಾಡಿವ ದನುಜನ ತುಳಿದು ಚರಣದಾಸರ ಮನದೊರವಿತ್ತು ಸಲಹಿದ 2 ವೀರತನದಿ ಕೊಡಲಿಪಿಡಿದ ಧರೆಯ ಸಾರಕ್ಷತ್ರಿಯಮೂಲವಳಿದ ದೇವ ಧಾರುಣಿಯೊಳು ನರನಾದ ಅಹ ತೋರಿ ವಿಪಿನವಾಸ ಮೀರಿದಸುರನ ಕೊಂದು ಮೂರುಲೋಕದ ಕಷ್ಟ ದೂರಮಾಡಿದ ಶೂರ 3 ಗೊಲ್ಲಕುಲದಿ ಜನಿಸಿದ ಪುಂಡ ಬಿಲ್ಲಿನಾಟವ ರಚಿಸಿದ ವೀರ ಖುಲ್ಲ ಕಂಸನ ಮದ ಮುರಿದ ಆಹ ನಲ್ಲೇರ್ಹದಿನಾರು ಸಹಸ್ರಬಲ್ಲಿದತನದಾಳಿ ಎಲ್ಲ ಭಕ್ತರ ಇಷ್ಟಸಲ್ಲಿಸಿ ಪೊರೆದನು 4 ಸಾರಿಬತ್ತಲೆ ಕದಲಿದ ಪರಮ ನಾರಿಯರ ವ್ರತ ಭಂಗಿಸಿ ಮೆರೆದ ಮೂರುಪುರದ ಗರ್ವಮುರಿದ ಆಹ ಪಾರುಮಾಡಿದ ಸುರರ ಘೋರಕಂಟಕದಿಂದ ಏರಿದ ಹಯ ನಮ್ಮ ಧೀರ ಶ್ರೀ ಗುರು ರಾಮ 5
--------------
ರಾಮದಾಸರು