ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಲ್ಲಿ ಬಾರೋ ಹರಿ ತಾತ್ಸಾರ ಥರ ಪರಿ ಪ. ಬಿಲ್ಲಹಬ್ಬದ ನೆವನದಿಂದತಿ ಮಲ್ಲಕಂಸಾದಿಗಳ ಮಡುಹಿದ ಬಲ್ಲಿದನೆ ಲೋಕದಲಿ ಸರಿ ನಿನ- ಗಿಲ್ಲ ಶ್ರೀ ಭೂನಲ್ಲ ಕೃಪೆಯಿಂದ ಅ.ಪ. ಶ್ರೀ ಪಯೋಜಭವ ಶಿವ ಶಕ್ರಾದಿಗಳನ್ನು ಕಾಪಾಡಿ ಖಳಕುಲವ ಖಂಡಿಪ ಸರ್ವ ಭೂಪತಿ ತವ ಪಾದವ ನಂಬಿರಲೆನ್ನ ದುರಿತ ಮ- ಹಾಪಯೋಧಿಯೊಳಿಳಿಸಿದರೆ ಸುಜ- ನಾಪವಾದವು ಬಿಡದು ನಿನ್ನ ಪ- ದೇ ಪದೇ ಇನ್ನೆಷ್ಟು ಪೊಗಳಲಿ 1 ಕರ್ಮ ಕೊಡುವುದು ಫಲವೆಂಬ ನುಡಿಯನುಭವಸಿದ್ಧವು ಆದರು ಜಗ ದೊಡೆಯಗಾವದಸಾಧ್ಯವು ನೀ ಮಾಳ್ಪ ಚೋದ್ಯವು ನುಡಿ ಮನೋಗತಿಗಳುಕವೆಂಬೀ ಸಡಗರವು ವೇದ ಪ್ರಸಿದ್ಧವು ನಡೆಯಲೇಳಲು ಶಕ್ತಿ ಕುಂದಿದ ಬಡವನನು ಕೈಪಿಡಿದ ತವಕದೊಳ್ 2 ಬೆಟ್ಟದೊಡೆಯ ವೆಂಕಟೇಶ ನೀ ಗತಿ ಎಂದು ಘಟ್ಯಾಗಿ ನಂಬಿರುವ ದಾಸನ ಕೈಯ ಬಿಟ್ಟರೆ ಸರಿಯೆ ದೇವ ಸಜ್ಜನರ ಕಾವ ಸಟ್ಟಸ ಶಿಗಡಿ ನೀರ ಸುರಿಸುತ ಕಟ್ಟಿಕಟ್ಟಿಸುತದರ ಛಾಯ ದೊ - ಳಿಟ್ಟ ಗದ್ದಿಗೆಯಲ್ಲಿ ಕುಳಿತು ಸ- ಮೃಷ್ಟ ಸುಖವುಂಬರಸನಂದದಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ನಮ್ಮ ರಂಗ ಮಧುರೆಗೆ ನಡೆತರಲು ಪ ಮಥುರೆಗೆ ನಡೆತರಲು ಅತಿ|ಹರುಷದಲಿ ಅಕ್ರೂರನೊಡನೆ| ರಥದಲಿ ಕುಳಿತು ಫಡ ಫಡಫಡಲೆಂದು| ಪಥದಲಿ ನಡಸ್ಯಾಡುತಲಿ 1 ಬಿಲ್ಲಹಬ್ಬದ ನೆವದಲ್ಲಿ|ಫುಲ್ಲಲೋಚನ ಮೋಹನ ಕೃಷ್ಣ| ಇಲ್ಲಿಗೆ ಬಂದನು ಎನುತಲಿ ಕೇಳಲು| ಎಲ್ಲರು ನಡೆದರು ನೋಡಲಾಗಿ 2 ಆಲಯದೊಳಗೆ ನಿಲ್ಲದೇ|ಬಾಲಕಿಯರು ತಮತಮ್ಮ| ಚಾಲವರುತಿಹಾ ತೊಟ್ಟಿಲೊಳಗಿನಾ|ಬಾಲಕರಿಗೆ ಮೊಲೆಗುಡದೆ 3 ಒಬ್ಬಳು ಅರೆಯಣ್ಣೆತಲೆಯಲಿ|ಒಬ್ಬಳು ತಿಗರವ ಹಚ್ಚಿದ ಮೈಯಲಿ ನಡೆದರು ಸಂಭ್ರಮದಿಂದ4 ಅಚ್ಚಮೈಯಲಿ ಕುಳಿತಿರೆ ಒಬ್ಬಳು|ಬಚ್ಚಲೊಳಗೆ ಮಜ್ಜಕನಾಗಿ ಅಚ್ಯುತನಾತುರದಿಂದಲಿ ಒಬ್ಬಳು ಎಚ್ಚರ ದೇಹದ ಬಿಟ್ಟು ನಡೆದಳು 5 ಎಲೆಳುಶಿಶುವೆಂದು ಬಗಲಿಲಿ|ಅಳತೆಯ ಮಾನವನಿರಿಸಿಕೊಂಡು| ನೆಲೆನೊಡದೇ ನಡೆದಳೊಬ್ಬಳು|ಚೆಲುವ ಕೃಷ್ಣನ ನೋಡಲಾಗಿ6 ಕದವನು ಒತ್ತಿಮುಂದಕ|ಒದಗದಿ ಕೆಲವರು ಮಾಳಿಗೆ ಏರಿ| ಸದಮಲಾನಂದಗ ತಲೆಯನು|ಬಾಗಿ ಪದುಮಕರವ ಮುಗಿದು7 ದಣ್ಣನೆ ನೋಡೀ ನೋಡುತಾ|ಕಣ್ಣುಪಾರಣೆ ಮಾಡಿಕೊಂಡು| ಮುನ್ನಿನ ದೋಷವ ಕರಗುವ ಪರಿಯಲಿ| ಪುಣ್ಯ ಸಾಮಗ್ರಿಯ ಮಾಡಿದರಂದು 8 ಕಂಡಾ ಪರಿಯ ರೂಪವಾ| ಧರಿಸಿಕೊಂಡು ಅಂತರಂಗದಲಿ|ತ್ವರಿತದಿಂದಲಿ ಧ್ಯಾಯಿಸುತಾ9
--------------
ಕಾಖಂಡಕಿ ಶ್ರೀ ಕೃಷ್ಣದಾಸರು