ಒಟ್ಟು 7 ಕಡೆಗಳಲ್ಲಿ , 6 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಉಡುಪಿಯ ಅನಂತೇಶ್ವರ) ಚಿಂತಾಂಬುಧಿ ನಿ:ಶೇಷ ವಿಶೇಷಾನಂತೇಶ್ವರ ಕರುಣಾಂಬುಧಿಯೇ ಮನದಿರವೆಂತಿಹುದೆನಗೆಂಬುದ ದೊರೆಯೆ ಪ. ಸಂತತ ಸಂಸ್ಕøತಿ ಚಕ್ರದಿ ತಿರುಗುವ ಭ್ರಾಂತ ಜನರಿಗೀ ಜಗದಲ್ಲಿ ಸಂತತಿ ಸಂಪತ್ಪ್ರಮುಖ ಸುಖಾಶಾ ತಂತುಬಂಧ ಬಿಟ್ಟಿಹುದೆಲ್ಲಿ ಅಂತರಂಗ ಭಕ್ತರ ತಾನಾಗಿಯೆ ಸಂತೈಸುವ ಮಹ ಬಿರುದೆಲ್ಲಿ ಮನೋಗತವೆಂತಿಹುದೆಂಬುದ ನೀ ಬಲ್ಲಿ 1 ನಿನ್ನೊಲುಮೆಯಲೀ ಪರಿಪೂರಿಸಿಕೊಂಡಿಹ ಕಥೆಗಳನು ತೋರಿದಂತೆ ಪೇಳಿರುವುದನು ತೋರು ತಡೆಯದಿರು ತತ್ವವನು2 ಸಾಂದ್ರಸುಧಾಕರ ಸೇಚನದಿ ಸಾಂದ್ರ ನಿನ್ನ ಕರುಣಾರಸದಿ ಸಕಲೇಂದ್ರಿಯ ತೃಪ್ತಿಯಬಡಿಸುತಲಿ ಧರೇಶ ನೀ ತ್ವರಿತದಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ
ಎಣಿಸಲೆನ್ನಳವೆ ನಿನ್ನ ಮಹಿಮೆಗಳ ಗುಣಗಣನುತ ನಾಮ ಕೋದಂಡರಾಮ ಪ. ಲಲನೆ ಧರಿತ್ರಿಯ ಪೊರೆದೆ ಛಲದಿ ಹಿರಣ್ಯಕಶಿಪುವ ಸಂಹರಿಸಿದೆ ಇಳೆಯಾಪೇಕ್ಷಿಸಿದೆ ಬಲಿಯ ಭಂಜಿಸಿದೆ 1 ದುರುಳ ರಾಯರ ತರಿದೆ ಹರನ ಬಿಲ್ಲ ಮುರಿದೆ ನರಗೆ ಸಾರಥಿಯಾಗಿ ಮೆರೆದೆ ತರುಣಿಯರ ವ್ರತ ಗೆಲಿದೆ ತುರಗವನೇರಿ ಶರಣಾಗತರನ್ನು ಪೊರೆವುದು ನಿನ್ನ ಬಿರುದೆ 2 ಕರುಣಾಸಾಗರ ನಿನ್ನ ಚರಣಸೇವೆಗೆ ಎನ್ನ ಕರುಣಿಸು ಗುಣಸಂಪನ್ನ ಸ್ಮರನಜನಕÀ ಚೆನ್ನ ಧರಣಿಜೆಯ ಮೋಹನ್ನ ಸ್ಥಿರವಾದ ಲಕ್ಷ್ಮೀಶ ಕರುಣಿಸೊ ಹಯವದನ 3
--------------
ವಾದಿರಾಜ
ಕೊಡು ಕೊಡು ವರವ ಕಿಂಕರ ನಾನಲ್ಲೆ ಪಿಡಿಕೈ ಹೂವಿನ್ಹಡಗಲಿ ಹನುಮಂತರಾಯ ಪ ನೂರುಗಾವುದ ಶರಧಿಯ ದಾಟಿ ಲಂಕೆ ಊರು ಸುಟ್ಟು ಬಂದ ಧೀರ ನೀನಲ್ಲೆ 1 ಕ್ರೂರ ಕೌರವರ ಮಡುಹಿ ಕರಿಪತಿ ರಾಜ್ಯ ರಾಯ ಧರ್ಮಗೆ ಪಟ್ಟ ಕಟ್ಟಿದೆಯಲ್ಲ 2 ಮಾಯಾವಾದಿಗಳ ಮರ್ದಿಸಿ ಮಧ್ವಮುನಿಯೆ ಭೀಮೇಶಕೃಷ್ಣಧಿಕೆಂಬೊ ಬಿರುದೆತ್ತಿದ್ಯಲ್ಲ 3
--------------
ಹರಪನಹಳ್ಳಿಭೀಮವ್ವ
ಚಾರು ಗುಣಾನ್ವಿತೆ ಪ ನಾರಾಯಣಹಿಗೆ ಪಾಲಿಸೆ ಮಾತೆ ಅ.ಪ. ಸತ್ಯ ಸುಖಾಸ್ಪದೆ ಭೃತ್ಯರ ಬಿಡದೆ ನಿತ್ಯದಿ ಪೊರೆವುದೆ ಅತಿಶಯ ಬಿರುದೆ 1 ನಿನ್ನ ಕೃಪಾಶ್ರಯ ಪಡೆಯೆ ಮಹಾಶಯ ನಿನ್ನ ನಿರಾಶ್ರಯ ತಾಪತ್ರಿತಯ 2 ಲಕ್ಷುಮಿ ಕಾಂತನ ವಕ್ಷ ನಿವಾಸಿನಿ ಈಕ್ಷಿಸಿ ಕರುಣದಿ ರಕ್ಷಿಸು ಜನನಿ 3
--------------
ಲಕ್ಷ್ಮೀನಾರಯಣರಾಯರು
ನಾರಸಿಂಹನೆ ಘೋರರೂಪನೆ ತೋರು ಮೊಗವನು ಕರುಣದಿ ಚಾರುಗಾತ್ರನೆ ಭೀರು ತ್ರಾತನೆ ಸೇರಿಹೆನು ತವ ಚರಣದಿ ಪ ಘೋರತರ ಸಂಸಾರ ಶರಧಿಯ ತೀರ ಗಾಣೆನು ಧೀರನೆ ಪಾರಗಾಣಿಪೊದ್ಯಾರ ಕಾಣೆನುಯಾ ಭವರುಜಹಾರನೆ 1 ದಾನವನ ತಪಜ್ವಾಲೆಯಿಂದಲಿ ಮಾನುಷರು ಕಳವಳನೆಯಾ ಸೂನುತಾರಣ ನೆವದಿ ದಿವಿಜರ ಮಾನವನು ನೆರೆ ಕಾಯ್ದೆಯಾ 2 ದುಷ್ಟಸಂಹರ ಶಿಷ್ಟಪಾಲಕನೆಂಬ ಬಿರುದೆತ್ತಿಹುದಲಾ ಸೃಷ್ಟಿಗೀಶನೆ ಕಷ್ಟ ತೊಲಗಿಸೋ ಶಿಷ್ಟ ನರಸಿಂಹವಿಠ್ಠಲಾ 3
--------------
ನರಸಿಂಹವಿಠಲರು
ಲಾಲಿಸೆನ್ನ ವೃತ್ತಾಂತ ಲಕ್ಷುಮಿಯ ಕಾಂತ ಬಾಲನೊಳಿಂಥಾ ಪಾಂಥ ಬ್ಯಾಡ ಭೃಂಗಾಳ ಕಾಂತ ಪ. ಮಾನವ ನೀನೆ ಕೊಡರೆ ತಡವರು ಸೃಷ್ಟಿಯ ಒಳಗಾರು ಶ್ರೀ ರಮಣ ವಿಠಲ ನಿನಗಿನ್ನು ವಿವರಿಸಿ ಪೇಳ್ವದೇನು ಭ್ರಷ್ಟಗೊಳಿಸದಿರು ಭಯಹರ ಬೇರಿನ್ನಾರು 1 ಏಸು ತಪ್ಪಿದ್ದರೂ ದಾಸ ಬಿಡನೆಂಬ ಲೇಸಿನ ಬಿರುದೆಂತು ಮಾನುವದು ಈ ಸಮಯದೀ ಕರುಣಾ ಸಮುದ್ರನೆ ಎನ್ನ ಘಾಸಿ ಮಾಡದೆ ಗರುಡಾಸನ ಕೃಪೆದೋರು2 ನಡಿಯುವದಳವಲ್ಲ ತಡೆಯುವರೊಶವಲ್ಲ ನಡಿವ ಕಾರ್ಯಗಳೆಲ್ಲ ನುಗ್ಗಿತಲ್ಲ ಬಿಡದೆ ಮಾಡುವ ದಾನ ಧರ್ಮಗಳಿಗೆ ಇಂಥ ತೊಡಕು ಬಂದರೆ ಮುಂದೆ ತಾಳುವದೆಂತೋ ತಂದೆ 3 ಮಾನವರೊಳಗೊಬ್ಬ ಮರುಳುಗೊಂಡಾದರು ತಾನಿಟ್ಟ ತರುವನು ತೆಗಿಯನೆಂಬ ಮಾನಿತ ನುಡಿಯಿದ್ದು ಮೊದಲಿನಿಂದ ನೀನು ಕಾದು ದೀನನ ಬಿಡದಿಂದು ದಯದೋರು ಕೃಪಾಸಿಂಧು 4 ತೋರುವದಿಲ್ಲುಪಾಯ ಭೋರೆನುತಿದೆ ಮಾಯ ಕಾಯ ಕರ ಕರಿಯಾ ಹಾರಿಸು ಹಲಧರನನು ವೆಂಕಟರಾಯ ದೂರು ನಿನ್ನ ಪದಕೆ ಬಾರದಂದದಿ ಜೀಯ 5
--------------
ತುಪಾಕಿ ವೆಂಕಟರಮಣಾಚಾರ್ಯ
ವಾರುಧಿಶಯನ ಪಾರಮಹಿಮ ವೋ ನಾರಾಯಣಪ ದಾರಿಗಾಣೆ ಧವಳನಯನಾ ಮೀರಿಬರುವ ದುರಿತಗಳನು ದೂರಿದ ಮಾರಿದೆ ಯಾರದು ಕೇಳವೋ 1 ಪರಮಪದ ನಿವಾಸನ್ಯಾರೊ ಸುರಮುನೀಂದ್ರ ಸುಖವ ಬೀಳೊ ಬರದೆ ಬರದೆ ಬಿರುದೆ ವರದ2 ವಾಸನೆ ನಾನಿನದಾಸನು ಪೋಷಿಸೋ 3
--------------
ಚನ್ನಪಟ್ಟಣದ ಅಹೋಬಲದಾಸರು