ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುಸುಶೀಲೇಂದ್ರ | ಚರಣವಾರಿಜ ಯುಗ್ಮ ಸ್ಮರಿಸುವ ನರರು ಶ್ರೀಹರಿದಾಸರು ಪ ಹರಿವರ ಸುಮಚಾಬ್ಧಿ | ಹರಿಣಾಂಕರೆನಿಸಿದ ವರಸುವೃತೀಂದ್ರರ ತೀರ್ಥರ ಕರಕಮಲಜ ಅ.ಪ ಮಾಸ ತ್ರಯದಿ ಸಡಗರದಲಿ ಮಹ ಸಭೆ ನಿರ್ಮಿಸಿ ಪೊಡವಿಯೊಳಿದ್ದ ಭೂಸರರಾಜ್ಞ ಪತ್ರ ಬರಮಾಡಿ ವಿದ್ವಾಂಸರ ಒಡಗೂಡಿ | ಮಧ್ವಾಗಮನವನು ನೋಡಿ ಬೆಲೆಯುಳ್ಳವೆಗ್ಗಳ ಒಡವೆ ಉಡುಪಗಳನು ಕರುಣಿಸಿ ಮೃಷ್ಟಾನ್ನ ದ್ವಿಜರಿಗೆ ಕಡು ಸುಪ್ರೇಮದಿ ಸಲಿಸಿ | ಮುದ ಬಡಿಸಿ ಜಡಕುಮಾಯ್ಗಳ | ಗಡಣ ಜಡಧಿಗೆ ವಡೆಯ ತಾನೆನಿಸಿ ಕ್ರೋಢ ಜಾಸ್ಥಿತ | ಒಡೆಯ ಶ್ರೀಗುರು ರಾಘವೇಂದ್ರರ ಅಡಿಗಳಾಬ್ಜಕಾ ರಡಿಯಂತೊಪ್ಪುತ | ಬಿಡದೆ ಸಂತತ ಧೃಢದಿ ಸೇವಿಸಿ ಜಡಜ ಜಾಂಡದಿ ಮೆರೆದ ಅಸ್ಮದ್ 1 ತರಣಿ ಕುಲೇಂದ್ರನ ಕರುಣವೆಷ್ಟಿವರೊಳು ಅರುಹಲಾರೆ ವರಕಾಪ್ಯಾಸನ ಪುರಕೆ ಎರಡಾರು ಯತಿಗಳ ವತಿಯಿಂದ ತಮ್ಮಯ ಶಿಷ್ಯ ತತಿಯಿಂದ ಬಹುವಿಧ ಬಿರುದಾವಳಿಯಿಂದ ತೆರಳಿ ಶಶಿರವಿವರ ಸುವಾದ್ಯಧ್ವಾನ ಮೊಳಗಿಸುತ ‌ಘನ ಭಕ್ತಿ ಪರವಶರಾಗಿ ಸುರಚಿರ ಕನಕಮಣಿ ಧನ ತನುಮನ ತ್ವರಿತ ತೃಣ ಬಗೆಯ ದೇವಕಿ ತರಳ ರುಕ್ಮಿಣಿ ವರ ಮುರಾಂತಕÀ ಚರಣಗರ್ಪಿಸುತ | ಆನಂದಪಡುತ ಸರ್ವಮುನಿ ಜನಗಳಿಗೆ ಬಲು ಉಪಚರಿಸಿ | ಮನ್ನಣೆ ಧರಿಸಿ ಹರುಷದಿ ವರ ಸುಧೀಂದ್ರರ ಕರಜರನು ನೆರೆಸ್ಥಾಪಿಸಿ ಆಶ್ಚÀರ್ಯ ಚರಿತ 2 ಪತಿ ಶೃತಿ ಶಾಸ್ತ್ರಾರ್ಥ ಚತುರ ತನದಿ ಪಡೆದು ವಿತತ ಮಹಿಮನಾದ ಪತಿತ ಪಾವನ ಶಾಮಸುಂದರನ ಸ್ತುತಿಸುತಲಯ ಚಿಂತನೆ ಗೈಯುತ ಶ್ರೀಯುತ ಸಂಸ್ಥಾನಮತಿ ವಿಶಾರದರಾದವರ ಸುವೃತೀಂದ್ರ ತೀರ್ಥರಿಗೆ ಹಿತದಿಂದ ಒಪ್ಪಿಸಿ | ಯತಿ ಧೀರೇಂದ್ರರ ಚಾರುಸ್ಥಳದೊಳಗೆ ತನುವಿತ್ತು | ಹರಿಪುರಪಥವ ಪಿಡಿದೈದಿದರು ಚನ್ನಾಗಿ | ಸೇವಿಪ ಜನರಿಗೆ ಅತಿದಯದಿ ಮನೋರಥವ ನೀಡುತ ಸತತ ಮಾಣದೆ ಪರಮ ಭಕುತಿಲಿ ಪೃಥ್ವಿ ಸುರಕರ ಶತಪತ್ರಗಳಿಂದ ನುತಿಸಿಕೊಳುತಲರ್ಚನೆಗೊಂಬ 3
--------------
ಶಾಮಸುಂದರ ವಿಠಲ
ಹಡಪ ಕಾಳಾಂಜಿ ಚಾಮರ ಛತ್ರ ವ್ಯಜನ ಪಾ ವಡಗಾಡಿ ವಸಡುಗ ಪಾವುಗೆ ಸುವರ್ಣದರ್ಪಣವಾ ಪ ಪಿಡಿದ ನಾರಿಯರು ಯಡಬಲದ ಕೈದೀವಿಗೆಯ ಕೊಡುತ ಕೈಲಾಗಿನವರಡಿಗಳೆಚ್ಚರಿಕೇ ಅ.ಪ ವೀಣೆ ದಂಡಿಗೆ ತಾಳ ಮೇಳ ಸನಕಾದಿ ಸುರ ನಾರಿಯರು ಗೀತ ಪ್ರಬಂಧ ನರ್ತನದ ಪು ರಾಣ ಕೋವಿದರು ಪಾಠಕನಿಕರ ಸಹಿತ ಗೀ ರ್ವಾಣರೈದಿರಲು ಅವಧಾನವೆಚ್ಚರಿಕೇ 1 ಗಂಧ ಪರಿಮಳ ಪುಷ್ಪ ತಾಂಬೂಲ ಫಲಗಳನು ತಂದು ಉಡುಗೊರೆಯ ಕಾಣೆಕೆಯಿಟ್ಟು ಜಯವೆನುತ ನಂದ ಮುಕುಂದ ಗೋವಿಂದ ಕೇಶವಯೆನುತ ವಂದನೆಗಳನೆ ಮಾಡಿ ನಿಂದರೆಚ್ಚರಿಕೇ 2 ಭಾಗವತ ಜನರು ಬಿರುದಾವಳಿಯ ಪೊಗಳೆ ಮುನಿ ಯೋಗಿಗಳು ತತ್ವ ಪ್ರಬಂಧದಧ್ಯಾಪಕರು ಮೇಘವಾಹನ ಪೂಮಳೆಗರೆಯೆ ಸಕಲ ವಿನಿ ಯೋಗದವರನು ಕಳುಹುವಾಗಲೆಚ್ಚರಿಕೇ3 ಸರಸಿಜೋದ್ಭವನು ದಿಕ್ಪಾಲನಾರದ ಧ್ರುವನು ಗರುಡ ಗಂಧರ್ವ ವಿದ್ಯಾಧರರು ಅನಿಲಜನು ಪರಮ ಭಕ್ತಿಯಲಿ ಊಳಿಗಕೆ ಬಂದೈದಾರೆ ಧರೆಗಧಿಕ ವೈಕುಂಠ ಚನ್ನ ಕೇಶವ ಚಿತ್ತೈಸೋ 4
--------------
ಬೇಲೂರು ವೈಕುಂಠದಾಸರು