ಒಟ್ಟು 7 ಕಡೆಗಳಲ್ಲಿ , 2 ದಾಸರು , 7 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎಂತು ಎನ್ನ ತಾರಿಸುವಿಯೋ ತಿಳಿಯದಿಂದಿಗೆ ಕಂತುಪಿತನೆ ಮುಕುತಿ ಮಾರ್ಗ ಹೊಂದುವೆನೆಂದಿಗೆ ಪ ಓದಿತತ್ವ ಶಾಸû್ರಗಳನು ಜನರಿಗ್ಹೇಳುವೆ ನಾನು ಮೇದನಿಯೊಳು ಬಲ್ಲವನೆಂಬ ಗರ್ವ ತಾಳುವೆ ಸಾಧು ಸಂತರ ನಡಿಯ ನುಡಿಯ ಮಹಿಮೆ ಕೇಳುವೆ ಮತ್ತೆ ಹಾದಿತಪ್ಪಿ ಕುಜನ ವೃತ್ತಿಯಲ್ಲಿ ಬಾಳುವೆ 1 ಸ್ವಾದ ಲಂಪಟ ದುರ್ವಿಷಯ ಬಿಡದ ಸಕ್ತನು ಕಪಟ ಕಲುಷ ಚಿತ್ತನು ಸಾಧಕಗುರು ಹಿರಿಯರ ಅನುಸರಿಸಿದ ಭಕ್ತರು ಸಾಧಿಪಕರ್ಮ ವೃತ್ತಗಳಲ್ಲಿ ಡಂಭಯುಕ್ತನು 2 ಒಂದು ಎರಡು ಹೇಳಲೇ ಎನ್ನತಪ್ಪವಾ ಹೃದಯ ಮಂದಿರ ಮೊಳಗಿಲ್ಲವಾಯಿತು ಜ್ಞಾನ ದೀಪವಾ ನೊಂದು ಬೆಂದು ತಾಪತ್ರಯದಿ ಸುಖದ ರೂಪವಾ ಬಗೆವೆ ನಿಂದು ಒಮ್ಮಿಗ್ಯಾರ ವಿಡಿಯೆ ಪಶ್ಚಾತ್ತಾಪವಾ 3 ಪತಿತಪಾವನ ದೀನೋದ್ಧರಣನೆಂಬ ಬಿರುದವಾ ಕ್ಷಿತಿಯೊಳಿನ್ನು ತಾಳಿದುದರ ಕೇಳು ಮಾಧವಾ ಮತಿವಿವೇಕದಿಂದೆ ಹಚ್ಚಿ ಭಕುತಿ ಸ್ವಾದವಾ ಗತಿಯ ಕೊಟ್ಟ ಕರಿಯೆ ನಾನು ನಿನ್ನ ಮರೆದವಾ 4 ನಿನ್ನ ಭಕ್ತರ ಮನಿಯ ನಾಯಿ ಯಂದು ಎನ್ನನು ಮುನ್ನಿನವರು ಉಂಡ ವೆಂಜಲ ಶೇಷವನ್ನನು ಇನ್ನು ಇಕ್ಕಿಸಿ ಸಲಹಬೇಕು ಮೂಢ ಚಿನ್ನನು ಘನ್ನ ಗುರು ಮಹಿಪತಿಸ್ವಾಮಿದಯ ಸಂಪನ್ನನು 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಕೇಳಿ ಬಂದೆ ಪ ಕೇಳಿ ಬಂದೆ ನಿನ್ನ ಮೊರೆಹೊಕ್ಕವರ ಕೈಯ್ಯಾ | ಇಳೆಯೊಳಗ ಬಿಡನೆಂಬ ಬಿರುದವ ನಾ1 ಸುಗ್ರೀವ ತಾ ಪುಗೆ ಒಡಲವನು ವಾಲಿಯನು | ನಿಗ್ರಹಿಸಿರಾಜ್ಯ ಪದವಿತ್ತನೆಂದು 2 ಶರಧಿ ಧಡಿಯಲಿ ವಿಭೀಷಣನು ಶರಣವನು | ಬರಲು ಧೃಡ ಸಂಪತ್ತು ನಿತ್ತನೆಂದು 3 ಖಂಡಿಸಿ ಕೌರವರ ಬಳಗವನು ಸೈನ್ಯವನು | ಪಾಂಡವರನು ಸ್ಥಾಪನೆ ಗೈದಾನೆಂದು 4 ಏನ್ನನು ಪೇಕ್ಷಿಸದಿರು ನೀನು ಕಾರಣನು | ಸನ್ನುತ ಮಹಿಪತಿ ಸುತ ಜೀವನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ದಯಮಾಡೈ ಶ್ರೀ ಹರಿಯನಗಿಂದು ದಯಮಾಡೈ ಶ್ರೀಹರಿಯನಗಿಂದು ಪ ನಿಗಮಾಗಮ ಪೌರಾಣದ ಕತೆಯಾ ಬಗೆಯಲಿಯದ ಪಾಮರ ಪಾಥರಿಗೆ 1 ವಿಷಯಾ ಸಕ್ತಿಲಿ ನೆನೆಯದೆ ಹಿತವಾ ಪರಿ ದಿನಗಳಿದೀಗ 2 ಗುರುಮಹಿಪತಿ ಪ್ರಭು ಬಂದೆನು ಶರಣಾ ಬಿರುದವು ದೀನರ ಹೊರೆವುದು ನಿನಗೇ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನೀರೇ ದÉೂೀರೆ ದೋರೆ ರಂಗನಾ| ಕರೆ ತಾರೇ ಮುನಿಜನ ಸಂಗನಾ ಪ ಶರಣ ರಕ್ಷಕ ನೆಂಬೋ ಬಿರುದವ ಸಾರಲು | ಮೊರೆಯಾ ಹೊಕ್ಕೆನು ಕೇಳಿ ಬಂದುನಾ1 ಜ್ಞಾನ ಭಕುತಿಗಳ ಏನೇನರಿಯದ | ಮಾನಿನಿ ನೋಡುವರೇ ಅವಗುಣಾ 2 ಗುರುಮಹಿಪತಿ ಸುತ ಪ್ರಭು ಕರುಣಾಕರ | ನೆನದನು ಮೊರೆಕೇಳಿ ಇಂದಿನಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಡತನ ವ್ಯಾತಕೆ ನಮಗೆ ಕಡೆಗಣ್ಣ ನೋಡಿದಿದ್ದರೆ ನಿಮ್ಮ ಭೂಷಣ ಬಿಡುವವ ನಾನಲ್ಲ ನಿಮಗೆ 1 ಪಿಡಿದು ಪಾದವ ನಿಮ್ಮ ಬಡವನೆಂದೆನಿಸಲು ಜಡನುಡಿ ನಿಮಗೆ ನಿಮಗೆ ಭೂಷಣವೆ ಬಿಡುಬಿಡು ಭಕ್ತವತ್ಸಲನೆಂಬ ಬಿರುದವ ಒಡಲ ಹೊರೆವ ದೊಂದಿರದವಗೆ 2 ಬಡವನಾಧಾರವೆಂದು ಕೊಂಡಾಡುತಿರಲಿನ್ನು ಬಡಿವಾರ ವ್ಯಾತಕ್ಕೆ ನಿಮಗೆ ನುಡಿ ಮಾತಿನಂತಲ್ಲ ಪೊಡಿವಿಯೊಳಗಿದು ಬಿಡುವಾಂಗಿಲ್ಲ ನಮ್ಮ ನಿಮಗೆ 3 ಪಿಡಿದ ಪಾದವ ನಿಮ್ಮ ಬಿಡೆನೆಂಬ ದೃಢವಿದು ಒಡೆಯ ಕೇಳಿನ್ನಿ ಮಾತು ಬಿಡಿಸಿಕೊಂಡರೆ ನಿಮ್ಮ ಬಿಡುವರಾರಿನ್ನು ನೋಡು ತಿಳಿದು ಗುರುನಾಥ4 ಅಡಿಗಳ ಕುಡಿಯೊಳುವಿಡಿದು ನಾ ನಿಮ್ಮನು ಬಡುವೆ ಸದ್ಗತಿ ಹರುಷವನು ಮೂಢಮಹಿಪತಿಗಿನ್ನು ಬ್ಯಾರೆ ಗತಿಯ ಕಾಣಿ ಒಡೆಯ ನಿಮ್ಮಪಾದಪದ್ಮದಾಣಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಬೋಧ ಬಂದನು ಮಾ | ಪ್ರಪಂಚ ಗೆಲುವವ ನಾರೆಲಮಾ ನಮ್ಮ | ಪತಿ - ಭಕ್ತರು ಕಾಣಿಲಮಾ ಪ ಎನಗಾರು ಇದಿರಿಲ್ಲ ಸ್ವರಾಜ್ಯದೊಳಗಿಂದು | ನೀನಾರೋ ಪರದೇಶಿ ಹೇಳಲಮಾ | ನಾನೆಂಬ ಹಮ್ಮಿನ ಬಿರುದನ ಬಿಡಿಸುವ | ನಾನೆಂಬ ಹಮ್ಮಿನ ಬಿರುದವ ಬಿಡುಸುವ | ಜ್ಞಾನ ಶಸ್ತ್ರಧಾರಿ ಬೋದನುಮಾ 1 ಸರಸಿದ ಭವರುದ್ರ ಇಂದ್ರರ ಬಗೆಯದ | ನೆರೆ ಕಾಮ ಗೆಲುವವ ರಾರೆಲಮಾ | ಭಾಗವತ ಶುಕ ಹನುಮಂತನು ಮೆರೆವ ಭೀಷ್ಟ ದೇವ ನಲ್ಲೇನುಮಾ 2 ವೈಕುಂಠದೊಳು ಸನಕಾದಿಕರೊಳು ಹೊಕ್ಕ | ಆ ಕೋಪ ಕಾನುವ ನಾರೆಲಮಾ | ಸಾಕಿ ಬೆಳೆಸಿದ ಶಾಂತಿಯ ನೆಲೆಯಿಂದ | ಪ್ರಖ್ಯಾತ ಕದರಿಯು ಕೇಳಲಮಾ 3 ಧರಿಯಿತ್ತ ರಾಮಗ ಸ್ಥಳ ವಿಲ್ಲೆಂದರು ಬ್ರಾ | ಹ್ಮರು ಲೋಭಗೆದ್ದ ವನಾರೆಲಮಾ | ಮರುಳ ಕೇಳು ಧನ ತೃಣ ಸಮ ಬಗೆದರು | ಕರ್ಣ ರಲ್ಲೇನು ಮಾ 4 ಬೆಟ್ಟದಿ ಉಡಿಹಾಕಿ ಕೊಳ್ಳಲು ಹೋದನ | ಶಿಷ್ಯ ಮೋಹನ ಗೆಲುವ ನಾರೆಲ ಮಾ | ಮುಟ್ಟಿ ಬೇಡಲುಳಿವ ಮಹನ ತಂದಿಟ್ಟನು | ಸೃಷ್ಟಿ ಮನುಜ ಚಿಲ್ಹಾಳಲ್ಲೇನು ಮಾ 5 ಭ್ರಗು ಮುನಿದಕ್ಷನು ಕಾರ್ತೃ-ವೀರ್ಯಾದಿಯ | ಬಗೆಯದ್ದ ಮದ-ವಳಿ ದಾರೆಲ ಮಾ | ಜಗ ಹೊಡೆತನವಿದ್ದು ಬಾಗಿ ನಡೆದ ನಮ್ಮ | ಸುಗುಣ ಜನಕರಾಯ ನಲ್ಲೇನು ಮಾ 6 ಹುಚ್ಚಾದ ವಶಿಷ್ಟನೊಳು ವಿಶ್ವಾಮಿತ್ರನು | ಮತ್ಸರಿಲ್ಲದವ ನಾರೆಲ ಮಾ | ಎಚ್ಚರಿಸಿದ ಸುಯೋಧನಗ ವಿಜಯತನ | ಸಚ್ಚರಿತ ಧರ್ಮ ನಿಲ್ಲೇನು ಮಾ 7 ಬಗೆ ಬಗೆ ವಿಷಯ ದುಪಾಯಗಳೆನಗುಂಟು | ನಿಗದಿಯ ನಡೆನುಡಿ ಕೇಳೆಲ ಮಾ | ಭಗವದ್ಭಾವ ಸರ್ವ ಭೂತದಿ ನೋಡಲು | ವಿಗುಣವೆ ಸದ್ಗುಣ ಭಾಸುದ ಮಾ 8 ನಿನ್ನ ಬಲವ ಕಂಡೆ ಶರಣವ ಹೊಕ್ಕೆನು | ಬೋಧ ಕೇಳೆಲ ಮಾ | ಸನ್ನುತ ಮಹಿಪತಿ ಸುತ ಪ್ರಭು ನೆಲೆದೋರಿ ಮನ್ನಿಸಿ ಹೊರೆವನು ಬಾರೆಲಮಾ 9
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಸಖಿಬಾರೆ ಸುರಮೋಹನ ನೀಕರತಾರೆ ಪ ಮಕರಾಂಕನಯ್ಯನ ಕಾಣದೇ ನಾ ನಿಲ್ಲಲಾರೆ| ಯುಕುತಿಲೇ ತಂದು ನೀತೋರೇ| ಕ್ಷಣಯುಗವ ನೋಡುವರೇ| ಪ್ರಕಟದಲಿ ಕಣ್ಣಾರೆ ಕಾಂಬೆನೆಂದು 1 ದೀನಬಂಧು ಮೊರೆಹೊಕ್ಕವರ ಬಿಡನೆಂದು| ಮುನಿಜನ ಸಾರುವನೆಂದು|ನಂಬಿದೆನಾಮಕಬಂದು| ವನಜಾಕ್ಷ ಎನ್ನೊಳು ಕುಂದು|ನೊಡುವ ದುಚಿತವೇನಿಂದು| ಸನುಮುಖಕ ಮಾನವನು ತಂದುಕೂಡಿಸೇನಿಜಾ2 ನರಹರಿ ಶರಣಾಗತ ಸಹಕಾರಿ|ಬಿರುದವ ತಾಳಿದಾಪರಿ| ಮೊರೆಗೇಳಿದನು ದುರಿತಾರಿ|ಉರಗಾರಿ ಚಿನ್ನವನೇರಿ| ಬಂದ ನೋಡ ದಯಬೀರಿ| ಗುರು ಮಹಿಪತಿ ಪ್ರಭು ಉದಾರ|ನೆರೆದನೇತಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು