ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಲ್ಲಿದನಲ್ಲೇನು ಶ್ರೀಹರಿ ಬಲ್ಲಿದನಲ್ಲೇನು ಪ ಬಲ್ಲಿದನಲ್ಲೇನು ಖುಲ್ಲಮನವೆ ತಿಳಿ ಎಲ್ಲ ಲೋಕಗಳ ನಲ್ಲನಾಗಿಹ್ಯನೀತ ಅ.ಪ ಕಡುದಯದಿಂದಿನ್ನು ಪಿಡಿದು ಬಿಡದೆ ಪಾಂಡವರನ್ನು ಪೊಡವಿನೆಲ್ಲ ಒಂದೆ ಕೊಡೆಯಿಂದಾಳಿಸಿದ ಎಡರು ತಾರದಂತೆ ಒಡೆಯ ಮುಕ್ಕುಂದನೀತ 1 ಧೂರ್ತ ಹಿರಣ್ಯಕನ ಕರದಿಂ ಭಕ್ತ ಪ್ರಹ್ಲಾದನ್ನ ಸ್ವಸ್ಥದಿಂದ ದಯವಿತ್ತು ಕಾಯ್ದನಿಗೆ ದಾರು ಸರಿ ಅರ್ತುನೋಡಲೀತ 2 ಉರಿಹಸ್ತ ಪಡೆದವನ ಕ್ಷಣದಿಂ ಉರುವಿದ ಮಾರಮಣ ಭರದಿಂ ತ್ರಿಪುರರ ಹರಿದಿಯರ್ವ್ರತ ಕೆಡಿಸ್ಹರನ ಮೊರೆಯ ಕೇಳಿ ಸುರರ ಸಲಹಿದೀತ 3 ಮೀರಿದ ಅಸುರರನು ತರಿದು ಸಾರುವ ಬಿರುದನ್ನು ಅ ಪಾರ ಶೂರ ದನುಜಾರಿ ಭಕ್ತ ಸಹಕಾರಿ ಶೌರಿ ನಿಜ ಮೂರು ಜಗದಿ ಈತ 4 ಜಡಮತಿ ಮಾನವರ ನುಡಿಗಳು ದೃಢಲ್ಲೆಲೊ ಪೂರ ಪೊಡವಿಗಧೀಶ ನಮ್ಮ ಒಡೆಯ ಶ್ರೀರಾಮನಡಿ ದೃಢದಿ ನಂಬು ಭವತೊಡರ ಕಡಿವನೀತ 5
--------------
ರಾಮದಾಸರು
ಹರಿ ವಿಠಲ - ವಿಠಲ ಜಯ ವಿಠಲಾ ಹರಿ ವಿಠಲ - ಜಯ ವಿಠಲ ಪ ಜಯವಿಠಲಾ ನಮೋ ವಿಠಲಾ ಅ.ಪ ಹೇ ಮುರಾರೀ ಶ್ರೀ ಹರೀ ಬಾರೈ ಕೃಪಾಶರನಿಧಿ ಶೌರೀ ಶರಣಾಭರಣನೆಂದೆ ಬಿರುದನ್ನು ಕೇಳಿ ಬಂದೆ ಅರಿಯೆ ಇನ್ನೊಂದ ತಂದೆ ನೀನಾಗಿ ಪೊರೆಯೆಂದೆ ಇನ್ನು ಮುಂದೇ 1 ಇಂದಿರಾ ಮಂದಿರಾ ಹೇ ಸುಂದರಾನಂದ ಕುವರ ವರಾ ಇಂದೀವರಾಕ್ಷ ನಿನ್ನಾ ಸಂದರುಶನವೆನ- ಗೆಂದಿಗಾಹುದೋ ಮನವಾ ನಂದ ಹೊಂದುವುದು ಅಂದೇ 2 ಸರ್ವೇಶಾ ಶಾಶ್ವತ ಸರ್ವೋತ್ತಮ ಪರಮೋದಾರವರ ಸರ್ವಕಾರಣ ಕರ್ತಾ ಸರ್ವಸ್ವತಂತ್ರ ಶಕ್ತ ಸರ್ವತ್ರದಲಿ ವ್ಯಾಪ್ತ ಸರ್ವಾಂತರ್ಯಾಮಿ ಗುಪ್ತ ಶಿರಿಕಾಂತ 3
--------------
ಲಕ್ಷ್ಮೀನಾರಯಣರಾಯರು