ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಕ್ಷಯ ಗುಣಪೂರ್ಣ ಲಕ್ಷ್ಮೀರಮಣ ಪ ಕುಕ್ಷಿಯೊಳಗೆ ಜಗವಿಟ್ಟು ರಕ್ಷಿಪ ಸ್ವಾಮಿ ಈಕ್ಷಿಸಿ ಕರುಣ ಕಟಾಕ್ಷದಿ ಸತತ ಅ.ಪ. ಏಸೇಸು ಕಲ್ಪದಲ್ಲೂ ಈಶ ನೀನಿಹುದಯ್ಯ ದಾಸರು ಜೀವರ್ಕಳು ಕೃಪಾಳು ಕ್ಲೇಶ ಸುಖಂಗಳಿಗೆ ನೀನೆ ಸ್ವತಂತ್ರನೆಂದು ಸೂಸಿ ಪೇಳುತ್ತಲಿಹರು ಸಜ್ಜನರು ವಾಸುದೇವನೆ ಸರ್ವಾಸುನಿಲಯನೆ ಏಸೇಸು ಬಂದರು ದಾಸರ ಬಿಡದಿರು ನೀ ಸಲಹದೆ ಉದಾಸೀನ ಮಾಡಲು ಆಸರೆ ಯಾರಿನ್ನು ಶಾಶ್ವತ ವಿಭುವೆ 1 ನಿನ್ನಧೀನನÀವನು ನಿನ್ನ ದಾಸರ ಸೂನು ಎನ್ನುವ ಸಥೆಯಿಂದ ಮುಕುಂದ ನಿನ್ನನೆ ಬೇಡುವೆ ನಿನ್ನನೆ ಕಾಡುವೆ ಅನ್ಯಥಾ ಗತಿಗಾಣೆ ನಿನ್ನಾಣೆ ನಿನ್ನ ದಾಸರ ಪದವನ್ನು ಪಿಡಿದು ನಾ ನಿನ್ನನು ಸ್ತುತಿಸಿದೆನೆನ್ನುತ ಕೃಪೆಗೈದು ಬಿನ್ನಪ ಲಾಲಿಸಿ ಬನ್ನವ ಕಳೆದು ಘನ್ನ ಭಕುತಿಯಿತ್ತು ಧನ್ಯನ ಮಾಡೊ 2 ಶರಣರ ಮಹದೇವ ಶರಣರ ಬಿಡದೆ ಕಾವ ಶರಣರ ಉದ್ಧಾರ ಗಂಭೀರ ಶರಣ ರಕ್ಷಾಮಣಿ ಶರಣ ತ್ರಿದಶ ತರು ಶರಣ ಸುರಧೇನು ಎನಿಸಿನ್ನು ನಿರುತದಿ ಪೊರೆಯುವ ಬಿರುದಗಳರಿತು ಶರಣೆಂದು ನಿನ್ನಯ ಚರಣ ಕಮಲವನು ಮರೆಹೊಕ್ಕೆನು ಕಾಯೊ ಪರಮ ದಯಾಕರ ಕರಿರಾಜವರದ ಶ್ರೀಕಾಂತ ನಿಶ್ಚಿಂತ 3
--------------
ಲಕ್ಷ್ಮೀನಾರಯಣರಾಯರು
ಕಾವ ದೇವರು ನೀನೆ ಎನ್ನ ಕೈ ಪಿಡಿಯೋ ದೇವ ಹರಿ ತವಪಾದ ಮರೆಹೊಕ್ಕೆ ಕಾಯೊ ಪ ತರಳ ಪ್ರಹ್ಲಾದನಂ ಸಂಕಟದಿ ರಕ್ಷಿಸಿದಿ ಮರೆ ಬಿದ್ದ ಅಸುರನಿಗೆ ಸ್ಥಿರಪಟ್ಟ ಕೊಟ್ಟಿ ಕಂಟಕ ಭರದಿ ನೆರವಾಗಿ ತರಿದಯ್ಯ ತರುಣಿಯ ಮೊರೆ ಕೇಳಿ ಅಕ್ಷಯವನಿತ್ತಿ 1 ಶಿಲೆಯರೂಪದಿ ಬಿದ್ದ ಸತಿಯನುದ್ಧರಿಸಿದಿ ಕುಲಗೆಟ್ಟ ಅಜಮಿಳನ ಅಂತ್ಯದಲಿ ಕಾಯ್ದಿ ಒಲಿದು ನಭೋರಾಜನಂ ಶಾಪದಿಂದುಳಿಸಿದಿ ಅಳಿಯದ ಪದವಿ ನೀಡಿ ಧ್ರುವರಾಜನ್ಪೊರೆದಿ 2 ಭಕ್ತವತ್ಸಲನೆಂಬ ಬಿರುದಗಳ ಪೊತ್ತಿರುವಿ ಭಕ್ತನಿಗೆ ಬರುವ ನಿಖಿಲಾಪತ್ತುಗಳನು ಕತ್ತರಿಸಿ ಹಿತವಾದಭಕ್ತಿಯನು ಕರುಣಿಸಿ ನಿತ್ಯನಿರ್ಮಲಸುಖವ ನೀಡು ಶ್ರೀರಾಮ 3
--------------
ರಾಮದಾಸರು