ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವಾಣೀ ನೀ ಬಾರೆ ಪನ್ನಗವೇಣೀ ಓ ಪುಸ್ತಕ ಪಾಣಿ ಪ ಆಣಿಮುತ್ತಿನ ಹಾರ ಕಟ್ಟಾಣಿಯ ಕೊರಳಿನ ತ್ರಾಣಿ ಪಲ್ಲವÀಪಾಣಿ ಹಿರಣ್ಯಗರ್ಭನ ರಾಣಿ ಅ.ಪ. ಕರವ ಮುಗಿದು ನಾ ನಮಿಪೆನೆ ಮಯೂರಯಾನೆ ಕರುಣಾದಿ ನೋಡೆ ಮದಗಜಗಮನೆ ಚರಣ ಸೇವಕರ ಬಹುದುರಿತಗಳೋಡಿಸಿ ಸಿರಿರಮಣನೊಲಿಸುವ ಪರಿಯ ತೋರುತಲಿ ಬೇಗ 1 ಪ್ರದ್ಯುಮ್ನ ಜಠರಾ ಸಂಭೂತೆ ಪೂರ್ವಾಭಾರತೆ ಸದ್ವಿದ್ಯಾಭಿಮಾನಿ ದೇವತೆ ಮಧ್ವವನದಲಿ ನೀನೆ ಬದ್ಧವಾಗಿ ನೆಲೆಸುತ ಶುದ್ಧ ಮನದಲಿ ಅನಿರುದ್ಧನ ನಾಮ ನುಡಿಸುತ 2 ಸರಸೀಜನವದನೆ ಮಂದಸ್ಮಿತ ಬೀರೆ ಸಿತವಸನಧಾರೆ ಸಿರಿ ರಂಗೇಶಾವಿಠಲನ ತೋರೆ ಅರೆಬಿರಿದೆಸೆಯುವ ತಾವರೆಸುಮವನು ಪೋಲ್ವಸಿರಿಚರಣಂಗಳಿಗೆ ನಾ ನಿರುತದಿ ಎರಗುವೆ 3
--------------
ರಂಗೇಶವಿಠಲದಾಸರು
ಸಮೀರಜ ಹನುಮ ಎನ್ನ ಪ್ರಾಣಾಪದಕಾ ಪ ಶಿರಿಚರಣದಲಿ ಮಸ್ತಕವನಿಟ್ಟ ಹೊಂತಕಾರಿ ಸುರಪನಂದನನ ಕೊಲ್ಲಿಸಿದ ನಿರುತ ಉದಾರಿ ಪರಮ ನಿನ್ನಂಘ್ರಿಯವಾರಿ ಸತತ ಶಿರದಲಿ ಧರಿಸುವೆನು ರಿಪುನಿಕರ ಮಾರೀ1 ಉಂಗುರುವ ಕೊಂಡು ಸರ್ರನೆ ಸಾಗರ ಹಾರಿ ತುಂಗ ಮಹಿಮಳಿಗೆ ವಂದಿಸಿ ಗುರುತನೆ ತೋರಿ ಸಂಗಡಲೆ ಯಿತ್ತು ನಂದನ ಕಿತ್ತೆ ಬಲು ಮೀರಿ ಸಂಗರಕೆ ಬಂದ ವಿಕಾರಿಗಳ ನೋಡಿ ಭಂಗಬಡಿಸಿದೆ ಅವರ ಬಲವೆಲ್ಲ ತೂರಿ 2 ನಭಚರರು ಕೊಂಡಾಡೆ ಪುರವೆಲ್ಲ ದಹಿಸಿದೆ ಅಭಿವಂದಿಸಿ ಕುರುಹವರಿಯನ ಮುಂದುವರಿಸಿದೆ ಅಬುಧಿಯನು ವೇಗ ಬಂಧಿಸಿದೆ ಪರ್ವತವ ರಭಸ ಮಿಗೆ ತಂದು ಕಪಿಬಲವನೆಬ್ಬಿಸದೆ 3 ದಾತನಿಗೆ ರಥವಾಗಿ ಚಲ್ಲಿರಿದು ಬೊಬ್ಬಿರಿದೆ ಭೂತಳಕೆ ನೆಗ್ಗೊತ್ತಿ ಎದುರಾದವರ ತರಿದೆ ನೀ ತಡೆಯದೆ ಪೋಗಿ ಮೈರಾವಣನ ಮುರಿದೆ ಕೋತಿಗಳೊಳಗೆ ನೀ ಮೆರೆದೆ ವೇದ ವಿಖ್ಯಾತನೆ ರಾಮ ಸಹಭೋಜದಲಿ ನೆರೆದೆ 4 ಬಲವನು ಬೆಳಿಸಿ ವಾರಿಧಿಯ ಆಚೆಗೆ ಬಲವ ಆಲಸÀಗೈಸದಲೆ ದಾಟಿಸಿದೆ ಬಲು ಛಲವಾ ವಾಲಯದಲಿ ಮಾಡಿ ವೈರಿದಳವನು ಗೆಲುವಾ ಕಾಳಗದೊಳು ನಿನ್ನ ಬಲವ ಕೊಂಡಾಡಿದವರು ಮೂಲೋಕದೊಳಗೆ ಸವಿಯದು ಬಲು ಚೆಲುವಾ 5 ಶತಮೌಳಿಯನು ಕೊಲಿಸಿ ಸತ್ಕೀರ್ತಿಯನು ಪಡೆದೆ ಪ್ರತಿಕಕ್ಷಿ ನಿನಗಿಲ್ಲವೆಂದು ಸತ್ಯವ ನುಡಿದೆ ಸತತದಲಿ ಕಾಪಾಡು ಎನುತ ಪಾದವ ಪಿಡಿದೆ ಮತಿಯಲಿಡು ಎಂದು ಬೇಡಿದೆ ಅಭಯವ ಚತುರ ಫಲದಾಯಕನೆ ದಯಮಾಡು ಬಿಡದೆ 6 ಕಿಂಪುರುಷ ಖಂಡದಲಿ ನಿಜಮೂರುತಿಯ ಧ್ಯಾನ ಇಂಪಾಗಿ ಮಾಡುವ ಅಂಜನೆಯನಂದನಾ ಲಂಪಟವೆ ಸಾಕು ನಿನ್ನಯ ಸುರದ್ರುಮ ಚರಣ ಸಂಪಿನಲಿ ಪೊಂದಿಸನುದಿನ ಎನ್ನ ಗುರುಸಂಪತ್ತು ವಿಜಯವಿಠ್ಠಲನಲ್ಲಿ ಪ್ರಾಣಾ7
--------------
ವಿಜಯದಾಸ
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
--------------
ಪುರಂದರದಾಸರು