ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇವರರುವರ ಹಿಡಿದು ಬಂಧಿಸಿ ನೀವು ಬೇಗ ಪ ಬಿಮ್ಮನೆ ಬಿಗಿದು ಕಾಮನ ಕಟ್ಟೆ ಅವನ ತಮ್ಮನ ಹಿಡಿದು ತಲೆಯ ಕುಟ್ಟಿ ಸುಮ್ಮನೆ ಲೋಭನ ಕೈ ಕೆಟ್ಟಿ ಗುಮ್ಮಿ ಜಮ್ಮನೆ ಮೋಹನ ದವಡೆಗೆ ತಟ್ಟಿ 1 ದಂಡಿಸಿರೈ ಮದವೆಂಬುವನ ತಲೆಯ ಚಂಡ ಹಾರಿಸಿ ಮತ್ತೆ ತುಡಿಗೆ ಮತ್ಸರನ ಬಿಡದೆ ಹೆಂಡಿರು ಮಕ್ಕಳಸೆರೆಯೊಳಗಿಕ್ಕಿ 2 ಅರಿಗಳನರುವರ ಜಯಿಸಿ ಸದ್ಗುರುವಿನ ಕರುಣ ಕಟಾಕ್ಷವ ಧರಿಸಿ ಪರಮಾತ್ಮ ಪರಿಪೂರ್ಣನೆನಿಸಿ ಹರಿಸೂನು ಕೋಣೆ ಲಕ್ಷ್ಮೀಶನ ಸ್ಮರಿಸಿ 3
--------------
ಕವಿ ಪರಮದೇವದಾಸರು
ಜಯದೇವಿ ಜಯದೇವಿ ಜಯ ಬಗಳಾಮುಖಿಯೇಜಯವೆಂದು ಬೆಳಗುವೆನು ಜಯಭಕ್ತ ಸಖಿಯೇ ಪ ನಿತ್ಯ ಪೀತೋಪಚರಣೆಪೀತಕುಂಡಲ ಹಾರಪೀತ ವರ್ಗಾವರಣೆಪೀತಮೂರ್ತಿಯ ನೆನೆವೆ ಪೀತ ಪ್ರಿಯೆ ಸ್ಮರಣೆ 1 ಬತ್ತೀಸಾಯುಧ ಪಿಡಿದೆ ಭಯಂಕರಿ ಉಗ್ರೇಶತ್ರುನಾಶಕಿ ನೀನು ಭಕುತ ಸಾಹಸ್ರೇಮತ್ತೆ ಹುಡುಕುತ್ತಿರುವೆ ದುಷ್ಟರನು ಶೀಘ್ರೆನಿತ್ಯ ನಾ ಭಜಿಸುತಿಹೆ ಮನವ ಏಕಾಗ್ರೇ 2 ಬ್ರಹ್ಮ ಚಿದಾನಂದ ಬಗಳಾಮುಖಿ ರಾಣಿಹಮ್ಮಳಿದ ಮಹಿಮರಾ ಮೆಚ್ಚಿನ ಕಟ್ಟಾಣಿಬ್ರಹ್ಮರಂಧ್ರದೊಳು ವಾಸಿಸುತಿಹ ದಿನಮಣಿಬಿಮ್ಮನೆ ನಮಗೊಲಿಯೆ ಶೀಘ್ರದಿಂ ಕೃಪಾಣಿ 3
--------------
ಚಿದಾನಂದ ಅವಧೂತರು
ನೀರಜಾಕ್ಷ ನಿನ್ನೂರಿಗೆ ಪೋಗುವ ದಾರಿಯ ತೋರಯ್ಯ ಪ ದಾರಿಯ ಕಾಣದೆ ಅ.ಪ ಜನ್ಮಾಂತರ ಕೃತ ಕರ್ಮಗಳೆಂಬುವ ಹೆಮ್ಮರಗಳು ಬೆಳೆದು ಧರ್ಮನಿರೋಧ ವಿಕರ್ಮದ ಬಳ್ಳಿಯು ಬಿಮ್ಮನೆ ಬಿಗಿವಡೆದು ಕಂಟಕ ವೆಮ್ಮನು ಕಾಲಿಡಲಮ್ಮಗೊಡವು ಹರಿ1 ದಾರಿಯೊಳಡಸಿಹುದು ರಾರು ಮಂದಿ ಮುಳಿದು ಸಾರಿ ಸಾರಿ ಬಾಯಾರಿಸುತಿರ್ಪವು 2 ಯನು ದಾಂಟುವೊಡರಿದು ಧನಕನಕಾದಿಗಳೆನಿಪ ಪಿಶಾಚಗಳನವರತವು ಬಿಡವು ತನು ಸಂಬಂಧದ ಜನಗಳು ದುರ್ಮೃಗ ವನು ಪೋಲುತ ನಮ್ಮನು ಬಾಧಿಸುತಿರುವರು 3 ಕ್ಷುದ್ರವಿಷಯಗಳುಛಿದ್ರವಹುಡುಕುವ ವಧ್ರುವದೇಹದೊಳು ಕದ್ರುಸುತರವೊಲುಪದ್ರವ ಗೈವ ಭದ್ರದ ಭೀತಿಗಳೂ ಪದ್ರವ ಜರೆಯೆಂಬುದ್ರಿಕ್ತಾಂಗನೆ 4 ಸುರನರವರರೊಳು ಶರಣೋಪಾಯವರ ವರದವಿಠಲ ನಿಜ ಚರಣವ ನಂಬಿದೆ 5
--------------
ವೆಂಕಟವರದಾರ್ಯರು
ಬೆಳಗಿನ ಝಾವದಿ ಬಾರೊ ಹರಿಯೆ, ನಿನ್ನ ಪ ಚರಣ ತೊಳೆದು ಜಲಪಾನ ಮಾಡುವೆನೊಅ.ಪ. ನೀರೊಳು ನಿನ್ನನು ಕಾಂಬೆ ಗಿರಿ ಭಾರಪೊತ್ತರೆ ನಗುವಳೊ ನಿನ್ನ ರಂಭೆ ಮೋರೆ ತಗ್ಗಿಸಿದರೇನೆಂಬೆ ಅಲ್ಲಿ ನಾರಸಿಂಹನಾಗಿ ಪೂಜೆಯ ಗೊಂಬೆ 1 ಬಲಿಯದಾನವ ಬೇಡಿದ್ದೆಲ್ಲ ನೀ ಛಲದಿ ಕ್ಷತ್ರಿಯರ ಸಂಹಾರ ಮಾಡೆದ್ಯಲ್ಲ ಛಲವಂತ ನಿನಗೆದುರಿಲ್ಲ ನೀ ನೊಲಿದ್ಹನುಮನಿಗೆ ಅಜಪದವನಿತ್ಯೆಲ್ಲ 2 ರುಕ್ಮಿಣೀಶಗೆ ಸಮರಿಲ್ಲ ಕೃಷ್ಣ ಬಿಮ್ಮನೆ ತ್ರಿಪುರ ಸತಿಯರಪ್ಪಿದ್ಯೆಲ್ಲ ಬ್ರಹ್ಮಾದಿಗಳು ಸಮರಲ್ಲ ಬಲು ಹಮ್ಮಿಲಿ ಹಯವೇರಿ ವಿಜಯವಿಠ್ಠಲ 3
--------------
ವಿಜಯದಾಸ