ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯಬೇಕೆಲೋ ರಂಗಾ ಎನ್ನಾ | ನೀ ಕಾಯಬೇಕೆಲೋ ರಂಗಾ | ತೋಯಜಾಕ್ಷ ದಯಾನಿಧಿ ತರಣೋ | ಪಾಯದೋರೋ ಶುಭಾಂಗಾ ಪ ದುರಿತ ಸಮೂಹವ ಬಂದು | ಶಣಸುತ | ಹರಿದಂಜಿಸುತಿವೆಯಿಂದು | ನರಹರಿ ನಿನ್ನ ನಾಮದ ಘನಗರ್ಜನೆಯ |ಕೊಡು | ಮರಳು ಮಾನವನಿವನೆಂದು 1 ಕುಂದನಾರಿಸಿಯೆಲ್ಲಾ ನೋಡಲು | ಒಂದೆರಡೆನಲಿಕ್ಕಿಲ್ಲಾ | ಮಂದಮತಿ ಅವಗುಣ ರಾಶಿ ಪತಿತರ | ವೃಂದದೊಳೆನ್ನಧಿಕಲಾ2 ಕೊಂಬು ನೀಚನವಾದರೆ ಬಿರದಾ | ಡಂಬರ ನೀಚನಲ್ಲಾ | ಇಂಬುದೋರೆಲೆ ನಿನ್ನ ದಾಸರ ದಾಸ | ಎಂಬದೆನ್ನಧಿಕಾರವಿಲ್ಲಾ 3 ಬಿನ್ನಹವೆನ್ನ ಮುರಾರಿ | ಪಾಲಿಸಿ | ನಿನ್ನ ಚರಣವ ದೋರಿ | ಧನ್ಯಗೈಸೆಲೋ ಗುರುವರ ಮಹಿಪತಿ ಚಿನ್ನನೊಡಿಯ ಸಹಕಾರಿ 4
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಲಿಂಗಾ ಎನ್ನಂತರಂಗ ಪ ಮಂಗಳಾಂಗ ಸರ್ವೋ-ತುಂಗನೆ ರಾಮ ಅ. ಪ. ಮಂದಾಕಿನೀಧರಗೆ ಗಂಗಾಂಬು ಮಜ್ಜನವೆ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೆ ಕಂದರ್ಪಜಿತಗೆ ಮಿಗಿಲಾಪೇಕ್ಷೆಯೆ ರಾಮಾ 1 ಘನವಿದ್ಯಾತುರಗೆ ಮಂತ್ರಕಲಾಪವೆ ಧನವತಿಯ ಸಖಗೆ ಕೈಕಾಣಿಕೆಯೆ ಮನೆರಜತ ಪರ್ವತಗೆ ಫಣಿಯ ಆಭರಣವೆ ಮನೋ ನಿಯಾಮಕಗೆನ್ನ ಬಿನ್ನಹವೆ ರಾಮಾ2 ವೈರಾಗ್ಯ ನಿಧಿಗೆ ಈ ವಿಷಯ ಪದಾರ್ಥವೆ ಗೌರಿಯ ರಮಣಗೆ ಈ ಸ್ತೋತ್ರವೆ ವೀರ ರಾಘವ ವಿಜಯವಿಠ್ಠಲ ನಿಜಹಸ್ತ ವಾರಿಜದಳದಿಂದುದ್ಭವಿಸಿದ ಮಹಾ 3
--------------
ವಿಜಯದಾಸ