ಒಟ್ಟು 9 ಕಡೆಗಳಲ್ಲಿ , 1 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆವಳಿಗೆ ಪೆಣ್ಣೆಂದು ನುಡಿಯುವರೊ ನರರು ಅವಳೆ ಮುರಿದುತಿನ್ವ ರಕ್ಕಸ್ಯೆಂದೆನ್ನಿರೊ ಪ ಮುದ್ದು ಮುಖವನೆ ತೋರಿ ಬುದ್ಧಿನಾಶನ ಗೈದು ಶುದ್ಧಪದ್ಧತಿ ಕೆಡಿಸಿ ಇದ್ದಾಸ್ತಿಯಳಿದು ಬದ್ಧನೆನಿಸಿ ಮುಂದೆ ಬೇಡಿದ್ದು ಕೊಡದಿರೆ ಬಿಡದೆ ಒದ್ದು ನೂಕ್ವದರಿಯದೆ ಶುದ್ಧ ಮೂರ್ಖರಾಗಿ1 ತಂದೆ ತಾಯಿನಗಲಿಸಿ ಬಂಧುಬಳಗ ದೂರೆನಿಸಿ ಮಂದಿ ಮಕ್ಕಳೊಂದುಗಳಿಗೆ ಹೊಂದಿಇರಗೊಡದೆ ತಂದದ್ದೆಲ್ಲ ತಿಂದು ನಿಂದೆಯಾಡುತ ಯಮನ ಬಂಧಕ್ಕಟ್ಟುವುದರಿಯದೆ ಮಂದಮತಿಗಳಾಗಿ 2 ತನುಮನಧನ ಸೆಳೆದು ಘನತೆನಾಶಿಸಿ ಮುಂದೆ ಬಿನುಗರಲಿ ಬಿನುಗೆನಿಸಿ ತಿನುವುದೊಂದಿನದಿ ಮನದರಿತು ನೋಡದಿರು ಘನಮುಕ್ತಿಯನ್ನು ಕೊಡುವ ವನಜಾಕ್ಷ ಶ್ರೀರಾಮನಂ ಘನನೆಂದರಿಯದಲೆ 3
--------------
ರಾಮದಾಸರು
ಏನಬೇಡಲಿ ನಿನ್ನ ನಾ ಬಯಸಿ ಸ್ವಾಮಿ ಐಹಿಕ ಸುಖ ನಿಖಿಲ ಪುಸಿಯಾಗಿ ಪ ವನಿತೆಯನು ಬೇಡಲೆ ತನಗೆ ಅಲ್ಲದೆ ಮತ್ತೆ ಮನೆತುಂಬ ಮರಿಮಾಡಿ ತಿನಿಸಿಗ್ಹಾಕೆಂದು ಅನುಗಾಲ ಬೆನ್ನ್ಹತ್ತಿ ತಿನುತಿಹ್ಯಳು ಹರಿದ್ಹರಿದು ಬಿನುಗರಲಿ ಬಿನುಗೆನಿಸಿ ಘನತೆಯನು ಕೆಡಿಸಿ 1 ಘನವೆಂದು ನಂಬಿ ನಾ ಧನವನಾಪೇಕ್ಷಿಸಲೆ ಸನುಮತದಿ ಒತ್ತಟ್ಟಕ್ಷಣ ಕೂಡ್ರಗೊಡದೆ ದಣಿವಿಕಿಲ್ಲದೆ ದುಡಿಸಿ ಅಣುಮಾತ್ರ ಸುಖಕೊಡದೆ ಚಿನುಮಯಾತ್ಮನೆ ನಿನ್ನ ನೆನವೆ ಮರೆಸುವುದು 2 ಭೂಮಿಯನು ಬೇಡಲೆ ಸ್ವಾಮಿಯಂತೆ ಸೇವೆಗೊಂಡು ತಾಮಸದಿ ನೂಕಿ ಬಲು ಪಾಮರೆನಿಸುವುದು ಸ್ವಾಮಿಯೆನ್ನಯ ಸಕಲ ಕಾಮಿತ ಕಡಿದು ನಿಮ್ಮ ನಾಮಬಲ ಕರುಣಿಸು ಶ್ರೀರಾಮ ಪ್ರಭುತಂದೆ3
--------------
ರಾಮದಾಸರು
ಕಂಸಾರಿನಿಜಪಾದ ಮರೆಯದಿರೆಲೆ ಮನವೆ ಸಂಸಾರಸುಖ ನೆಚ್ಚಿ ಭ್ರಮೆಯೊಳಗೆ ಬಿದ್ದು ಪ ಜನನಿಜನಕರುವನಿತೆತನುಜನುಜರಿವರೆಲ್ಲ ನಿನಗ್ಹಿತದಶತ್ರೆಂದು ನೆನೆಸಿಕೊಳ್ಳದಲೆ ಅನುದಿನವು ದುಡಿದುಡಿದು ತನುಮನಧನವನಿತು ಬಿನುಗರಿಗೆ ಸಲಿಸಿ ನರಕಕುಣಿಯೊಳಗೆ ಬಿದ್ದು 1 ಹೊಲಸುಕಿಲ್ಬಿಷಮಾಂಸ ಮೇಲೆ ಚರ್ಮದ ಹೊದಿಕೆ ಬಲವಾಗಿ ಬಿಗಿದ ನರ ಎಲುವಿನ್ಹಂದರವು ತೊಳೆಯದಿರ್ದರೆ ನಿಮಿಷ ಹೊಲಸುನಾರುವ ಮಹ ಮಲಭಾಂಡಕ್ಕೊಲಿದು ಬಲು ಸಿಲುಕಿ ಬಂಧದೊಳು 2 ಜಡದಮೇಲಣ ಲಿಪಿಯು ಒಡನೆ ಮಾಯಪ್ಪಂತೆ ಪೊಡವಿಯ ಸುಖ ನಿಮಿಷದಡಗಿ ಪೋಗುವುದು ಅಡಿಗಡಿಗೆ ಎಡೆಬಿಡದೆ ಒಡೆಯ ಶ್ರೀರಾಮನಲಿ ದೃಢವಾಗಿ ನೆರೆನಂಬಿ ಪಡಕೋ ನಿಜಸುಖವ 3
--------------
ರಾಮದಾಸರು
ಚೋದ್ಯ ಚೋದ್ಯ ಹರಿ ನಿನ್ನ ಆಟ ಸುಲಭವಲ್ಲಾರಿಗೆ ತಿಳಿಯದೀ ಮಾಟ ಪ ಉಣಿಸುವವರೊಳು ನೀನೆ ಉಣುತಿರುವವರಲಿ ನೀನೆ ಉಣಿಸುಣಿಸಿ ಅಣಕಿಸುವ ಬಿನುಗರಲಿ ನೀನೆ ಮಣಿಯುವವರೊಳು ನೀನೆ ಮಣಿಸಿಕೊಂಬರಲಿ ನೀನೆ ಕ್ಷಣಕ್ಷಣಕೆ ಬದಲ್ವಾಗ ಬಣ್ಣಕಗರಲಿ ನೀನೆ 1 ಹೊಡೆಯುವವರಲಿ ನೀನೆ ಹೊಡೆಸುವವರಲ್ಲಿ ನೀನೆ ಹೊಡೆಸಿಕೊಳ್ವರಲಿ ನೀನೆ ಬಿಡಿಸುವವರಲಿ ನೀನೆ ದುಡಿಯುವವರಲಿ ನೀನೆ ದುಡಿಸಿ ಕೊಂಬರಲಿ ನೀನೆ ಬಡವರಲಿ ನೀನೆ ಬಲ್ಲಿದರೊಳ್ನೀನೆ 2 ಕೊಟ್ಟೊಡೆಯರಲಿ ನೀನೆ ಬಿಟ್ಟೋಡ್ವರಲಿ ನೀನೆ ಕೊಟ್ವೊವಚನತಪ್ಪುವ ಭ್ರಷ್ಟರಲಿ ನೀನೆ ಶಿಷ್ಟನಿಷ್ಟರಲಿ ನೀನೆ ಬಿಟ್ಟಾಡ್ವರಲಿ ನೀನೆ ಇಟ್ಟಿಟ್ಟು ಹಂಗಿಸುವ ದುಷ್ಟರಲಿ ನೀನೆ 3 ಪಾಪಿಷ್ಟರಲಿ ನೀನೆ ಕೋಪಿಷ್ಟರಲಿ ನೀನೆ ಶಾಪಿಸುವರಲಿ ನೀನೆ ಶಾಪಕೊಂಬರಲಿ ನೀನೆ ತಾಪತ್ರದಲಿ ನೀನೆ ಭೂಪತಿಗಳೊಳು ನೀನೆ ಅಪಾರ ಸೃಷ್ಟಿ ಸರ್ವವ್ಯಾಪಕನು ನೀನೆ 4 ಇನ್ನರಿದು ನೋಡಲು ಅನ್ಯವೊಂದಿಲ್ಲವು ನಿನ್ನಪ್ರಭೆಯೆ ಸಕಲ ಜಗವನ್ನು ಬೆಳಗುವುದು ನಿನ್ನ ರೂಪವೆ ಜಗ ಎನ್ನಯ್ಯ ಶ್ರೀರಾಮ ಭಿನ್ನಬೇದ ಬಿಡಿಸೆನ್ನ ಧನ್ಯನೆನಿಸಯ್ಯ 5
--------------
ರಾಮದಾಸರು
ಮಾತಿನೋಳ್ಮಾತಿಲ್ಲದ ಪಾತಕಜನಜತೆ ಜನ್ಮಕೆ ಮಾಡಬೇಡಿರಪ್ಪ ಪ ನೀತಿಗಡಕ ಮಹಕೋಟಿ ಕುಹಕರ ಸಂಗ ಕೊಂಡ ಕಾಣಿರಪ್ಪ ಅ.ಪ ಬಣಗು ಬಿನುಗರ ತಳ್ಳಿ ಫಣಿಪನ ಸಹವಾಸ ಕೇಳಿರಪ್ಪ ಅಣಕವಾಡುತ ಅನ್ಯಜನಸುದ್ದ್ಯೋಳ್ದಿನಗಳೆವ ಶುನಕ ಜನಮಿಗಳನೊದೆಯಿರಪ್ಪ1 ಚಲನಚಿತ್ತದ ಬಲುಹೊಲೆಮತಿಗಳ ಸಲಿಗೇಳೇಳು ಜನ್ಮಕೆ ಬೇಡಿರಪ್ಪ ವಿಲಸಿತ ನಡೆನುಡಿ ತಿಳಿಯದದುರುಳರ ಗೆಳೆತನ ಕಡೆತನಕ ಬಿಡಿರಪ್ಪ 2 ಧರ್ಮಗೆಟ್ಟು ದುಷ್ಕರ್ಮದುರುಳವ ದುರ್ಮದ ಬಿಟ್ಟು ದೂರಾಗಿರಪ್ಪ ನಿರ್ಮಲಸುಖ ನಿಜ ಮರ್ಮನವರಿಯದ ಧರ್ಮಿಗಳೆದೆಯನು ತುಳಿಯಿರಪ್ಪ 3 ಸತ್ಯಸನ್ಮಾರ್ಗವ ಮರ್ತ ಅಸತ್ಯರ ನೆತ್ತಿಮೇಲೆ ಹೆಜ್ಜಿಡಿರಪ್ಪ ನಿತ್ಯಮುಕ್ತಿ ಸುಖ ಗುರ್ತರಿಯದೆ ಯಮ ಮೃತ್ಯುವಶವ ಗೋಷ್ಠಿ ಬಿಡಿರೆಪ್ಪ 4 ಮರವೆ ಮಾಯಿಗಳ ಚರಣದಿ ಮುಟ್ಟಿದಿರಪ್ಪ ಪರಮ ಶ್ರೀರಾಮಪಾದ ಮರೆದ ದುರಾತ್ಮರ ದರುಶನ ಕನಸಿನೋಳ್ಬೇಡಿರಪ್ಪ 5
--------------
ರಾಮದಾಸರು
ಮಾನವ ಜನುಮ ನಾನು ಯಾರೆಂಬ ಖೂನವಿಲ್ಲದೆ ಪ ಕಾಲನಾಜ್ಞೆಯನ್ನು ಪಡೆದು ಸೂಳ ಎಣಿಸಿ ಜಗಕಿಳಿದು ಜಾಲಹಾಕಿ ಜವನಗೊಲಿದು ಶೂಲಕ್ಹಾಕುವ ಮಾರಿಗೊಲಿದು 1 ತಂದ ಪುಣ್ಯವನ್ನು ಕೆಡಿಸಿ ಮಂದಿಮಕ್ಕಳನ್ನು ಬಿಡಿಸಿ ಮಂದನೆನಿಸಿ ಕುಂದುಹೊರೆಗೆ ಬಂಧಕ್ಕೆಳೆವ ರಂಡೆನ್ಹೊರೆಸಿ2 ಜನನಿಜನಕರನ್ನು ಜರೆದಿ ಮನೆಯ ಹೆಂಡಿರ ಮಾನ ಕಳೆದಿ ಬಿನುಗು ಸೂಳೆಗೆ ವಶನಾದಿ ಬಿನುಗರೊಳಗೆ ಬಿನುಗನಾದಿ 3 ನೀಗಿದಿ ಕುಲಶೀಲತೆ ಮುದಿ ಗೂಗೆಯಂದದಿ ದಿನಗಳೆದಿ ಭಾಗವತದ ಭಾಗ್ಯ ಮರೆದಿ ಕಾಗೆನುಂಗಿದ ಹೊಲೆಯನಾದಿ 4 ಸಾಧು ಸುಜನಬೋಧ ಜರೆದಿ ವೇದವಾಕ್ಯ ಮೀರಿ ನಡೆದಿ ಶೋಧಿಸಿ ಸಮಯ ತಿಳಿಯದ್ಹೋದಿ ಆದಿ ಶ್ರೀರಾಮಗ್ಹೊರತಾದಿ 5
--------------
ರಾಮದಾಸರು
ಸೂಳಿನ್ನ ಪೊಗುವವ ಏನಾದೆಂತಾ ಹಾಳಾದಬಳಿಕ ಪುಣ್ಯ ಮೂಳನಾಯಾದ ಪ ಮೂತ್ರದ್ವಾರಕೆ ಮೆಚ್ಚಿ ಮಾತಾಪಿತರ್ವೈರ್ಯಾಗಿ ಪಾತ್ರಾಪಾತ್ರೆನದೆ ಕುಲಗೋತ್ರ ಧರ್ಮಳಿದ ಮಾತೃ ಭೂಮಾತೆಯ ಯಾತ್ರ ಸುದ್ದರಿಯದೆ ಧಾತ್ರಿಯೊಳ್ ಕೈಸೂತ್ರಗೊಂಬ್ಯಾದ1 ಸುಲಭದಿಂ ತನ್ನಯ ಕುಲನಾಶಗೆ ಅನ್ಯ ಕುಲಕೆ ಹವಣಿಪ ಮಾರಿಬಲೆಗೆ ಒಳಪಟ್ಟು ಕುಲ ವಿಧವಿಧ ಭಕ್ತಿಗಳನಗಲಿ ಬಲುಪಾಪಕೊಳಗಾಗಂಕತನ ಮಹ ಕೊಲೆಗೆ ಈಡಾದ 2 ಉತ್ತಮರ ಲಕ್ಷಿಸದೆ ಸತ್ಯಕ್ಕೆ ಮನಗೊಡದೆ ಮೃತ್ಯುರೂಪಿಣಿಮಾತೇ ಅತ್ಯಧಿಕವೆನುತ ಮರ್ತು ತನ್ನಯ ಸುಖವ ತೊತ್ತಾಗಿ ಪಾತಕಿಗೆ ನಿತ್ಯ ಮೈಲಿಗೆಹೊರುವ ಕತ್ತೆಯಂತಾದ 3 ಸಾರುತಿಹ್ಯವೇದ ಸುವಿಚಾರವಾದಗಳೆಲ್ಲ ತೂರಿ ಅಡಿವಿಗೆ ಅಟ್ಟಿ ಮೀರಿ ಮಹವಾಕ್ಯ ಘೋರನರಕಕೊಯ್ದು ಸೇರಿಸುವವತಾರಿ ಮಕ್ಕ ಮಾರಿ ಜಾರೆಗೆ ಬಿಡದೆ ಸೆರೆಯಾಳು ಆದ 4 ಮನ ಅವಳಿಗರ್ಪಿಸಿ ತನು ಅವಳಿಗೊಪ್ಪಿಸಿ ಧನವನಿತು ಅವಳ ಅಧೀನದಲ್ಲಿರಿಸಿ ಬಿನುಗರೊಳುಬಿನುಗೆನಿಸಿ ಕುಣಿಕುಣಿದು ಕಡೆಗೆ ಮಮ ಜನಕ ಶ್ರೀರಾಮನಡಿ ಕನಿಕರಕ್ಹೊರತಾದ 5
--------------
ರಾಮದಾಸರು
ಆರುಮುನಿದರು ಮುನಿಯಲಿ ಎನ್ನಪಾರು ಮಾಡುವಹರಿನಿನ್ನ ದಯವಿರಲಿಪವಾರಿಜಾಕ್ಷನೆ ನಿನ್ನ ಕರುಣವೆಂಬಾಲಯಸೇರಿ ಕೊಂಡವರಿಗೆ ಆರಂಜಿಕಿನ್ನೇನು ಅ.ಪಬಿರುಗಾಳಿ ಭರದಿಂದ ಬೀಸೆ ಮಹಗಿರಿಯು ನಡುಗಿ ಅದರಿಂದಾಗ್ವುದೆಘಾಸಿನರಿಗಂಜಿ ಹುಲಿ ಸ್ಥಳ ತ್ಯಜಿಸಿಮರೆಯಾಗೋಡುವದೇನರಹರಿ ತವಪಾದ ಸ್ಮರಿಪ ದಾಸರುನರಗುರಿಗಳಿಗ್ಹೆದರುವರೇನು 1ದಿನಕರನಿಗೆ ಕುಂದ್ಹೊರಿಸಿ ಇಂಥಬಿನುಗರು ಜರೆದರೆ ಆಗುವನೆ ಮಸಿವನಜಾಕ್ಷನೊಳು ಮನ ನಿಲಿಸಿದಿನ ದಿನ ಘನವಾಗಿ ನೆನೆವ ಭಕ್ತರಮನ ಮಣಿಯುವುದೇನಯ್ಯಬಿನುಗರ ಕೃತಿಗಿನ್ನು 2ಬರುವುದೆಲ್ಲವು ಬಂದು ಬಿಡಲಿ ಎನ್ನಸರುವರು ಪರಿಪರಿ ಜರಿದುನೋಡಲಿಸಿರಿವರ ನಿನ್ನ ದಯವಿರಲಿಮರಿಯಾದ್ಹಾಳಾಗಲಿ ಸ್ಥಿರಸುಖ ಪ್ರಾಪ್ತಿಸಲಿವರದ ಶ್ರೀರಾಮ ನಿನ್ನಸ್ಮರಣೆಯೊಂದೆನಗಿರಲಿ 3
--------------
ರಾಮದಾಸರು