ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಕೆಟ್ಟೆಯಲ್ಲೋ ಮನುಜ ಹಾನಿಯಾದೆಯಲ್ಲೋ ಪ ಕಾಣದೆ ಏನೇನು ಗಾಣದೆತ್ತಿನಂತೆ ನಾನಾ ಯೋನಿಗಳು ಖೂನವಿಲ್ಲದೆ ತಿರುಗಿ ಅ.ಪ ಕಾಲ ಕಳೆದೆಯಲ್ಲ ಕಾಲದ ಮೂಲ ತಿಳಿಯಲಿಲ್ಲ ಮೂಳನಾದೆಯಲ್ಲ ಭವದ ಮಾಲ ಗೆಲಿಯಲಿಲ್ಲ ಕಾಳುಕತ್ತಲೆಂಬ ಹಾಳು ಸಂಸಾರ ಮಾಯಾ ಜಾಲದಿ ಬಿದ್ದೆಮಧಾಳಿಗೀಡಾದೆಯಲ್ಲ 1 ನಾರಿ ನಿನ್ನವಳಲ್ಲ ಹುಟ್ಟಿದ ಪೋರ ನಿನಗಿಲ್ಲ ಯಾರಿಗೆಯಾರಿಲ್ಲ ನಿನ್ನ್ಹಿಂದೆ ಯಾರು ಬರುವುದಿಲ್ಲ ಧಾರುಣಿಸುಖವಿದು ಸಾರಮಯ ಸುವಿ ಚಾರದೆ ನೋಡದೆ ಘೋರನರಕಿಯಾದೆ 2 ಮನೆಮಾರು ನಿನಗಿಲ್ಲ ಗಳಿಸಿದ ಧನವು ನಿನ್ನದಲ್ಲ ಕ್ಷಣಿಕವಾದದ್ದೆಲ್ಲ ಜಗಸುಖ ನಿನಗೊಂದು ಸ್ಥಿರವಿಲ್ಲ ವನಜನಾಭ ನಮ್ಮ ಜನಕ ಶ್ರೀರಾಮನ ವನರುಹಂಘ್ರಿ ನಂಬಿ ಘನಮುಕ್ತಿ ಪಡೀಲಿಲ್ಲ 3
--------------
ರಾಮದಾಸರು
ಯಾಕೆ ಸುಮ್ಮನೆ ಪೇರಿ ಹೊಡೆಯುವಿ ಕಾಕು ದುರ್ಭವ ಚಕ್ರದಿ ಪ ಲೋಕದಿರುವು ನಿನಗೇನು ಸ್ಥಿರವೆಲೋ ಕಾಕುಜೀವ ವಿಚಾರ ಮಾಡದೆ ಅ.ಪ ಕಾಕುಸಿರಿಗೆ ಕೈಹಾಕಿ ಬಲು ಬಲು ಶೋಕದಬ್ಧಿಲಿ ಮುಳುಗಿದ್ಯೊ ನೂಕಿ ಯಮನರೊದೆದು ಎಳೆವಾಗ ಲೋಕಸಂಪದ ನಿನ್ನ್ಹಿಂದೆ ಬರುವುದೆ 1 ನಾನು ಯಾರೆಂದೆಂಬ ಖೂನ ಸು ಜ್ಞಾನ ವಿಡಿದು ತಿಳಿಯದೆ ಶ್ವಾನಸೂಕನಂದದಿ ಮಹ ಹೀನ ಬವಣೆಯೊಳ್ಬೀಳುತ 2 ಗೋತಗೋಜಲಕುಣಿ ಈ ಸಂಸಾರ ರೋತಿ ಹೊಲಸಿಕ್ಕಿ ನಾರುವ ನೀತಿಗೆಟ್ಟದರೊಳಗೆ ಬಿದ್ದೆಮ ಭೀತಿಯಿಂ ಬಳಲುವುದೇನೆಲೊ 3 ಪೂರ್ವಪುಣ್ಯದಿಂ ಸಿಕ್ಕ ಈ ಮಹ ಪರ್ವಕಾಲ ಸಮಯರಿಯದೆ ದುರ್ವಿಕಾರದಿಂ ಸರ್ವ ಕಳೆಯಲು ದೊರೆವುದೇ ಪುನ:ಬಯಸಲು 4 ತೋರಿ ಇಂದ್ರಜಾಲದಂದದಿ ಹಾರಿಹೋಗುವ ಮಾಯ ನೆಚ್ಚಿ ಸಾರತರ ಮೋಕ್ಷವನು ಕರುಣಿಪ ಶ್ರೀರಾಮನ ನಂಬದೆ 5
--------------
ರಾಮದಾಸರು