ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಅ) ಆತ್ಮನಿವೇದನಾ ಕೃತಿಗಳು ಏನು ಹೇಳಲಯ್ಯ ರಂಗ ಎಲ್ಲಿ ಹೋಗಲಯ್ಯ ನನ್ನಮನಸು ಮಂಗವಾಗಿ ದೂರ ತಳ್ಳಿಹುದಯ್ಯ ಪ ಎಲ್ಲೆಯಿಲ್ಲದ ಎನ್ನವನು ನೀ ಎಂತುನಿಂತಿಹೆ ಸುಮ್ಮನೆ ಎಲ್ಲವಾಗಿಕೂಡಿಕೊಂಡಿಹೆನಿನ್ನಚರಣಭರಿಸುಮಾಪತೇ ಕ- ಮಲಾಪತಿ ನೀ ಕರುಣದಿಂದಲಿ ನಡೆಸಲಾರೆಯಾ ನನ್ನನು ಅ.ಪ ನಡೆಯಲಾರದೆ ಕಾಲುಬಿದ್ದಿದೆ ಕೋಪಗೊಳ್ಳದೆ ಬಂದು ನನ್ನಲಿ ನಿಂತು ಸಲಹೈ ದೇವನೇ ಅಪ್ಪಶೆಲ್ವನೆ ನಿನ್ನ ಬಿಟ್ಟರೆ ಕಾದು ಕುಳಿತಿಹರಾರಯ್ಯ 1
--------------
ಸಂಪತ್ತಯ್ಯಂಗಾರ್
ಎಂತು ಬಿನ್ನೈಸಲೊ ಮುರಾರಿ ಸಾರಿಗೆ ಸಾರಿ | ಸಂತ ಜನರ ಆಧಾರಿ ಪ ಶ್ಲೋಕ - ಘನ ಅನವರತÀ ಕಾಯಾ | ಸ್ವಾಮಿ ಲಕ್ಷ್ಮೀ ಸಹಾಯ | ಅನಿಮಿಷ ಮುನಿಗೇಯಾ ಹೇಯ ಧರ್ಮ ವಿಹಾಯ | ನಗರ ನಿಲಯಾ | ಅಮಿತÀ ಆನಂದ ಕಾಯಾ | ನಾಗ ತಲ್ಪೋರು ಗಾಯಾ 1 ಪದ - ಶರಣು ಶರಣು ಶಾರಣ್ಯನೆ | ಗುಣ ಗುಣ್ಯನೆ | ನಮಗಾನನ್ಯನೆ | ನಿರುತರಂತರ ಕಾರುಣ್ಯನೆ ಪ್ರದದಾನ್ಯನೆ | ಅಪ್ರತಿ ಧನ್ಯನೆ | ಪರಮ ಪುರುಷ ಅಸಮಾನ್ಯನೆ | ಮಹ ಪುಣ್ಯನೆ | ಪ್ರಳಯ ಕನ್ಯೆನೆ | ಕರುಣ ಸಾಕ್ಷಿಗನೆ ಲಾವಣ್ಯನೆ | ಅನುಗಣ್ಯನೆ ಪ್ರಾಕೃತ ಶೂನ್ಯನೆ 1 ಶ್ಲೋಕ - ಪರಿಪರಿ ಹೇಯ ಗಾತ್ರಾ ತೆತ್ತನೊ ಇಷ್ಟ ಮಾತ್ರಾ | ಚರಿಸಿದೆ ವಿಷಯ ಯಾತ್ರಾ | ಪಾರಗಾಣೆನೋ ಮಿತ್ರಾ | ಕೊರಳಿಗೆ ಮಮತೆ ಸೂತ್ರಾ | ಉರುಲು ಬಿದ್ದಿದೆ ಚಿತ್ರಾ | ಸುರಕು ಬಡಿಪ ತನುತ್ತಾ | ಕಮಲ ನಿನೇತ್ರಾ | 2 ಪದ - ನರಕ ನರಕ ಉಂಡು ಬೆಂದೆನೊ | ಇಲ್ಲಿ ನಿಂದೆನೊ | ಗತಿಗೆ ಮುಂದೇನೊ | ಕುರುಡ ಕಿವುಡನಾಗಿ ನೊಂದೆನೊ | ಇನ್ನೊಂದೇನೊ | ಉಪಾಯವಂದೆನೊ | ಮರಹು ಸಾಗರದೊಳು ಸಂದೆನೊ | ಅಂದು ಹಿಂದೆನೊ | ಸುಜನರಿಗಂದೇನೊ 2 ಶ್ಲೋಕ - ಸುಲಲಿತ ರುಚಿರಪಾಂಗಾ | ಶುದ್ದ ಸ್ವಭಾವÀ ರಂಗಾ | ಪಲಿಪರಮಾಣು ಸಂಗಾ | ಪಾವನ ಕೋಮಲಾಂಗಾ | ವೊಲಿಸಿದವರ ಭಂಗಾ | ಪರಿಸುವ ಶಿಂಗ ಶಿಂಗಾ | ವರಬಲಗುಣ ತರಂಗಾ | ಸರಸಿಜ ಹೃತ್ಪುಂಗಾ3 ಪದ - ಚಿಂತಿಸುವೆನೊ ನಿನ್ನ ವಿಗ್ರಹಾ | ಮನೋನಿಗ್ರಹಾ | ವಾಗಲಿ ಅನುಗ್ರಹಾ | ಸಂತತ ಎನಗಿದೆ ಸಂಗ್ರಹಾ | ದೇಹವೈಗ್ರಹಾ | ದುರುಳರ ಪ್ರತಿ ಗ್ರಹಾ | ಮುಂತೆ ಕೈಕೊಂಬ ದುರಾಗ್ರಹಾ | ಯೈವ ವಿಗ್ರಹಾ | ಮಾಣಿಸು ಶಿರಿಗ್ರಹಾ | ಸಂತೈಸು ಕರುಣವಾರುಣಗ ಅನಿಗ್ರಹಾ 3 ನವನೀತ ಗೋಪಿ ವಸ್ತ್ರಾಪಹಾರಾ | ಕಾಲ ಧಾರಾ | ಕಂಸದಾನವ ಸಂಹಾರಾ | ಧ್ರುವ ಬಲಿಕರಿ ಉದ್ಧಾರಾ | ನಾನವತಾರ ಧೀರಾ | ಪವನ ಮನಮಂದಿರಾ ಪಾಲಿಸೊ ವಾರಂ ವಾರ4 ಪದ - ವಿಜಯನಗರಾಧೀಶ ಸರ್ವೇಶಾ | ಮಣಿಮಯ ಭೂಷಾ | ಸೂರ್ಯ ಕೋಟಿ ಪ್ರಕಾಶಾ | ತ್ರಿಜಗದೊಳಗೆ ನೀನೆ ನಿರ್ದೋಷಾ | ಶಕ್ತಿ ವಿಶೇಷಾ | ಐಶ್ವರ್ಯ ವಿಲಾಸಾ | ಋಜುಜ್ಞಾನ ಕೊಡುವದೊ ಮನೋತ್ತರಿಸಾ | ಮಂಜುಳ ಭಾಷಾ | ಭೂದಾ ರಜವಾಸಾ | ನಿರ್ಜರ ಕೋಶಾ | ಹೃದಯ ಕಾಶಾ | ನಾಮಕ ಮಹಿದಾಸಾ 4
--------------
ವಿಜಯದಾಸ
ದುಮು ದುಮು ಬಸವಂತನ ಹಬ್ಬಾ ಪ ರಾಮಕೃಷ್ಣ ಗೋವಿಂದ ಮುರಾರಿ | ಶಾಮ ಸುಂದರ ಸುರಜ ಸಹಕಾರಿ | ಕಾಮಿತ ಫಲಗಳ ನೀವ ಉದಾರಿ | ಶ್ರೀ ಮಾಧವನೇ ಕಾಯೋ ಚರಣವ ದೋರಿ 1 ಬನ್ನ ಬಡುತಲಿ ಬಲು ಭವದಲಿ ಬಂದೆ | ಮುನ್ನಿನ ತಪ್ಪವನೆಣಿಸದೆ ತಂದೆ | ಚೆನ್ನಾಗಿ ರಕ್ಷಿಸು ನಮೋ ನಮೋ ಎಂದೆ 2 ಈ ರೀತಿಯಿಂದಲಿ ಹರಿಯ ಕೊಂಡಾಡಿ | ಆ ರಾಧಿಪ ನವವಿಧದಲ್ಲಿ ಕೂಡಿ | ನಾರಕ ಭಯಗಳುವನು ಮೂಲದೀಡ್ಯಾಡೀ | ಸೂರ್ಯಾಡು ಸ್ವ ಸುಖ ಎಲೊ ಹುಚ್ಚು ಖೋಡಿ 3 ಮುನ್ನಿನ ಪುಣ್ಯದಿ ನರದೇಹ ತಾಳಿ | ಮಾನವನಾಗಿ ಹರಿಕಥೆ ಕೇಳಿ | ಚೆನ್ನಾಗಿ ವಿಷಯದಲನುದಿನ ಬಾಳೀ | ವೈರಿ ನೀನಾದೆ ಗೈಯ್ಯಾಳಿ 4 ಮೃಗಜಲ ಹೋಲುವ ವಿಷಯಾ ನಂದಾ | ಬಗೆದೆಲೋ ಶಾಶ್ವತವೆಂದು ನಿನ್ನಿಂದಾ | ಭಕುತಿಯ ಮಾರ್ಗವ ಬಿಟ್ಟೆಲೋ ಛಂದಾ | ಜಗ ದೊಳಗಾದೆಲೋ ನೀ ಮತಿ ಮಂದಾ 5 ಹೆಂಡರು ಮಕ್ಕಳು ಮಮತೆಯ ಸ್ಥೂಲಾ | ಖಂಡದಿ ಬಿದ್ದಿದೆ ಕಾಲಿಗೆ ಕೋಳಾ | ಅಂಡಲೆವುತ ಹೊಟ್ಟೆಹೊರೆದೆಲೋ ಮೂಳಾ 6 ಸುಖವಿಲ್ಲ ಇದರೊಳಗಿಂದು | ಪಾದ ಹೊಂದು 7 ತ್ವರಿತದಿ ಭಾವಭಕ್ತಿಗೆ ಗಮನವಿಟ್ಟು | ತರಳನಾಗಿ ಹೋಗದಿರೆಲೋ ಕೆಟ್ಟು 8 ಚಿನುಮಯ ಗೆಚ್ಚರಗಳೆದೆಲೋ ಭ್ರಾಂತಾ | ಕುಣಿಸ್ಯಾಡುತಿ ಹನು ಅಚ್ಯುತಾನಂತಾ 9 ಒಬ್ಬರು ಶಾಸ್ತ್ರದ ಮದದಲಿ ಬಿಗಿದು ಉಬ್ಬುಬ್ಬಿ ಕುಣಿದರು ಹೇಳಲೇನಿಂದು 10 ಅಷ್ಟಮದದಿಂದ ಕಣ್ಣು ಮುಚ್ಚಿ | ಕುಟ್ಟುವಾಗ ನೆಲ್ಲಿಕಾಲನು ಘಟ್ಟಿಸಿ 11 ಸಂತರ ಕಥೆ ಕಿವಿಯಲಿ ಕೇಳಲಿಲ್ಲಾ | ಭ್ರಾಂತನೆ ನಾಳೆ ಮುರಿವನು ಹಲ್ಲಾ 12 ನೆರೆದಹಿಸುತ ದುರ್ಮದ ಬೂದಿ ಚೆಲ್ಲಿ | ನರಜನ್ಮ ಸಾರ್ಥಕ ಮಾಡೆಲೊಹುಳ್ಳಿ 13 ಕಂದನು ಸಾರಿದಾ ಹೋಳಿಯಾ ವಂದಾ | ಭವ ಬಂದಾ 14
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನರಸಿಂಹ ನರಸಿಂಹ ನಮಿಸುವೆನೊ ಘೋರ ದುರಿತ ಬೆನ್ನ ಬಿದ್ದಿದೆ ಪರಿಹರಿಸೋ ಶ್ರೀ ನರಸಿಂಹ ಪ ಪರಮೇಷ್ಠಿ ಹರ ಸುರಪತಿ ಮುಖರಾ ಸುರನಿಕರ ಪೊರೆವ ಪ್ರಭೊ ಪ್ರವರ ದುರಿತವು ಅವರನ್ನ ಬಾಧಿಸದಂತೆ ಪೊರೆದ ಪರಿಯಿಂದ ಎನ್ನ ಪೊರೆಯೊ 1 ಕಾಯ್ದು ತನ್ನಯ ತನ್ನ ತಂದೆಯ ಬಾಧೆ ಭಯದಿಂದ ಮನದಲ್ಲಿ ನಿನ್ನ ನೆನಿಯೆ ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ ಭಯ ಪರಿಯೆ ಪೊರೆ ಶ್ರೀ ನರಸಿಂಹ 2 ನಿನ್ನ ಪೆಸರೆಂದರೆ ದುರಿತಂಗಳು ತನ್ನಿಂದ ತಾನೆ ಜರಿಯುವವು ಚನ್ನಾಗಿ ಶರಣರ ಪೊರೆದದಕೆ ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ 3 ನಖ ಮುಖ ಶಿಖಿ ತನ್ನ ನೆನೆಯೆ ಸುಖಿತರವಾಹೋದು ಶರಣರಿಗೆ ಮಖಭುಜ ರವಿ ಸಾಕ್ಷಿ ಇದಕಾಗಿರೆ ವಿಖನಸಾರ್ಚಿತ ಪಾದ ಸುಖಮಯನೆ ಶ್ರೀ ನರಸಿಂಹ ಕಾಯೊ 4 ಅರಿದರೀಧರ ವರ ಕರಯುಗನೆ ಕರಯುಗ ಜಾನು ಶಿರದಲ್ಲಿಪ್ಪನೆ ಶಿರದಿಂದೊಪ್ಪುವ ಕರತಳನೆ ವರ ವಾಸುದೇವವಿಠಲ ಪೊರೆಯೊ ಶ್ರೀ ನರಸಿಂಹ ಕಾಯೊ 5
--------------
ವ್ಯಾಸತತ್ವಜ್ಞದಾಸರು