ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಲಹೊ ಶ್ರೀನಿವಾಸ-ಸುದ್ಗುಣ-ನಿಲಯವೆಂಕಟೇಶ ಜಲಜಾಂಬಕ ನೀನಲಸದೆ ಯೆನ್ನನು ಪ ವಾತವುಮಿತಿಮೀರಿ ಪಿತ್ತವ್ರಾತದೊಡನೆ ಸೇರಿ ಹೆಚ್ಚಿದ ಹೇತುವನೋಡಿ1 ಶ್ವಾಸನಿರೋಧದಲಿ ಸೇರಿದ-ಕಾಸಗಳುದರದಲಿ ಹೆಚ್ಚಿ ಬಲು ಘಾಸಿಪಡಿಸುತಿದೆ 2 ಕಾಯದ ಬಲವೆಲ್ಲಾ-ಕದಲುತ-ಮಾಯವಾದವಲ್ಲ ದಾಯತಪ್ಪಿ ದುರ್ವಾಯುವಿಂದ ತಲೆನೋಯುತ ದೇಹದೊಳಾಯಸ ಹೆಚ್ಚಿತು 3 ನಿದ್ರೆ ಬಾರದಯ್ಯಾ-ನಿಶಿಯೊಳ-ಗೆದ್ದಿರಬೇಕಯ್ಯಾ ಬಿದ್ದಾದ್ದಾಡಿಸುತಿದೆ 4 ಅನ್ನವರೊಚಕವು ಆಪ್ತರೊಳನ್ಯತೆಗೊಚರವು ಮುನ್ನವೈದ್ಯರುಗಳನ್ನು ಕಾಣೆ ನೀ ಕಣ್ಣತೆರದುನೊಡೆನ್ನ ಕಟಾಕ್ಷದಿ5 ರೋಗವುಘನವಯ್ಯಾ-ರೋದನೆ-ಯಾಗಿಹುದೆನಗಯ್ಯಾ ನೀನೇ ಗತಿಯೆಂದಿಗು 6 ಪರಮ ಪುರುಷ ನಿನ್ನ-ಚರಣವ ಮರಹೊಕ್ಕಿಹೆಮುನ್ನ ವರದ ವಿಠಲ ದೊರೆ ವರದಯಾನಿಧೇ 7
--------------
ಸರಗೂರು ವೆಂಕಟವರದಾರ್ಯರು
ಹೆಚ್ಚಿನ ಗೋಜ್ಯಾಕೆಲೆ ಹುಚ್ಚು ತಿಳಿ ಮುಚ್ಚಿಕೊಂಡಿದೆ ನಿನ್ನ ಭವಕಿಚ್ಚು ಪ ಹುಚ್ಚು ಮತಿಯ ನೀಗಿ ಅಚ್ಯುತನಂಘ್ರಿಯ ಮೆಚ್ಚಿಸಿ ಮೆಲಿ ಅನುಭವದ್ಹುಚ್ಚು ಅ.ಪ ಕೀಳನಾಗದೆ ನೀ ನಿಜವ ತಿಳಿ ನಿನ್ನ ಕಾ ಲೊಳು ಬಿದ್ದಾದ ಸಂಕೋಲಿ ನಾಳೆಗೆ ಬರುತಾದ ಕಾಲನ ದಾಳಿಯು ತಾಳದೆಳಿತಾರ ಜಡಿದ್ವಜ್ರದ ಕೀಲಿ 1 ಹಂದಿಯ ಜನುಮಕೆ ಬೀಳಬೇಡ ಬೇಡಿ ಮಂದರ ನಿಲಯನ ಹೊಂದಿ ಭಜಿಸಿ ಆನಂದಪಡಿ 2 ದೂರದಿಂದ ಬಂದಿದ್ದಿ ಹೌಹಾರಿ ತ್ವರ ವ್ಯಾ ಪಾರ ಮಾಡಿಕೊಳ್ಳೊ ಭರ್ಜರಿ ಸಾರ ಮೋಕ್ಷಾಧಿಪ ಧೀರ ಶ್ರೀರಾಮನ ಪಾದ ವಾರಿಜ ನಂಬಿ ಹೊಡಿ ಜಯಭೇರಿ 3
--------------
ರಾಮದಾಸರು