ಒಟ್ಟು 8 ಕಡೆಗಳಲ್ಲಿ , 5 ದಾಸರು , 8 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರ್ಥಿಯಾಗಿದೆ ಬನ್ನಿ ಅರ್ತು ನೋಡುವ ಗುರುಮೂರ್ತಿಯಿಂದ ನಿರ್ತವಾಗಿ ಪೂರ್ಣಬೆರ್ತು ಕೂಡುವಾ ಬನ್ನಿ ಗುರ್ತದಿಂದ ಧ್ರುವ ಸೂರ್ಯನಿಲ್ಲದ ಸೂಪ್ರಕಾಶ ತುಂಬೇದ ಹೇಳಲೇನ ತೂರ್ಯಾವಸ್ಥೆಯೊಳು ಬೆರೆದು ಕೂಡಿದ ಜ್ಞಾನಿಬಲ್ಲ ಖೂನ ಬರಿಯ ಮಾತನಾಡಿ ಹೊರಿಯ ಹೇಳುವದಲ್ಲ ಅರುವ್ಹೆಸ್ಥಾನ ಪರಿಯಾಯದಿಂದ ಪರಿಣಿಮಿಸಿ ನೋಡಿ ಪರಮ ಪ್ರಾಣ 1 ಚಂದ್ರನಿಲ್ಲದೆ ಬೆಳದಿಂಗಲು ಬಿದ್ದದ ಬಲು ಬಹಳ ಇಂದ್ರಾದಿಕರೆಲ್ಲ ಹರುಷದಿ ನೋಡುವರು ಸರ್ವಕಾಲ ಸುಂದ್ರವಾದ ಸುವಸ್ತುವಳಗೊಂದದೆ ಅಚಲ ಸಾಂದ್ರವಾದ ಸುಖತುಂಬಿ ತುಳುಕತದೆ ಥಳ ಥಳ 2 ಮನದ ಕೊನೆಯಲಿದ್ದ ಘನಸುಖ ನೋಡಿರೋ ನೆನೆದು ಬ್ಯಾಗ ಸ್ವಾನುಭವದಲನುಭವಿಸುವದು ಬ್ರಹ್ಮಭೋಗ ನಾ ನೀನೆಂಬುವ ಮಾತು ಏನು ತಾಳುವದಲ್ಲ ರಾಜಯೋಗ ದೀನ ಮಹಿಪತಿಗೆ ತಾನೆತಾನಾದ ಸದ್ಗುರುವೀಗ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ ಚೇತಿಸಿ ಬ್ಯಾರಿಹ ವಸ್ತುಗಾಣಿ ಧ್ರುವ ಅದ್ವೈತ ಅ- ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ 1 ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ ಎಂದಿಗಾದರು ತಿಳಿಯಗುಡದು ಪೂರ್ಣ 2 ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ 3 ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ 4 ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ ಅರ್ತು ಸ್ಥಾಪಿಸುವದು ಮನುಜಗಲ್ಲ 5 ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ ದೋರುವರೆ ತರ್ಕಸ್ಯಾಡುವ ಸೊಲ್ಲ 6 ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನುಡಿದಂತೆ ನಡಿಯಬೇಕು ಪಿಡಿದು ಸುಪಥ ಧ್ರುವ ಸಾಧಿಸಿ ತಿಳಿಯದೆ ತನ್ನೊಳು ಖೂನ ಬೋಧಿಸಿ ಹೇಳುದು ಇನ್ನೊಬ್ಬರಿಗೇನ ಅದಿತತ್ವದ ಗತಿಯ ನಿಜಸ್ಥಾನ ಭೇದಿಸುವುದು ಸದ್ಗುರು ಕೃಪೆ ಙÁ್ಞನ 1 ನಡೆನುಡಿ ಒಂದಾದರೆ ಬಲು ಮೇಲು ದೃಢಭಕ್ತಿಗೆ ಒಂದಿದೆ ತಾ ಕೀಲು ಪಡೆವದು ಮನಮಾಡಿ ಮೀಸಲು ಬಿಡದೆ ಮಾಡುವ ಗುರು ದಯ ಕೃಪಾಳು 2 ಹೇಳಿಕಿಗಿದೆ ಬಿದ್ದದೆ ಬಲುಜನ ತಿಳುಹಿಸಿಕೊಡಲಿಕ್ಕಿಲ್ಲದೆ ಙÁ್ಞನ ತಿಳಿವು ತಿಳಿದರೆ ತನ್ನೊಳು ನಿಧಾನ ಹೊಳವ ಮಹಿಪತಿ ಗುರು ನಿಜ ಚಿದ್ಘನ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಮನ ಬಲಿಯದನಕ ಅನುಕೂಲಾಗದನುಭವ ಧ್ರುವ ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1 ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2 ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3 ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ ಙÁ್ಞನಕಿದೇ ತಾ ಸನ್ಮತ ಮುನಿಜನರ ಸುಪಥ 4 ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ರಾಮಯನ್ನಮ:ಎನ್ನೋ ರಾಮಾಯನ್ನಮ: ನಾಮವರಿತದ್ದೇ ರಾಮಾಯನ್ನಮ: ಪ ಬಂದದ್ದು ಬಾರದ್ದು ರಾಮಾಯನ್ನಮ: ತಂದದ್ದು ತಾರದ್ದು ರಾಮಾಯನ್ನಮ: ಅಂದದ್ದು ಆಡದ್ದು ರಾಮಾಯನ್ನಮ: ಮಿಂದದ್ದು ಮೀಯದ್ದು ರಾಮಾಯನ್ನಮ: 1 ಉಂಡದ್ದು ಉಟ್ಟದ್ದು ರಾಮಾಯನ್ನಮ: ಕೊಂಡದ್ದು ಕೊಟ್ಟದ್ದು ರಾಮಾಯನ್ನಮ: ಕಂಡದ್ದು ಕಾಣದ್ದು ರಾಮಾಯನ್ನಮ: ಬಂಡಾದದ್ದಾಗದ್ದು ರಾಮಾಯನ್ನಮ: 2 ಇದ್ದದ್ದು ಇಲ್ಲದ್ದು ರಾಮಾಯನ್ನಮ: ಮೆದ್ದದ್ದು ಮೆಲ್ಲದ್ದು ರಾಮಾಯನ್ನಮ: ಬಿದ್ದದ್ದು ಬೀಳದ್ದು ರಾಮಾಯನ್ನಮ: ಕದ್ದದ್ದು ಕದಿಯದ್ದು ರಾಮಾಯನ್ನಮ: 3 ಬಿತ್ತಿದ್ದು ಬೆಳೆದದ್ದು ರಾಮಾಯನ್ನಮ: ಎತ್ತಿದ್ದು ಎತ್ತದ್ದು ರಾಮಾಯನ್ನಮ: ಸುತ್ತಿದ್ದು ಮುತ್ತಿದ್ದು ರಾಮಾಯನ್ನಮ: ಅತ್ತದ್ದು ಹೊತ್ತದ್ದು ರಾಮಾಯನ್ನಮ: 4 ಭಕ್ತಿ ಭಾವನೆಯೆಲ್ಲ ರಾಮಾಯನ್ನಮ: ಯುಕ್ತಿ ಯೋಚನೆಯೆಲ್ಲ ರಾಮಾಯನ್ನಮ: ಯುಕ್ತಾಯುಕ್ತವು ರಾಮಾಯನ್ನಮ: ಮುಕ್ತಿ ಸಾಧ್ಯ ಶ್ರೀ ರಾಮಾಯನ್ನಮ: 5
--------------
ರಾಮದಾಸರು
ಸಣ್ಣವನ ಬಿನ್ನಪವ ಸಲಿಸಬಹುದಯ್ಯ ಬಣ್ಣಿಸಲೊಶವಲ್ಲ ದಯವುಳ್ಳ ದೊರೆಯೆ ಪ ನಿನ್ನ ಗುಣ ಸುರ ತರುವು ವನದಿ ಶುಕಾದಿಗ ಳುನ್ನತವಾಗಿಹವು ಉಚಿತವೇ ಸರಿಯು ಎನ್ನ ಮನ ಕೋಡಗವು ಅಡವಿಯನು ಬಿದ್ದದೆ ಇ ದನ್ನ ಅದರೊಳಗೆ ಇಡಬಹುದಯ್ಯ ಹರಿಯೆ 1 ಕಮಲಭವ ವಾಣಿ ಮುಖ ನಯನಗಳು ಎಂಬ ಮಹ ಕಮಲೋತ್ಪಲಗಳಿಂದ ಶೋಭಿಸುತಿಹ ವಿಮಲ ಲಾವಣ್ಯ ಸುಧಾಂಬುಧಿಯೊಳಿಡಿಸಯ್ಯ ಮಮ ನೇತ್ರ ಮೀನಗಳ ವಿಷಯ ಪಂಕದಿ ತೆಗಿಸು 2 ನಿಮ್ಮ ನಾಮಾಮೃತದ ಸೂರೆಯನು ಬಿಟ್ಟು ಶ್ರೀ ಭವ ಮುಖರ ಕೆರೆ ಕೋಡೇರಿಸುವಿ ತುತಿ ಚೂರ್ಣ ತೆಗೆದು ತೊಳೆದು ತುಂಬೊ ನಮ್ಮ ವದನ ಕರಡಗೆಯ ವಾಸುದೇವವಿಠಲ 3
--------------
ವ್ಯಾಸತತ್ವಜ್ಞದಾಸರು
ಪಾಲಿಸೊ ವನಮಾಲಿ ಮುಂದೆನ್ನಬಾಲಕನಲೆಯಲೆಸದವನ ಪ.ಹದ್ದನೇರ್ವನಿರುದ್ಧ ನಿನ್ನಲ್ಲಿಬುದ್ಧಿ ನಿಲ್ಲದು ಶುದ್ಧ ವೃತ್ತಿಲಿಮುದ್ದುಮಕ್ಕಳು ಮುಗ್ಧರಲ್ಲೆಅಯ್ಯತಧ್ಯಾನಾಲಾಪ ಬಿದ್ದದ್ದಲ್ಲಯ್ಯ 1ತುಲಸಿ ಪುಷ್ಪಾಂಜಲಿ ತರಲಿಲ್ಲಹೊಳೆವಂಘ್ರಿಗರ್ಪಿಸಲು ಹೊತ್ತಿಲ್ಲಬಲು ಧನ ಬಹ ಕೆಲಸ ಕೈಕೊಂಡೆಕಲಿಕೂಡ ನಿರಯದ ಭೋಗುಂಡೆ 2ಆಡುವ ಮಾತು ಮಾಡಲರಿತರಿಯೆಬೇಡುವರಿಗುಣ ನೀಡಲಿಕ್ಕರಿಯೆಖೋಡಿಗೇನುಂಟು ಸುಖ ಹೇಳು ತಂದೆಹಾಡುವೆ ನಿನ್ನ ಕಾಡುವೆನಿಂದೆ 3ಹೆತ್ತ ತಾಯಿ ಕುತ್ತಿಗೊತ್ತಿದರಾರೊಮತ್ತೆ ತಂದೆ ಮಾರಲಿತ್ತರಿನ್ನಾರೊಪೃಥ್ವಿಪ ಸುಲಿದರೊತ್ತರೆಂಬುವರುಕರ್ತನೀನಿದ್ದೆನ್ನೆತ್ತುವರಾರು4ಕರುಣವಾರಿಧಿ ಕರುಣಿಸು ಗಡಪರಮಭಾಗವತರಿರುವಲ್ಲೆನ್ನಿಡುಪರಸನ್ನ ವೆಂಕಟರಸ ನೀ ಬಾರೊಮರಣ ಹೊಂದದ ಅರಮನೆಗೊಯ್ಯೊ 5
--------------
ಪ್ರಸನ್ನವೆಂಕಟದಾಸರು
ಬರಗಾಲವಲ್ಲವಿದು ಬಳಲದಿರಿಧ್ಯಾನಪ್ರಿಯವು ಆಗೆ ಧನ ಬ್ಯಾರೆ ಪ್ರಿಯನಲ್ಲಅಗ್ಗವಾದಾಗಲಿ ಮುಗ್ಗಿ ಬೆಳುವರೆಮಾರುವಧಾರಣೆಯು ಏರಿ ಇಳುವುದಕೆವರಣ ಆಶ್ರಮಗಳ ಮರಿಯಾದಿಗಳು ತಪ್ಪಿಜ್ಞಾನ ಬರಗಾಲವು ಬಿದ್ದದೆ ಜನಕೆಲ್ಲಪಾಲನೆಯ ಕಾಲವಿದು ಸಂಹಾರ ಕಾಲಲ್ಲಿಹರಿಯ ಮರದಿಪ್ಪುದೆ ಬರಗಾಲ ಬರಗಾಲ
--------------
ಗೋಪಾಲದಾಸರು