ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ ಕರುಣಾಳೋ ಮುನಿ | ವಂಶಸುಧಾಕರ | ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು | ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ || ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ | ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1 ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ | ವಡನೆ ಗಂಧವ ತೇದೆ | ಅನಲನ ಜಪಿಸುತೆ || ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು | ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2 ಬಾದರಾಯಣಮುನಿ | ಭೇದಮತವ ಬಿತ್ತೆ | ಮೋದತೀರ್ಥರು ತರುವ | ಸಾದರಗೈದರೊ || ಸ್ವಾದಫಲಂಗಳು | ನಿನ್ನಿಂದ ತೋರ್ದವು | ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
--------------
ಶ್ರೀಶ ಕೇಶವದಾಸರು
ಮಣ್ಣಿನ ಮಹಿಮೆ ಮನುಜ ನೀನರಿಯೆಷಣ್ಮಹಿಷಿಯುತ ಸರ್ವೋತ್ತಮನ ಲೀಲೆ ಪ ಮಣ್ಣಲಿ ದೊರಕಿದಳು ಮಾತಾಯಿ ಸೀತಾಮಣ್ಣಳೆದ ವಾಮನ ಮಹಬಲಿಯ ಬೇಡಿಮಣ್ಣು ಪಾವನವಾಯ್ತು ರಾಮಪದ ಸ್ಪರ್ಶದಿಮಣ್ಣುಂಡ ಬಾಯಲಿ ಬ್ರಹ್ಮಾಂಡ ತೋರಿದ ಕೃಷ್ಣ 1 ಮಣ್ಣಿಗೇ ನಡೆಯಿತು ಮಹಾಭಾರತ ಯುದ್ಧಮಣ್ಣಿಗೇ ಮಡಿದರ ಸಂಖ್ಯೆಗೆಣೆಯಿಲ್ಲಮಣ್ಣಲಿ ಬಿತ್ತೆ ಬೀಜ ಮಹಾವೃಕ್ಷವಾಗುವುದುಅಣ್ಣ ನಮ್ಮಾದಿಕೇಶವನು ಅನುಗ್ರಹದಿಂ 2
--------------
ಕನಕದಾಸ
ರುದ್ರದೇವರ ಪ್ರಾರ್ಥನೆ ಫಾಲಲೋಚನ ಎನ್ನ ಪಾಲಿಸು ಬೇಗ ನೀಲಕಂಧರ ಕರುಣಾಳು ಕೇಳೀಗ ಪ. ಬಂದ ಮೋಕ್ಷಕೆ ಹೇತುವೆಂದು ಪುಟ್ಟಿದ ಮನ ಮಂದಿರ ನೀ ಎನ್ನ ಕುಂದನೆಣಿಸದಿರು 1 ತುಂಬಿತ್ತೆನ್ನುವ ಶಶಿಬಿಂದಾ ಕೂಡಿಟ್ಟಿದೀ- ಡಂಬ ನೀನೆಂತು ತ್ರಯಂಬಕನಾಗುವಿ 2 ರಾಮಚಂದ್ರನ ದಿವ್ಯ ನಾಮಾಮೃತವ ನಿತ್ಯ ನೇಮದಿ ಪನ್ನಂಗ ಲಲಾಮನ ಸೇವಿಸುವಿ 3 ಪಾವನಾತ್ಮಕ ಲಕ್ಷ್ಮಿಧಾಮನ ಸಹಸ್ರ ಸುತ್ರಾಮ ತಾನರಿಯನು 4 ವೈಷ್ಣವಾಗ್ರಣಿ ನೀನು ಕೃಷ್ಣನ ಪ್ರೀತಿಗಾಗಿ ದುಷ್ಟರಿಗೊರವಿತ್ತು ಭ್ರಷ್ಟಗೊಳಿಸುವಿ 5 ಜೇಡಿ ಮೈಯಲಿ ಧರಿಸಿ ಮೂಢರ ಮೋಹಿಸುವಿ ನೋಡುವಿ ಮನದಿ ಗರೂಡಗಮನನ 6 ಪಾದ ಪಂಕಜ ಭಜಿಸುತಕಿಂಕರವರದನಾದ ಶಂಕರರಾಯ 7
--------------
ತುಪಾಕಿ ವೆಂಕಟರಮಣಾಚಾರ್ಯ