ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೊಡು ಕೃಷ್ಣನೇ ಎನ್ನ ಸಾಲವ ಬೇಗ ಕೊಡದಿದ್ದರೆ ಬಿಡೆನೊ ಪ. ತಡ ಮಾಡಿದೊಡೆ ನಿನ್ನಾಟದ ಬೆಡಗನು ಪೊಡವಿಗೆ ತಿಳಿಸುವೆನು ಜೋಕೆ ಅ.ಪ. ನೀರ ಪೊಕ್ಕರು ಬಿಡೆ ನಿನ್ನ ಭವ ವಾರಿಧಿ ದಾಟಿಸುವೆಂಬೆ ಭಾರ ಪೊತ್ತರೆ ನೀನೇ ಎನ್ನ ಸಂಸಾರ ಭಾರಕೆಂಬೇ ದೇವ ಕೋರೆ ತೋರಲು ಅಂಜುವೆನೆ ಭೂಮಿಯ ಮೇರೆ ಸಿಲಿಕದೋಡಿದರೂ ದೃಢವನು ಕೊಡದಿದ್ದರೂ ಬಿಡೆ ನಾ 1 ಕಂಬದೊಳಡಗಲು ಬಿಡೆನು ನಿನ್ನ ಡಿಂಬ ಭಜಿಪೆ ನರಹರಿಯೆ ಸಂಭ್ರಮದೊಳು ಬ್ರಹ್ಮಚಾರಿಯಾಗಲು ನಿನ್ನ ಹಂಬಲು ಬಿಡೆ ಕೊಡಲಿಯನು ತೋರಲು ಕದಂಬ ಬಾಹು ಛೇದಿಸಲು ರಾಮ ಕೊಡದಿದ್ದರೆ ದೃಢನಾ ದೇವ 2 ಒಂದು ಸ್ಥಳದಿ ಪುಟ್ಟಿ ತಿಳಿಸದೆ ಇ ನ್ನೊಂದು ಸ್ಥಳಕೆ ಪೋಗೆ ಕೃಷ್ಣಾ ಅಂದದ್ವಸನ ಬಿಟ್ಟು ಸುಂದರಿಯರ ವ್ರತ ಛಂದದಿ ಕಳೆದುನೀ ತೇಜೀಯೇರಲು ಸುಂದರ ಶ್ರೀ ಶ್ರೀನಿವಾಸ ನಿನ್ನಡಿ ದೃಢ ಕೊಡದಿದ್ದರೆ ಬಿಡೆನಾ 3
--------------
ಸರಸ್ವತಿ ಬಾಯಿ
ಪಾಲಿಸು ಯದುಪತಿಯೆ ಶ್ರೀಹರಿಯೆ ಹರಿಯೆ ಹರಿಯೆ ಪ ನಾನಾಯೋನಿಗಳಲ್ಲಿ ಶ್ವಾನನಂದದೆ ಸುತ್ತಿ ಶ್ರೀಹರಿಯೆ ಹರಿಯೆ ಹರಿಯೆ 1 ದೇಶಕೋಶವು ಬಂಧು ಪಾಶದೊಳಗೆ ಸಿಕ್ಕಿ ದೋಷಗೈವೆ ಆಶೆಯಬಿಡೆನಾ ಶ್ರೀಹರಿಯೆ ಹರಿಯೆ ಹರಿಯೆ 2 ಅಂಗವು ಕುಂದಿತು ಭಂಗವ ಪೊಂದುವೆ ಶ್ರೀಹರಿಯೆ ಹರಿಯೆ ಹರಿಯೆ 3 ಧೇನುನಗರ ದೊರೆ ಭಾನುಸನ್ನಿಭ ಶೌರೆ ಶ್ರೀಹರಿಯೆ ಹರಿಯೆ ಹರಿಯೆ 4
--------------
ಬೇಟೆರಾಯ ದೀಕ್ಷಿತರು