ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅತ್ತಿಗೆ ಭೋಜನಮಾಡೆ ಸಾವಕಾಶದಿ ನೀನೂ ಮತ್ತೆ ಮತ್ತೆ ಬೇಕಾದ್ದೆಲ್ಲ ತಂದು ಬಡಿಸುವೆನೂ ಪ ಕ್ಷೀರಾನ್ನ ದಧ್ಯೋದನ್ನ ಇನ್ನು ಪರಮಾನ್ನಗಳು ಹೋಳಿಗೆ ಪಳಿದ್ಯ ಹುಳಿಕೂಟು ಉಪ್ಪಿನಕಾಯಿಗಳ ಪಚ್ಚಡಿ ಚೆನ್ನಾಗಿ ಭೋಜನ ಮಾಡೆ ನಮ್ಮಣ್ಣನ ಸಹಿತದಿ 1 ಲಾಡು ಚಿರೋಟಿ ಮಂಡಿಗೆಗಳು ಬೇಡವೆಂದು ಕಯ್ಯತೋರಿ ಬೇಡಿ ಬೇಡಿ ಹಾಕಿಸಿಕೊಂಬಿ ಜೋಡು ಜೋಡಾಗಿ ಗೂಡೆ ಗೂಡೆ ಹಪ್ಪಳ ಸಂಡಿಗೆ ಕೂಡೆ ಕೂಡೆ ಸುರಿಯುತ್ತಿದ್ದರೆ ಹಾಡು ಹೇಳುವುದಕ್ಕೆ ಬಾಯಿ ಬಿಡುವುದಿಲ್ಲವೇನÉೀ? 2 ಪಟ್ಟದರಸಿ ನಮ್ಮಣ್ಣನ ಭಾಗ್ಯದೇವತೆಯೇ ಸಿಟ್ಟುಮಾಡದೆ ಗುರುರಾಮವಿಠಲನ್ನಾ ಸ್ಮರಿಸಿಕೊಂಡು ದಿಟ್ಟೆ ಬೀಗಿತ್ತಿ 3
--------------
ಗುರುರಾಮವಿಠಲ
ಯಾಕೆ ಬಳಲಿಸುವಿ ಗುರುರಾಯಾ ಇನ್ನು ಸಾಕು ಮಾಡಿ ಸಲಹೋ ಕಡು ಬೇಗ ಜೀಯಾ ಭಕ್ತ ಕೇಳಿದರೆ ಕೊಡವಲ್ಲಿ ಉಪ- ಯುಕ್ತವಲ್ಲದ ಮಾಯವನು ಬಿಡಿಸಲೊಲ್ಲಿ ಶಕ್ತಿ ನಿನಗಿಹುದೋ ಕರದಲ್ಲಿ ವಿ- ರಕ್ತನೇ ಕೋಪವ್ಯಾತಕೋ ದಾಸನಲ್ಲಿ 1 ತ್ರಾಹಿ ತ್ರಾಹಿ ಗುರುರಾಯಾ ಈಗ ದೇಹಿ ಎಂಬಗೆ ನಾಸ್ತಿ ಎನಬ್ಯಾಡೋ ಜೀಯಾ ದೇಹ ನಿನಗೊಪ್ಪಿಸಿದೆನಯ್ಯಾ ಮುದ್ದು ಮೋಹದಾ ಹರಿಕಂದಾ ಪ್ರಹ್ಲಾದರಾಯಾ 2 ಇಷ್ಟಕ್ಕೆ ನಾ ಬಿಡುವುದಿಲ್ಲ ನೀನು ಥಟ್ಟನೆ ಕೊರಳ ಕೊಯ್ದರೆ ಯತ್ನವಿಲ್ಲಾ ಕೊಟ್ಟು ಕಾಯ್ದರೇ ಅಹಿತವಲ್ಲಾ ನಮ್ಮ ಧಿಟ್ಟ ಶ್ರೀ ಹನುಮೇಶವಿಠಲನ ಜಾಲಾ 3
--------------
ಹನುಮೇಶವಿಠಲ
ಸಿಕ್ಕಿತೆನಗೊಂದು ಸುವಸ್ತ ಮುಖ್ಯದಂತಸ್ಥ ಅಕ್ಕಿ ಮನಕ್ಕಾಯಿತು ಸ್ವಸ್ತ ದಕ್ಕಿ ಪ್ರಶಸ್ತ 1 ಕಟ್ಟ ಇಡುವದಲ್ಲ ಬಿಟ್ಟರೆ ಹೋಗುವದಲ್ಲ ಮುಟ್ಟಿದರೆ ಬಿಡುವುದಿಲ್ಲ ಗುಟ್ಟು ಕೇಳೆಲ್ಲ 2 ಮುಚ್ಚುಮರಿಲಿಹುದಲ್ಲ ಬಚ್ಚಿಟ್ಟು ಕೊಂಬಂಥದಲ್ಲ ನೆಚ್ಚಿದ ಮಹಿಮನೆ ಬಲ್ಲ ಆಶ್ಚರ್ಯವಲ್ಲ 3 ಭಾನುಕೋಟಿ ತೇಜನಾಗಿ ಘನದಯದಲೊದಗಿ ತಾನೆ ಸಿಕ್ಕಿತ್ಯೆನಗಾಗಿ ಸಾನುಕೂಲಾಗಿ4 ಮಿಹಿತದ ಅಗರ ಸ್ವಹಿತ ಸುಖಸಾಗರ ಮಹಿಪತಿಯ ಮನೋಹರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಸತ್ಕರ್ಮವೆಂಬುದು ಸಾಧನವಲ್ಲದಲೆಸತ್ಕರ್ಮವೀಗ ಶುದ್ಧಬ್ರಹ್ಮವಲ್ಲವುಸತ್ಕರ್ಮ ಭಕ್ತಿಭಾವ ಸುಗುಣವಾದ ಮಾರ್ಗವುಸತ್ಕರ್ಮತ್ಯಾಗ ನಿಶ್ಯಬ್ದ ವಸ್ತುಪಗಾರುಡಿಯನರಿವೆನೆಂದು ಮಹೋರಗನ ಮೇಳವೇಆರು ನಂಬಲು ಬಹುದು ವಿಕಾರ ಮನವನುನಾರಿ ಪುತ್ರರೊಳಗೆ ಕೂಡಿ ನಾನು ಮುಕ್ತನು ಎನಲುಸೇರುವುದು ಎಂತು ಪೂರ್ಣ ಬ್ರಹ್ಮ1ಬ್ರಹ್ಮನರಿದು ಸಂಸಾರವಮಾಡುಈಗ ಎಂಬನುಬ್ರಹ್ಮಘಾತನು ಅವನು ಮಿಥ್ಯವಲ್ಲವುನಿಮ್ಮ ಮನಕೆ ತಿಳಿದು ನೋಡಿ ನಿಶ್ಚಿತದ ಮಾತ ಪೇಳ್ವೆಸುಮ್ಮನೆ ಬಿಡಲಿಬೇಕುಸತಿಸುತರನು2ವಾಸನಾಕ್ಷಯವು ವಸ್ತು ಎಂಬ ಮಾತು ದಿಟವದಿರಲುವಾಸನಾಕ್ಷಯವು ಎಂತು ಸಂಸಾರದಿಗೋಪನಾರಬೇಡವೆನಲು ನಾರುವುದು ಬಿಡುವುದೇಕಾಸ ವೀಸಿಯಲ್ಲದಲೆ ನಿಶ್ಚಯಿಲ್ಲವು3ಸಾಕ್ಷಿ ತಿಳಿದ ಬಳಿಕ ಸಂಸಾರವನೀಗ ತ್ಯಜಿಸಿದೆಅಕ್ಕಿನೀರುವಗ್ಗಿದಂತೆ ಆಗಬಾರದುರಕ್ಷಕನು ಇಲ್ಲದಲೆ ಸಂಸಾರವ ಬ್ರಹ್ಮವೆನಲುಭಕ್ಷಣಹುದುಬ್ರಹ್ಮಜ್ಞಾನಬಿಡುವುದಿಲ್ಲವು4ಸಂಸಾರದಿಮುಕ್ತನಾನು ಎನಲುತಿಲಾಂಶ ಮಾತ್ರ ಅನ್ನವಾಸನ ಅಂಟದಿಹುದೇಸಂಸಾರವ ತ್ಯಜಿಸಿದರೆ ಸಾಧ್ಯವಹುದು ವಸ್ತುಹಂಸಪರಮ ಚಿದಾನಂದ ತಾನೆಯಾಹನು5
--------------
ಚಿದಾನಂದ ಅವಧೂತರು