ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗಂಟೆ ಹೊಡೆಯುತಿದೆ ಕೇಳೆಲೋ ಮೂಢಾ ಪಂಟು ಬಡಿಯುತ ಕೊಡಲುಬೇಡಾ ಪ ಶ್ರುತಿಶಿರಗಳ ಬೋಧದ ಈ ಗಂಟೆ ಮತಿವಿಭ್ರಮೆಯ ಬಿಡಿಸುವ ಗಂಟೆ ಅತಿಮಾನವಸ್ಥಿತಿ ಸಾರುವ ಗಂಟೆ ಕ್ಷಿತಿಯೊಳಗಿದುವೆ ಸಾರ್ಥಕ ಗಂಟೆ 1 ಜೀವೇಶ್ವರರೈಕ್ಯದ ಘನ ಗಂಟೆ ದೇವನೆ ನೀನೆಂದರುಹುವ ಗಂಟೆ ಸಾವಿನ ಸಂಕಟ ಕಳೆಯುವ ಗಂಟೆ ಕಿವಿಯಿದ್ದು ಕೇಳದೆ ಬಿಡುವವರುಂಟೇ2 ತೋರಿಕೆ ಅನಿಸಿಕೆ ಪುಸಿ ಎಂಬ ಗಂಟೆ ಪಾರಮಾರ್ಥ ಸತ್ಯದ ಸವಿ ಗಂಟೆ ಘೋರನಿದ್ರೆಯಿಂದೆಚ್ಚರಿಸುವ ಗಂಟೆ ಗುರುಶಂಕರನಾ ಪ್ರವಚನ ಗಂಟೆ 3
--------------
ಶಂಕರಭಟ್ಟ ಅಗ್ನಿಹೋತ್ರಿ
ಯಮರಾಯ ಪೇಳ್ದ ದೂತರಿಗೆ ಲಕ್ಷ್ಮೀ ರಮಣನ ದಾಸರಿದ್ದೆಡೆಗೆ ಪೋಗದಿರೆಂದು ಪ ವೇದ ವ್ಯಾಕರಣ ಶಾಸ್ತ್ರಗಳೋದಿ ಶ್ರಾದ್ಧವೇ ಕಾದಶಿ ದಿನದಿ ಮಾಡುತಲಿಪ್ಪರಾ ಭೇದಮತವ ಮಿಥ್ಯವೆನುತಲಿಪ್ಪ ಮಾಯ ವಾದಿಗಳೆಳ ತಂದು ನರಕದೊಳಿಡಿರೆಂದು 1 ತಿರಿಪುಂಡ್ರವನಿಟ್ಟು ಭಸ್ಮದೇಹಕೆ ಪಟ್ಟೆ ಕೊರಳಿಗೆ ರುದ್ರಾಕ್ಷಿ ಸರವ ಕಟ್ಟಿ ಕುರಿಗಳ ಕೊಯ್ದು ಯಜ್ಞವ ಮಾಳ್ಪೆವೆನುತಲಿ ಹರಿಹರರೊಂದೆಂಬರೆಳತನ್ನಿರೆಂದು 2 ಶಿವನೆ ತಾನೆಂದು ಜಾನ್ಹವಿ ತೀರದಲಿ ಪಾ ರ್ಥಿವ ಲಿಂಗನ ಪೂಜಿಪ ಅವಿವೇಕರಾ ಶಿವರಾತ್ರಿಗಳಲಿ ಆಹಾರ ಬಿಡುವವರ ಉ ರವ ನರಕದೊಳ್ಪವಣಿ ಬಿಡಿಸಿರೆಂದು 3 ಮಳೆ ಚಳಿ ಬಿಸಿಲು ಕತ್ತಲೆಯೊಳು ಬರಲು ನ ಮ್ಮಿಳೆಯದೊಳು ಸ್ಥಳವಿಲ್ಲೆಂಬರ ಕಳವಿಲವರ ದ್ರವ್ಯಗಳನಪಹರಿಸುವ ಬಲು ನೀಚರ ಪಿಡಿದೆಳೆದು ತನ್ನಿರೋ ಎಂದು 4 ಶ್ರೀ ತುಳಸಿಯ ಬಿಟ್ಟು ಹಲವು ಪುಷ್ಪದಿ ಜಗ ನ್ನಾಥವಿಠಲನ ಪೂಜಿಸುತಿಪ್ಪರಾ ಮಾತನಾಡಿ ವೇದಮಂತ್ರ ಬಿಡುವರ ಯಾತನ ದೇಹವ ಕೊಟ್ಟು ಬಾಧಿಸಿರೆಂದು 5
--------------
ಜಗನ್ನಾಥದಾಸರು
ಸಿಕ್ಕಿದೆಲ್ಲೊ ಕೃಷ್ಣ ನೀನು ಸಿಕ್ಕಿದೆಲ್ಲೊ ನಮ್ಮ ಕೈಯ ಹೊಕ್ಕು ಮುನಿಯ ಹಕ್ಕಿಯೊಳಾದ್ಯೊ ತೆಕ್ಕಿಯ ಪುಕ್ಕಸಾಟಿಯ 1 ಬಿಟ್ಟರ ಗೊಲ್ಲತೇರಲ್ಲೊ ಕಟ್ಟಿದ ಸೊಲ್ಲೊ ಮುಟ್ಟಿ ಬಿಡುವವರಲ್ಲೊ ಘಟ್ಯಾಗಿ ನಿಲ್ಲೊ 2 ನಾವು ಬಲ್ಲೆವು ನಿನ್ನಾಟ ಎವಿ ಹಾಕುನೋಟಿ ಹವಣಿಸಿ ಹಿಡಿದೆವೊ ನೀಟ ಭಾವಿಸಿ ಈ ಮಾಟ 3 |ಬಲ್ಲತನವದೋರಿದೊ ಇಲ್ಲಿ ಮರುಳಾದ್ಯೊ ನಿಲ್ಲೊ ನಮ್ಮೊಳು ನೀನಾದ್ಯೊ ಎಲ್ಲಿಗೆ ಹೋದ್ಯೊ 4 ವಶವಾಗಲಿಕ್ಕ ನಮಗ ವಸುಧಿಯೊಳಗ ಯಶೋದೆ ಹಡೆದಳು ತಾ ಈಗ ಲೇಸಾಗಿ ನಿನಗ 5 ನಾವು ಹಿಡಿದೇವೆಂಬುವ ಮಾತ ಪೂರ್ವಾರ್ಜಿತ ನವನೀತ ಸವಿದೋರಿ ಹಿತ 6 ಭಾನುಕೋಟಿ ಸು ಉದಯ ಮುನಿಜನರಾಶ್ರಯ ನೀನಾಗಿ ಸಿಕ್ಕಿದ್ಯೊ ಕೈಯ ದೀನ ಮಹಿಪತಿಯ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು