ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕನಿಕರವಿಲ್ಲವೆ | ವನರುಹಲೋಚನಾ ಪ ಘನಕೃಪಾಪೂರ್ಣ ನೀನೆನುವುದು ಜಗವೆಲ್ಲಾ ಎನಗದು ನಿಜವೆಂದು ಅರಿವಾಗಲಿಲ್ಲ ಅ.ಪ ವೇದ ಪುರಾಣವ ಓದಿ ತಿಳಿಯಲಿಲ್ಲ ಸಾಧುಸಂತರ ಸೇವೆ ಸಾಧಿಸಲಿಲ್ಲ ಭಾರ ನಾನಾದೆನಲ್ಲ ಆದಿಮೂರುತಿ ನಿನ್ನಾರಾಧನೆ ಮಾಡಲಿಲ್ಲ 1 ಜ್ಞಾನ ಸುಧಾರಸ ಪಾನವ ಮಾಡಲಿಲ್ಲ ದೀನತೆಯೊಳು ನಿನ್ನ ಧ್ಯಾನಿಸಲಿಲ್ಲ ದೀನರ ಸಂಗದಿ ಶ್ವಾನನಂತಾದೆನಲ್ಲ ನಾನು ನನ್ನದು ನಿನ್ನಾಧೀನವಾಗಲು ಇಲ್ಲ 2 ನಿನ್ನ ಬಿಟ್ಟನ್ಯರ ಇನ್ನು ಸೇವಿಪುದಿಲ್ಲ ಅನ್ನ ಪಾನಂಗಳೊಳಿನ್ನಾಸೆಯಿಲ್ಲ ನಿನ್ನ ನಾಮಾಮೃತವನು ಬಿಡುವವನಲ್ಲ ನಿನ್ನವನೆಂದೆನ್ನ ಮನ್ನಿಸೊ ಮಾಂಗಿರೀಶ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಸುರೇಶ ಪದವಿಯ ಬೇಡುವನಲ್ಲ ನರೇಶ ಭಾಗ್ಯವ ಕೋರುವನಲ್ಲ ಪ ಗುರೂಪದೇಶವ ಮರೆಯುವನಲ್ಲ ಪರೇಶ ಸ್ಮರಣೆಯ ಬಿಡುವವನಲ್ಲ ಅ.ಪ ಜನನ ಮರಣಕೇ ಹೆದರುವನಲ್ಲ ಜನುಮಗಳು ಬೇಡ ಎನ್ನುವನಲ್ಲ ಮನದಿ ವ್ಯಾಮೋಹವ ಪಡೆಯುವನಲ್ಲ ವನಜನಾಭನ ನಾಮ ಮರೆಯುವನಲ್ಲ1 ನಿನ್ನ ಚರಿತಗಳ ಕೇಳದೆ ಬಿಡೆನು ನಿನ್ನ ಮೂರ್ತಿಯ ನೋಡದೆ ಬಿಡೆನು ನಿನ್ನ ಪಾದಾರ್ಚನೆ ಮಾಡದೆ ಬಿಡೆನು [ನಿನ್ನ ನಾಮಂಗಳ ನುತಿಸದೆ ಬಿಡೆನು] 2 ಮಾಂಗಿರಿಪತಿ ನಿನ್ನ ಒಲಿಸದೆ ಬಿಡೆನು ಕಂಗಳಿಂದಾನಂದ ಪಡೆಯದೆ ಬಿಡೆನು ಅಂಗಾಂಗದ ಸೇವೆ ಮಾಡದೆ ಬಿಡೆನು ರಂಗ ಸಮರ್ಪಣ ಎನ್ನದೆ ಬಿಡೆನು 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಎಲೆ ದುರಿತವೆ ನೀ ಎನ್ನಏಳಿಲ ಮಾಡದೆ ಸಾಗಿನ್ನ ಕಡುಛÀಲ ಮಾಡಲಿ ಬನ್ನಬಡುವೆ ನಮ್ಮನಳಿನಾಕ್ಷನಾಣೆ ನೀ ಕೆಡುವೆ ಪ.ಪಾಪಿ ನಾನೆಂದು ಸೋಂಕ ಬಂದೆ ನಮ್ಮಶ್ರೀಪತಿ ಕರುಣಿಸಿದಿಂದೆ ಇನ್ನಾಪರೆ ನಿಲ್ಲು ಮುಂದೆ ನಿನ್ನಾಟೋಪವ ಮುರಿವೆನು ಇಂದೆ 1ಪರುಸ ಮುಟ್ಟಿದ ಲೋಹಚಿನ್ನಸಿರಿಅರಸನ ಭಟನೆ ಮಾನ್ಯ ಇನ್ನೊರೆದೆ ನೋಡೆಲೆ ಬಲುವೆಡ್ಡೆ ನಮ್ಮಸರಸವ ಬಿಡು ಕೈಕಡ್ಡೆ 2ಲೇಸು ಬೇಕಾದರಿನ್ನುಳಿಯೈಹರಿದಾಸರ ಸಂಗವ ಕಳೆಯೈ ಭೃತ್ಯಾವಾಸೆಯ ಬಿಡುವವನಲ್ಲ ಶ್ರೀಪ್ರಸನ್ವೆಂಕಟ ಚೆಲ್ವ 3
--------------
ಪ್ರಸನ್ನವೆಂಕಟದಾಸರು