ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೃಷ್ಣ ಕೃಷ್ಣ ಬೇಡಿಕೊಂಡೆ ಕೃಪೆಯ ಪಾಲಿಸೋ ಪ ಎಷ್ಟು ಎಷ್ಟು ಕೇಳಿಕೊಂಡೆ ಎಳ್ಳಷ್ಟು ದಯಬಾರದೇ ಅ.ಪ ಬಳಲುತಿಹೆನು ಎತ್ತೋ ಕರುಣಿ 1 ನಿನ್ನ ಬಿಟ್ಟು ಇರುವೆನೆನೋ ನಿನ್ನದಯದಿ ನನ್ನ ಬದುಕು ನಿನ್ನ ಮರೆತೆ ತಪ್ಪುಕ್ಷಮಿಸು ನಿನ್ನ ದಾಸ ಪ್ರಾಣರಾಣೆ2 ಈಗ ಆಗ ಎಂದು ಹೇಳಿ ಭೋಗದಲ್ಲೇ ರತಿಯ ನೀಡಿ ನಾಗಶಯನ ನಾಮಸುಧೆಯ ಬೇಗ ಕೊಡದೆ ಬಿಡುವರೇನೋ3 ದಾಸನೆಂದು ಭಕ್ತಿಯಿತ್ತು ನಾಶಮಾಡೋ ಕುಂದುಗಳ ನೀ4 ಲೋಕವೆಲ್ಲ ಪೊರೆದ ನಿನಗೆ ಸಾಕೆ ಎನ್ನ ಕಷ್ಟವೇನೋ ನಾಕ ದೊರೆಯೆ ಪುಣ್ಯಶ್ಲೋಕ 5 ಬರಿಯ ಶುಂಠ ನಾನು ಹರಿಯೆ ಅರಿಯೆದಾರಿ ವಲಿಸೆನಿನ್ನ ಶರಣ ಜನರ ಬಿಡನು ಎಂಬ ಬಿರುದೊಂದೆ ಧೈರ್ಯವೆನಗೆ 6 ಶಿರಿಯರಮಣ “ಕೃಷ್ಣವಿಠಲ” ಶರಣು ಜ್ಞಾನ ಸುಖದ ಚರಣವೆರಡು ತೋರಿಸೆನಗೆ ನಿರುತ ಹೃದಯ ಕಮಲದಲ್ಲಿ 7
--------------
ಕೃಷ್ಣವಿಠಲದಾಸರು
ಗುರುವೇ ನೀ ಕರುಣಿಸದಿರಲಿನ್ಯಾರು ಕರುಣಿಪರೋ ಪ ಕರಿಗಿರಿಪುರ ತಂದೆ ಮುದ್ದು ಮೋಹನ್ನ ಅ.ಪ. ಮೊರೆಹೊಕ್ಕ ಜನರ ಕೈ ಬಿಡುವರೇನೋಚರಣ ಯುಗ್ಮಕೆ ನಿನ್ನ ನಮಿಸುವೆನೋ |ಭಾರ ವಹಿಸಿ ಬೇಗ ಸಲಹಬೇಕೋ |ಜರೆಯು ನುಂಗುವ ಮುನ್ನ ಪೊರೆಯ ಬೇಕೋ 1 ಭವ ರೋಗವ ಕಳೆಯೋಉನ್ನತ ಪದವಿಗೇರುವ ದಾರಿ ತೋರೋ |ಘನ್ನ ಮಹಿಮ ನಿನ್ನ ಹೊರತು ಮತ್ಯಾರೋಎನ್ನ ಅಂಕಿತ ನಾಮ ಹರಿಯನ್ನ ತೋರೋ 2 ಹಂಬಲ ಕೊಡು ಎನಗೆ ಹರಿಪಾದದಲ್ಲೀನಂಬಿ ತುತಿಪೆನಯ್ಯ ತವ ಪಾದದಲ್ಲೀ |ಬಿಂಬ ಗುರು ಗೋವಿಂದ ವಿಠ್ಠಲನಲ್ಲಿಹಂಬಲ ಸ್ಥಿರವಾಗಿ ನಿಲಿಸೋ ನೀನಲ್ಲೀ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಮುಕ್ಕ ನಿನ್ನ ನಡತೆ ನೋಡೋಮುಕ್ಕ ನಿನ್ನ ನಡತೆ ನೋಡೋತಕ್ಕ ಯಮನ ಶಿಕ್ಷೆಯಿಹುದುಸೊಕ್ಕ ಬೇಡವೋ ಮುಂದೆ ದುಃಖಗಳಿಸಿಹರೊಕ್ಕ ಕಕ್ಕಸಬಡುವೆಯೋ ಕಾಸದು ಹೋದರೆದಕ್ಕಿಸಿಕೊಂಬೆಯಾ ಎಲೆ ಹುಚ್ಚು ಮೂಳಪಗುರುಹಿರಿಯರ ನಿಂದೆ ಮಾಡಿಅವರಚರಣಸ್ಥಳವ ಜರೆದಾಡಿ ದುಷ್ಟದುರುಳರ ಜೋಡುಗೂಡಿ ನೀನುಬರಿದೆ ಆಯುಷ್ಯ ಕಳೆದೆ ಓಡಾಡಿ ಎಲೆಖೋಡಿಭರಭರದಿಂದಿಳಿವರು ಕಾಲನ ದೂತರುಕೊರಳನೆ ಕಡಿವರು ಎಲೆ ಹುಚ್ಚು ಮೂಳ1ನಿನ್ನನು ನೀನೇ ನೋಡಿಕೊಂಬೆ ನಾನುಚೆನ್ನಾಗಿ ಇಹೆನು ಎಂದೆಂಬೆ ಹುಚ್ಚುಕುನ್ನಿಯಂತೆ ಓಡಾಡಿ ಒದರಿಕೊಂಬೆಜಾರಕನ್ನೆಯರ ಜೋಡುಗೊಂಬೆ ನಾಕಾಣೆನೆಂಬೆಇನ್ನೇನು ಹೇಳಲಿ ಕಾಲನ ದೂತರುಬೆನ್ನಲಿ ಸುಳಿವರು ಎಲೆ ಹುಚ್ಚು ಮೂಳ2ಹೆಂಡತಿ ನೋಡಿ ಹಲ್ಲು ತೆರೆವೆ ಆಕೆಯಗೊಂಡೆ ಚವುರಿ ನೋಡಿ ಬೆರೆವೆಕಂಡ ಕಂಡ ವಿಷಯಕ್ಕೆ ಮನವೊಲಿದೆ ಅಂಟಿಕೊಂಡಿವೆ ಅಜ್ಞಾನ ಮರೆವೆಚಂಡ ಯಮದೂತರುಚಂಡಿಕೆಹಿಡಿದುಮಂಡೆಗೆ ಒದೆವರು ಎಲೆ ಹುಚ್ಚು ಮೂಳ3ಬಾಲೆಯ ಸುತರ ನಂಬುವೆಯೋ ಕೊಪ್ಪವಾಲೆಗಳ ಮಾಡಿಸಿ ಇಡುವ ಯಮನಾಳುಗಳು ಕೈ ಬಿಡುವರೇನೋ ನಿನ್ನಬಾಳು ವ್ಯರ್ಥವಾಯಿತು ಬಿಡಿಪರಿಲ್ಲವೋಸೀಳುವೆನೆನುತಲಿಕಾಲದೂತರುಕಾಲ್ಹಿಡಿದೆಳೆವರೋ ಎಲೆ ಹುಚ್ಚು ಮೂಳ4ಇನ್ನಾದರೂ ಜ್ಞಾನವ ತಿಳಿಯೋಚೆನ್ನಾಗಿ ಧ್ಯಾನದಿ ಬಲಿಯೋ ಕಂಡುನಿನ್ನೊಳು ಥಳಥಳ ಹೊಳೆಯೋನಿನ್ನ ಜನ್ಮ ಜನ್ಮವೆಲ್ಲ ಕಳೆಯೋಬ್ರಹ್ಮನಾಗಿ ಬೆಳೆಯೋರತ್ನದೊಳಗೆ ರತ್ನ ಬೆಳಗಿದಂತೆಚೆನ್ನ ಚಿದಾನಂದ ನೀ ನಿತ್ಯನಾಗೋ5
--------------
ಚಿದಾನಂದ ಅವಧೂತರು