ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರೆನ್ನ ಹುಂಡಿ ರಂಗ ತಾರೆನ್ನ ಹುಂಡಿ ಪ ಅತ್ತರೇನು ಕಂಗಳಿಂದ ಮುತ್ತುದುರುವುದಿಲ್ಲ ಮತ್ತೆ ನಮ್ಮ ಮೇಲೆ ಹುಂಡಿ ಹೊತ್ತರೆ ನೀ ಬಿಟ್ಟೆಯೇನೊ 1 ವಾರಿಜಾಕ್ಷ ನಿನ್ನ ಬಿಡು - ವರೆಯೇನೋ ಬೆನ್ನ ಮೇಲೆ ಹಾರಿ ಹೊತ್ತು ಕೊಂಡು ಭಾರ ಹೇರದೆ ನೀ ಬಿಟ್ಟೆಯೇನೊ 2 ತೊಟ್ಟಿಲ ಹೋಗೆಂದರೆ ಸಿಟ್ಟು ಮಾಡುವಿಯೋ ಶ್ರೀದ- ವಿಠಲನ್ನ ಕೂಡಾಡದೆ ನೀ ಬಿಟ್ಟರೆ ನಾವು ಬಿಡುವರಲ್ಲ 3
--------------
ಶ್ರೀದವಿಠಲರು
ಶ್ರೀ ವಿಷ್ಣು ತೀರ್ಥರು ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ಪ ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ಬಡವರಂತತಿ ಬಾಯ ಬಿಡುವರಲ್ಲವರು ಅ.ಪ ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ಮುಂಚೆ ತಿಳಿವರು ಈ ಪ್ರಪಂಚದಲ್ಲಿ ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು 1 ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ಅಂಗದಲಿ ಸುರಿವರು ಕಂಗಳೊದಕವ ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ ಮುಂಗೈಯ್ಯ ಮುದ್ರೆಗಳ ಧರಿಸುವರಿವರು 2 ವಾಸುದೇವನ ದಾಸ ದಾಸರಾದೆವೆಂಬೊ ಆಶೆಯಲಿ ಅವನ ಸಹವಾಸ ಬಯಸುವರು ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ಯೇಸು ಕಾಲಕು ಬಿಡದೆ ಬ್ಯಾಸರದೆ ಬೇಡುವರು 3
--------------
ಅನಂತಾದ್ರೀಶರು