ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಗನೆ | ನಮ್ಮ ರಂಗನೆ | ಮುನಿದನ್ಯಾತಕೆ ಪ್ರಾಣಲಿಂಗನೆ ಪ ನಿಜವಾದ ವಾಜಿಯ ಮಾಜುತ ಪೇಳಲು |ಸೋಜಿಗ ಮಾಡಲು ಮಂಗನೇನೆ ? 1 ಕೊಳಲನೂದಲು ಬಳಲದೆ ಮನವಿಟ್ಟು |ಕೇಳಲು ಮರುಳ ಕುರಂಗನೇನೆ ? 2 ಬಿಡದೆ ರಮಣಿಯನ್ನು ಎಡದಲ್ಲಿ ಬಿಡುವನು |ಮಡದಿ ಮಾರ್ಗದೊಳು ಹಂಗವೇನೆ ? 3 ಕೈಯಲ್ಲಿ ನೆರೆಯದೆ ಮೈಯಲ್ಲಿ ತೋರದೆ |ಸುಯ್ಯಲು ಬಿಡಲು ಭುಜಂಗನೇನೆ ? 4 ತಕ್ಕಾದ ನುಡಿಯನು ರುಕ್ಮೇಶನಾಡದೆ |ಅಕ್ಕ ಮಿಕ್ಕದ ವಿಹಂಗನೇನೆ ? 5
--------------
ರುಕ್ಮಾಂಗದರು
ಯೋಗಿ ಯೋಗಿ ಪ ಉಡುವರ ಕಂಡು ಉಡುವನು ತಾನುತೊಡುವರ ಕಂಡು ತೊಡುವನು ತಾನುಕೊಡುವರ ಕಂಡು ಕೊಡುವನು ತಾನಾಗಿ 1 ನಡೆವರ ಕಂಡು ನಡೆವನು ತಾನುಹಿಡಿವರ ಕಂಡು ಹಿಡಿವನು ತಾನುಬಿಡುವರ ಕಂಡು ಬಿಡುವನು ತಾನು 2 ಪೇಳ್ವರ ಕಂಡು ಪೇಳ್ವನು ತಾನುಕೇಳ್ವರ ಕಂಡು ಕೇಳ್ವನು ತಾನುತಿಳಿವರ ಕಂಡು ತಿಳಿವನು ತಾನಾಗಿ3 ಆಡುವರ ಕಂಡು ಆಡುವನು ತಾನುಕಾಡುವರ ಕಂಡು ಕಾಡುವನು ತಾನುಓಡುವರ ಕಂಡು ಓಡುವನು ತಾನಾಗಿ 4 ಹಿರಿಯರ ಕಂಡು ಹಿರಿಯನೆ ತಾನಾಗಿಕಿರಿಯರ ಕಂಡು ಕಿರಿಯನೆ ತಾನಾಗಿಗುರು ಚಿದಾನಂದನೆ ತಾನಾಗಿ 5
--------------
ಚಿದಾನಂದ ಅವಧೂತರು
ಅಂಬೆಗಾಲಿಕ್ಕುತಲಿ ಬಂದ ಗೋವಿಂದ |ಅಂಬುಜನಾಭ ದಯದಿಂದೆನ್ನ ಮನೆಗೆ ಪಜಲಚರಜಲವಾಸ ಧರಣೀಧರ ಮೃಗರೂಪ |ನೆಲನಳೆದೀರಡಿ ಮಾಡಿ ಬಂದ ||ಕುಲನಾಶಿ ವನವಾಸಿ ನವನೀತಚೋರನಿವ |ಲಲನೆಯರ ವ್ರತಭಂಗ ವಾಹನತುರಂಗ 1ಕಣ್ಣ ಬಿಡುವನು ಮುಖ ತಗ್ಗಿಸಿ ನೆಲವಗಿದು |ಅಣಕಿಸುವ ಬಾಯ್ದೆರೆದು ಬಾಲತನದಿ ||ಪ್ರಾಣಘಾತಕನುಣಲೊಲ್ಲ ಬೆಣ್ಣಿಯ ಮೆಲುವ |ಮಾನವ ಬಿಟ್ಟು ಕುದುರೆಯನೇರಿ ಮೆರೆವ2ನೀರ ಪೊಕ್ಕನು ಗಿರಿಯ ನೆಗಹಿ ಧಾರಿಣಿ ತಂದ |ನರಮೃಗ ಬಲಿಬಂಧ ಕೊರಳಗೊಯ್ಕ ||ಶರಮುರಿದೊರಳೆಳೆದು ಬತ್ತಲೆ ಹಯವನೇರಿ |ಪುರಂದರವಿಠಲ ನಮ್ಮ ಮನೆಗೆ ಹರುಷದಲಿ 3
--------------
ಪುರಂದರದಾಸರು
ಇಂಥಾ ದೂರುವುದೊಳಿತಲ್ಲವರೆಮ್ಮ ರಂಗಯ್ಯನು, ಹಾವಳಿ |ಅಂಥಾದು ಏನು ಮಾಡಿದನಮ್ಮ ಎಂದೆಂದಿಗು ನಮ್ಮ ||ಸಂತತಿಯೊಳು ಗುಣವಂತರೇ ಕೃಷ್ಣ ನಿ-ರಂತರ ಬಡವರನೆಂತು ದಣಿಸುವ ಪಕಣ್ಣೇ ಬಿಡುವನು ಬೆದರಿಸೆ ಮಾತರಿಯ ವನದೊಳಗಡಗಿಹ |ಮಣ್ಣು ತಿಂಬುವ ಬಾಯ್ದೆರೆವನಾರ್ಯ ಹಿತಕರ್ಮಗಳರಿಯ ||ಅನ್ನ ತಿನ್ನಲರಿಯ ಬೆಣ್ಣೆ ಮೆಲುವ ಬಲು |ಹೆಣ್ಣು ನೆರೆದು ಮತ್ತನ್ಯರೊಳು ಕಲಹೆ 1ಎಲ್ಲ್ಯಾಡೊದು ದುರ್ಗಂಧವು ಕಠಿಣಾಂಗ ನೆಲಗೆದರುವ ಶ್ರಿಂಗ |ರಿಲ್ಲದೆ ರಹದೆರೆವರ್ಭಕ ರಂಗ ಪಾಪವರಿಯ, ಮಂಗ- ||ರೊಲ್ಲಭ ಅಹಿಫಣೆಯಲ್ಲಿ ಕುಣಿದು ವಸ- |ನಿಲ್ಲದೆ ತಿರುಗುವಗೆಲ್ಲಿದೊ ವಾಚಿ2ಮೀನ ಕೂರ್ಮದಂತ್ಯುದಕದೊಳಗೆ ಆಡುವ ಕೆಸರೊಳಗೆ |ಶ್ರೀನಾರಸಿಂಹ ಸಣ್ಣವರೊಳಗೆ ಆಡುವ ತನ್ನೊಳಗೆ ||ತಾನೇ ಅಗ್ನಿಯ ನುಂಗಿ ನಭಕೇಶಗೆಮಾನವಕೊಟ್ಟಾನೆ ಪ್ರಾಣೇಶ ವಿಠಲನ 3
--------------
ಪ್ರಾಣೇಶದಾಸರು
ಯಮದೂತರು ನರನನು ಎಳೆದೊಯ್ದುದನುಎಲ್ಲರಿಗೆ ಹೇಳುವೆನುಕುಮತಿಯಲಿ ಸದ್ಗುರು ಚರಣವ ಹೊಂದದಕೇಡಿಗಾಗುವ ಫಲಗಳನುಪಮುರಿದ ಮೀಸೆಯಲಿ ಮಸಿದೇಹದಲಿಉರಿಹೊಗೆ ಹೊರಡುವ ಉಸುರಿನಲಿಕರುಳು ಮಾಲೆಯಲಿ ಕೋರೆದಾಡೆಯಲಿಜರೆಮೈ ಹಸಿದೊಗಲುಡುಗೆಯಲಿ1ಝಡಿವ ಖಡುಗದಲಿ ಹೂಂಕಾರದಲಿಕಡಿದವಡೆಯಲಿ ಹುರಿಮೀಸೆಯಲಿಬಿಡಿಗೂದಲಲಿ ಕರದ ಪಾಶದಲಿಸಿಡಿಲ ತೆರೆದ ಬಿಡುಗಣ್ಣಿನಲಿ2ಮಿಡುಕುತ ಸತಿಸುತರನು ಆಪ್ತರನುಹಿಡಿದೊಪ್ಪಿಸುತಿಹ ವೇಳೆಯಲಿಕಡಿಯಿರಿ ಹೊಡಿಯಿರಿ ತಿನ್ನಿರಿ ಎನುತಲಿ ಧುಮುಕಲುಬಿಡುವನು ಪ್ರಾಣವ ಕಾಣುತಲಿ3ಯಾತನೆ ದೇಹವ ನಿರ್ಮಿಸಿ ಅದರೊಳುಪಾತಕಮನುಜನ ಹೊಗಿಸುತಲಿಘಾತಿಸುವ ನಾನಾಬಗೆ ಕೊಲೆಯಲಿಘನನುಚ್ಚು ಕಲ್ಲೊಳಗೆ ಎಳೆಯುತಲಿ4ಈ ತೆರವೈ ಈ ಧರ್ಮ ಶಾಸ್ತ್ರವನೀತಿಯ ತೆರದಲಿ ಮಾಡುತಲಿಪಾತಕವನು ಬಹುಪರಿ ಶಿಕ್ಷಿಪರುದಾತಚಿದಾನಂದನಾಜೆÕಯಲಿ5
--------------
ಚಿದಾನಂದ ಅವಧೂತರು