ಒಟ್ಟು 6 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಿನ್ನ ನಾ ಬಿಡುವನಲ್ಲಾ ಗೋಪಾಲಾ ನಿನ್ನ ಬಿಡುವನಲ್ಲ ಎನ್ನ ರಕ್ಷಿಸದಿರೆ ಪನ್ನಗಾದ್ರಿಯವಾಸ ಪರಮಪುರುಷರಂಗಾ ಪ ನಾಗಾರಿ ರೂಪನಾದ ಪರಮಾನಂದ ಭೋಗಿಶಯನ ವಿನೋದ ಭಕ್ತವತ್ಸಲ ಸಾಗರನಳಿಯ ಭೂಸುರಧೇನು ಪೋಷಕ ಭಾಗವತರ ಪ್ರಿಯಾ ಯೋಗಿಗಳರಸ1 ಜಲಜಾಕ್ಷ ನಳಿನನಾಭ ಜಾನಕೀರಮಣ ಜಲನಿಧಿಶಯನ ದೇವಾ ಜಗದೋದ್ಧಾರ ಜಲಜಬಾಂಧವ ಕುಲ ಶ್ರೇಷ್ಠಾದಿ ಮೂರುತಿ ಒಲಿದೆನ್ನ ದುಷ್ಕರ್ಮನಳಿದು ಪೋಷಿಸದಿರೆ 2 ಶಂಬರಾರಿಯ ಪಿತನೆ ಜಗನ್ನುತ ಕುಂಭಿನೀಧವನಾದನೇ ಗೋವಿಂದ ಶ್ರೀ ಕಂಬುಕಂಧರ ಕೃಷ್ಣಾ ಅಂಬುಧಿ ಬಂಧಿಸಿ ಅಂಬುಜಾಕ್ಷಿಯ ತಂದ ಹರಿ 'ಹೆನ್ನ ವಿಠ್ಠಲಾ’ 3
--------------
ಹೆನ್ನೆರಂಗದಾಸರು
ಪರಿಹರಿಸು ದಯಾನಿಧಿ ಶರಣರ ಸಂಕಟವಾ ಧರೆಯ ತಳದಿ ನಾ ಪರಮಧೀನನು ಮರೆಯದಿಯೋ ಪದವಾ ಪ ಜಲದೊಳಗೆ ಪೊಕ್ಕರೂ ನಿನ್ನ ಬಿಡುವನಲ್ಲಾ ಬಲುಬೆಟ್ಟದ ಬುಡದೊಳು ಕುಳಿತರು ಪಿಡಿವೆನಲ್ಲಾ ನೆಲವಿಡಿದು ಕೋರೆಯಲಿ ತೋರ್ದರು ಅರಿವೆನಲ್ಲಾ ಗಲವರೆಗೆ ಸಿಂಹಮೊಗ ಧರಿಸಿದರೂ ಸರಿ ಬೆಚ್ಚಿ ಬೆವರೋನಲ್ಲಾ 1 ಸರಿ ತಿರಕನಂತೆ ನೀ ತಿಳಿದರೂ ಬಿಡುವನಲ್ಲಾ ಕರತಳದಿ ಕೊಡಲಿಯ ಪಿಡಿದರೂ ಸರಿವನಲ್ಲಾ ನೆರೆ ಧರಿಸಿ ಜಟವನ ಪೊಕ್ಕರೂ ಬಿಡುವನಲ್ಲಾ ಕರದಿ ಚಕ್ರವ ಪಿಡಿದು ತೋರಲೆಂದೆಂದಿಗುಜ್ವಲನಲ್ಲಾ 2 ವಸನಗಳಿಲ್ಲದೆ ನುಸುಳನರಿದೆನಲ್ಲಾ ಎಸೆವ ಸಮತುರಗವೇರಿ ಪೋಗಲು ಬಿಡುವನಲ್ಲಾ ದಶರೂಪಿ ನಿನ್ನನು ಬಿಡುವ ಶರಣನಲ್ಲಾ ಕುಸುಮನಾಭ ಶಿರಿ ನರಸಿಂಹವಿಠ್ಠಲ ಆಲಿಸೆನ್ನ ಸೊಲ್ಲಾ 3
--------------
ನರಸಿಂಹವಿಠಲರು
ಬಾರೆನ್ನ ಸಖಿಯೇ ಕರೆದು ತೋರಿಸೇ ಪ ಕರೆದು ತೋರಿಸೇ ಕಂಜನಯ್ಯಾನಾ| ಕರಿವರ ದಾಯಕ ಕರುಣಾ ಸಾಗರನಾ 1 ಸರಸಿಜ ಲೋಚನ ಮುಕುಟ ಕುಂಡಲನಾ| ಕೌಸ್ತುಭ ಕೇಯೂರ ಧರನಾ 2 ಮದನ ಶರಕ ಗುರು ಮಾಡುವರೇನೇ| ಮಧುಹರ ಮುನಿವದು ಉಚಿತ ವೇನೇ 3 ಒಂದರಗಳಿಗೆಯ ಮರೆದಿರ ಲಾರೆ| ಇಂದು ನೀ ಧನ್ಯಳ ಮಾಡಲೆ ನೀರೆ4 ಬೆರೆದು ಬಿಡುವನಲ್ಲಾ ಸಕಲಂತರ್ಯಾಮಿ| ನೆರೆದನು ಗುರು ಮಹಿಪತಿ ಸುತಸ್ವಾಮಿ5
--------------
ಕಾಖಂಡಕಿ ಶ್ರೀ ಕೃಷ್ಣದಾಸರು