ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ರಮಾನುತ ಪಾದಪಲ್ಲವ ಶ್ರೀಕರ ಚರಣ ಸೇವಕರ ಸಂಗದೊಳಿರಿಸು ವಿಜಯರಾಯ ಪ ನಿಮ್ಹೊರತು ಪೊರೆವರನ್ಯರನು ನಾಕಾಣೆ ನಿಮ್ಮ ಚರಣವ ನಂಬಿದೆ ಕರುಣದಿ ಕಾಯೊ ಅ.ಪ ಪಂಡಿತ ಪಾಮರರನು ಉದ್ಧಾರ ಮಾಡೆ ಕರುಣದಿಂದ ಸಕಲ ವೇದಗಳ ಕ್ರೋಡೀಕೃತವಾದ ನಿರ್ಣಯ ಭಾಷ್ಯಗಳರ್ಥವ ಮಾಡಿದಿ ಪದಗಳ ಸಕಲರೂ ತಿಳಿವಂದದಿ 1 ನಿನ್ನವರಾದ ರಂಗ ಒಲಿದ ರಾಯರ ನೋಡು ನಿನ್ನ ಉಕ್ತಿಯ ನಂಬಿದ ವೆಂಕಟರಾಯರ ನೋಡು ನಿನ್ನವನೆಂದೆನ್ನನು ಅವರಂತೆ ನೋಡದೆ ಎನ್ನ ಕೈ ಸಡಿಲ ಬಿಡುವದೇನೋ 2 ಎಂದಿಗಾದರು ನಿನ್ನ ದಾಸರ ಕರುಣದಿಂದ ಪಾದದ್ವಂದ್ವ ಹೊಂದದೆ ಹೋಗುವೆನೆ ದಾಸರಪ್ರಿಯನೆ ತಂದೆ ವಿಜಯ ರಾಮಚಂದ್ರವಿಠಲರಾಯನ ಹೊಂದುವ ಮಾರ್ಗವ ಬಂದು ತೋರಿಸಬೇಕೊ 3
--------------
ವಿಜಯ ರಾಮಚಂದ್ರವಿಠಲ