ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲಬೆರಳು ಬಾಯೊಳೇತಕೊ ರಂಗಯ್ಯ ನಿನ್ನ ಪ ಸಾಲದಾಯ್ತೆ ಭಕ್ತರಿತ್ತ ಕಾಲೋಚಿತ ಶಾಲ್ಯನ್ನವುಹಾಲೋಗರ ಭಕ್ಷ್ಯಗಳು ಅ.ಪ. ಆಲದೆಲೆಯ ಮೇಲೆ ಮಲಗಿರೆ ಚೆಲುವ ನಿನ್ನಕಾಲುಚಾಚಲನುವೆ ಇಲ್ಲವೆಬಾಲನಿನ್ನ ನಾಭಿಕಮಲ ಕಾಲಿವಾಲಿದಲ್ಲಿ ಗಂಗೆಜಲವ ಬಿಡುತಲಿರುವೆಯೇನು 1 ಹಸಿವೆ ಬಹಳವಾಗಿರುವದೆ ನಿನ್ನಮ್ಮ ಆಯಶೋದೆ ನಿನಗೆ ಮೊಲೆಯನುಣಿಸಳೆನಿಶಾಚರಿ ಪೂತನಿಯ ಮೊಲೆಯವಿಷವನುಂಡ ಕಾರಣದಲಿ ನೀರಡಿಸುತಲಿರುವೆಯೇನು 2 ಪದದಿಂದಲಿ ಬರುವ ಗಂಗೆಯ ಉದಕದಿಂದಉದರದೊಳಿಹ ಜೀವರಾಶಿಯಮುದದಿಂದುದ್ಧರಿಸಲೆಂದುಪದುಮಾಕ್ಷನೆ ಜುರುಜುರು ನೀ ಚೀಪಲಿರುವೆಯೇನು ಹೇಳು 3 ಹಸುಳ ನಿನ್ನ ಪದದೊಳಿಡುತಿಹ ಭಕ್ತರ ಭಕ್ತಿರಸವ ಸವಿದು ನೋಡುತಿರುವೆಯಾಪೆಸರನೆತ್ತ ಗದುಗಿನ ಶ್ರೀ ವೀರನಾರಾಯಣನೆದಯವ ತೋರಿ ಹೇಳು ಬೇಡುತಿಹೆನು 4
--------------
ವೀರನಾರಾಯಣ
ನೀ ನೀಡು ವರವ ದೇವಾ ಭವಚಾಲಕಾರಣಾದ ವಿಷಯೇಚ್ಛಯಿಂದ ಬಳಲಿ ವಿಷಯಗಳ ಭೋಗಪಡೆದೆ ಪುಸಿಯಾದ ವಿಷಯಸುಖದ ವ್ಯಸನದಲ್ಲಿ ಬೆಂದು ಹೋದÉ ವಿಷಯೇಚ್ಛೆ ಹೋಗಲಿಲ್ಲ ಕಸವಿಸಿಯ ಬಿಡುತಲಿರುವೆ ಹಸನಾಗಿ ಬೋಧಮಾಡೈ ಘೋರಾದ ಭವಜಲಧಿಯಾ ಪಾರಾಗುವುದೆ ಯುಕುತಿಯಾ ಚಿರಶಾಂತಿ ಪಡೆವ ಪರಿಯಾ ಪರಮಾತ್ಮಜ್ಞಾನಸಿರಿಯಾ
--------------
ಶಂಕರಭಟ್ಟ ಅಗ್ನಿಹೋತ್ರಿ