ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಕೋಲ ಹಾಡು) ಕೋಲು ಕೋಲೆನ್ನ ಕೋಲೆ ಕೋಲು ಕೋಲೆನ್ನ ಕೋಲೆ ಕೋಲು ಶ್ರೀ ರಾಮನ ಬಲಗೊಂಬೆ ರನ್ನದ ಪ. ಭೂಮಿಯೊಳಗೆ ಸೀತಾರಾಮನು ಜನಿಸಲು ಸೀಮೆಯ ನಾರಿ ಜನರೆಲ್ಲ ರನ್ನದಾ ಸೀಮೆಯ ನಾರಿ ಜನರೆಲ್ಲ ನೆರೆದು ಸು ಪ್ರೇಮದಿ ಪಾಡಿ ನಲಿದರು ರನ್ನದಾ 1 ಕುಂಡಲ ಕಂಠ ಮಾಲೆಯ ನೊಸಲಾ ತಿಲಕವು ರನ್ನದ ಮಾಲೆಯ ತಿಲಕನೊಸಲೊಳಗಿರಿಸಿದ ಬಾಲೇರು ಕೂಡಿ ನಲಿವುದ ರನ್ನದ 2 ಸಾರಸಂಭವ ಕ್ಷೀರ ವಾರುಧಿ ತಡಿಯಲ್ಲಿ ಭೋರನೆ ಬಂದು ಸ್ತುತಿಸಲು ರನ್ನದ ಭೋರನೆ ಬಂದು ಸ್ತುತಿಸಲು ರಾಮವ ತಾರನಾಗುವೆನೆಂದು ನುಡಿದನು ರನ್ನದ 3 ಪೃಥಿವಿ ನಾಯಕ ದಶರಥನಲ್ಲಿ ಜನಿಸಿದ ಕಥನೀಯ ಸುಗುಣ ಸಂಭೃತ ರಾಮರನ್ನದ ಕಥನೀಯ ಸುಗುಣ ಸಂಭೃತ ರಾಮ ಕೌಸಲ್ಯ ಸುತನೆಂದು ನಗುತ ಮನ್ಮಥನ ಜನಕನಿಗೆ 4 ಕೌಶಿಕ ಮುನಿಯ ಮಹಾಶೆ ಪೂರಿಸಿ ಯಜ್ಞ ಘಾಸಿ ಮಾಡಿದ ರಾಮ ಘಾಸಿ ಮಾಡಿದ ಜಗ ದೀಶನು ಸಕಲಾಭಿಲಾಷಾ ಪೂರಿಪೆನೆಂದು 5 ಪಾದ ಪಲ್ಲವವಿರಿಸುತ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ರಾಮ ಕಲ್ಲಾದ ಶಿಲೆಯನ್ನಹಲ್ಯೆ ಮಾಡಿದ ಸಿರಿ ನಲ್ಲ ಶಿವನ ಮಹ ಬಿಲ್ಲ ಮುರಿದನು 6 ಭೂತಳಾಧಿಪಜನವ್ರಾತಮಂಡಲದೊಳು ಸೀತೆಯನೊಲಿಸಿ ಶುಭದಿಂದ ರನ್ನದಾ ಸೀತೆಯನೊಲಿಸಿ ಶುಭದಿಂದ ಸ್ವಜನ ಸ- ಮೇತಾಯೋಧ್ಯಗೆ ಬಂದ ಖ್ಯಾತ ರಾಘವನಿಗೆ 7 ಜನಕನ ವಾಕ್ಯದಿಂದ ಜನಕಾತ್ಮಜೆಯ ಕೂಡಿ ವನಕಾಗಿ ನಡೆತಂದ ವನಜಾಕ್ಷ ರನ್ನದಾ ವನಕಾಗಿ ನಡೆ ತಂದ ವನಜಾಕ್ಷನಲ್ಲಿ ಶೂ- ರ್ಪನಖಿಯ ಮಾನಭಂಗವನು ಗೈದ ರನ್ನದಾ 8 ಖರದೂಷಣಾದಿ ದೈತ್ಯರ ಕೊಂದು ಮಾರೀಚ ದುರುಳನ ಸದೆದಾ ಧುರಧೀರ ರನ್ನದ ದುರುಳನ ಸದೆದಾ ಧುರಧೀರ ಶ್ರೀ ರಾಮ ಪರಿಪಾಲಿಸೆಮ್ಮನು ಕರುಣಾಳು ರನ್ನದ 9 ಪಾತಕಿ ದಶಕಂಠ ಸೀತೆಯನೊಯ್ದನೆಂದು ಕಾತರಗೊಂಡಂತೆ ಜನಕೆಲ್ಲ ರನ್ನದಾ ಕಾತರಗೊಂಡಂತೆ ಜನಕೆಲ್ಲ ತೋರ್ದ ರಘು ನಾಥನ ಮೊಖಲೀಲೆ ಖ್ಯಾತಿಯ ಪೊಗಳುತ10 ಮಂದರಾವಣ ಮೋಸದಿಂದ ಕೆಡಹಿದಂಥ ತಂದೆಯ ಸಖನಿಗಾನಂದ ಪದವನಿತ್ತ ತಂದೆಯ ಸಖನಿಗಾನಂದವ ಸಲಿಸಿ ಕ- ಬಂಧನ ದೈತ್ಯಯೋನಿ ಇಂದ ಬಿಡಿಸಿದಗೆ 11 ಬೇಡತಿ ಶಬರಿಯನ್ನು ನೋಡಿ ರಕ್ಷಣೆ ಮಾಡಿ ಪ್ರೌಢ ಮಾರುತಿಯಿಂದ ಕೂಡಿದ ರನ್ನದಾ ಪ್ರೌಢ ಮಾರುತಿಯನ್ನು ಕೂಡಿ ರವಿಜನ ಕಾ ಪಾಡಿ ವಾಲಿಯ ವಧೆ ಮಾಡಿದ ರನ್ನದಾ 12 ಪ್ರಾಣಾತ್ಮಜನು ನಾಗವೇಣಿಯ ವಾರ್ತೆಯ ತಾರೆ ಜಾಣತನದಲಿದ ಕ್ಷೀಣಾಂಬುಧಿಯೊಳಂದು ಜಾಣತನದಲಿದ ಕ್ಷೀಣಾಂಬುಧಿಯೊಳು- ಪ್ರ ವೀಣತನದಿ ಸೇತು ಕಾಣಿಸಿದವನಿಗೆ 13 ದೋಷಿ ರಾವಣನನು ನಾಶಗೈದಸುರಾರಿ ನೀಶ ನೀನೆನುತ ವಿಭೀಷಣಗೊರವಿತ್ತಾ ಈಶ ನೀನೆನುತಲಿವಿಭೀಷಣಗೊರವಿತ್ತ ವೈರಿ ಜಗದೀಶ ರಾಮನಿಗೆ 14 ಸೃಷ್ಟಿಜಾತೆಯ ಕೂಡಿ ಪಟ್ಟಾಭಿಷೇಕಗೊಂಡು ಶಿಷ್ಟ ರಕ್ಷಕನಾದ ಸಿರಿನಾಥ ರನ್ನದಾ ಶಿಷ್ಟ ರಕ್ಷಕನಾದ ಸಿರಿನಾಥ ವೆಂಕಟ ಬೆಟ್ಟದೊಡೆಯ ನಮ್ಮಭೀಷ್ಟವ ಕೊಡುವನ 15
--------------
ತುಪಾಕಿ ವೆಂಕಟರಮಣಾಚಾರ್ಯ
ಕಾಯಬೇಕೆನ್ನ ಕರುಣದಲಿ ಧನ್ವಂತ್ರಿ ಶ್ರೀಯರಸ ನರಹರಿಯೆ ಪ್ರಾರ್ಥಿಸುವೆ ನಿನ್ನ ಪ. ಸುರರಿಗೆ ಮರಣ ಕಾಲವು ಪ್ರಾಪ್ತವಾಗಲು ಗಿರಿಯಿಂದ ಶರಧಿಯನು ಮಥಿಸೆ ಪೇಳಿ ಕರುಣದಿಂದಮೃತ ಕರದಿಂದ ಸುರರಿಗೆ ಎರೆದು ಜರೆ ಮೃತ್ಯು ಬಿಡಿಸಿದಗೆ ಇದು ಒಂದು ಘನವೆ 1 ಸಕಲ ನಾಡಿಗಳಲ್ಲಿ ಚೇಷ್ಟಪ್ರದ ನೀನಾಗಿ ಸಕಲ ವ್ಯಾಪಾರಗಳ ನಡೆಸುತಿರಲು ಯುಕುತಿಯಿಂದಲಿ ನಾಡಿ ನೋಡಿ ತಿಳಿಯುವನ್ಯಾರೊ ಮುಕುತಿದಾಯಕ ನಿನಗೆ ಇದು ಒಂದು ಘನವೆ 2 ಅನಾದಿಯಿಂದ ಅಪಥ್ಯದಲಿ ನರಳುವೆನೊ ಈಗ ಪಥ್ಯವ ಮಾಳ್ಪ ಬಗೆ ಯಾವುದೊ ಶ್ರೀನಿವಾಸನೆ ನಿನ್ನ ಧ್ಯಾನವೆ ಔಷಧವೊ ಶ್ರೀ ಗುರುಗಳಾಜ್ಞೆಯೆ ಪಥ್ಯವೆನಗಿನ್ನು 3 ಭಕ್ತಪ್ರಹ್ಲಾದನನು ಯುಕ್ತಿ ಶಕ್ತಿಗಳಿಂದ ಮುಕ್ತಿಮಾರ್ಗವ ತೋರಿ ಸಲಹಲಿಲ್ಲೇ ಭಕ್ತಿಹೀನರನೆ ಕಂಡು ಎನ್ನ ರಕ್ಷಿಸದಿರಲು ಯುಕ್ತವೇ ನಿನಗಿನ್ನು ಭಕ್ತಪಾಲಕನೆ 4 ನಿನ್ನ ದಾಸತ್ವದಲಿ ನೆಲಸಬೇಕಾದರೆ ಬಿನ್ನಣದ ರೋಗಗಳ ಪರಿಹರಿಸಿ ಸಲಹೊ ನಿನ್ನವರಾದ ಮೇಲಿನ್ನು ಕಾಯದೆ ಇಹರೆ ಘನ್ನ ಶ್ರೀ ಗೋಪಾಲಕೃಷ್ಣವಿಠ್ಠಲನೆ 5
--------------
ಅಂಬಾಬಾಯಿ
ಲಾಲಿ ತ್ರಿಭುವನಪಾವನಲಾಲಿ ಪ.ಗೋವಳ ಕುಲದೊಳು ಪುಟ್ಟಿದಗೆಲಾಲಿ <?xmಟ veಡಿsioಟಿ='1.0' eಟಿಛಿoಜiಟಿg='uಣಜಿ-8'?>ಗೋವರ್ಕಳನು ಸಲಹಿದೆಗೆಲಾಲಿ ||ಗೋವುಗಳನೆಲ ಕಾಯ್ದವಗೆಲಾಲಿಗೋವಿಂದ ಪರಮಾನಂದಗೆಲಾಲಿ..............ಲಾಲಿ1ನಖದಲಿ ಗಂಗೆಯ ಪಡೆದಗೆಲಾಲಿಶಕಟನ ಮುರಿದು ಒತ್ತಿದವಗೆಲಾಲಿ ||ಅಖಿಳ ವೇದಂಗಳ ತಂದಗೆಲಾಲಿರುಕುಮಿಣಿಯರಸ ವಿಠಲನಿಗೆಲಾಲಿ...........ಲಾಲಿ2ಗಗನವ ಮುರಿದು ಒತ್ತಿದಗೆಲಾಲಿನಿಗಮಗಳನು ತಂದಿತ್ತಗೆಲಾಲಿ ||ಹಗೆಗಳನೆಲ್ಲರ ಗೆಲಿದಗೆಲಾಲಿಜಗವನು ಉದರದಿ ಧರಿಸಿದಗೆಲಾಲಿ........ಲಾಲಿ3ಬೊಟ್ಟಿಲಿ ಬೆಟ್ಟವನೆತ್ತಿದಗೆಲಾಲಿಮೆಟ್ಟಿಲಿ ಭೂಮಿಯನಳೆದಗೆಲಾಲಿ ||ಜಟ್ಟಿಗರನೆಲ್ಲ ಗೆಲಿದಗೆಲಾಲಿಕಟ್ಟುಗ್ರ ಶ್ರೀ ನರಸಿಂಹಗೆಲಾಲಿ......................ಲಾಲಿ4ಶರಧಿಗೆ ಸೇತುವೆಗಟ್ಟಿದಗೆಲಾಲಿಸುರರ ಸೆರೆಯನು ಬಿಡಿಸಿದಗೆಲಾಲಿ ||ಕರಿಮೊರೆಯಿಡಲು ಬಂದೊದಗಿದಗೆಲಾಲಿವರದ ಪುರಂದರವಿಠಲಗೆಲಾಲಿ...........ಲಾಲಿ5
--------------
ಪುರಂದರದಾಸರು