ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಆರತಿ ತಂದು ಬೆಳಗಿರೆ ಇಂದಿರಾವರಗೆ ಮಂದರಧರಗಿಂದು ಪ ಸಿಂಧು ಶಯನಗೆ ಕುಂದರದನೆ ಅ.ಪ ವಾಹನ ವಂದಿತ ದಶ ಕಂಧರಾಂತಗೆ ಕುಂದರದನೆ ವಂದಿಸುವರ ಬಂಧ ಬಿಡಿಶ್ಯಾ ನಂದಗರಿವಗೆ ಮಂದಗಮನೆ 1 ಅಂಗನೆಯರು ಶೃಂಗಾರದಲಿ ಸಂಗೀತ ಪ್ರಿಯಗೆ ಭೃಂಗಾಲಕಿ ಗಂಗಾಪಿತ ಮಂಗಳಾಂಗ ವಿ- ಹರಿಗ ವಾಹನಗೇ ತಿಂಗಳಮುಖಿ 2 ನಾರಿಯಳ ನುದ್ಧಾರ ಮಾಡಿದ ಚಾರು ಚರಣಗೆ ನಾರಿ ಮಣಿಯೆ ಸೇರಿದವರ ಪೊರೆವ ಕಾರ್ಪರ ನಾರಶಿಂಹಗೆ ಭೂರಿಮಹಿಮಗಿಂದು 3
--------------
ಕಾರ್ಪರ ನರಹರಿದಾಸರು
ಲೋಕನೀತಿಯ ಪದಗಳು ಚರಣಕಮಲ ಭಜಿಸೋ ಗೋಪಾಲಕೃಷ್ಣನ ಪ ತರುಣಿಯರ ಮನವನು ಮರುಳುಗೊಳಿಸಿದ ಪರಮ ಸುಂದರನ ಧರಿಯೊಳಗೆ ಭಾಸ್ಕರಪುರ ಸುಮಂದಿರನೆಂದು ಕರೆಸುವನ ಕರಿರಾಜವರದನ ಅ.ಪ ಕ್ಷೋಣೆ ಗೀರ್ವಾಣರಿಂದಲಿ ಪೂಜೆಗೊಂಬುವನಾ ಮಾನಸದಿ ತನ್ನನು ಧೇನಿಪರ ಸುರಧೇನು ಎನಿಸುವನಾ ಗಾನವನು ಕೇಳುವ ಧೇನು ವತ್ಸಗಳಿಂದ ಶೋಭಿತನಾ ವೇಣುಗೋಪಾಲನ 1 ವಂದನೆಯ ಮಾಳ್ಪರ ಬಂಧ ಬಿಡಿಶ್ಯಾನಂದ ನೀಡುವನಾ ಮಂದರದಿ ಗಣಪತಿ ಗಂಧವಾಹನರಿಂದ ವಂದಿತನಾ ಮಂದಜಾಸನ ಮುಖ್ಯ ಸುರಗಣದಿಂದ ಸೇವಿತನಾ ಸಿಂದೂರವರದನ 2 ಕೃಷ್ಣಾ ಅಷ್ಟಮಿಯ ಉತ್ಸವ ಮಾಳ್ಪ ಭಕುತರನಾ ಸೃಷ್ಟೀಶನಿವನೆಂದರಿಂದ ಮಹಿಮೆಯ ಪಾಡಿಪೊಗಳುವನಾ ಕಷ್ಟವನು ಪರಿಹರಿಸ್ಯವರ ಸಕಲಾಭೀಷ್ಠಗರಿಯುವನಾ ಪರಮೇಷ್ಠಿ ಜನಕನ 3 ಗರಿಯೆ ಗೋಗಳನಾ ಗಿರಿಯ ಧರಿಸಿದನಾ ಇದ ಕೃಷ್ಣನ್ನ ಪೂಜಿಸಲು ಒಲಿದನ 4 ಶರಣಾಗತ ಜನರ ಪೊರೆಯಲು ಬಂದುನಿಂತಿಹನಾ ಕಾ ರ್ಪರ ಕ್ಷೇತ್ರದಿ ಮೆರಿವ ತರುಪಿಪ್ಪಲ ಸುಮಂದಿರನ ಸುರವಿನುತ ಸಿರಿನರಹರಿಯ ರೂಪಾತ್ಮಕನು ಎನಿಸುವನು ತುರುಪಾಲ ಕೃಷ್ಣನ 5
--------------
ಕಾರ್ಪರ ನರಹರಿದಾಸರು